Quantcast

ಕಣ್ಣೀರಿಗೆ ಕೆನ್ನೆಗಳುಂಟು ಜಾರಲು..

ಶಾಪ ಉಶ್ಯಾಪ  

ಅನಿತಾ ಗೌಡ

  

ಎಲ್ಲ ಪಾಪಕ್ಕೂ ಒಂದು ಪರಿಹಾರವುಂಟು

ಎಲ್ಲ ಶಾಪಕ್ಕೂ ಒಂದು ಬಿಡುಗಡೆಯುಂಟು

ಯಾವ ಮರುಭೂಮಿಯಾದರು ಇರುವುದು ಅದಕೊಂದುಎಲ್ಲೆ

ಯಾವ ಕಾಯಿಲೆಯಾದರೂ ಸಿಗುವುದು ಅದಕೊಂದು  ಔಷದಿ

ಎಷ್ಟೊಂದು ಸೂಫಿ ಸಂತರು ಆಗಿಹೋದರು

ಎಷ್ಟೊಂದು ಶರಣರು ಬಾಳಿ ಬದುಕಿದರು.

ಇಲ್ಲವಾದ ಸೂಫಿಗಳು ದರ್ಗಾಗಳಾದರು

ಕಾಲವಾದ ಶರಣರು ಸ್ಥಾವರಗಳಾದರು

ಹನಿದ ಕಣ್ಣೀರಿಗೆ ಕೆನ್ನೆಗಳುಂಟು ಜಾರಲು

ಮಾತುಬಾರದದ ಮೂಗನಿಗೂ ನೋವ ನುಡಿಯಲು ಕೊರಳುಂಟು

ಸ್ಮಶಾನಗಳಿವೆಯೆಂದು ಯಾರೂ ಸಾಯುವುದಿಲ್ಲ

ಸಾಯುವವರಿಗಾಗಿಯೇ ಬಿದಿರು ಬೆಳೆಯುವುದಿಲ್ಲ

 

Add Comment

Leave a Reply