Quantcast

ಪ್ರಸನ್ನ ಉಪನ್ಯಾಸ

ಜೆ.ಸಿ.ಕುಮಾರಪ್ಪ ಅಂಡ್ ಗಾಂಧಿ’ಸ್ ಸ್ಟ್ರಗಲ್ ಫಾರ್ ಎಕನಾಮಿಕ್ ಜಸ್ಟೀಸ್’

ಕೃತಿ ಕುರಿತು ಉಪನ್ಯಾಸ.

ವೇಣು ಮಾಧವ್ ಗೋವಿಂದು ಮತ್ತು ದೀಪಕ್ ಮಾಲ್ಘಾನ್ ಅವರ ಕೃತಿ “ಜೆ.ಸಿ.ಕುಮಾರಪ್ಪ ಅಂಡ್ ಗಾಂಧಿ’ಸ್ ಸ್ಟ್ರಗಲ್ ಫಾರ್ ಎಕನಾಮಿಕ್ ಜಸ್ಟೀಸ್” ಕೃತಿ ಕುರಿತ ವಿಶೇಷ ಉಪನ್ಯಾಸ ದಿನಾಂಕ 1ನೇ ಮೇ 2017 ರ ಸೋಮವಾರ ಸಂಜೆ 4 ಗಂಟೆಗೆ ಡಾ.ಬಾಬು ಜಗಜೀವನರಾಮ್ ಅಧ್ಯಯನ ಸಂಶೋಧನ ಮತ್ತು ವಿಸ್ತರಣ ಕೇಂದ್ರ, ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಹುಣಸೂರು ರಸ್ತೆ ಯಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಿ.ಯತಿರಾಜ್ ಪ್ರಸ್ತಾವಿಕ ಮಾತುಗಳನ್ನಾಡುವರು, ಹಿರಿಯ ರಂಗಕರ್ಮಿ ಹಾಗೂ ಗಾಂಧಿವಾದಿ ಪ್ರಸನ್ನ ಕೃತಿ ಕುರಿತು ವಿಶೇಷ ಉಪನ್ಯಾಸ ನೀಡುವರು, ಮುಖ್ಯ ಅತಿಥಿಯಾಗಿ ಪ್ರೊ.ಸದಾಶಿವ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಗಾಂಧಿವಾದಿಗಳಾದ ಸುರೇಂದ್ರ ಕೌಲಗಿಯವರು ವಹಿಸಲಿದ್ದಾರೆ.

ಈ ಕಾರ್ಯಕ್ರಮವನ್ನು, ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ ಸಂಶೋಧನ ಮತ್ತು ವಿಸ್ತರಣ ಕೇಂದ್ರ ಮತ್ತು ರಂಗವಲ್ಲಿ ಹಾಗೂ ಸಮಾಜವಾದಿ ಅಧ್ಯಯನ ಕೇಂದ್ರ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ.

Add Comment

Leave a Reply