Category: ಫಲಾಶದ ಪಕಳೆಗಳು / ರೇಣುಕಾ ನಿಡಗುಂದಿ

ಸಂಜೆಗತ್ತಲಲ್ಲಿ ಕಂದೀಲನ್ನು ಹಿಡಿದವರು….

ಸಂಜೆ ಐದೂವರೆಗೆ ಕತ್ತಲಾವರಿಸಿಕೊಳ್ಳುವ ಈ ಊರಿನ ಚಳಿಗಾಲ ಒಮ್ಮೊಮ್ಮೆ ದಿಕ್ಕುತೋಚದೇ ನಿಂತ ಪಥಿಕನ ದೈನೆಸಿತನವನ್ನು ನೆನಪಿಸುತ್ತದೆ.  ಹೊಸತಾಗಿ ಉದ್ಯೋಗವೆಂಬ ಮಾಯಾಜಿಂಕೆಯನ್ನು ಅರಸಿಕೊಂಡು ಹೋಗಬೇಕಾದಾಗಲೂ ನನಗೆ ದಟ್ಟವಾದ ಕತ್ತಲಿನಲ್ಲಿ ನಿಂತು ಕಣ್ಣುಕಿರಿದಾಗಿಸಿಕೊಂಡು ದೂರದಲ್ಲೆಲ್ಲೋ ಮೂಡಬಹುದಾದ ಬೆಳಕಿನ ಬಿಂದುವನ್ನು ಹುಡುಕುವಷ್ಟೇ ದುಗುಡದ ದಿನಗಳು. ಆ...

ಮುಚ್ಚಿದ ಬಾಗಿಲ ಹಿಂದಿನ ನಿಡುಸುಯ್ಲುಗಳೆಷ್ಟೋ..

ಮುಚ್ಚಿದ ಬಾಗಿಲ ಹಿಂದಿನ ನಿಡುಸುಯ್ಲುಗಳೆಷ್ಟೋ, ಮೌನದ ಕಂಬನಿಯಲ್ಲಿ ಅದ್ದಿಹೋದ ಸ್ವರಗಳೆಷ್ಟೋ ಗಂಡು ಹೆಣ್ಣಿನ ಸಾಂಗತ್ಯವೆಂದರೆ ಕಟುಮಧುರ, ಈ ಸಂಬಂಧದ ಆಕರ್ಷಣೆ-ವಿಕರ್ಷಣೆಗಳೂ ಬಲು ಸಂಕೀರ್ಣವಾದದ್ದು ಮತ್ತು ನಿಗೂಢವಾದದ್ದು. ಅದು ರೇಶಿಮೆಯೆ ನೂಲಷ್ಟು ನಾಜೂಕು, ವೀಣೆಯ ತಂತಿಯಷ್ಟೇ ಬಿಗಿ, ಕತ್ತಿಯಲುಗಿನ ಮೇಲೆ ನಡೆಯುವ ಪಂದ್ಯವಿದ್ದಂತೆ....

ಒಂಟಿಕೋಣೆ ಮಹಲಿನ ನಕ್ಷತ್ರಗಳ ಹಾಡು…

ಆಗಿನ್ನೂ ದೆಹಲಿಗೆ ಬಂದ ಹೊಸತು.  ದೂರವಾದ ಊರಿನ ನೆನಪುಗಳನ್ನು ಹೊದ್ದು ಅಪರಿಚಿತ ಇರುಳ ಪರಿಮಳ ಮತ್ತು ಮಂಜಿನ ನೇವರಿಕೆಯಲ್ಲಿ ಅಂಥದ್ದೊಂದು ಕಟಕಟಿಸುವ ಚಳಿಯಿರುಳು  ಕಳೆದು ಬೆಳಗಾಗುವಾಗ ಹೊರಗಿನದೆಲ್ಲ ನನಗೆ ಹೊಚ್ಚ ಹೊಸಲೋಕ.  ನನ್ನ ಒಳಲೋಕ ಮುಸುಕುಹಾಕಿ ಮಲಗಿ, ಮುಸುಕಿನೊಳಗಿನಿಂದಲೇ ಪಿಳಿ ಪಿಳಿ...

ನನಗೆ ಪ್ರೇಮಿಸಲೂ ಬರುತ್ತದೆ ಆರೀಫ್ ಮಿಂಯಾ….

ದಿನವೊಂದು ಖಾಲಿ ಖಾಲಿ ಪಾತ್ರೆಯಂತೆ ಏನನ್ನೂ ತುಂಬಿಕೊಳ್ಳದೇ, ಏನನ್ನೂ ಅಂಚಿಗೂ ಸೋಕಿಸಿಕೊಳ್ಳದೆ ಉರುಳಿಯೇ ಹೋಯಿತೆಂಬ ವಿಷಾದ  ಖಾಲಿ ಕಣ್ಣುಗಳಲ್ಲಿ ಹೊಗೆಯಂತೆ ತುಂಬಿಕೊಳ್ಳುವುದೂ ಇದೆ.  ಹೊಗೆಮಂಜು ಹನಿಯುವ ಹೃದಯ ಭಾರ ಭಾರ !  ಮೃದುವಾದ ಒಂದು ಚೆಹರೆ, ಒಂದು ಬೆಚ್ಚನೇ ಹಸ್ತ, ನವಿರಾದ...

ಚಂದ್ರನ ರೊಟ್ಟಿಗಳು..

ಒಟ್ಟಾರೆ ಜೀವಿತದಲ್ಲಿ ಅಂಥ ಮುಂಜಾವು ಭೂಮಿ ಮೇಲೆ ಬರಲೇ ಇಲ್ಲವೇನೊ ಎಂಬ ಸಣ್ಣ ಹಳಹಳಿಕೆ ಎದೆಯಲ್ಲಿನ್ನೂ ಉಳಿದಿದೆ. ಎಂದೂ ಮರೆಯಲಾಗದ ಆ ಮುಂಜಾವನ್ನು ನೆನೆವುದಕ್ಕೂ ಮೊದಲು ನಮ್ಮ ಮನೆಯ ಬಗ್ಗೆ ಹೇಳಲೇ ಬೇಕು. ಚಿಕ್ಕ ಮಕ್ಕಳನ್ನು ಗದರಿಸಿದರೆ ಬೆದರಿ ಮೂಲೆಯಲ್ಲಿ ಹೋಗಿ...

ದೀಪದ ಕಂಬದ ಹಿಂದಿನ ಕನಸುಗಳು..

ಆಗ ಬೇಸಿಗೆಯ ಸೆಕೆ, ಬೇಗುದಿ ಇನ್ನೂ ಕಳೆದಿರಲಿಲ್ಲ.  ನಾಲ್ಕು ದಿನ ಮಳೆ ಬಿದ್ದು ಕಾದ ಹೆಂಚಿನ ಮೇಲೆ ನೀರು ಹನಿಸಿದಂತೆ ದೆಹಲಿಯ ಬದುಕನ್ನು ಅಸಹನೀಯ ಮಾಡಿಬಿಟ್ಟಿರುತ್ತದೆ ಈ ಆರ್ದ್ರ ವಾತಾವರಣ. ಸೆಪ್ಟೆಂಬರ್ ತಿಂಗಳಿಗೆ ಕ್ಯಾಲೆಂಡರ್ ಮುಗುಚಿದರೆ ಸಾಕು ಇನ್ನೇನು ಚಳಿಗಾಲ ಸನಿಹದಲ್ಲೇ...

 ‘ನನ್ನ ಮನೆಗೆ ಬರುವಾಗ ಫಲಾಶ ತಾ’

ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ ? ಎನ್ನುವ ಜಿ ಎಸ್ ಶಿವರುದ್ರಪ್ಪನವರ ಸಾಲನ್ನು ನೆನಪಿಸಿಕೊಂಡಾಗೆಲ್ಲ ಹೂವನ್ನೂ, ಪ್ರೀತಿಯನ್ನೂ, ಬದುಕನ್ನೂ ಒಂದೇ ದಾರದಲ್ಲಿ ಪೋಣಿಸಿ ಬಿಗಿದ ಸಂಬಂಧದ ಎಳೆಯೊಂದು ಬೆಸೆದುಕೊಳ್ಳುತ್ತದೆ. ‘ನನ್ನ ಮನೆಗೆ ಬರುವಾಗ ಫಲಾಶ ತಾ’ ಎನ್ನುವ ಎಳೆಯ...