Quantcast

ದೇವರು ಯಾವುದೋ ಪಕ್ಷಿಯ ಮೂಲಕ ಏನೋ ಹೇಳುತ್ತಿದ್ದಾನೆ

  ಸೋನು ನಿಗಮ್ ಮಸೀದಿ ಸದ್ದಿನ ಬಗ್ಗೆ ಮಾತನಾಡುತ್ತಿರುವ ಹಿನ್ನೆಲೆಯಲ್ಲಿ

ನಮ್ಮೊಳಗೇ ನಡೆದ ಒಂದು ಚರ್ಚೆಯ ತುಣುಕು-

ಎಲ್ ಸಿ ನಾಗರಾಜ್ 

ನಾವು ಒಂದು ಜಾತ್ಯಾತೀತ , ಧರ್ಮಾತೀತ ಸಮಾಜದಲ್ಲಿ ಬದುಕುತ್ತಿದ್ದೇವೆ

ಹಿಂದೂಗಳಾಗಲೀ , ಮುಸ್ಲಿಂ ಮತ್ತು ಕ್ರೈಸ್ತರಾಗಲೀ ಕರ್ಕಶವಾದ ಲೌಡ್ ಸ್ಪೀಕರ್ ಗಳನ್ನ ಬಳಸುವುದು ನಮ್ಮ ಕಿವಿಗಳಿಗೆ ಹಿತವಲ್ಲ . ಈಗ ಲೌಡ್ ಸ್ಪೀಕರ್ ಗಳ ಬದಲು ಎಂತಾ‌ ಕೆಟ್ಟ ಹಾಡನ್ನ , ಸಂಗೀತವನ್ನ ಕೂಡ ಸಹ್ಯವಾಗಿಸಬಲ್ಲ ತಂತ್ರಜ್ಞಾನಗಳು ಲಭ್ಯವಿರುವುದರಿಂದ ದಯಮಾಡಿ ಅದನ್ನ ಬಳಸಿ ; ಮನುಷ್ಯರ ಕಿವಿಗಳ ಸೂಕ್ಷ್ಮತೆಯನ್ನ ರಕ್ಷಿಸಿ

ದೇವರು ಬಹುಷಃ ಯಾವುದೋ ಪಕ್ಷಿಯ ಮಧುರ ಕಂಠದ ಮೂಲಕ ನಮಗೆಲ್ಲರಿಗೂ ಏನೋ ಹೇಳುತ್ತಿದ್ದಾನೆ ; ಪಕ್ಷಿಯ ಕಂಠದ ಮೂಲಕ ಮಾತ್ರ ಮಾತನಾಡುವ ದೇವರ ಧ್ವನಿಗೂ ಕೊಂಚ ಅವಕಾಶ ಕೊಡಿ ; please

ಸರ್, ನಿಮ್ಮ ಮಾತಿಗೆ ನನ್ನ ಸಹಮತವಿದೆ. ಈ ಧ್ವನಿವರ್ಧಕದ ಸಮಸ್ಯೆ ಕೆಲವರಿಗೆ ಕಿರಿಕಿರಿ ಉಂಟು ಮಾಡಿದ್ದಿರಬಹುದು. ಆದರೆ ಅದು ಈಗ ಸೃಷ್ಟಿಸಿರುವ ವಿವಾದಕ್ಕೆ ಸಂಪೂರ್ಣ ವಿರುದ್ಧವಾದುದು. ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರೇ ಹೆಚ್ಚಿರುವ ಬಡಾವಣೆಗಳಲ್ಲಿ ಇಡೀ ಬದುಕನ್ನು ಕಳೆದಿದ್ದೇನೆ. ವೈಯಕ್ತಿಕವಾಗಿ ನನಗೆಂದೂ ಈ ಧ್ವನಿವರ್ಧಕಗಳಿಂದ ಹೊರಹೊಮ್ಮುವ ಸದ್ದು ಕಿರಿಕಿರಿ ಉಂಟು ಮಾಡಿದ್ದಿಲ್ಲ. ವ್ಯತಿರಿಕ್ತವಾಗಿ ಅಲಾರಾಂಗಿಂತ ಹೆಚ್ಚು ಪರಿಣಾಮಕಾರಿ ಕೆಲಸ ಮಾಡಿದೆ. ನನಗೆ ನೆನಪಿರುವಂತೆ ನನ್ನ ದಿವಂಗತ ಅಜ್ಜಿಯೂ ಕೂಡ ಬೆಳ್ಳಂಬೆಳಗ್ಗೆ ಸಮಯ ಎಷ್ಟಾಗಿದೆ ಎಂಬುದನ್ನು ಖಚಿತಪಡಿಸಿಕೊಳ‍್ಳಲು ಇನ್ನು ಅಲ್ಲಾ ಕೂಗಿಲ್ಲವಲ್ಲ ಎಂದು ಗೊಣಗುತ್ತಿದ್ದಳು. ಅದೂ ಅಲ್ಲದೆ ನಾನು ಗಮನಿಸಿದಂತೆ ಮಸೀದಿಯಿಂದ ಹೊರಹೊಮ್ಮುವ ಬಾಂಗ್ ನಿರ್ದಿಷ್ಟ ಸಮಯದ್ದು. ಬೇಕಾಬಿಟ್ಟಿಯಲ್ಲ.

-ಪ್ರಭುಶಂಕರ್ 

ನನ್ನ ಕಿವಿಗಳು ಸುತ್ತಲಿನ ಶಬ್ದ ಮಾಲಿನ್ಯಕ್ಕೆ ಎಷ್ಟು ಒಗ್ಗಿದ್ದಾವೆ ಎಂದರೆ ಆಜ಼ಾನ್ ಇರಲಿ ಗಣಪತಿ ಸೇಂಟ್ ಮೇರಿ ಫೆಸ್ಟಿವಲ್ಗಳ ಆರ್ಕೇಸ್ಟ್ರಾದ ಕರ್ಕಷತೆ ಇರಲಿ ಮಾರಿಯಮ್ಮನ ಜೊರು ತಮಿಳು ಹಾಡುಗಳ ನಡುವೆಯೂ ನನ್ನ ಓದು ಮತ್ತಿತರ ಕೆಲಸಗಳನ್ನು ನನ್ನ ಪಾಡಿಗೆ ನಾ ಮಾಡಿಕೊಳ್ಳುತ್ತೇನೆ.

-ಪರಮೇಶ್ವರ ಗುರುಸ್ವಾಮಿ 

ನಾನು ಹೇಳುತ್ತಿರುವುದು ಆಕಾಶಕ್ಕೆ ಹೆಬ್ಬಾಯಿ ತೆರೆದು ವರಲುವ ಲೌಡ್ ಸ್ಪೀಕರ್ ಗಳ ಅಗತ್ಯವಿಲ್ಲ ; ಬೇರೆ ತರದಲ್ಲಿ ಮನುಷರ ನುಡಿಗಳನ್ನ amplify ಮಾಡುವ ತಂತ್ರಜ್ನಾನ ಬಳಸಬಹುದು ಅಂತಾ ; ನಾವು ಜಾತ್ತ್ಯಾತೀತ ಸಮಾಜದಲ್ಲಿ ಬದುಕುತ್ತಿರುವಂತೆಯೇ ಪ್ರಜಾಸತ್ತಾತ್ಮಕ ಸಮಾಜದಲ್ಲಿಯೂ ಬಾಳುತ್ತಿದ್ದೇವೆ.
ಅಮೇರಿಕದಲ್ಲಿ ದಂಪತಿಗಳು ( ಕ್ರೈಸ್ತ ಧರ್ಮೀಯರು ) ಚರ್ಚ್ ನ ಗಂಟೆಯ ಸದ್ದಿನಿಂದ ನಮ್ಮ ದಾಂಪತ್ಯ ಜೀವನ ಹಾಳಾಗಿದೆಯೆಂದು ನ್ಯಾಯಾಲಯದ ಮೆಟ್ಟಿಲು ಏರಿದ್ದರು ; ನ್ಯಾಯಾಲಯ ಆ ದಂಪತಿಗಳ ದೂರನ್ನ ಮಾನ್ಯ ಮಾಡಿತ್ತು.

ಯಾವುದೇ ಶಬ್ಧದ ಮಿತಿ ಎಷ್ಟು ಡೆಸಿಬಲ್ ಗಳಿಗಿಂತ ಕಡಿಮೆ ಇರಬೇಕೆಂಬುದು ನನ್ನ ಅಭಿಪ್ರಾಯ

Its very simple , we are living in a democratic and secular space ; loud speakers from any religious sect if exceeding the threshold decibles is harm full to both human and animal life

-ಎಲ್ ಸಿ ನಾಗರಾಜ್ 

Add Comment

Leave a Reply