Quantcast

ಕಥಾಸಿಯಾಹ್ ನಾಟಕ ‘ಗಿಡಗಿಡುಗ’

ಗಿಡಗಿಡುಗ

ದಿನಾಂಕ: ಶುಕ್ರವಾರ,  ಮೇ 12ನೇ ತಾರೀಖು 2017
ಸಮಯ: ಸಂಜೆ 7:30ಕ್ಕೆ
ಸ್ಥಳ: ರಂಗ ಶಂಕರ, ಬೆಂಗಳೂರು.
ನಾಟಕದ ಅವಧಿ:90 ನಿಮಿಷಗಳು
ಟಿಕೆಟ್ ಬೆಲೆ: ರೂ.100/-
ಟಿಕೆಟ್ಗಳು ಅಂತರ್ಜಾಲದಲ್ಲಿ BookMyShow ಜಾಲತಾ ಣದಲ್ಲಿ ಲಭ್ಯವಿದೆ.
14ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರವೇಶ

ರಚನೆ: ಸ್ವಾತಿ ಸಿಂಹ
ಕನ್ನಡಕ್ಕೆ ಅನುವಾದ: ವರಾವರ
ನಿರ್ದೇಶನ: ಕ್ಯಾರೆನ್ ಡಿ’ಮೆಲ್ಲೊ
ಪಾತ್ರವರ್ಗ:  ಅನೂಷಾ ಕೃಷ್ಣ, ಲೇಖಾ ನಾಯ್ಡು, ಸಿದಾರ್ಥ ಮಾಧ್ಯಮಿಕ, ರಾಮ್ ಮಂಜುನಾಥ್, ಶ್ರೀಹರ್ಷ, ಸರ್ವಜ್ನ ಆಚಾರ್ಯ

ನಾಟಕದ ಕುರಿತು:
ಗಿಡಗಿಡುಗ ನಾಟಕ ಬೆಂಗಳೂರಿನ  ಬಡಾವಣೆ ಒಂದರಲ್ಲಿ ಘಟಿಸುವ ಪುಟಾಣಿಯ ಕತೆ. ಆಕೆಯ ಪುಟ್ಟ ರಮ್ಯ ಕಲ್ಪನಾ ಲೋಕವು ನಾಟಕೀಯ ತಿರುವು ಪಡೆಯುವುದು, ಆಕೆ ತನ್ನ ಒಳ ಉಡುಪಿನಲ್ಲಿ ರಕ್ತವನ್ನು ಕಂಡಾಗ. ತನ್ನ ಜಾತಿ-ಧರ್ಮದ ಗಡಿ ದಾಟಿ ಆಕೆ ತನ್ನ ಲೈಂಗಿಕತೆಯನ್ನು ಶೋಧಿಸುತ್ತಿರಲು, ತನ್ನ ಭಾವನಾಲಹರಿ ಮತ್ತು ಮನೆಯವರ ರೀತಿ-ನೀತಿ ಇವುಗಳ ನಡುವಿನ ಬಿರುಕನ್ನು ಅರ್ಥ ಮಾಡಿಕೊಳ್ಳಲು ಮತ್ತು ಇವುಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಹೆಣಗುತ್ತಾಳೆ. ಈ ಎರಡು ಲೋಕದ ನಡುವಿನ ಕಂದರ ಆಕೆಯನ್ನು ತಬ್ಬಿಬ್ಬಾಗಿಸುತ್ತದೆ. ಹೂವರಳಿದಷ್ಟೇ ಹಗೂರವಾಗಿ, ಅಗೋಚರವಾಗಿ ಆಕೆ ಸಂಸಾರದ ಸಂಪ್ರದಾಯಬದ್ಧ ಹೆಣ್ಣಾಗಿ ಮಾರ್ಪಡುತ್ತಿರಲು, ‘ಗಿಡಗಿಡುಗ’ ಹೆಣ್ಣಿನ ದೇಹದ ಮೇಲೆ ಸಾಧಿಸಲಾಗುವ ನಿಗ್ರಹದ ಕುರಿತಾಗಿ ಕಾಲಾತೀತ ಪ್ರಶ್ನೆಯನ್ನು ಎತ್ತಿಕೊಳ್ಳುತ್ತದೆ. ಹೆಣ್ಣಿನ ಲೈಂಗಿಕತೆ ಮತ್ತು ಸಂತಾನೋತ್ಪತ್ತಿ ಶಕ್ತಿ ಇವುಗಳ ಮೇಲೆ ನಿಯಂತ್ರಣ ಸಾಧಿಸುವ ಅಗತ್ಯವಿದೆಯೇ? ಮಡಿ, ಮೈಲಿಗೆ, ರಕ್ಷ ಣೆ, ಭದ್ರತೆ ಇವೆಲ್ಲವೂ ನಿಯಂತ್ರಣದ ಇತರೆ ರೂಪವೇ?

 ಬ್ರಿಟೀಷ್ ಕೌನ್ಸಿಲ್ ಮತ್ತು ರೇಜ್ ಆಯೋಜಿಸಿದ ರೈಟರ್ಸ್ ಬ್ಲಾಕ್ – ೪ರ ಭಾಗವಾಗಿ ಈ ನಾಟಕ ಆಂಗ್ಲ ಭಾಷೆಯಲ್ಲಿ ರಚಿಸಲ್ಪಟ್ಟಿತು. ಮೂಲ ಆಂಗ್ಲ ಭಾಷೆಯಲ್ಲಿ ಇದನ್ನು ಬರೆದವರು ಸ್ವಾತಿ ಸಿಂಹ.

ನಿರ್ದೇಶಕರ ಮಾತು:
ನಾನು ಸ್ವಾತಿಯನ್ನು ಮೊತ್ತ ಮೊದಲ ಬಾರಿಗೆ ಭೇಟಿ ಆದಾಗ ಆಕೆ ಆಗಷ್ಟೇ ರೈಟರ್ಸ್ ಬ್ಲಾಕ್ -೪ರ ಭಾಗವಾಗಿ ನಾಟಕದ ಮೊದಲ ಕರಡನ್ನು ಸಂಪೂರ್ಣಗೊಳಿಸಿದ್ದಳು. ಈ ಕತೆಯನ್ನು ಕೇಳುತ್ತಿದ್ದಂತೆಯೇ ಅದಕ್ಕೆ ಮಾರುಹೋದೆ. ತನ್ನೊಳಗೆ ಒಂದು ನಾಟಕೀಯತೆಯನ್ನು ಅಂತರ್ಗತ ಮಾಡಿಕೊಂಡಿದ್ದ ಈ ಕತೆ ವೈಯಕ್ತಿಕ ಮತ್ತು ರಾಜಕೀಯವನ್ನು ಚೊಕ್ಕವಾಗಿ ನಾಜೂಕಾಗಿ ಬೇರ್ಪಡಿಸಲಾಗದಂತೆ ಹೆಣೆದಿತ್ತು. ಏಪ್ರಿಲ್ ೨೦೧೬ರಲ್ಲಿ ಆಂಗ್ಲ ಭಾಷೆಯಲ್ಲಿ ಈ ನಾಟಕವನ್ನು  ಮಾಡಿದಾಗ ಮತ್ತೆ ಇದು ನನ್ನ ಗಮನ ಸೆಳೆಯಿತು. ಯಶಸ್ವಿ ಪ್ರಯೋಗದ ನಂತರ ಸ್ವಾತಿಗೆ ಈ ನಾಟಕವನ್ನು ಅದರ ನೈಜ ಭಾವ-ಭಾಷಾ-ಪ್ರಪಂಚದಲ್ಲಿಟ್ಟು ಆಡಿಸಿದರೆ ಅದು ಯಾವ ರೀತಿ ಅನಾವರಣಗೊಳ್ಳಬಹುದು ಮತ್ತು ಹೇಗೆ ಸ್ವೀಕರಿಸಲ್ಪಡಬಹುದು ಎಂಬ ಕುತೂಹಲವಿತ್ತು. ಅಷ್ಟು ಹೊತ್ತಿಗಾಗಲೇ ನಮ್ಮೊಳಗೆ ಕಥಾ-ಸಿಯಾಹ್ ಕನಸು ಅರಳಿತ್ತು. ಹೆಣ್ಣಾಗಿ ನಮ್ಮ ಅನುಭವಕ್ಕೆ ದಕ್ಕಿದ ನಾಟಕವನ್ನು ಸಿದ್ಧಪಡಿಸುವ ಇರಾದೆ ಇತ್ತು, ಅಗತ್ಯ ಇತ್ತು. ಹೆಣ್ಣಿನ ಕತೆಯನ್ನು ಹೇಳುವ ಹೆಣ್ಣೇ ಬರೆದಿರುವ ನಾಟಕಗಳು ಕ್ಷೀಣ. ನಮ್ಮ ಹುಡುಕಾಟ ಗಿಡಗಿಡುಗ ನಾಯಕ ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಅಂತ್ಯಗೊಂಡಿತು. ಮತ್ತು ಈ ನಾಟಕ ನಮ್ಮ ಸ್ವಪ್ನದರ್ಶನಕ್ಕೆ ಪೂರಕವಾಗಿತ್ತು.

ಹೆಣ್ಣಿನ ದೇಹ, ಆಕೆಯ ಲೈಂಗಿಕತೆ ಸದಾಕಾಲ ಒಂದು ಸಮಸ್ಯೆ ಎಂದೇ ಪರಿಗಣಿಸಲಾಗಿದೆ. ವಿಶೇಷವಾಗಿ ಧಾರ್ಮಿಕ ಚೌಕಟ್ಟಿನ ಒಳಗಡೆ. ಇ0ಥಾ ಒಂದು ವ್ಯವಸ್ಥೆ ಮತ್ತು ನಾವೆಲ್ಲರೂ ಅದರ ಭಾಗವಾಗಿರುವಾಗಲೇ, ಈ ನೋವಿನ ಸತ್ಯ ನನಗೆ ಈ ನಾಟಕದೊಳಕ್ಕೆ ಒಂದು ಪ್ರವೇಶ ಮಾರ್ಗ ನಿರ್ಮಿಸಿತು. ಗಿಡಗಿಡುಗ ತನ್ನ ಲೈಂಗಿಕತೆಯನ್ನು ಅನ್ವೇಷಿಸುವ ಮತ್ತು ಆ ಯಾತ್ರೆಯಲ್ಲಿ ಜಾತಿ, ಧರ್ಮ, ಲಿಂಗ ಇವೆಲ್ಲಾದರ ಕ್ಷಿತಿಜವನ್ನೇ ವಿಸ್ತರಿಸುವ ಹುಡುಗಿಯ ಕತೆ. ಈ ನಾಟಕದ ನಟವರ್ಗವು ಪುಟಾಣಿ ಮತ್ತು ನನ್ನೊಂದಿಗೆ  ಈ ಶೋಧನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿ ವ್ಯವಸ್ಥಿತವಾಗಿ ನಮ್ಮೆಲ್ಲರ ಮೇಲೆ ಹಿಡಿತ ಸಾಧಿಸಿರುವ ಬಗೆಯನ್ನು ಅರಿಯಲು ಹೆಣಗಿದೆ. ಈ ಶೋಧನಾಯಾತ್ರೆಯಲ್ಲಿ ಏಳುವ ಪ್ರಶ್ನೆಗಳನ್ನೆಲ್ಲಾ ಜೀವಾಂತವಾಗಿರಿಸಿಕೊಂಡು ನಾಟಕವಾಡುತ್ತಾ ಆಡುತ್ತ, ಪರಿಷ್ಕರಿಸುತ್ತಾ ಉತ್ತರಕ್ಕಾಗಿ, ಪರಿಹಾರಕ್ಕಾಗಿ ದುಡಿಯುವುದೇ ನಮ್ಮ ಉದ್ದೇಶ.

ನೀವೂ ಬನ್ನಿ, ನಿಮ್ಮ ಸ್ನೇಹಿತರನ್ನೂ ಕರೆತನ್ನಿ. ಈ ಸಂದೇಶವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಧನ್ಯವಾದಗಳು,
ಕಥಾಸಿಯಾಹ್ ತಂಡ


KathaSiyah invites you to the staging of  its latest production.

Swati Simha’s ‘GidaGiduga’   on 12th May 2017 at Ranga Shankara , J P Nagar

 GidaGiduga

Venue:  Ranga Shankara , J P Nagar (MapLink)
Date: 12th May 2017
Time: 7.30 PM

Language: Kannada
Duration of the play: 100 mins
Tickets at Rs. 100
(Entry 14 years and above)

Written by Swati Simha
Translated to Kannada by Varaavara
Directed by Karen D’mello

Performed by Anoosha Krishna, Lekha Naidu, Ram Manjjonaath, Sarvajna Acharya,
Sidhartha Maadhyamika,Sriharsha H S

More details

About the Play 

Gidagiduga is about Puttani, a young girl living with her family in the suburbs of metropolitan Bangalore. Her playful fantasy laden world changes dramatically when she finds blood on her pants. Soon she finds herself in a delicate exploration of her sexuality outside the boundaries of caste and religion. As she navigates these new found feelings, Puttani struggles to cope with the strict disciplining she is subjected to and the immovable ideologies of her family confuse her further.

As Puttani slowly transforms into a symbolic site of familial beliefs, Gidagiduga raises the timeless question of control over the female body – Why is there a need to control a woman’s sexuality and reproduction? Are notions of purity and impurity, protection and safety, mere surrogates for ‘Domination ’? Originally written in English by Swati Simha as part of Writer’s Bloc 2016. Translated to Kannada by Varaavara

About the Playwright, Translators and Director:

Swati Simha is a playwright and actor. She graduated with a degree in theatre from FLAME School of Performing Arts and holds a Master’s degree in Intercultural Communication Studies from Shanghai Theatre Academy. She has written two children’s plays and is currently commissioned by Royal Exchange, Manchester to write he next play ‘Ouroboros’. She is pursuing her MPhil/PhD in Political Philosophy at Jawaharlal Nehru University.

Varaavara is a sound, a memory from a distant past where joy and inspiration was found in an instant even in a dried up mango seed.
Varaavara is also the name under which theatre practitioners Sidhartha Maadhyamika and Lekha Naidu write and translate collaboratively. This duo has individual experience of nearly a decade each in various disciplines of theatre and arts practice and have been working together since 2014.
They also create their own work within the theatre collective Saapekshaa.

Karen D’mello is a theatre maker and facilitator from Bangalore. She is the artistic director of KathaSiyah as well as a team member of Indian Ensemble Theatre.

Her training includes an intensive Directors Program as well as a Playwrights Program under the mentorship of

Abhishek Majumdar,  an eminent playwright and director himself . Karen also facilitates theatre workshops for children and young adults in schools and colleges.

About KathaSiyah 
KathaSiyah is a Bangalore based theatre group set up in 2015 by Karen D’mello and Sunayana
Premchander
The vision is to tell stories from perspectives and narratives that are often not included in mainstream discourse. KathaSiyah engages with politics and contemporary social debates, creating work that is grounded in research, work that engages rigorously with other performing arts

Tickets Available online on BookMyShow and at the venue

Facebook event

No refunds, no late entry, entry above 14 years of age.

Add Comment

Leave a Reply