Category: ನುಣ್ಣನ್ನ ಬೆಟ್ಟ

ಸಿದ್ರಾಮಯ್ಯ ಏರಿದ್ರಾ ಕೊಟ್ಟ ಕುದುರೆ?

ಪ್ರತಿಪಕ್ಷಗಳಿಗೆ ಟ್ರೆಷರಿ ಬೆಂಚುಗಳನ್ನು ಅಳೆಯುವುದು ಯಾವತ್ತಿಗೂ ಸುಲಭದ ಕೆಲಸ. ಗುಡಿಸಿಹಾಕಿಬಿಟ್ಟರೆ ಮುಗಿಯಿತು. ಕರ್ನಾಟಕದಲ್ಲಿ ಕೂಡ ಸಿದ್ಧರಾಮಯ್ಯ ಸರಕಾರದ ಸಾಧನೆಯನ್ನು ಒಂದು ಹೂಬ್ಲೊ ವಾಚಿನ ಆಧಾರದಲ್ಲಿ ಗುಡಿಸಿಹಾಕಲಾಗುತ್ತಿದೆ. ಅವರವರ ಅನುಕೂಲ ಸೂತ್ರಗಳಿಗನುಗುಣವಾಗಿ ಚುನಾವಣೆಯ ನಳ್ಳಿಯನ್ನು ಬೇಗನೇ ತೆರೆದಿರುವುದರಿಂದ ಒಳ್ಳೇ ನೀರು, ಕೆಸರು ಎಲ್ಲವೂ...

ಭಾರತದ ಸಂವಿಧಾನ c/o ಜಸ್ಟೀಸ್ ಕರ್ಣನ್!

ನೋಡುವುದಕ್ಕೆ ತಮಾಷೆಯಂತೆ ಕಾಣುತ್ತಿರುವ ಈ ಜಸ್ಟೀಸ್ ಕರ್ಣನ್ ವ್ರತ್ತಾಂತ, ನಿಜಕ್ಕೆಂದರೆ ದೇಶದ ಜುಡೀಷಿಯರಿಯನ್ನು ಬೆತ್ತಲುಗೊಳಿಸಿದೆ. ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಏನಾದರೂ ನಾಲಕ್ಕಾಣೆ ವಿಶ್ವಾಸ ಉಳಿದದ್ದಿದ್ದರೆ, ಅದು ನ್ಯಾಯಾಂಗದ ಬಗ್ಗೆ ಇತ್ತು; ಅದೂ ಈಗ ಬೀದಿಪಾಲಾದಂತಾಗಿದೆ. ಒಬ್ಬರು ಹೈಕೋರ್ಟ್ ನ್ಯಾಯಮೂರ್ತಿ ಸುಪ್ರೀಂ ಕೋರ್ಟಿನ...

ಸಣ್ಣ ಕದನ ಸೋತು ಮಹಾಯುದ್ಧ ಗೆಲ್ಲುವ ಕಲೆ ಪ್ರಜಾಪ್ರಭುತ್ವದಲ್ಲಿ “ಹೊಸಮುಖ” ತಂತ್ರ

ಕಾಂಗ್ರೆಸ್ ರಾಜಕಾರಣದ “ಸಂಕಷ್ಟಕಾಲದ” ಪ್ರಯೋಗಗಳನ್ನೆಲ್ಲ ಅರೆದು, ಕುಡಿದು, ಮಸೆದು- ಹರಿತಗೊಳಿಸಿಕೊಂಡು, ಹದವರಿತು ಬಳಸುವ ಕಲೆಯನ್ನು ಕರತಲಾಮಲಕಗೊಳಿಸಿಕೊಂಡುಬಿಟ್ಟಿರುವುದೇ ಇತ್ತೀಚೆಗಿನ ಬಿಜೆಪಿ ರಾಜಕಾರಣದ ಯಶಸ್ಸಿನ ಬಹುದೊಡ್ಡ ಭಾಗವಾಗಿಬಿಟ್ಟಿದೆ. ಬಿಜೆಪಿಯ ಪ್ರಯೋಗದ ಕಣವಾಗಿರುವ ಕರಾವಳಿ ರಾಜಕೀಯದಿಂದಲೇ ಆರಂಭಿಸುತ್ತೇನೆ. ಹಿಂದೆಲ್ಲ ಕಾಂಗ್ರೆಸ್ಸಿನ ಖಚಿತ ಗೆಲುವಿನ ಕ್ಷೇತ್ರಗಳಲ್ಲೊಂದು –...

ಐ ಟಿ ಉದ್ಯಮ ವರ್ಷನ್ 2.0

ನಾರಾಯಣಮೂರ್ತಿಯವರ ಹೊಟ್ಟೆನೋವು ಈ ದೇಶದ ಹೊಟ್ಟೆನೋವಾಗಿಬಿಟ್ಟಿದೆ ಎಂದರೆ, ಆ ವ್ಯವಹಾರ ಮಾಡೆಲ್ ನಲ್ಲಿ ಎಲ್ಲೋ ಏನೋ ಸರಿಯಾಗಿಲ್ಲ ಎಂದೇ ಅರ್ಥ. ಫಸ್ಟ್ ಜನರೇಷನ್ ನ ಅಪ್ಪ-ಅಮ್ಮ, ಅವರ ಹೊಟ್ಟೆ ಬಟ್ಟೆ ಕಟ್ಟಿ ಕಷ್ಟದಿಂದ ಸಾಕಿ, ಬೆಳೆಸಿ, ಕಲಿಸಿ ಬಿಟ್ಟ ಮಗ ಈಗ...

ದೇಶದ ಕಾರ್ಮಿಕರ ಕತ್ತಿನ ಮೇಲೆ ಪ್ರಧಾನ ಸೇವಕರ ಕತ್ತಿ

2005 ರ ವೇಳೆಗೆ ದೇಶದಲ್ಲಿ ಕಂಪ್ಯೂಟರ್ ಮತ್ತು ಇಲೆಕ್ಟ್ರಾನಿಕ್ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಅಂದಿನ ಸರಕಾರ ಬಹುತೇಕ ತೆಗೆದುಹಾಕಿಬಿಟ್ಟಿತು. WTO  ಒಪ್ಪಂದದ ಭಾಗವಾಗಿ ನಡೆದ ಈ ತೀರ್ಮಾನದ ಪರಿಣಾಮವಾಗಿ ದೇಶದ ಹಾರ್ಡ್ ವೇರ್ ಉದ್ಯಮ ನೆಗೆದುಬಿತ್ತು, ಮತ್ತು ಆ ಉತ್ಪನ್ನಗಳು...

ಸೂಜಿಮೊನೆಯೂರುವ ಜಾಗವನ್ನೂ ಪಾಂಡವರಿಗೆ ಕೊಡೆ

ಅಲ್ಲೆಲ್ಲಿಂದಲೋ ಕಣ್ಣು ತಂದರು, ಇನ್ನೆಲ್ಲಿಂದಲೋ ಕೈ –ಕಾಲು, ಮತ್ತೆಲ್ಲಿಂದಲೋ ಮುಖ-ತಲೆಕೂದಲು… ಇವನ್ನೆಲ್ಲ ಜೋಡಿಸಿ ಅವರು ಮನುಷ್ಯನ ಬೊಂಬೆ ಮಾಡುತ್ತಿದ್ದಾರೆಂದು ಜನ ಅಂದುಕೊಂಡಿದ್ದರು. ಆದರೆ ಆಗುತ್ತಿರುವುದು ರಾಕ್ಷಸನ ಬೊಂಬೆ ಎಂಬುದು ಅವರಿಗೆ ಗೊತ್ತಾಗಲೇ ಇಲ್ಲ – ನಮ್ಮ ದೇಶದ ಕ್ರಷಿ ವ್ಯವಸ್ಥೆಯ ಸುಧಾರಣೆಗಾಗಿ...

ಮೇ 26ಕ್ಕೆ ಇನ್ನೊಂದೇ ತಿಂಗಳು!

ನರೇಂದ್ರ ಮೋದಿಯವರ ಸರ್ಕಾರ ಇನ್ನು 35 ದಿನಗಳಲ್ಲಿ ಮೂರು ವರ್ಷ ಪೂರೈಸಲಿದೆ. ಹಾಗಾಗಿ ಇದು ಅವರಿಗೆ ರಿಪೋರ್ಟ್ ಕಾರ್ಡ್ ಸಮಯವೂ ಹೌದು. ಈ ಹಿನ್ನೆಲೆಯಲ್ಲಿ ಭರ್ಜರಿ ತಯಾರಿಗಳು ಈಗಾಗಲೇ ನಡೆದಿವೆ. ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ವೆಂಕಯ್ಯ ನಾಯ್ಡು ಅವರು...

ಮಷೀನು ನಂಬದ ಮನುಷ್ಯರೂ; ಮನುಷ್ಯರನ್ನು ನಂಬದ ಮಷೀನುಗಳೂ..

ಇಲೆಕ್ಟ್ರಾನಿಕ್ ಮತದಾನ ಯಂತ್ರಗಳು ಸುದ್ದಿ ಮಾಡುತ್ತಿವೆ. ಈ ಯಂತ್ರಗಳನ್ನು ತಿರುಚಲು ಸಾಧ್ಯ ಇದೆ ಎಂದು ಕೆಲವರು ಶಂಕೆ ವ್ಯಕ್ತಪಡಿಸುತ್ತಿದ್ದರೆ, ಸರ್ಕಾರ ಮತ್ತು ಚುನಾವಣಾ ಆಯೋಗ ಅದು ಅಸಾಧ್ಯ ಎಂದು ಹೇಳುತ್ತಿದೆ. ದಿಲ್ಲಿಯ ಮುಖ್ಯಮಂತ್ರಿ ತಾನು ಸ್ವತಃ  ಈ ಯಂತ್ರಗಳನ್ನು ತಿರುಚಲು 10...

ನೋಟು ರದ್ಧತಿ ಕೂಡ “ನಾನ್ ಪರ್ಫಾಮಿಂಗ್ ಅಸೆಟ್”

  ದೇಶದಲ್ಲಿ ಚಲಾವಣೆಯಲ್ಲಿದ್ದ ಹಣದ 86% ಭಾಗವನ್ನು ರದ್ದುಗೊಳಿಸಿದ ಸರ್ಕಾರದ ಕ್ರಮಕ್ಕೆ ಕಳೆದ ವಾರ 150 ದಿನಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ನಿರೀಕ್ಷೆ – ಸಾಧನೆಗಳ ಬಗ್ಗೆ ಒಂದು ಹಿನ್ನೋಟ ಇಲ್ಲಿದೆ. ಸರ್ಕಾರದ ಮುಖ್ಯಸ್ಥರಾದ ಪ್ರಧಾನಮಂತ್ರಿ, ಅವರ ಸಚಿವರು ಹಾಗೂ ಆಯಕಟ್ಟಿನ...

ಸರ್ಕಾರಿ ತುರಿಕಜ್ಜಿ ಮತ್ತು ಖಾಸಗಿ ‘ಸ್ಯಾಂಡ್’ ಪೇಪರ್

ಹದವಾಗಿ ತುರಿಸುವ ಕಜ್ಜಿಯ ಹಿತಾನುಭವಕ್ಕೆ ಮನುಷ್ಯ ಒಗ್ಗಿಹೋದಾಗ ಹೀಗೆಲ್ಲ ಆಗುತ್ತದೆ. ನಮ್ಮ ಸರ್ಕಾರ ಮತ್ತು ವ್ಯವಸ್ಥೆಗೆ ಕರಾವಳಿಯ ಮರಳು ಗಣಿಗಾರಿಕೆ ಎಂಬುದು ಇಂತಹದೊಂದು ತುರಿಕೆಯ ಹಿತಾನುಭವ ಕೊಡಲಾರಂಭಿಸಿ ಈಗ ಆರು ವರ್ಷಗಳು ಕಳೆದಿವೆ. ಆದರೆ ಈಗೀಗ ಈ ಕಜ್ಜಿಯ ತುರಿಕೆ ತೀವ್ರಗೊಳ್ಳಲಾರಂಭಿಸಿದ್ದು,...

GST ಎಂಬ ತಮ್ಮ; TFA ಎಂಬ ಅಣ್ಣ; WTO ಎಂಬ ಅಪ್ಪ ಮತ್ತು ಕಾಂಗ್ರೆಸ್ -BJP ಎಂಬ ದಾಯಾದಿಗಳು

  1993ರ ವೇಳೆಗೆ ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್ ಮತ್ತು ಅಂದಿನ ಹಣಕಾಸು ಸಚಿವರಾಗಿದ್ದ ಡಾ| ಮನಮೋಹನ್ ಸಿಂಗ್ಅ ವರು ಜನರಲ್ ಅಗ್ರೀಮೆಂಟ್ಸ್ ಆನ್ ಟ್ರೇಡ್ ಅಂಡ್ ತಾರಿಫ್ (GATT) ಎಂಬ ಅಂತಾರಾಷ್ಟ್ರೀಯ ವ್ಯವಹಾರ ಒಪ್ಪಂದಕ್ಕೆ ಭಾರತದ ಒಪ್ಪಿಗೆ ನೀಡುವ ಹಂತದಲ್ಲಿದ್ದರು. ಜಸ್ವಂತ್...

ಸರ್ ಜೀ (ಆಜ್ ನಹೀ) ಕಲ್ ಸ್ಟ್ರೈಕ್ ಕರೇಂಗೆ!

2010ರಲ್ಲಿ ಟ್ಯುನೀಷಿಯಾದಲ್ಲಿ ಹೊತ್ತಿಕೊಂಡ ಈ ಕಿಡಿ ಈಜಿಪ್ತ್, ಲಿಬಿಯಾ, ಸಿರಿಯಾ, ಯೆಮನ್, ಬಹರೈನ್, ಸೌದಿ ಅರೇಬಿಯಾ ಮತ್ತು ಜೋರ್ಡಾನ್ ಗಳನ್ನು ದಾಟಿ ನೇರವಾಗಿ ದಿಲ್ಲಿಯ ಜಂತರ್ ಮಂತರ್ ಗೆ ಬಂದು ಝಂಡಾ ಊರಿಯೇ ಬಿಟ್ಟಿತು; ಇದು “ಅರಬ್ ಸ್ಪ್ರಿಂಗ್” ನ ಅವಳಿ...

ಕ್ರೆಡಿಟ್ಟುಗಳಿಗಾಗಿ (ಸೆಮಿ) ನಾರುವ ವ್ಯವಸ್ಥೆ

ಮಾನವ ಸಂಪನ್ಮೂಲ ಎಂಬುದು ನಿಭಾಯಿಸಬೇಕಾಗಿರುವ ಕಮಾಡಿಟಿ ಎಂದು “ಮೇನೇಜುಮೆಂಟು ತಜ್ಞರು” ನಿರ್ಧರಿಸಿದ ಬಳಿಕ ಆಗಿರುವ ಅಕಡೆಮಿಕ್ – ವೃತ್ತಿಪರ ಅವಾಂತರಗಳು ಒಂದೇ ಎರಡೇ? ಈ ಅವಾಂತರಗಳ ಕಿರೀಟದ ಮುಕುಟಮಣಿ ಎಂದರೆ ಈಗೀಗ ಪತ್ರಕರ್ತರನ್ನು ಆ ಪತ್ರಿಕೆಗಳ ಮಾನವ ಸಂಪನ್ಮೂಲ ನಿರ್ವಹಣಾ ವಿಭಾಗ...

ಸರಕಾರದ್ದೇ ಅಲ್ವಾ ಈ ನಿಯಮ ಕೂಡ?

ಅವರಿಗೆ ನೇರವಾಗಿ ಇಲ್ಲ ಎನ್ನುವ ಬಾಯಿಯೂ ಸರಕಾರದ ಬಳಿ ಇಲ್ಲ ಆಂಗನ್ ವಾಡಿ ಕಾರ್ಯಕರ್ತೆಯರ ಪ್ರತಿಭಟನೆಯ ಗಾತ್ರ ಮತ್ತು ಅದನ್ನು ನೋಡಿ ಸರಕಾರ ಸಣ್ಣಗೆ ಮಿಸುಕಾಡಲಾರಂಭಿಸಿರುವುದು ಹೋರಾಟ ನಿರತರಿಗೆ ಸಂತಸದ ಸಂಗತಿಯೇ ಆದರೂ, ಸರ್ಕಾರ ಆ ಮೂಲಕ ಒಂದು  ತಪ್ಪು ಪೂರ್ವೋದಾಹರಣೆಯನ್ನೂ...

“ಆಡೂ ಆಟ ಆಡೂ ಏ ರಾಜ, ಏ ರಾಣಿ, ಏ ಜಾಕಿ, ಓ ಜೋಕರ್, ಎದುರಲ್ಲಿ ನಿಗಾ ಇಡು…”

ಎದುರಾಳಿ ತೀರಾ ಬಲಹೀನವಿದ್ದಾಗ ಅಥವಾ ತನಗಿದು ಖಚಿತ ಆಹಾರ ಎಂದುಕೊಂಡಿದ್ದಾಗ ಕೆಲವೊಮ್ಮೆ ಪ್ರಾಣಿಗಳು ತಮ್ಮಬೇಟೆಯನ್ನು ಆಡಿಸಿ ಸುಸ್ತುಮಾಡಿಸುವುದಿದೆ. ಮೋದಿ-ಷಾ ಜಂಟಿ ನಾಯಕತ್ವ ಮತ್ತು ಬಿಜೆಪಿ ಹೈಕಮಾಂಡು ಉತ್ತರಪ್ರದೇಶದಲ್ಲಿ ಘೋರಕನಾಥ ಪೀಠದ ಪೀಠಾಧಿಪತಿಯನ್ನು ಮುಖ್ಯಮಂತ್ರಿ ಗಾದಿಗೆ ಆಯುವ ಮೂಲಕ ಇಂತಹದೊಂದುಬಲವಾದ ಸಂದೇಶವನ್ನು ದೇಶಕ್ಕೆ...