Category: ಅಂಕಣ

ಏನೂ ತೋರದಿದ್ದಷ್ಟು ಪಾರದರ್ಶಕ!

ಇನ್ನು ಹದಿನಾಲ್ಕು ತಿಂಗಳುಗಳೊಳಗೆ ಕೇಂದ್ರ ಸರಕಾರ ತನ್ನ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಲಿದೆ. ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಕೇಂದ್ರ ಸರಕಾರದ ಆಶ್ವಾಸನೆ ಈ ನಾಲ್ಕು ವರ್ಷಗಳ ಅವಧಿಯಲ್ಲಿ ಎಷ್ಟು ಹೆಜ್ಜೆ ಯಾವ ದಿಕ್ಕಿನಲ್ಲಿ ಇಟ್ಟಿದೆ ಎಂಬುದನ್ನು ವಿಶ್ಲೇಷಿಸುವ ಪ್ರಯತ್ನ ಇದು. ಆದಾಯ...

ಅಲ್ಲಿ ನಮ್ಮೊಂದಿಗೆ ತೇಜಸ್ವಿ, ಕುವೆಂಪು, ಜೋಗಿ, ಕಾಯ್ಕಿಣಿ ಎಲ್ಲರೂ ನಡೆಯುತ್ತಿದ್ದರು..

ತಣ್ಣಗಿದ್ದ ಆ ನೀರ ತಂಪು ಸ್ಪರ್ಶ, ಥೇಟ್ ಬುದ್ಧನ ಮೌನದಂತೆಯೇ..!! ಮದುವೆಯಾಗಿ ಇನ್ನೂ ಸರಿಯಾಗಿ ೬ ತಿಂಗ್ಳಾಗಿಲ್ಲ, ಅದೆಂತ ಅಷ್ಟ್ ಬೇಗ ಗಂಡನ್ನ ಬಿಟ್ಟು ತಿರ್ಗಕ್ ಹೊರ್ಟಿದ್ ನೀನು?’ ಅಂತೆಲ್ಲೋ ಅಮ್ಮನ ಗದರಿಕೆ ಕಿವಿ ತಲುಪುವುದರೊಳಗೆ , ಕೈಗೊಂದಿಷ್ಟು ದುಡ್ಡಿಟ್ಟು ’ಇನ್ನೂ...

ಹೀಗೆ ಖರ್ಚು ಮಾಡಿದ್ರೆ ಎಣ್ಣೆ ಬಾವಿ ಕೊರೀಬೇಕಾಗುತ್ತೆ..!!

”ಇಲ್ಲಿಯವರೆಗೆ ಬಂದ ನಂತರ  ಜಾಗೃತ ಸ್ಥಿತಿಯಲ್ಲಂತೂ ಖಂಡಿತ ಇರಿ” ”ಇಲ್ಲಿಯವರೆಗೆ ಬಂದ ನಂತರ ಭಯದ ನೆರಳಿನಲ್ಲಿ ಬದುಕುವುದೆಂದರೆ ಮೂರ್ಖತನವೇ ಸರಿ. ತೀರಾ ಪುಕ್ಕಲರಾಗಬೇಡಿ. ಆದರೆ ಜಾಗೃತ ಸ್ಥಿತಿಯಲ್ಲಂತೂ ಖಂಡಿತ ಇರಿ”, ಎಂದು ನಾನು ನನ್ನ ಕಿರಿಯ ಸಹೋದ್ಯೋಗಿಯೊಬ್ಬನಿಗೆ ಹೇಳುತ್ತಿದ್ದೆ. ಮೊದಮೊದಲು ಅಂಗೋಲಾಕ್ಕೆ...

ಕರಾವಳಿಗೆ “ಮನಿ ಆರ್ಡರ್” ಆಗಿ ತಲುಪುವ ಕೋಮು ವೈಷಮ್ಯ

ಕರಾವಳಿಯು ಕೋಮು ಹಿಂಸೆಗೆ ತಾಣ ಆದದ್ದು ಹೇಗೆ ಎಂಬುದನ್ನು ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಅದನ್ನು ಹೀಗೆ ಹೇಳಬಹುದು: “ವ್ಯಾವಹಾರಿಕ ದ್ವೇಷ ಬರಬರುತ್ತಾ ದ್ವೇಷದ್ದೇ ವ್ಯವಹಾರ ಆಗಿ ಬದಲಾದ ಕಥೆ ಇದು.”   ಕ್ರೈಸ್ತ ಮಿಷನರಿಗಳು, ಬಪ್ಪಬ್ಯಾರಿ, ಹಾಜಿ ಅಬ್ದುಲ್ಲಾ ಸಾಹೇಬರು, ಕುದ್ಮಲ್ ರಂಗರಾಯರು ಬದುಕಿ...

ಇಲ್ಲಿರೋದು ಚ್ಯೂಯಿಂಗಮ್ ಕಾನೂನು…

”ಎಲ್ಲಿ ಹೋಗಿದ್ರಿ ನೀವು? ನಿಮ್ಮನ್ನು ಹುಡುಕಿ ಹುಡುಕಿ ಸಾಕಾಗಿಹೋಯಿತು. ಇಂದಿನಿಂದ ನೀವು ಎಲ್ಲೂ ಒಬ್ಬೊಬ್ಬರೇ ಹೋಗುವಂತಿಲ್ಲ”, ಎಂದು ಅಂದು ದೃಢವಾಗಿ ಹೇಳಿದ ನನ್ನ ದುಭಾಷಿ ಮಹಾಶಯ ಮಿಗೆಲ್ ಎಂಬೋಸೋ. ಎಲ್ಲೂ ಒಬ್ಬೊಬ್ಬನೇ ಹೋಗುವುದಕ್ಕಿಲ್ಲ ಎಂದರೆ? ನಾನು ಗಂಭೀರವಾಗಿ ಯೋಚಿಸಿದೆ! ಕಳೆದ ಏಳು...

ಖಾಸಗಿ ಕೈಗೆ “ಮೋರ್ ಕ್ರಾಪ್”… ರೈತರಿಗೆ ಕಣ್ಣಲ್ಲಿ” ಮೋರ್ ಡ್ರಾಪ್”

ಬಹುರಾಷ್ಟ್ರೀಯ ಕಾರ್ಪೋರೇಟ್  ಗಳ ಸೂತ್ರದ ಬೊಂಬೆಗಳಾಗಿರುವ ವರ್ಲ್ಡ್ ಬ್ಯಾಂಕ್, ಏಷ್ಯನ್ ಡೆವಲೆಪ್ ಮೆಂಟ್ ಬ್ಯಾಂಕಿನಂತಹ ಮುಂಗೈಗೆ ಬೆಲ್ಲ ಅಂಟಿಸುವ ಏಜನ್ಸಿಗಳಿಗೆ ಬೆಳೆಯುತ್ತಿರುವ ದೇಶಗಳ ನೆಲ, ನೀರು ಕಣ್ಣಿಗೆ ಬಿದ್ದು ಈಗ ಒಂದು ದಶಕ ಕಳೆದಿದೆ. ಬಹಳ ಯೋಜಿತವಾಗಿ ಅವರಾಡುತ್ತಿರುವ ಆಟಕ್ಕೆ, ಭಾರತದಲ್ಲಿ...

ನಮೀಬಿಯನ್ ನೀರೆಯರ ಜೊತೆ..

ಅಂದು ನನ್ನ ಪಾಡಿಗೆ ನಾನು ತಿನ್ನುವುದರಲ್ಲೇ ಮಗ್ನನಾಗಿದ್ದರೂ ಮೂರು ಜೋಡಿ ಕಣ್ಣುಗಳು ನನ್ನನ್ನೇ ಅಳೆಯುತ್ತಿರುವಂತೆ ಭಾಸವಾಗಿ ಎಂಥದ್ದೋ ಹಿಂಜರಿಕೆಯಾದಂತಾಗಿ ನಾನು ಕೂತಲ್ಲೇ ಕೊಸರಾಡುತ್ತಿದ್ದೆ. ಅಷ್ಟಕ್ಕೂ ಆಗಿದ್ದೇನೆಂದರೆ ರೆಸ್ಟೊರೆಂಟಿನ ಒಂದು ಬದಿಯಲ್ಲಿ ಏಕಾಂಗಿಯಾಗಿ ಊಟ ಮಾಡುತ್ತಿದ್ದ ನನ್ನನ್ನು ಮೂವರು ಆಫ್ರಿಕನ್ ತರುಣಿಯರು ಸುಮ್ಮನೆ...

ಹೊಸ ವರ್ಷಕ್ಕೊಂದು “ರೆಸೊಲ್ಯೂಷನ್” NOTA

ಜಗದೋದ್ಧಾರಕರೆಲ್ಲ ಎದ್ದು ತಿರುಗಾಡಲಾರಂಭಿಸಿ ಈಗಾಗಲೇ ಆರು ತಿಂಗಳು ಕಳೆದಿವೆ. ಎದ್ದಿರುವ ಕೆಸರುರಾಡಿಯೇ ಈ ಬಾರಿಯ ಚುನಾವಣೆಯ ಭರಾಟೆಗೆ ಮಾನದಂಡ ಆಗುವುದಿದ್ದರೆ,  ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಕೊಳಚೆ ಚುನಾವಣೆಯೊಂದಕ್ಕೆ ನಾವು ಸಿದ್ಧರಾಗುತ್ತಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿಬಿಡಬಹುದು. ರಾಜಕೀಯ ಬೃಹನ್ನಾಟಕದ ಎಲ್ಲ ಮಹೋನ್ನತ  ನಟರಿಗೂ...

‘Hair cut’ ಎಂದರೆ 350 ಕಿಲೋಮೀಟರುಗಳ ಒಂದು ಸುದೀರ್ಘ ಪ್ರಯಾಣ!

 `ಕತ್ತರಿ’ ಪ್ರಯೋಗದ ಸುತ್ತ   ”ಹುಡುಕಿದರೆ ಭಗವಂತನೇ ಸಿಕ್ಕಿಬಿಡುತ್ತಾನಂತೆ. ಆದರೆ ನನಗೆ ಕ್ಷೌರದಂಗಡಿ ಮಾತ್ರ ಸಿಕ್ಕಲಿಲ್ಲ”, ಅನ್ನುತ್ತಿದ್ದರು ನನ್ನ ಸಹೋದ್ಯೋಗಿಯಾದ ಸಿಂಗ್. ವೀಜ್ ಗೆ ಬಂದ ಹೊಸತರಲ್ಲಿ ಕಂಡಿದ್ದೆಲ್ಲವೂ ಅಚ್ಚರಿಯಾಗಿದ್ದ ನಮಗೆ ಕ್ರಮೇಣ ಎಲ್ಲವೂ ಕೂಡ ದಿನಚರಿಯಂತೆ ಬದಲಾಗಿದ್ದವು. ಆದರೆ ಭಾರತವನ್ನು...