Quantcast

ಬಿಜೆಪಿಯ ಕೋವಿಂದಾಸ್ತ್ರ!

ರಾಜಾರಾಂ ತಲ್ಲೂರು

 

ರಾಮನಾಥ್ ಕೋವಿಂದ್ (72) ಅವರ ಮೂಲಕ ಬಿಜೆಪಿ ಕೊಡುತ್ತಿರುವ ಎರಡನೇ ಅಚ್ಚರಿಯ “ಸರ್ಜಿಕಲ್ ಸ್ಟ್ರೈಕ್” ಇದು.

2015ರಲ್ಲಿ ಕೋವಿಂದ್ ಅವರನ್ನು ಬಿಹಾರದ ಗವರ್ನರ್ ಎಂದು ಕೇಂದ್ರ ಸರಕಾರ ಪ್ರಕಟಿಸಿದಾಗ ಬಿಹಾರದ ಉದ್ದಗಲಕ್ಕೂ ಇಂತಹದೊಂದು ಅಚ್ಚರಿಯ ಅಲೆ ಎದ್ದಿತ್ತು. ಸ್ವತಃ ಅಂದಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾಧ್ಯಮಗಳ ಮೂಲಕ ಈ ಸುದ್ದಿ ಕೇಳಿ, ಅವರು ಯಾರೇ ಆಗಿರಲಿ, ನಮ್ಮ ಜೊತೆ ಅವರಿಗಿರುವುದು ಸಾಂವಿಧಾನಿಕ ಸಂಬಂಧ; ನಮ್ಮ ನಿರೀಕ್ಷೆ ಅಷ್ಟೇ ಎಂದುಬಿಟ್ಟಿದ್ದರು.

 

ಉತ್ತರ ಪ್ರದೇಶದ ದಲಿತ (ಚಮ್ಮಾರ) ಸಮುದಾಯಕ್ಕೆ ಸೇರಿದ ರಾಮನಾಥ್ ಬಿಜೆಪಿಯ ವಿಧೇಯ ಬೆಂಬಲಿಗರು. ಗ್ರಹ ಸಚಿವ ರಾಜ್ ನಾಥ್ ಸಿಂಗ್ ಅವರ ಹಿಂಬಾಲಕರಾದ ಕೋವಿಂದ್ ರಾಜ್ಯಮಟ್ಟದಲ್ಲಿ ನಾಯಕರಾಗಿ ಹೊರಹೊಮ್ಮಬೇಕೆಂಬುದು ರಾಜ್ ನಾಥ್ ಸಿಂಗ್ ಅವರ ಬಯಕೆಯಾಗಿತ್ತಾದರೂ, ಉತ್ತರ ಪ್ರದೇಶದ ಬ್ರಾಹ್ಮಣ ನಾಯಕತ್ವ ಅದಕ್ಕೆ ಸಿದ್ಧರಿರಲಿಲ್ಲ. ಕೋವಿಂದ್ ರಿಗೆ ನಾಯಕತ್ವಕ್ಕೆ ಹಾದಿ ಮಾಡಿಕೊಟ್ಟರೆ, ಅವರು ಇನ್ನೊಬ್ಬ ಕಲ್ಯಾಣ್ ಸಿಂಗ್ ಆದಾರೆಂಬ ಭಯ ಅಲ್ಲಿನ ಬಿಜೆಪಿ ನಾಯಕರಲ್ಲಿತ್ತು.

 

ಉತ್ತರ ಪ್ರದೇಶದ ಇತರ ಇಬ್ಬರು ಪ್ರಮುಖ ದಲಿತ ನಾಯಕರಾದ ಜಿತನ್ ರಾಮ್ ಮಾಂಝಿ (ಮುಷಾಹಾರ್) ರಾಮ್ ವಿಲಾಸ್ ಪಾಸ್ವಾನ್ (ದುಸ್ಸಾಧ್) ಅವರಿಗೆ ಹೋಲಿಸಿದರೆ, ಅಷ್ಟೇನೂ ಜನಪ್ರಿಯರೂ ಜನಬೆಂಬಲಯುತರೂ ಅಲ್ಲದ, ಸೌಮ್ಯ ಸ್ವಭಾವದ, ಆರೆಸ್ಸೆಸ್ ಹಿನ್ನೆಲೆಯ, ಎರಡು ಬಾರಿಯ ರಾಜ್ಯಸಭಾ ಸದಸ್ಯರೂ, ಬಿಜೆಪಿ ಪರಿಶಿಷ್ಟ ಜಾತಿ/ವರ್ಗಗಳ ಮೋರ್ಛಾದ ರಾಷ್ಟ್ರಾಧ್ಯಕ್ಷರೂ ಆಗಿದ್ದ ಕೋವಿಂದ್ ಅವರ ಬಗ್ಗೆ ವಿಶೇಷ ಸಂಗತಿ ಎಂದರೆ, ಬಿಜೆಪಿಯ ರಾಷ್ಟ್ರೀಯ ವಕ್ತಾರ ಹುದ್ದೆಯಲ್ಲಿದ್ದರೂ ಅವರು ಯಾವತ್ತೂ ಟೆಲಿವಿಷನ್ ನಲ್ಲಿ ಕಾಣಿಸಿಕೊಂಡವರಲ್ಲ. ವಿವಾದಗಳಿಗೂ ಅವರಿಗೂ ಮಾರುದೂರ. 2012ರ ಉತ್ತರಪ್ರದೇಶ ಚುನಾವಣೆಗಳಲ್ಲಿ ಮಾಯಾವತಿ ವಿರುದ್ಧ ದಲಿತ ಮತಗಳನ್ನು ಸೆಳೆಯಲು ರಾಜನಾಥ್ ಸಿಂಗ್, ಕೋವಿಂದಾಸ್ತ್ರವನ್ನು ಬಳಸಿದ್ದರು. ಒಟ್ಟಿನಲ್ಲಿ ಬಿಜೆಪಿಗೆ ತನ್ನ ‘ದಲಿತ ಪರ ಒಲವನ್ನು’ ಬಹಿರಂಗವಾಗಿ ವ್ಯಕ್ತಪಡಿಸಲು ಕೋವಿಂದ್ ಅತ್ಯಂತ ಸಮರ್ಥ ಅಭ್ಯರ್ಥಿ. (ಆಧಾರ: ದಿ ಟೆಲಿಗ್ರಾಫ್)

 

 

One Response

  1. BVKulkarni
    June 19, 2017

Add Comment

Leave a Reply