Quantcast

ಬೇಕಿತ್ತಾ ಇದು..??

ಸಂಸಾರ ಬೇಡ ಸನ್ಯಾಸಿ ಆಗ್ತೀನಿ

ಸಿದ್ದಯ್ಯ ಚಿಕ್ಕಮಾದೇಗೌಡ

 

ಇಸ್ಕಾನ್ ಸಂಸ್ಥೆಯ ಇಂತಹ ಪಾಠ ಮಕ್ಕಳ ವೈಜ್ಞಾನಿಕ ಚಿಂತನೆಯ ಕಡೆ ಹೋಗದಂತೆ ತಡೆದು, ಅವರನ್ನು ಮೌಡ್ಯದ ಕಡೆಗೆ ದೂಡುತ್ತದಲ್ಲವೆ? ಇಂತಹ ಪಾಠ ಕೇಳಲು ತಮ್ಮ ಮಕ್ಕಳನ್ನು ಇಸ್ಕಾನ್ ನಡೆಸುವ ಶಿಬಿರಕ್ಕೆ ಕಳುಹಿಸಬೇಕೆ? ಶಿಬಿರಕ್ಕೆ ಹೋಗುವ ಮೊದಲು ‘ಮುಂದೆ ಏನಾಗ್ತೀಯಾ?’ ಅಂದ್ರೆ ‘ಡಾಕ್ಟರ್ ಆಗ್ತೀನಿ’ ಎನ್ನುತ್ತಿದ್ದ 8 ವರ್ಷದ ಬಾಲೆ ಈಗ ‘ನಾನು ಸನ್ಯಾಸಿ ಆಗ್ತೀನಿ. ಈ ಸಂಸಾರದ ರಗಳೆಯೇ ಬೇಡ’ ಎನ್ನುತ್ತಿದ್ದಾಳೆ.

ಕೇವಲ 23 ದಿನಗಳಲ್ಲಿ ಮಕ್ಕಳ ಮನದಲ್ಲಿ ಏನೆಲ್ಲಾ ತುಂಬಿದ್ದಾರೆ ನೋಡಿ. ಸಣ್ಣ ಮಕ್ಕಳಿಂದ ಆಡಿಸುವ ಒಂದು ನಾಟಕದ ಸಂಭಾಷಣೆ ಇಲ್ಲಿದೆ ನೋಡಿ.

ಬನ್ನಿ ಬನ್ನಿ ಬೇಗ ಬನ್ನಿ ಓಡೋಡಿ ಬನ್ನಿ.

ಏನು ಸ್ವಾಮಿ? ಏನಾಯಿತು? ಯಾವುದಾದರೂ ಗಂಭೀರವಾದ ವಿಷಯವೇ?

ನಿಮಗೆಲ್ಲಾ ಅತ್ಯಮೂಲ್ಯವಾದ ರತ್ನವನ್ನು ಎಲ್ಲರಿಗೂ ನೀಡಬೇಕೆಂದಿದ್ದೇವೆ. ಅದಕ್ಕಾಗಿ ವಿಷ್ಣುವಿನ ದೇವಾಲಯದ ಬಳಿ ಬನ್ನಿ.

ಏನು, ದಿವ್ಯ ರತ್ನವೆ? ಆಗಲಿ ಸ್ವಾಮಿ.

ಬನ್ನಿ ಬನ್ನಿ, ಎಲ್ಲರೂ ವಿಷ್ಣುವಿನ ದೇವಾಲಯದ ಬಳಿ ಬನ್ನಿ.

ಏಕೆ ಬರಬೇಕು? ಇಂದು ಏನಾದರೂ ವಿಷೇಶ ದಿನವೆ? ಮಹಾಪ್ರಸಾದ ನೀಡುತ್ತಿರುವರೆ?

ಅಮೂಲ್ಯವಾದ ರತ್ನವನ್ನು ನಮಗೆಲ್ಲಾ ನೀಡುವರಂತೆ ಬನ್ನಿ ಬೇಗ ಬನ್ನಿ.

ಎಲ್ಲಿ ಆ ಮಹಾನುಭಾವ? ರತ್ನವನ್ನು ನಮಗೆಲ್ಲ ನೀಡುವೆನೆಂದು ಕರೆದರಲ್ಲ. ಎಲ್ಲೂ ಕಾಣಿಸುತ್ತಿಲ್ಲವಲ್ಲ.

ಅಗೋ ಅಲ್ಲಿ ನೋಡಿ.

ಎಲ್ಲಿ ಎಲ್ಲಿ ಎಲ್ಲಿ ಅವರು?

ಅಗೋ ಅಲ್ಲಿ ನೋಡಿ. ಗೋಪುರದ ತುದಿಯಲ್ಲಿ

ರಾಮಾನುಜಾಚಾರ್ಯರು> ಕೇಳಿರಿ ಕೇಳಿರಿ. ಎಲ್ಲರೂ ಗಮನವಿಟ್ಟು ಕೇಳಿರಿ. ನೀವೆಲ್ಲರೂ ಈ ಸಂಸಾರ ಬಂದನದಿಂದ ಮುಕ್ತರಾಗಲು ಬಯಸುವಿರಾ?
ಹೌದು ಹೌದು, ನಾವೆಲ್ಲರೂ ಈ ಸಂಸಾರ ಬಂದನದಲ್ಲಿ ಸಿಲುಕಿ ಒದ್ದಾಡುತ್ತಿದ್ದೇವೆ. ನಮಗೀಗ ಇದರಿಂದ ಮುಕ್ತಿಬೇಕು.

ರಾಮಾನುಜಾಚಾರ್ಯರು> ಹಾಗಾದರೆ ಒಂದು ಧಿವ್ಯ ಮಂತ್ರವನ್ನು ನಾನು ನಿಮಗೆ ಉಪದೇಶಿಸುತ್ತೇನೆ. ಅದು ನಿಮಗೆ ಮತ್ತೆಲ್ಲೂ ದೊರಕದು.
ತಾವೊಂದು ಅಮೂಲ್ಯ ರತ್ನವನ್ನು ನಮಗೆ ನೀಡುವಿರೆಂದು ಹೇಳಿದಿರಲ್ಲಾ.
ರಾಮಾನುಜಚಾರ್ಯರು> ಈ ಮಂತ್ರವೇ ಅತ್ಯಮೂಲ್ಯವಾದ ರತ್ನ. ಈ ಮಂತ್ರವನ್ನು ಪಠಿಸುವುದರಿಂದ ನೀವು ನಿಮ್ಮ ಸಂಕಷ್ಟಗಳಿಂದ ದೂರವಾಗಿ ಪರಮಪದವನ್ನು ಸೇರುವಂತಾಗುವಿರಿ.

ಹಾಗಾದರೆ ಆ ಅಮೂಲ್ಯವಾದ ರತ್ನವನ್ನು ನಮಗೆಲ್ಲ ಬೇಗನೆ ನೀಡಿ.

ರಾಮಾನುಜಾಚಾರ್ಯರು> ಆಗಲಿ. ಈಗ ನಾನು ಪಠಿಸುವ ಅಷ್ಟಾಕ್ಷರಿ ಮಂತ್ರವನ್ನು ನನ್ನ ನಂತರ ಹೇಳಿ. ಓಂ ನಮೋ ನಾರಾಯಣಾಯ. ಓಂ ನಮೋ ನಾರಾಯಣಾಯ.

ಗಾಜಿನ ಚೂರನ್ನು ಆರಿಸಿ ಬಂದವನಿಗೆ ವಜ್ರವೇ ಸಿಕ್ಕಿದಷ್ಟು ಸಂತೋಷವಾಯಿತು. ನಮಗಿಂದು ಅಮೃತಪಾನ ಮಾಡಿದಷ್ಟು ಸಂತೋಷವಾಯಿತು. ಪ್ರಪಂಚದ ಅಜ್ಞಾನದ ಬಲೆಗೆ ಬಿದ್ದು ಮುಕ್ತಿಯ ಮಾರ್ಗ ಕಾಣದೆ ಸೋತುಹೋಗಿದ್ದೆವು. ನಮ್ಮಂತಹ ದುರ್ಧೈವಿಗಳಿಗೆ ಮೋಕ್ಷದ ಮಾರ್ಗ ಕಲ್ಪಿಸಿದ ತಮಗೆ ನಮ್ಮೆಲ್ಲರ ವಂದನೆಗಳು.

 

2 Comments

  1. Anonymous
    May 20, 2017

Add Comment

Leave a Reply