Quantcast

ಅವೇ ಕವಣೆ ಕಲ್ಲುಗಳು..

ಸದಾಶಿವ್ ಸೊರಟೂರು

 

ಎಳೆಯಗಾಲುಗಳ ಎದೆಗೊತ್ತುತ್ತಾ ಬೆಳೆದಳು
ಅನುಕ್ಷಣ ಸಂಭ್ರಮ ಬಾಚಿಕೊಂಡು ಅಪ್ಪನಾದೆ;
ಅಕ್ಕಂಗೆ ಹೆಜ್ಜೆ ಹೆಜ್ಜೆಗೂ ಸಿಗುತ್ತಿದ್ದ ಎಚ್ಚರಿಕೆ ಮಾತುಗಳು
ಮಗಳ ನಡೆಯಲ್ಲಿ ಅಪ್ಪನೇಕೆ ಸಂಭ್ರಮಿಸಲಿಲ್ಲ ಅರಿಯದಾದೆ,

ಪದೇ ಪದೇ ಅಪ್ಪ ಕಾಡುತ್ತಾರೆ ಅದೇ ನೆನಪಿಗೆ
ಆಸೆಪಟ್ಟವಳೊಂದಿಗೆ ಬಾಳು ಬೇಡವೆಂದಿರಲಿಲ್ಲ;
ಮದುವೆ ‘ಮದುವೆ’ಯಂತಾಗು ಆದರ್ಶ ಕಟ್ಟಿಡೆಂದ ಮಾತಿಗೆ
ದಿಕ್ಕರಿಸಿ ‘ಸಹಿ’ಯೊಂದೆ ಮದುವೆ ಮಾಡಿತ್ತು ಯಾರು ಬಂದಿರಲಿಲ್ಲ!

ಬೆಳೆದವಳ ಕಂಡು ಅಪ್ಪ ಅಕ್ಕನಿಗಿತ್ತ ಎಚ್ಚರಿಕೆ ನೆನಪಾಗುತ್ತಿದೆ
ಕಾಲನ ಕರೆಗೆ ಅಡ್ಡದಾರಿಗಳು ಬಣ್ಣಗಳಾಗಿ ಸೆಳೆಯುತ್ತಿವೆ;
ಹೆತ್ತವರ ಕರುಳಾಳದ ನೋವು ಈಗೀಗ ಅಪ್ಪನಂತೆ ಕಾಡುತ್ತಿದೆ
‘ಮದುವೆ ಸವಕಲು, ಜೋಡಿ ಬದುಕಲು’ ಮಾತಿಗೆ ದೇಹ ನಡುಗಿದೆ,

ತಾಳದೇ ತಾಳಿಯಿಲ್ಲದೇ ಇರಬಹುದಂತೆ ಜೋಡಿ ಇಲ್ಲವೇ ದೂಡಿ
ಚೌಕಟಿನೊಳಗಿಹ ಹೆತ್ತವರು ನಕ್ಕರು ವಸೂಲಾದ ಬಡ್ಡಿನೋಡಿ.

Add Comment

Leave a Reply