Quantcast

ಮುಗಿಲ ಕಣ್ಣಿಗೆ ಮಿಂಚಿನ ಏಣಿಯಾಗಿ..

ಎಲ್ಲೆಗಳ ಊರೋಣ

ಕಿರಸೂರ ಗಿರಿಯಪ್ಪ

ಬತ್ತಿದ ಹೊಲದಲಿ ಹಸಿಗಾಯಗಳ ಮುಚ್ಚೋಣ
ಬಿರುಕ ಮನೆಯ ಹೊಸ್ತಿಲಲಿ ದೀಪಗಳ ಹಚ್ಚೋಣ

 

ಕೊಳೆತ ನೆನಪುಗಳ ನೆಲದಲ್ಲಿ ಹೂತು ಮುತ್ತುಗಳಾಗಿಸಿ
ಹೊಗೆಯ ನಾಲಿಗೆಯಲಿ ಸತ್ಯದ ಮಾತುಗಳ ಬಿತ್ತೋಣ

ಜಾರಿಬಿದ್ದ ಜತಗಿಯಲಿ ಗೆಲುವಿನ ಗೆಜ್ಜೆ ಮೂಡಿಸಿ
ದೂರದ ಪಯಣದಲಿ ನುಡಿಯಾಗೊ ಹೆಣಿಕೆಗಳ ಕಟ್ಟೋಣ

ಚದುರಿದ ಗುರುತುಗಳ ಬಯಲಲ್ಲಿ ಚಲ್ಲಿ ಕನಸುಗಳಾಗಿಸಿ
ಮುಗಿಲ ಕಣ್ಣಿಗೆ ಮಿಂಚಿನ ಏಣಿಯಾಗಿ ಎಲ್ಲೆಗಳ ಊರೋಣ

ಒಣಗಿದ ನರಗಳ ಸೆಳೆತಕ್ಕೆ ತೇವ ಕಾವೋ ಗುರುತುಗಳಾಗಿ
ಇರುಳ ಮೈಬಣ್ಣಕ್ಕೆ ಜೀವ ಮಿಡಿವ ಗಿರಿ ರೆಕ್ಕೆಗಳ ಕಟ್ಟೋಣ

Add Comment

Leave a Reply