Category: Uncategorized

ಎಚ್. ಲಕ್ಷ್ಮೀನಾರಾಯಣಸ್ವಾಮಿ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ

  2017 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಎಚ್ ಲಕ್ಷ್ಮೀನಾರಾಯಣಸ್ವಾಮಿ ಅವರ ‘ತೊಗಲ ಚೀಲದ ಕರ್ಣ’ ಎಂಬ ಖಂಡಕಾವ್ಯ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಕವಿಗಳಾದ ಲಲಿತಾ ಸಿದ್ದಬಸವಯ್ಯ ಹಾಗೂ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. ಪ್ರಶಸ್ತಿ...

ಯಶೋಧಾ ದೀದಿಯ 500 ರೂ ನೋಟು!

ಸುಮಂಗಲಾ  ನವೆಂಬರ್ 8, 2016 ಯಶೋಧಾ ದೀದಿಗೆ ಇದೇನಪ್ಪಾ ಒಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಹಿಂಗೆ ಅಸ್ತಿತ್ವದಲ್ಲಿದ್ದ ಸಂಗತಿಯೊಂದು ಬೆಳಗಾಗುವಷ್ಟರಲ್ಲಿ ಅಸ್ತಿತ್ವರಹಿತವಾಗುವದು ಎಂದರೆಎಂದು ಭಯಂಕರ ಗಾಬರಿಯೆನ್ನಿಸಿತು. ಮೊನ್ನೆಯೇ ಪಿಂಚಣಿ ತರಬೇಕಿತ್ತು, ಹಾಳು ವಯಸ್ಸು ಬೇರೆ… ಸುಮ್ಮನೇ ಇರುತ್ತದೆಯೇ… ಕೈಕಾಲು, ಸೊಂಟಗಳಲ್ಲಿ ಕೂತು, ಇದ್ದಬದ್ದಮೂಳೆಗಳನ್ನು ಕಟಿಪಿಟಿ ಮಾಡಿ, ಎಟಿಎಂಗೆ ನಾಳೆ ಹೋದರಾಯ್ತು ಎಂದುಕೊಂಡಿದ್ದು.. ಈಗ ನೋಡಿದರೆ…. “ನೋಟು ರದ್ದತಿ” ಹೆಡ್ ಲೈನಿನಲ್ಲಿ ಕಪ್ಪಕ್ಷರದಲ್ಲಿ ದೊಡ್ಡಕ್ಷರದಲ್ಲಿ ಫಳಫಳಿಸುತ್ತಿದೆ… “ಅರೆ ನಾನೇನು ಕನ್ನಡಕ ಹಾಕಿಕೊಂಡು ಪೇಪರ್ ಓದತಿದ್ದೀನಾ ಇಲ್ಲವಾ” ಎಂದು ಯಶೋಧಾ ದೀದಿ ಗಾಬರಿಗೊಂಡು, ಕಣ್ಣಿಗೆ ಒಮ್ಮೆ ಕೈಒತ್ತಿಕೊಂಡರು. ಇಲ್ಲ ಕನ್ನಡಕ ಮೂಗಿನ ಮೇಲೆ ಇದೆ… ಅಂದರೆ ಓದುತ್ತಿರುವುದು ನಿಜ…ಇಲ್ಲಿರುವುದು ನಿಜ…  ಈ ಸಲ ಇನ್ನೂ ಕೆಲಸದವಳಿಗೆ ಸಂಬಳ ಕೊಟ್ಟಿಲ್ಲ,  ಹಾಲಿನವನು,ಪೇಪರ್ನವನು… ಕಿರಾಣಿ… ಬ್ಯಾಂಕಿನಿಂದ ದಿನಕ್ಕೆ ಎರಡು ಸಾವಿರ ಮಾತ್ರವಂತೆ… ಎಲ್ಲೋ ಕಪಾಟಿನ ಮೂಲೆಯಲ್ಲಿ ಸೀರೆಯ ಮಡಿಕೆಯಲ್ಲಿ ಆಗೀಗ ಉಳಿಸಿದ್ದ ಐದು ನೂರರ ನೋಟುಗಳು ಎಂಟು ಹತ್ತು ಇದ್ದೀತು, ನಿಜ.. ಆದರೆ ಅದನ್ನು ಮೂಸುವವರು ಯಾರೀಗ…. ಪಾತ್ರೆ ತೊಳೆಯುತ್ತಿದ್ದ ಕೆಲಸದವಳು “ಅವ್ರಿಗೇನು ಹೆಂಡತಿ ಮಕ್ಳುಮರಿ ಇಲ್ಲ, ಕಾಸುಕೊಟ್ಟು ಏನಾರ ಖರೀದಿ ಮಾಡೋ ಚಿಂತಿ ಇಲ್ಲ” ಎಂದೇನೋ  ಗೊಣಗುತ್ತ ಪಾತ್ರೆಯನ್ನು ಕುಕ್ಕಿದಳು.  ಹೋಗುವ ಮೊದಲು ಸೆರಗಿನ ಗಂಟಿನಲ್ಲಿದ್ದ ಇದೀಗ ಒಲೆಗೆ ಎಸೆಯಬಹುದು ಎಂಬ ಚಹರೆಯನ್ನು  ಅಂಟಿಸಿಕೊಂಡಿದ್ದ, ಮುಟ್ಟಿದರೆ ಇನ್ನೇನು ಹರಿದೇ ಹೋಗುವಂತಿದ್ದ ಮಡಿಕೆಯಾಗಿದ್ದ ಹಳೆಯ ಎರಡು ಐದು ನೂರರ ನೋಟನ್ನು ಯಶೋಧಾ ಬೆಹನ್  ಮುಂದೆ ಹಿಡಿದು, ‘ಸಂಬಳ ಆಮೇಲೆ ಕೊಡ್ರಿ, ಈಗ ಇದನ್ನಿಟ್ಟುಕೊಂಡು ನೂರರ ನೋಟಾದ್ರೂ ಕೊಡ್ರಿ…  ಮನಿಗಿ ಅಕ್ಕಿ, ಬ್ಯಾಳಿ   ಆದರೂ  ತಗಂಡುಹೋಗತೀನಿ”  ಎಂದಳು. ಯಶೋಧಾ ದೀದಿ ಮೂರ್ಚೆ ಹೋಗುವುದೊಂದು ಬಾಕಿ!  ಸಂಬಂಧಗಳೇ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅಸ್ತಿತ್ವ  ಕಳೆದುಕೊಂಡು…. ವರ್ಷಗಟ್ಟಲೆ ಚುನಾವಣಾ ಅಭ್ಯರ್ಥಿ ದಾಖಲೆಗಳಲ್ಲಿಯೂ ಅವಿವಾಹಿತ ಎಂದು ಉಳಿಯುವಾಗ… ...

ಬುಟ್ಟಿ ತಟ್ಟಿ- ತಟ್ಟೆಗಳ ಮಧ್ಯೆ..

  ತೀರ್ಥಹಳ್ಳಿಯ ಮೌಲ್ಯಗಳ ಪ್ರತಿನಿಧಿಯಂತೆ ಬುಟ್ಟಿ ತಟ್ಟಿ- ತಟ್ಟೆಗಳ ಹಮೀದ್ ಖಾನ್ —————————————————— ನೆಂಪೆ ದೇವರಾಜ್      ತೀರ್ಥಹಳ್ಳಿಯ ಆಜಾದ್ ರಸ್ತೆ ಸಂಪೂರ್ಣ ಬದಲಾಗಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡದ್ದರ ಕುರುಹಾಗಿ ತಾಲೂಕು ಕಚೇರಿ ಆವರಣದಲ್ಲಿ ಬಹು ಆಕರ್ಷಕ ಪೆಂಡಾಲೊಂದು...

ಒಂದು ಸ್ಪೂನಿನ ಸೂಪಿಗಾಗಿ..

            ಮ ಶ್ರೀ ಮುರಳಿ ಕೃಷ್ಣ   ‘ಬ್ಯಾಟಲ್ಶಿಪ್ ಪೊಟೆಮ್ಕಿನ್’ ಸರ್ಗೈ ಐಸೆನ್‍ಸ್ಟೈನ್‍ರ ಐಕಾನಿಕ್ ಮೂಕಿ ಚಲನಚಿತ್ರ ‘ಬ್ಯಾಟಲ್ಶಿಪ್ ಪೊಟೆಮ್ಕಿನ್’ 1925ರಲ್ಲಿ ತೆರೆಕಂಡ ಈ ಚಲನಚಿತ್ರ ರಷ್ಯಾದಲ್ಲಿ 1917ರಲ್ಲಿ ಜರುಗಿದ ಮಹಾಕ್ರಾಂತಿಯಿಂದ ಪ್ರೇರೇಪಿತಗೊಂಡಿದ್ದು ಎಂದು ವಿಮರ್ಶಕರು...

ಲೈಬ್ರರಿಯಿಂದ ಆಯ್ದ ಪದ್ಯಗಳು

      ಬಿ ಎಂ ಬಶೀರ್     ಕೆಲವರ ಮನೆಯ ಲೈಬ್ರರಿಗಳು ಅವರ ಡೈನಿಂಗ್ ಟೇಬಲ್ ಮೇಲಿರುವ ಪ್ಲಾಸ್ಟಿಕ್ ಬಾಳೆಹಣ್ಣುಗಳಂತೆ ಆಕರ್ಷಿಸುತ್ತವೆ ಮನೆಗೊಂದು ಲೈಬ್ರರಿ ಬೇಕು ಎಂದು ಕಪಾಟು ತುಂಬಾ ಪುಸ್ತಕಗಳ ತಂದು ಸುರಿದೆ ಇದೀಗ ಜಿರಳೆಗಳೆಲ್ಲ ಪಂಡಿತರಂತೆ...

ಉತ್ತರಗಳ  ವಿಶ್ವ..

ದಾದಾಪೀರ್ ಪಿ ಜೈಮನ್ ಮುಂದೆ ಕುಳಿತಿದ್ದವು ಉತ್ತರದ ವಿಶ್ವಗಳು ಪ್ರಶ್ನೆಗಳು ಮಾತ್ರ ಬೇರೆಯರವು ತೆರೆದು ತಿದ್ದುತ್ತಿದ್ದೆ ರಾತ್ರಿ ಮೌನದ ಜೊತೆಗೆ ಸಾಕ್ಷಿಯಾಗಿದ್ದವು;  ಮಾಪನದ ಪ್ರತಿಗಳು. ಗೆರೆಗೆರೆಗಳಾ ನಡುವೆ ನೀಲಿಯಕ್ಷರ ಸಾಲು ಮರೆವ ಮೆದುಳನು ಸೆಳೆವ ನೆನಪುಗಳಸಿಂಧು ತಪ್ಪು ಸರಿ ಗೀಟುಗಳು ರುಜುವಾತು...

ಎ ಎನ್ ಮುಕುಂದ್ ಕಂಡಂತೆ ಪಳಕಳ ಸೀತಾರಾಮ ಭಟ್

ಮಕ್ಕಳ ಸಾಹಿತ್ಯಕ್ಕೆ ಮುಗುಳ್ನಗೆ ತಂದು ಕೂರಿಸಿದ ಪಳಕಳ ಸೀತಾರಾಮ ಭಟ್ ಅವರು ಇನ್ನಿಲ್ಲ. ನನ್ನ ಅಪ್ಪ ಇಷ್ಟೆತ್ರ ನನ್ನ ಅಮ್ಮ ಇಷ್ಟೆತ್ರ ನಾನು ಮಾತ್ರ ಇಷ್ಟೇ ಎತ್ರ, ಯಾಕೋ ಗೊತ್ತಿಲ್ಲ     ಎನ್ನುವ ಕವಿತೆ ಕೇಳದವರಿಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿಯ ಮನ್ನಣೆಗೂ ಪಾತ್ರರಾಗಿದ್ದ...

ಪರದೇಶಿ ನವಿಲು ಕಣ್ಣೀರು..

ಕಿರಸೂರ ಗಿರಿಯಪ್ಪ ಗದ್ದೆಯ ನಾಟಿಯಲಿ ತಲ್ಲಿನಗೊಂಡ ಕಣ್ಣುಗಳು ಸಾಲು ನಾಗರಗಳ ಕಣ್ಣು ತಪ್ಪಿಸಿ ಬಯಲಿಗೆ ಬಿದ್ದ ಬಂಡೆಯಂತೆ ಬಿಸಿ ನೆತ್ತಿಯಲಿ ಕೆಸರ ಉಂಡೆಯನು ಹೊಕ್ಕಳಿಗೆ ಹೊತ್ತಿಕೊಳ್ಳುವವು ಪರದೇಶಿ ಬೀದಿಯ ನಾಡಿಯಲಿ ಕುಸಿದ ಕರುಳು ಬೆಸುಗೆಗೊಳ್ಳಲಿಯೆಂದು ಬಿರಿದ ರಾತ್ರಿಯಲಿ ಕೊಳೆತ ಕನಸುಗಳ ಆಯುವ...