Category: ಅಂಕಣ

ಗೋಲ್ ಮಾಲ್ ಹೈ ಭಾಯಿ ಸಬ್ ಗೋಲ್ ಮಾಲ್ ಹೈ..

7 ಅಂಗೋಲಾದಲ್ಲಿ ಲಂಚಾವತಾರ` ‘ಗೋಲ್ ಮಾಲ್ ಹೈ ಭಾಯಿ ಸಬ್ ಗೋಲ್ ಮಾಲ್ ಹೈ…’ ಲುವಾಂಡಾ-ವೀಜ್ ರಸ್ತೆಯಲ್ಲಿ ಬರುವ ಐದಾರು ಚೆಕ್-ಪೋಸ್ಟ್ ಗಳಲ್ಲಿ ಪೋಲೀಸಪ್ಪನೊಬ್ಬ ಮೊಟ್ಟಮೊದಲು ನನ್ನಲ್ಲಿ ಹಣ ಕೇಳಿದಾಗ ತಕ್ಷಣಕ್ಕೆ ಹೊಳೆದ ಹಾಡೇ ಇದು. ಅಂಗೋಲಾಕ್ಕೆ ಕಾಲಿಡುವ ಮೊದಲ ದಿನವೇ...

ಹೋಗಿ ಕೆಲ್ಸಾ ನೋಡ್ಕಳಿ!

ದೇಶದೊಳಗೆ ಸ್ಕಿಲ್ ಡೆವಲಪ್ಮೆಂಟ್ ಯಾರದಾದರೂ ಆಗಬೇಕಾದದ್ದಿದ್ದರೆ ಅದು ನಮ್ಮನ್ನಾಳುವ ರಾಜಕಾರಣಿಗಳದು ಮತ್ತು ಅವರ ತಲೆಗೆ ಯೋಜನೆಗಳ ರಂಗು ತುಂಬುವ ಅಧಿಕಾರಿ ವರ್ಗದ್ದು. ಮಾತೆತ್ತಿದರೆ “ಇದು ಮೆಕಾಲೆಯ ಶಿಕ್ಷಣ ಪದ್ಧತಿಯ ಫಲ” ಎಂದು ಅರಬಾಯಿ ಇಡುವ ಈ ಮೆಕಾಲೆಯ ಪುತ್ರರತ್ನಗಳು  “ಸ್ಕಿಲ್ ಇಂಡಿಯಾ”...

ಬಾರೋ ಸಾಧನಕೇರಿಗೆ..ಮರಳಿ ನಿನ್ನೀ ಊರಿಗೆ..!

ನಿನ್ನೆ ರಾತ್ರಿ ನನ್ನ ಮತ್ತು ಮಂಗಲಿಯ ನಿದ್ರೆ ಹಾರಿಹೋಗಿತ್ತು. ಮಂಗಲಾ ಶಿರಾಲಿ ನನ್ನ ಬಾಲ್ಯದ ಒಡನಾಡಿ. ನಮ್ಮ ಬಾಲ್ಯದ ಸಾಧನಕೇರಿಯ ಸವಿನೆನಪುಗಳು ನಿದ್ದೆಗೆಡಿಸಿದ್ದವು.  ಹುಲ್ಲುಗರಿಕೆಯ ಎಸಳಿನ ತುತ್ತ ತುದಿಗಂಟಿಕೊಂಡು ಉರುಳಿ ನೆಲಸೇರಿ ಇಂಗಿಹೋಗಲೋ    ಇಲ್ಲ ಕರಗಿಹೋಗಲೋ ಎಂದು ಹೊಯ್ದಾಡುತ್ತಿರುವ ಮಂಜಿನ ಹನಿಯಂತಾಗಿತ್ತು...

ಲುವಾಂಡಾದ ‘ರಸ್ತೆ ಪುರಾಣ’

  ಅದೊಂದು ದಾರಿ… ಮುನ್ನೂರು ಚಿಲ್ಲರೆ ಕಿಲೋಮೀಟರುಗಳ ದಾರಿ… ಆರೂವರೆ ತಾಸಿನ ಪ್ರಯಾಣವನ್ನು ಬೇಡುವ ದಾರಿ… ಅಂಗೋಲಾದ ಲುವಾಂಡಾದಿಂದ ವೀಜ್ ವರೆಗಿನ ಈ ದಾರಿಯನ್ನು ನಾನು ಕಳೆದೆರಡು ವರ್ಷಗಳಲ್ಲಿ ಹಲವಾರು ಬಾರಿ ಕ್ರಮಿಸಿದ್ದೇನೆ. ಆದರೆ ಪ್ರತೀಬಾರಿಯೂ ಇಲ್ಲಾಗುವ ಅನುಭವಗಳ ಖದರೇ ಬೇರೆ....

ಪತಂಜಲಿ ಎಂಬ ಬಿಸಿನೆಸ್ ಮಾಡೆಲ್!

ಸಣ್ಣದೊಂದು ಗರಟೆಯೊಳಗೆ ಕರಿನೀರು ತುಂಬಿಸಿ, ನಮ್ಮ ದೇಶದ ಎಲ್ಲ ಪ್ರತಿಷ್ಠಿತ ಮ್ಯಾನೇಜ್ ಮೆಂಟ್  ಕಲಿಕಾ ಸಂಸ್ಥೆಗಳವರನ್ನು ಸಾಲಾಗಿ ಬಂದು ಆ ಗರಟೆ ನೀರಿನೊಳಗೆ ಮುಳುಗಿ ಏಳುವಂತೆ ಹೇಳಬೇಕು ಅನ್ನಿಸುತ್ತಿದೆ.  ಪತಂಜಲಿ ಎಂಬ ವ್ಯವಹಾರ ಸಾಮ್ರಾಜ್ಯವು ಧರ್ಮ-ರಾಜಕೀಯ-ದೇಶಪ್ರೇಮ – ವ್ಯವಹಾರದ ಜಾಣ್ಮೆಗಳನ್ನು ಹದನಾಗಿ...

ಒಂದೂರಲ್ಲಿ..

          ಊರಿನ ತಲೆಬಾಗ್ಲನಾಗೆ ಇತ್ತು ಒಂದು ದೇವ್ರ ಗುಡಿ, ಮುಂದಕ್ಕೊಂದು ಅಳ್ಳೀ ಮರ   ಜತೀಗೇ…ಒಂದು ಸಂಪಿಗೆ ಮರ ಅದರ ತುಂಬ್ಲು ಮೊಗ್ಗೊಡ್ದು ಘಮ್….ಅಂತ, ಗಾಳಿ ನೆತ್ತಿಗೇರೊ ಒತ್ನಾಗೆ…..   ಎಲೆ ಚಂಚಿ ಬಿಚ್ಕೊಂದು ಕವ್ಳಿಗೆ ಎಲೆಗಂಟ ವತ್ತರ್ಸಕಾಂಡು ಎಚ್ಚಾದ ರಸವ...

ಬೆಳದಿಂಗಳ ಕವಿತೆಯೆಂದರೆ ಅದು ನನ್ನ ತವರಿನ ಹಾಡು..

ಅಕ್ಟೋಬರ್ ಕಾಲಿಡುತ್ತಿದೆ. ಮತ್ತೆ ಹುಣ್ಣಿಮೆ ಬೆಳಕು..ಹಬ್ಬಗಳ ಸಾಲುದೀಪ… ಬೆಳದಿಂಗಳ ಕವಿತೆಯೆಂದರೆ ಅದು ನನ್ನ ತವರಿನ ಹಾಡು. ಬೆಳ್ಳನೆಯ  ಮೊಸರು ಚೆಲ್ಲಿದಂತ ಬೆಳದಿಂಗಳು ಅಂಗಳದಲ್ಲಿ ಹೆಪ್ಪುಗಟ್ಟಿ ಹರಡಿದರೆ ಬೆಳಗಿನವರೆಗೂ ಬಾಚಿ ಮಡಿಲಿಗೆ ತುಂಬಿಕೊಂಡೇನು.  ಹಿತ್ತಲಿಗೆ ಹೋದರೆ ಘಮಘಮಿಸುವ ಸೂಜಿಮಲ್ಲಿಗೆ,  ದುಂಡುಮಲ್ಲಿಗೆ ಕಂಪು…ಅದರೊಂದಿಗೆ ಮೆಲುಸಿರಿನ...

ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ..

ಲುವಾಂಡಾ ಏರ್-ಪೋರ್ಟಿನಿಂದ ಹೊರಬಂದ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ್ದು ಅಂಗೋಲಾದ ಬಿಸಿಲು. ಕಳೆದ ಹತ್ತಕ್ಕೂ ಹೆಚ್ಚು ತಾಸುಗಳಿಂದ ಹವಾನಿಯಂತ್ರಿತ ಕೊಠಡಿಗಳಲ್ಲೇ ಸಮಯವನ್ನು ಕಳೆದಿದ್ದ ನನಗೆ ಲುವಾಂಡಾದ ಬಿಸಿಲು ಮುದವನ್ನು ನೀಡಿದ್ದಂತೂ ಸತ್ಯ. ಅಂಗೋಲಾ ರಾಜಧಾನಿಯಾದ ಲುವಾಂಡಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇತರ ಖ್ಯಾತ...

ಅವರದೀಗ ‘ಕಾಲುಬಾಯಿ’ ಯೋಗ!

‘ರೋಮ್ ರಾಜ್ಯ’ದ ಎದುರು ‘ರಾಮರಾಜ್ಯ’ ಎಂದಾಗ, ಸಿಗುವುದಿದ್ದರೆ ಏಕೆ ಬೇಡ ಬರಲಿ ‘ಅಚ್ಚೇದಿನ್’ ಎಂದಿದ್ದರೇ ಹೊರತು, ರಾಮರಾಜ್ಯವೇ ಬೇಕೆಂದು ಹಠ ಹಿಡಿದವರು ಯಾರೂ ಇರಲಿಲ್ಲ. ಭ್ರಷ್ಟಾಚಾರ ಅತಿಯಾಗಿದೆ, ಬಡವ-ಸಿರಿವಂತರ ನಡುವೆ ಅಂತರ ಹೆಚ್ಚಿದೆ, ನೈತಿಕತೆ ಇಲ್ಲದಾಗಿದೆ, ದುಡ್ಡೇ ದೊಡ್ಡಪ್ಪ ಎಂಬೆಲ್ಲ ಆತಂಕಗಳು ದೇಶದ ಉದ್ದಗಲಕ್ಕೂ ಹಾಸಿ ಹೊದ್ದುಕೊಂಡಿದ್ದವು. ಆದರೆ 2014ರ ಚುನಾವಣೆಯ ವೇಳೆ ಚಾಣಕ್ಯನಿಂದ ಆರಂಭಿಸಿ, ದೀನದಯಾಳು ಉಪಾಧ್ಯಾಯರ ತನಕ ಎಲ್ಲರೂ ಸದ್ದು ಮಾಡಿದರು. ತೆರಿಗೆ ಕಟ್ಟಬೇಕಾಗಿಯೇ ಇಲ್ಲದ, ಬದಲಾಗಿ ನಾಗರಿಕರ ಖಾತೆಯೊಂದರ 15 ಲಕ್ಷವನ್ನು ಸರಕಾರವೇ ತಲುಪಿಸುವ, ‘ಏಕ್ ಭಾರತ್ – ಶ್ರೇಷ್ಠ ಭಾರತ್’ ಕೊಡುವ ವಾಗ್ದಾನ ಬಂತು. ಇದು ಜನರ ಬೇಡಿಕೆ ಆಗಿರಲೇ ಇಲ್ಲ. ‘ಸಬ್ಕಾ ಸಾತ್ ಸಬ್ಕಾ ವಿಕಾಸ್’ ಅಂದಾಗಲೂ ಅದು ನಮಗೆ ಬೋನಸ್ಸೇ ಎಂದುಕೊಂಡವರು ಈ ದೇಶದ ಜನ.

ಗೌರಿಯಕ್ಕನ ನೀಲಿ ಡ್ರೆಸ್ಸು.. ನೀಲಿಗ್ಯಾನ..

  ಅವತ್ತು ನಾವು ಜೆಎನ್ಯೂವಿನಿಂದ ಹೊರಟಾಗ ಅಲಿ ಕಾರು ಚಲಾಯಿಸುತ್ತಿದ್ದ. ಹೊರಗಡೆ ಚುರುಗುಡುವ ಬಿಸಿಲು. ಒಳಗೆಲ್ಲ ದುಗುಡದ ಹಗಲು. ನಾನು ಹಿಂದಿನ ಸೀಟಲ್ಲಿ ಗೌರಿ ಮುಂದಿನ ಸೀಟಲ್ಲಿ ಕೂತಿದ್ದೆವು. ಕನ್ಹಯ್ಯನ  ಮುಂದಾಳತ್ವದಲ್ಲಿ ವಿದ್ಯಾರ್ಥಿಗಳು ಯೂಜಿಸಿ ಕಚೇರಿಯ ಮುಂದೆ  ಪ್ರತಿಭಟನೆ ನಡೆಸುವವರಿದ್ದರು ಅವತ್ತು...

ಆ ಮಕ್ಕಳು ಕಿಲ ಕಿಲ ನಗುತ್ತಲೇ ಇದ್ದರು..

4 ಶುಭ್ರನಗೆಯ ಪ್ರಭಾವಳಿಯೇ ಅಂಥದ್ದು. ಪಾರಿಜಾತದ ಹೂಗಳು ಗಿಡದ ಸುತ್ತಲೆಲ್ಲಾ ಹರಡಿ ಘಮ್ಮನೆಯ ಪರಿಮಳವನ್ನು ಹವೆಯಲ್ಲಿ ಸಿಂಪಡಿಸುವಂತೆ ಸಂತಸದ ತಂಗಾಳಿಯನ್ನು ಶುಭ್ರ ಮುಗುಳ್ನಗೆಯೊಂದು ಯಾವ ಸಂದರ್ಭದಲ್ಲಾದರೂ ತರಬಲ್ಲದು. ಅಲ್ಲೂ ನಗೆಬಿತ್ತನೆಯ ಕಾರ್ಯಕ್ರಮವೇ ನಡೆಯುತ್ತಿತ್ತು. ಎಮಿರೇಟ್ಸ್ ನ ಗಗನಸಖಿಯರು ಪುಟ್ಟ ಪುಟ್ಟ ಪೊಟ್ಟಣಗಳನ್ನು...

‘ಪ್ರಜಾಕಿಯ’: ಮಾಧ್ಯಮಗಳ ‘ಡಿಸೈನರ್’ ಉತ್ಪನ್ನ!

ಒಬ್ಬ ಕವಿಯನ್ನು ನಿರಾಕರಿಸುವುದು ಹೇಗೆ?!! ಅವು ‘ಮುಂಗಾರು’ ಪತ್ರಿಕೆಯಲ್ಲಿ ನಾನು ಕಸುಬು ಕಲಿಯುತ್ತಿದ್ದ ದಿನಗಳು. ಆಗ ಪತ್ರಿಕೆಗೆ ಕವಿಯೊಬ್ಬರು ಪುಂಖಾನುಪುಂಖವಾಗಿ ಪ್ರತಿದಿನವೆಂಬಂತೆ ಕವನಗಳ ಅಟ್ಟಿಯನ್ನು ಅಂಚೆ ಮೂಲಕ ಕಳುಹಿಸುತ್ತಿದ್ದರು. ಮೇಲುನೋಟಕ್ಕೇ ಪ್ರಕಟಣೆಗೆ ಯೋಗ್ಯ ಅಲ್ಲ ಅನ್ನಿಸುವಂತಿದ್ದ ಅವುಗಳ ಭರಾಟೆ ತಡೆಯದೆ, ಹಿರಿಯರು...

ಕೊಟ್ಟದ್ದೊಂದೇ ಮುತ್ತು..

೧ ಎತ್ತಿಕೋ…. ಬಾ ಇಲ್ಲಿ ಗರತಿ ಗಂಗಮ್ಮಳೆ ಹರಿಯುವ ನದಿಯೇ ಎನ್ನುತೆನ್ನುತಲೆ ಗರಿಗೆದರಿ ಹಾರಿ ಬಂದು ಮುಳುಗೆದ್ದು ಲೀನವಾಗುತ್ತಿಯೇ   ತಬ್ಬಿ ಈಜುತ್ತೀಯೆ ಮುಳುಗುತ್ತೀಯೇ ಮೇಲೆದ್ದು ಅಂಗಾತ ತೇಲುತ್ತಿಯೇ ಹುಟ್ಟುಡುಗೆಯಲ್ಲಿ ಪುಟ್ಟ ತಾವರೆಯೊಳಗಿನ ಗಂಧದಂತೆ   ಗಾಳಿ ಅಲೆಯನ್ನೇರಿ ಬನಬನದಲ್ಲಿ ಅಲೆಯುತ್ತೀಯೇ...

ಸಂಜೆಗತ್ತಲಲ್ಲಿ ಕಂದೀಲನ್ನು ಹಿಡಿದವರು….

ಸಂಜೆ ಐದೂವರೆಗೆ ಕತ್ತಲಾವರಿಸಿಕೊಳ್ಳುವ ಈ ಊರಿನ ಚಳಿಗಾಲ ಒಮ್ಮೊಮ್ಮೆ ದಿಕ್ಕುತೋಚದೇ ನಿಂತ ಪಥಿಕನ ದೈನೆಸಿತನವನ್ನು ನೆನಪಿಸುತ್ತದೆ.  ಹೊಸತಾಗಿ ಉದ್ಯೋಗವೆಂಬ ಮಾಯಾಜಿಂಕೆಯನ್ನು ಅರಸಿಕೊಂಡು ಹೋಗಬೇಕಾದಾಗಲೂ ನನಗೆ ದಟ್ಟವಾದ ಕತ್ತಲಿನಲ್ಲಿ ನಿಂತು ಕಣ್ಣುಕಿರಿದಾಗಿಸಿಕೊಂಡು ದೂರದಲ್ಲೆಲ್ಲೋ ಮೂಡಬಹುದಾದ ಬೆಳಕಿನ ಬಿಂದುವನ್ನು ಹುಡುಕುವಷ್ಟೇ ದುಗುಡದ ದಿನಗಳು. ಆ...

ಏನಿದು ದೇಶ?

3 “ಏನಿದು ದೇಶ?” “ಇಲ್ಲಿ ನೋಡೋದಕ್ಕೇನೇನಿದೆ?” “ಇತರ ದೇಶಗಳಿಗಿಂತ ಸ್ಪೆಶಲ್ ಅನ್ನಿಸುವಂಥದ್ದೇನಾದರೂ ಇದೆಯೇ ಇಲ್ಲಿ?” “ಜನಜೀವನ ಹೇಗಿದೆ? ನೈಟ್ ಲೈಫ್ ಹೇಗಿದೆ?” ಹೀಗೆ ಸರ್ವವನ್ನೂ ಬಲ್ಲ ಗೂಗಲ್ ಮಹಾಶಯನ ಸಹಾಯದಿಂದ ಇವೆಲ್ಲಾ ಪ್ರಶ್ನೆಗಳಿಗೆ ಒಂದೊಂದಾಗಿಯೇ ಉತ್ತರವನ್ನು ಕಂಡುಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೆ. ಅಂಗೋಲಾಕ್ಕೆ...