“ನಮ್ಮನ್ನು ನಂಬಿ ಪ್ಲೀಸ್” ಎಂದು ಜಿಲ್ಲಾಡಳಿತಗಳ ಮೂಲಕ ಇಲೆಕ್ಟ್ರಾನಿಕ್ ಮತದಾನಯಂತ್ರಗಳು ಗೋಗರೆಯುತ್ತಿವೆ. ಜೊತೆಗೆ ನಂಬದಿದ್ದರೆ ಜಾಗ್ರತೆ ಎಂಬ ಚುನಾವಣಾ ಆಯೋಗದ ಎಚ್ಚರಿಕೆಯಮಾತುಗಳೂ ಇವೆ. ಇವಿಎಂ ಗಳ ಬಗ್ಗೆ ತಪ್ಪು ಮಾಹಿತಿ/ಸುಳ್ಳು ಹೇಳುವವರನ್ನು ಸೆರೆಮನೆಗೆ ತಳ್ಳಲಾಗುವುದು ಎಂಬ ಬೆದರಿಕೆಯೂ ಇದೆ. ಕರ್ನಾಟಕವೀಗ ಚುನಾವಣೆಯ ಹೊಸ್ತಿಲಿನಲ್ಲಿದೆ. ಇಂತಹದೊಂದುಸ್ಥಿತಿಯಲ್ಲಿ ಸಾರ್ವಜನಿಕರ ಪರವಾಗಿ ನಿಂತು ಇವಿಎಂಗಳ ಬಗ್ಗೆ ಇರುವ ಅಪನಂಬಿಕೆಗಳನ್ನು ಒಂದೋ ಹೋಗಲಾಡಿಸುವ ಅಥವಾ ಸಾಬೀತು ಪಡಿಸುವ ಜವಾಬ್ದಾರಿ ಹೊರಬೇಕಿದ್ದ ನಮ್ಮ ಮಾಧ್ಯಮಗಳು ವಿಚಿತ್ರಮೌನಕ್ಕೆ ಶರಣಾಗಿರುವುದು ಬಿರುಗಾಳಿಯ ಮೊದಲಿನ ರೌದ್ರ ಪ್ರಶಾಂತ ವಾತಾವರಣದಂತೆ ತೋರತೊಡಗಿದೆ. ಪ್ರಾತ್ಯಕ್ಷಿಕೆ ಯಂತ್ರಗಳ ಮೂಲಕ, ಪವರ್ ಪಾಯಿಂಟ್ ಗಳ ಮೂಲಕ ಸರ್ಕಾರವು ಮತದಾನ ಯಂತ್ರಗಳು ಸರ್ವ ಸುರಕ್ಷಿತ ಎಂದು ಹೇಳುತ್ತಿರುವಂತೆಯೇ ಇನ್ನೊಂದೆಡೆ ತೆಳ್ಳಗೆ ಅಲ್ಲಲ್ಲಿ ಯಂತ್ರಗಳು ನೂರಕ್ಕೆನೂರು ಸರಿಯಾಗಿಲ್ಲ ಎಂಬುದಕ್ಕೆ ಉದಾಹರಣೆಗಳೂ ಸಿಗುತ್ತಿವೆ. ಉದಾ: 1. ಮೊನ್ನೆ ಮಾರ್ಚ್ ನಲ್ಲಿ ಮಧ್ಯಪ್ರದೇಶದ ಭೀಂಡ್ ಉಪಚುನಾವಣೆಯ ಮುನ್ನ ಪ್ರಾತ್ಯಕ್ಷಿಕೆಗೆಂದು ಬಳಸಲಾಗಿದ್ದ ಇವಿಎಂನಲ್ಲಿ VVPATನ ಎಲ್ಲ ಮತಗಳೂ ಕಮಲ ಗುರುತಿಗೆ ಬೀಳುತ್ತಿದ್ದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಸರಕಾರ ಅಲ್ಲಿನ ಜಿಲ್ಲಾಧಿಕಾರಿ ಸಹಿತ 19 ಅಧಿಕಾರಿಗಳನ್ನು ಅಮಾನತು ಮಾಡಿತ್ತು. 2....