Quantcast

ಎಲ್ಲರಂಥವನಲ್ಲ ನನ್ನಪ್ಪ..

ಪ್ರಿಯರೇ,

ಒಂದೊಳ್ಳೆಯ ಯೋಚನೆ ಮೂಡಿ ಪುಸ್ತಕದ ರೂಪ ಪಡೆಯೋದು ಅಂದ್ರೆ ಒಂದು ಮಗು ಜನಿಸಿ, ಅಂಬೆಗಾಲಿಕ್ಕುತ್ತಾ ನಡೆಯಲು ಪ್ರಾರಂಭಿಸಿ, ಮಾತಾಡೋಕೆ ಶುರು ಮಾಡಿದಂತೆ. ”ಎಲ್ಲರಂಥವನಲ್ಲ ನನ್ನಪ್ಪ” ಅನ್ನುವ ಈ ಮುದ್ದಾದ ಪುಸ್ತಕ ಈಗ ಮಾತಾಡೋಕೆ ಶುರು ಮಾಡಿದೆ.

ಮೈತ್ರಿ ಪ್ರಕಾಶನ ಮತ್ತು ಸಂಪಾದಕರಾದ ಗುರುಪ್ರಸಾದ ಕುರ್ತಕೋಟಿಯವರ ನೇತೃತ್ವದಲ್ಲಿ ಅಪ್ಪಂದಿರ ಬಗೆಗಿನ ಅಪರೂಪದ ಪುಸ್ತಕ ”ಎಲ್ಲರಂಥವನಲ್ಲ ನನ್ನಪ್ಪ” ಬಿಡುಗಡೆಗೆ ಸಿದ್ಧವಾಗಿದೆ ಎಂದು ತಿಳಿಸಲು ಸಂತಸವಾಗುತ್ತಿದೆ. ನನ್ನನ್ನೂ ಸೇರಿದಂತೆ ಜಗತ್ತಿನ ಮೂಲೆಮೂಲೆಗಳಲ್ಲಿರುವ ಮೂವತ್ತೇಳು ಕನ್ನಡದ ಲೇಖಕರು ಅಪ್ಪಂದಿರ ಲೋಕವನ್ನು ಈ ಕೃತಿಯಲ್ಲಿ ಅಕ್ಷರರೂಪದಲ್ಲಿ ಹಿಡಿದಿಡುವ ಪ್ರಯತ್ನವನ್ನು ಮಾಡಿದ್ದಾರೆ.

ಪುಸ್ತಕದ ಪ್ರತಿಯನ್ನು ರಿಯಾಯಿತಿ ದರದಲ್ಲಿ ಮುಂಗಡವಾಗಿ ಕಾದಿರಿಸಲು ಕೆಳಗಿನ ಲಿಂಕ್ ಒತ್ತಿ, ಫಾರಂ ಅನ್ನು ಭರ್ತಿ ಮಾಡಲು ಮರೆಯದಿರಿ: https://goo.gl/forms/r7kCj5KlGV86XoBi2

”ಎಲ್ಲರಂಥವನಲ್ಲ ನನ್ನಪ್ಪ” ಕೃತಿಯ ಮತ್ತು ಅಪ್ಪಂದಿರ ಬಗ್ಗೆ ಕೆಲವು ಲೇಖಕರು ಮಾತನಾಡಿದ್ದು ಕೃತಿಯ ಪ್ರೋಮೋ ಲಿಂಕ್ ಇಲ್ಲಿದೆ: https://www.youtube.com/watch?v=pSA_lkKp6F4&t=62s

ಎಲ್ಲರಿಗೂ ಹ್ಯಾಪೀ ಫಾದರ್ಸ್ ಡೇ!

ಧನ್ಯವಾದಗಳೊಂದಿಗೆ,

ಪ್ರಸಾದ್
ವೀಜ್, ರಿಪಬ್ಲಿಕ್ ಆಫ್ ಅಂಗೋಲಾ

Add Comment

Leave a Reply