Quantcast

ಹಳ್ಳಿ ವೆಂಕಟೇಶ್ ಗೆ ‘ಕಾಜಾಣ’ ಪುರಸ್ಕಾರ

ಪ್ರಸ್ತುತ ಸಾಲಿನ ‘ಕಾಜಾಣ ಯುವ ಕಾವ್ಯ ಪುರಸ್ಕಾರ’ಕ್ಕೆ ಹಾಸನ ಜಿಲ್ಲೆಯ, ಚನ್ನರಾಯಪಟ್ಟಣ ತಾಲೂಕಿನ ಜತ್ತೇನಹಳ್ಳಿ ಗ್ರಾಮದ ಕವಿ ಹಳ್ಳಿ ವೆಂಕಟೇಶ ಅವರನ್ನು ಆಯ್ಕೆ ಮಾಡಲಾಗಿದೆ.

ಐ.ಡಿ. ಎಸ್. ಜಿ ಕಾಲೇಜಿನ ಕನ್ನಡ ಅಧ್ಯಾಪಕಿ ಸುಧಾ ಅಡಗೂರು ಮತ್ತು ರಾಮನಗರದ ಕನ್ನಡ ಅಧ್ಯಾಪಕರಾದ  ಡಾ. ಎಲ್.ಸಿ.ರಾಜು ಅವರು ತೀರ್ಪು ನೀಡಿದ್ದಾರೆ.

ಪುರಸ್ಕಾರವು 5000 ನಗದು, ಪ್ರಶಸ್ತಿಪತ್ರ ಮತ್ತು ಫಲಕಗಳನ್ನು ಒಳಗೊಂಡಿದೆ.

ಈ ಪ್ರಶಸ್ತಿಯನ್ನು ಟಿ.ಎಸ್.ಗೊರವರ ಮತ್ತು ಟಿ.ಕೆ.ದಯಾನಂದ್ ಅವರುಗಳು ಈ ಮೊದಲು ಪಡೆದಿರುತ್ತಾರೆ.

2.6.2017 ರಿಂದ 4.6.2017 ರ ವರೆಗೆ ಕುಪ್ಪಳಿಯಲ್ಲಿ ನಡೆಯಲಿರುವ ಅಭಿನವ ಕಾಜಾಣ ಕಾವ್ಯಕಮ್ಮಟದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಬೇಲೂರು ರಘುನಂದನ್ ತಿಳಿಸಿದ್ದಾರೆ.

 

2 Comments

  1. kishor k
    May 17, 2017
    • Anonymous
      May 18, 2017

Add Comment

Leave a Reply