Category: ಲಹರಿ

ಹಾಲ್ಮೀಟರ್!

ಹಾಲ್ಮೀಟರ್! ಬಿ ವಿ ಭಾರತಿ  ಹಳ್ಳಿ ವಾಸ ಅಂದಕೂಡಲೇ ಪ್ರಕೃತಿ, ಹಸಿರು, ಸಜ್ಜನರು only, ಗಟ್ಟಿಹಾಲು, ಕೆನೆಮೊಸರು, ಮುಗ್ಧತೆ, ನದಿ … ಈ ಥರ ಒಂದು ಫ್ರೇಮ್ ರೆಡಿ ಮಾಡಿ ಚಿತ್ರ ಫಿಕ್ಸ್ ಆಗಿ ಹೋಗಿರುತ್ತದೆ. ಆದರೆ ವಾಸ್ತವದಲ್ಲಿ ಮೊದಲಿನ ಎರಡನ್ನು ಬಿಟ್ಟರೆ...

ಮನಸು ಮರಳಿ ನನ್ನ ಗೂಡಿನಲ್ಲಿ..

ನಾಗ ಐತಾಳ  ಕವಿ ಲಕ್ಷ್ಮಿನಾರಾಯಣ ಭಟ್ಟರ ಕವನ: ‘ಎಂಥಾ ಹದವಿತ್ತೇ! ಹರಯಕೆ ಏನೋ ಮುದವಿತ್ತೇ….’ ಎಂಬ ಕವನವನ್ನು ಓದಿದಾಗಲೆಲ್ಲ, ನನಗೆ ಬಾಲ್ಯದಲ್ಲಿ ಕೋಟ ಮತ್ತು ಬೆಂಗಳೂರಿನಲ್ಲಿ ಕಳೆದ ಸವಿ ನೆನಪುಗಳು ಮರುಕಳಿಸುತ್ತವೆ. ಈಗ, ಆ ಹುಟ್ಟೂರಿಂದ ದೂರವಾಗಿದ್ದೇನೆ; ಹಾಗಾಗಿ, ಈ ಕವನವು...

ವಿಲ್ಸನ್​ಗಾರ್ಡನ್​ನಲ್ಲಿ ಮರ್ಲಿನ್​ ಮನ್ರೋ ಸಿಕ್ಕಿದ್ದರೆ ಒಟ್ಟಿಗೆ ಊಟ ಮಾಡಬಹುದಿತ್ತು ಎನಿಸಿತು. .

ಸಂದೀಪ್​ ಈಶಾನ್ಯ ಕಳೆದ ಎರಡು ದಿನಗಳಿಂದ ಅವಳು ಬಿಡದೇ ಕಾಡುತ್ತಿದ್ದಾಳೆ. ಆಕೆಯನ್ನು ನಾನು ಮೊದಲು ನೋಡಿದ್ದು ಮೈಸೂರಿನ ಭೀಮ್ಸ್​​ ಕಾಲೇಜಿನ ಹೂವಿನ ತೋಟದ ಮಗ್ಗುಲಿನ ಅಂಗಳಕ್ಕಿದ್ದ ಸಿನೆಮಾ ಹಾಲ್​ನಲ್ಲಿ. ಅವಳ ಹೆಸರಿನ ಪರಿಚಯವಿದ್ದ ನಾನು ಅವಳನ್ನ ಆ ರೀತಿಯಲ್ಲಿ ಎಂದೂ ಎದುರುಗೊಂಡಿರಲಿಲ್ಲ....

ನಮ್ಮೂರಿನ ರೇಲ್ವೆ ಸ್ಟೇಷನ್ ಗೆ ಹೋಗಿದ್ದೆವು..

ಹೀಗೊಂದು ಸುಳ್ಳು.. ಸಿದ್ಧರಾಮ ಕೂಡ್ಲಿಗಿ ನಾನಾಗ 6-7 ನೇ ತರಗತಿ ಇರಬಹುದು. ಒಮ್ಮೆ ನಾನು ನನ್ನ ಗೆಳೆಯ ನಮ್ಮೂರಿನ ರೇಲ್ವೆ ಸ್ಟೇಷನ್ ಗೆ ಹೋಗಿದ್ದೆವು. ಆಗ ಈಗಿನಷ್ಟು ಗಲಾಟೆ, ಜನಸಂದಣಿ ಇರಲಿಲ್ಲ. ನಿಧಾನವಾಗಿ ನಡೆಯುತ್ತ ಪ್ಲಾಟ್ ಫಾರಂ ನಿಂದ ಕೆಳಗಿಳಿದು, ಅಲ್ಲಿಯೇ...

ಕ್ಯಾರಿಯರ್ ಹಿಂದಿನ ಕೈ..

ಪ್ರಕಾಶ್ ಕಡಮೆ  ಇಂದು ಮಧ್ಯಾಹ್ನ ಆಫೀಸಿನಲಿ ಊಟಮಾಡುವಾಗ ಡಬ್ಬಿ ಬಿಚ್ಚುತ್ತಿದ್ದಂತೆ ಯಾಕೋ ಇವಳು ಕಣ್ಮುಂದೆ ಬಂದಳು. ಎಷ್ಟೇ ಏನೇ ಕೆಲಸವಿದ್ದರೂ ಮುಂಜಾನೆ ಒಂಬತ್ತರೂಳಗೆ ಈ ಡಬ್ಬಿ ತಯಾರಾಗಲೇ ಬೇಕು; ಅಲ್ಪ ಸ್ವಲ್ಪ ವ್ಯೆತ್ಯಾಸವಾದರೂ ಕೆಂಗಣ್ಣಿಗೆ ಗುರಿಯಾಗಿ. ನಿಜವಾಗಿಯೂ ಹೆಣ್ಣೆಂದರೆ ಒಂದು ಮಹಾಶಕ್ತಿನೆ. ತಾಯಿ,ಸಹೋದರಿ, ಹೆಂಡತಿ...

ಇನ್ನು ನನಗೆ ಬರುವ ಫೋನುಗಳೋ ಮತ್ತೂ ತಲೆತಿರುಗಿಸುತ್ತವೆ!!

ಕೌನ್ಸಿಲಿಂಗ್ ಕೋಲಾಹಲ ಶಾಂತಾ ನಾಗರಾಜ್ ನನ್ನೆದುರಿಗೆ ೩೦/ ೩೫ ವರ್ಷದ ದಂಪತಿಗಳು ಕುಳಿತಿದ್ದರು. ” ಮೇಡಂ ನೀವು ನಮಗೆ ಸಹಾಯ ಮಾಡಬೇಕು” ಎಂದರು. ” ಹೇಳಿ ಏನು ಸಹಾಯ?” ಎಂದೆ. ” ನಮ್ಮತ್ತೆ ಮಾವನನ್ನು ಕರೆದುಕೊಂಡು ಬರುತ್ತೇವೆ. ನೀವು ಅವರಿಗೆ ಮನೆಬಿಟ್ಟು...

ಇಡ್ಲಿ, ವಡೆ ಒಡೆದರು..

ರಾಜಾರಾಂ ತಲ್ಲೂರು  ನಿನ್ನೆ ಜಾಗತಿಕ ಇಡ್ಲಿ ದಿನವನ್ನು ಆಚರಿಸಿ, ಅಲ್ಲಿ ವಡೆಯನ್ನು ನಿರ್ಲಕ್ಷಿಸುವ ಮೂಲಕ ಇಡ್ಲಿ ವಡಾಗಳನ್ನು ಪ್ರತ್ಯೇಕಿಸಿರುವುದನ್ನು ಪ್ರತಿಭಟಿಸಲು ರಾಜ್ಯ ವಡಾ ಸಮಿತಿ ನಿರ್ಧರಿಸಿದೆ. ಈ ಪ್ರತಿಭಟನೆಗೆ ಮದ್ದೂರು ವಡಾ, ದೂರದ ಮಹಾರಾಷ್ಟ್ರದ ವಡಾಪಾವ್ ಮತ್ತಿತರ ಸಂಘಟನೆಗಳೂ ಬೆಂಬಲ ಸೂಚಿಸಿದ್ದು,...

ಕನ್ನಡಿ ಮುಂದೆ ಎಂಥಾ ಸಾಬಸ್ಥ ಮನುಷ್ಯನೂ ಮಂಗ ಆಗ್ತಾನೆ..

ಕೇಶವ ರೆಡ್ಡಿ ಹಂದ್ರಾಳ ಇತ್ತೀಚೆಗೆ ಮಲಗುವ ಕೋಣೆಗೆ ಮಾಡಿಸಿದ ಡ್ರೆಸ್ಸಿಂಗ್ ಟೇಬಲ್ಲಿನಲ್ಲಿ ನಿಲುವುಗನ್ನಡಿಯನ್ನು ಕೂಡ ಜೋಡಿಸಲಾಗಿದೆ. ರೂಮಿನಲ್ಲಿ ಓಡಾಡುವಾಗ, ಮಲಗುವಾಗ ಈ ಕನ್ನಡಿಯಂತೂ ವಿಪರೀತವಾಗಿ ಸೆಳೆಯುತ್ತದೆ. ಕ್ಷಣ ಕಾಲವಾದರೂ ಅದರ ಮುಂದೆ ನಿಂತು ನನ್ನನ್ನು ನಾನು ತಲಾಶು ಮಾಡಿಕೊಳ್ಳುವ ಕಾಯಶ್ಯು ನನ್ನಲ್ಲಿ...

ಅನ್ನವೊಂದು ಮಾತ್ರ ನಮ್ಮನ್ನು ಇನ್ನಿಲ್ಲದಂತೆ ಕಾಡುತ್ತಿತ್ತು..!!

ಅಣ್ಣಪ್ಪ ಅರಬಗಟ್ಟೆ ಹಬ್ಬ ಬಂತೆಂದರೆ ಖುಷಿಯಾಗುತ್ತಿತ್ತು. ಕಾರಣ ಒಂದೇ ಒಂದು! ಅಂದು ಸಿಹಿ ಮಾಡುತ್ತಾರೆಂಬುದಕ್ಕಿಂತ ಅನ್ನ ಉಣ್ಣಬಹುದೆಂಬ ಸಂಭ್ರಮ. ಇಲ್ಲಿಗೆ ಹದಿನೈದಿಪ್ಪತ್ತು ವರ್ಷಗಳ ಹಿಂದೆ ನಮ್ಮೆಲ್ಲ ಬಯಲುಸೀಮೆ ಮಂದಿಯ ಬಾಲ್ಯವೇ ಅಂಥದ್ದು. ದಿನ ಬೆಳಗಾದರೆ ಅದೇ ರೊಟ್ಟಿ ಅದಕ್ಕೆ ಮೆಂತೆಚಟ್ನಿ, ಜವಳಿಕಾಯಿ...

ನೀ ನನಗೆಂದೇ ತರುತಿದ್ದ ಗಾಜರ್ ಕಾ ಹಲ್ವಾ ಹುಡುಕಿ ಹುಡುಕಿ..

ಇಂಥದೇ ಒಂದು ಅರೆಬರೆ ಬೆಳಕಿರುವ ಸಂಜೆಯಲ್ಲಲ್ಲವಾ ನೀ ಸಿಕ್ಕಿದ್ದು ನಂಗೆ? ಇನ್ನೂ ಹೆಚ್ಚು ಕೆಂಪಗಿದ್ದ ಸೂರ್ಯ ಮುಳುಗುವ ಹೊತ್ತಲ್ಲೇ ನನ್ನ ಮನಸ್ಸಿನೊಳಗೆ ನಡೆದು ಬಂದಿದ್ದು ನೀನು.. ನಂತರದ್ದೆಲ್ಲಾ ಪ್ರೀತಿಯದ್ದೇ ಪ್ರವಾಹ! ನನ್ನ ಕನಸುಗಳ ಪ್ರಪಂಚದಲ್ಲಿ ನೀ ಕೃಷ್ಣನಾದರೆ , ನಿನ್ನ ನವಿಲುಗರಿಯ...