Category: ಜಿ ಎನ್ ಮೋಹನ್

ಹಾಗಾಗಿ ಇಲ್ಲಿದೆ – ಆ ದೃಶ್ಯ ರೂಪಕ..

ಜಿ ಎನ್ ಮೋಹನ್  ಅವತ್ತು ತುಮಕೂರಿನ ಮರಳೂರಿನ ತೋಟದಲ್ಲಿ ಬೆಳದಿಂಗಳ ಅಡಿ ಹೆಜ್ಜೆ ಹಾಕುತ್ತಿದ್ದೆವು. ನಾನು ಮತ್ತು ಮಾದೇವ್ ಭರಣಿ ಇಬ್ಬರೂ ಹೆಜ್ಜೆ ಹಾಕುತ್ತಿದ್ದುದು ಎಸ್ ಗಂಗಾಧರಯ್ಯನವರ ಜೊತೆ. ಗಂಗಾಧರಯ್ಯನವರು ಸ್ವಾತಂತ್ರ್ಯ ಹೋರಾಟಗಾರರು. ಅದಕ್ಕಿಂತ ಹೆಚ್ಚಾಗಿ ಸಮ ಸಮಾಜಕ್ಕಾಗಿ ಕನಸಿದವರು. ಮಾನವೀಯತೆಯ...

‘ಚಿರಸ್ಮರಣೆ’ಯ ಪುಟಗಳಲ್ಲಿ ಅಡ್ದಾಡುತ್ತಾ..

ಇಂದು ‘ಚಿರಸ್ಮರಣೆ’ ಎನ್ನುವ ಕಾಡುವ, ಹುಮ್ಮಸ್ಸು ಹುಟ್ಟುಹಾಕುವ ನಿರಂಜನರ ಕೃತಿಯನ್ನು ನೆನಪಿಸುವ ದಿನ. ಈ ಕಥಾನಕದ ನೆಲ ಕಯ್ಯೂರು ಸಂಗಾತಿಗಳನ್ನು ಗಲ್ಲಿಗೇರಿಸಿದ ದಿನ. ಚಿರಸ್ಮರಣೆ ಹಾಗೂ ಕಯ್ಯೂರು ಪುಟಗಳಲ್ಲಿ ಅಡ್ಡಾಡಿದ್ದೇನೆ- ಓದಿ ಜಿ ಎನ್ ಮೋಹನ್ ಪಶ್ಚಿಮ ಘಟ್ಟದ ನಿಗೂಢ ತಿರುವುಗಳಲ್ಲಿ...

ಜೆರ್ಸಿ ನಂಬರ್ 10

**** ಜಿ ಎನ್ ಮೋಹನ್ 7 ಈಗ 18 ಕ್ಕೆ ದಾರಿ ಮಾಡಿಕೊಟ್ಟಿದೆ 7 ಸಾಧಿಸಿದ ದಿಗ್ವಿಜಯ ಇನ್ನಿಲ್ಲದ್ದು 18 ಸಹಾ ಇನ್ನು ಮುಂದೆ ಅಂತಹದೇ ದಿಗ್ವಿಜಯ ಸಾಧಿಸುತ್ತದೆ ಅನ್ನುವುದು ಎಲ್ಲರ ನಿರೀಕ್ಷೆ ಇದು ಸುಳ್ಳಾಗುವುದಿಲ್ಲ ಎನ್ನುವುದನ್ನು 18 ಈಗಾಗಲೇ ಸಾಬೀತು ಪಡಿಸಿದೆ. ಎದುರಿಗೆ ಎಂತ ದೇಶವಾದರೂ...

ನಾಳೆ ‘ಚಂದನ’ದಲ್ಲಿ

ಪ್ರಸಾರ ಭಾರತಿಯ ಅಧ್ಯಕ್ಷರಾದ ಡಾ ಎ ಸೂರ್ಯಪ್ರಕಾಶ್ ಹಾಗೂ ನನಗೂ ಒಂದು ಹಳೆಯ ನಂಟು. ಹಲವು ವರ್ಷಗಳ ಒಡನಾಟ. ನಾನು ಈಟಿವಿ ಚಾನಲ್ ನ ಸುದ್ದಿ ವಿಭಾಗದ ಮುಖ್ಯಸ್ಥನಾಗಿದ್ದಾಗ ಅವರು ಅದೇ ಸಂಸ್ಥೆಯ ಒಡೆತನದ ನ್ಯೂಸ್ ಟೈಮ್ ನ ದೆಹಲಿ ಬ್ಯೂರೊದ...

ಚಿಕ್ ಚಿಕ್ ಸಂಗತಿ: ಅನ್ ಪಡ್ ಗಧಾ

**** ಜಿ ಎನ್ ಮೋಹನ್   ಹಂದಿ.. ನಾಯಿ.. ಕೋತಿ.. ಎಮ್ಮೆ.. ಕೋಣ.. ರಾಕ್ಷಸಿ.. ರಾಕ್ಷಸ.. ನಾನು ಕೇಳುತ್ತಲೇ ಇದ್ದೆ ಒಂದಾದರೊಂದರ ಮೇಲೆ ಬೈಗುಳದ ಬಾಣಗಳು ಆ ಕಡೆಯಿಂದ ಈ ಕಡೆಗೆ, ಈಕಡೆಯಿಂದ ಆ ಕಡೆಗೆ ಚಿಮ್ಮುತ್ತಿದ್ದವು. ಯಾರಿಗೆ ಯಾರೂ ಕಡಿಮೆ...

ಚಿಕ್ ಚಿಕ್ ಸಂಗತಿ: ವಿಜಯಮ್ಮ ಮತ್ತು ಅಮೀರ್ ಖಾನ್

——– ಜಿ ಎನ್ ಮೋಹನ್   ಈ ವಾರ ಎರಡು ಘಟನೆಗಳಿಗೆ ನಾನು ಸಾಕ್ಷಿಯಾದೆ ಒಂದು ವೇದಿಕೆಯ ಮೇಲೆ, ಇನ್ನೊಂದು ತೆರೆಯ ಮೇಲೆ ಒಂದು ಅಪ್ಪ, ಇನ್ನೊಂದು ಅಮ್ಮ ಒಬ್ಬ ಪುರುಷ, ಇನ್ನೊಬ್ಬ ಮಹಿಳೆ ಒಬ್ಬ ಅಮೀರ್ ಖಾನ್, ಇನ್ನೊಬ್ಬರು ವಿಜಯಮ್ಮ...

ಚಿಕ್ ಚಿಕ್ ಸಂಗತಿ: ನನ್ನ ಬೊಗಸೆ ಖಾಲಿಯಾಗಿಯೇ ಉಳಿಯಿತು

ಜಿ ಎನ್ ಮೋಹನ್  ಸಿಕ್ಕಾಪಟ್ಟೆ ಕುಡಿದಿದ್ದೆ ನಿಲ್ಲಲಾಗುತ್ತಿರಲಿಲ್ಲ.. ತೂರಾಡುತ್ತಿದ್ದೆ.. ಮನೆಗೆ ಬಂದವನೇ ಕೈಗೆ ಸಿಕ್ಕಿದ್ದು ತೆಗೆದುಕೊಂಡು ಅವಳಿಗೆ ಬಡಿಯಲು ಶುರು ಮಾಡಿದೆ. ಅವಳು ನನ್ನ ಮೇಲೆ ಖಂಡಿತಾ ಕೈಯೆತ್ತಲಿಲ್ಲ ಚೀರಲಿಲ್ಲ, ನೆರೆಯವರಿಗೆ ಕೇಳಿಸಲೂ ಬಾರದು ಎನ್ನುವಂತೆ ಬಿಕ್ಕಿದಳು.. ನನಗೆ ಅದರ ಕೇರೇ...

ದೇವನೂರು ಎಂಬ ‘ಜೋತಮ್ಮ’

ಜಿ ಎನ್ ಮೋಹನ್ ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ ಶಿಕ್ಷಕರು, ವಿದ್ಯಾರ್ಥಿಗಳು, ವೃತ್ತಿನಿರತರು ಹೀಗೆ.. ಅಪರೂಪಕ್ಕೆ ಎಲ್ಲರೂ ಸೇರುವ ಸಮ್ಮೇಳನ. ನಾನು ಮಾತನಾಡುತ್ತಾ ಮಾಧ್ಯಮ ಲೋಕ ಹೇಗೆ ‘ಏಕ’...

'ಮುತ್ತುಪ್ಪಾಡಿ'ಯ ಕನ್ನಡಿಯಲ್ಲಿ ಕಂಡ ಬೊಳುವಾರು

ಜಿ ಎನ್ ಮೋಹನ್ ಅಲ್ಲಿ ಅವರು ಸಿಕ್ಕರು.. ಕಲ್ಲು ಬೆಂಚಿನ ಮೇಲೆ ಕತೆ ಹೇಳುತ್ತಾ ಕುಳಿತ ಮುದುಕ, ಅದ್ರಾಮನ ಅಜ್ಜಿ ಪಾತುಮ್ಮ, ಆಕೆಯ ಮಗ ಖಾದರ್, ಜೊತೆಗೆ ಹಾಲೀಮಾ, ಸಖೀನಾ, ನಾಲ್ಕು ಮಕ್ಕಳ ತಾಯಿ- ವಿಧವೆ ಸಾರಮ್ಮ, ರೈಟರ್ ವೆಂಕಣ್ಣ, ‘ವಲು’...