Category: ನಮ್ಮೂರು.. ನಮ್ಮೋರು..

ಕರಾವಳಿಗರ ಬುದ್ಧಿವಂತಿಕೆಗಿಂತ ನಮ್ಮ ದಡ್ಡತನವೇ ನೆಮ್ಮದಿ ಅನಿಸ್ತಾ ಇದೆ..

        ಅಮರನಾಥ್           ನಮ್ಮದು ಆಗಿನ ಕೋಲಾರ, ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಊರು.. ಶೈಕ್ಷಣಿಕ ಫಲಿತಾಂಶಗಳ ಆಧಾರದಲ್ಲಿ ಹೇಳೋದಾದರೆ ನಾವು ಅತ್ಯಂತ ದಡ್ಡರು.. ಅಂದಹಾಗೆ, ನಮ್ಮ ಎರಡೂ ಜಿಲ್ಲೆಗಳಲ್ಲಿ ಸಾಕಷ್ಟು ಮುಸಲ್ಮಾನರಿದ್ದಾರೆ…...

ಹನ್ನೆರಡು ವರ್ಷಗಳ ಬಳಿಕ ಬೆಟ್ಟ ಹತ್ತಿದ್ದೆ…

        ಶಿವಾನಂದ ತಗಡೂರು       ನಮ್ಮೂರಿನ ಗೊಮ್ಮಟನ ಮಹಾಮಜ್ಜನಕ್ಕೆ ದಿನಗಣನೆ ಶುರುವಾಗಿದೆ. ಅಹಿಂಸೆ, ತ್ಯಾಗದ ನೆಲೆವೀಡು ಶ್ರವಣಬೆಳಗೊಳಕ್ಕೆ ವರ್ಷದಲ್ಲಿ ಹತ್ತಾರು ಬಾರಿ ಹೋಗುತ್ತಿದ್ದರೂ ಅದು ಸ್ವಾಮೀಜಿ ಭೇಟಿ ಅಥವಾ ಕಾರ್ಯಕ್ರಮಕ್ಕೆ ಮಾತ್ರ ಸೀಮಿತ ಆಗುತ್ತಿತ್ತು....

ಹರವುನಲ್ಲಿ ‘ಧರೆಗೆ ದೊಡ್ಡವರು’

ಹರವು ದೇವೆಗೌಡ ಅಂತೂ ಬಹುದಿನಗಳ ನನ್ನ ಕನಸು ನನಸಾಯಿತು.. ನಮ್ಮೂರ ಪ್ರಾಚೀನ ಸ್ಮಾರಕದಲ್ಲಿ( ಹರವು, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ) ಮಂಟೇಸ್ವಾಮಿ ಕಥಾ ಪ್ರಸಂಗವನ್ನು ಹಾಡಿಸುವುದು ನನ್ನ ಕನಸಾಗಿತ್ತು. ಬೆಂಗಳೂರಿನ ‘ಸಂವಾದ’ ಸಂಸ್ಥೆಯ ಮೂವತ್ತು ಯುವಕ ಯುವತಿಯರ ತಂಡ ನಮ್ಮ ದೇವರಕಾಡು...

ನನ್ನ ಕಾಗದದ ದೋಣಿ..

ಅಲಕಾ ಜಿತೇಂದ್ರ ತವರೂರಲ್ಲಿ ಮುಂಗಾರಿನ ಆರ್ಭಟ. ಈ ಕೊಲ್ಲಿ ರಾಷ್ಟ್ರದಲ್ಲಿ ಕೊಲ್ಲುವಂಥ ಬಿಸಿಲು. ಆದರೂ ಇಳೆಯ ತಣಿಸುವ ಮಳೆಯ ನೆನಪೇ ಸಾಕು ನನ್ನೊಳಗಿನ ಮಧುರ ನೆನಪುಗಳ ಎಳೆ ಎಳೆಯಾಗಿ ಬಿಡಿಸಲು. ಮಳೆಗೂ, ನೆನಪುಗಳಿಗೂ ಅದೇನು ಬಾಂಧವ್ಯವೋ ? ಅಮ್ಮನೂ ಪ್ರತಿ ಮಳೆಗಾಲಕ್ಕೆ...

ಊರ ಸುಟ್ಟು ಉಗಾದಿ ಮಾಡೋ ದಿನಗಳು

ಗುರುತು ಉಗಾದಿ ಹೊತ್ಗೆ ಅಡ್ಡ ಮಳೆ ಹೂದ ವರ್ಶ ಬಾವಿಲಿ ನೀರು ಇಂಗತಿರಲಿಲ್ಲ. ಮಳೆ ಹುಯ್ಯದು ಮುಂದಕೋತು ಅಂದ್ರೆ ಉಗಾದಿ ರಾತ್ರಿ ಬೆಳಗೂವೆ ಊರು ಎಣ್ಣೆತಾನಕ್ಕೆ ಅಂತ ನೀರ ತೋಡಿ ತೋಡಿ ಪಾತಾಳ ಕಾಣಸಬುಡದು. ಕೆಸರಂಡಲ್ಲಿ ವರುಷ ಪೂರ್ತಿ ಬಾವಿಗೆ ಬಿದ್ದು...

ಸಂಸಾರ ಅನ್ನದ ಎದೆ ಒಳಗಿಟ್ಕಂಡು ಕಾಯ್ಕ ಬೇಕು..

೨ ಸಣ್ಣಮ್ಮಿ ಅನ್ನೋ ಹರೆದ ಹುಡ್ಗಿ ಈಗಿನ್ನೂ ಮೈ ಬಣ್ಣ ತಿರೊಗೊ ಪ್ರಾಯಾದಾಗೆ ಆಗಲೆ ಊರಿನ ವರಸೆ ಅಂಗೆ ಒಂದ ಮಗಿನ, ತಾಯೂ ಆಗೋಗಿದ್ಲು. ಕಂಕಳಲ್ಲಿ ಎಳೆ ಕೂಸ ಹೊತ್ಕಂಡು, ತಲೆ ಮೇಲೆ ಆಕ್ಕಾಶನೆ ಕಳಚ್ಕೊಂಡು ಬಿದ್ದಂಗಿರೋಳು. ನೋಡ್ತ.. ನೋಡ್ತಲೇ ದೇವರ...

ಕೆಸ್ರು ಗದ್ದೆಲಿ ಆದ ಅವಮಾನನೆ ದೊಡ್ದಾಯ್ತು-

ಸಂಬಂಧ ೧ ಹಿಂಗೆ ನಮ್ಮ ಮನೇಲಿ ದೊಡ್ಡ ಅನ್ನೊ ಹೆಸರಿನ ಒಬ್ಬ ಇದ್ದ. ಕೋರ ಹುಡುಗ ಆಗಿದ್ದಾಗಲೇ ಅವನನ್ತಂದು ಅಜ್ಜಯ್ಯ ನಮ್ಮನಿಗ್ ಹಾಕ್ಕೊಂಡಿದ್ರು. ಆರಂಭ ಮಾಡಕೆ ಅಂತಲೇ ಇಂತೋರು… ಯಾರ ಸಿಕ್ಕುದ್ರು ಕರ್ಕಂಬರರು. ದಿಕ್ಕುದೆಸೆ ಇಲ್ದೋರು ಇಂಗಬಂದು, ಈ ಊರಲ್ಲೇ ಉಳ್ದು...

ಸಿಡ್ಲ ಮಾರಮ್ಮನೂ ಬೋರಮ್ಮನೂ

೨ ಹಿಂಗೆ ಗಂಡನ ಪ್ರಾಣವ ಅತ್ತಿಮರದ ಪೊಟರೇಲಿ ಬುಟ್ಟು, ಮಕ್ಕಳ ಮಡ್ಲಲ್ಲಿ ಕಟ್ಕಂದು ಬಂದ ಬೋರಮ್ಮ ಊರೊಳಗೆ ಬಂದಳೆ, ತಿಂಗಳಾನುಗಟ್ಟಳೆ ಮುಸುಕೆಳೆದು ಮಗ್ಗಲಾದ್ಲು. ಕೊನಿಗೆ ಒಂದಿನ ಎಣ್ಣೆ ನೀರು ಕಾಣದಿರ ಬರಗೂದಲ ಎತ್ತಿ ಕಟ್ಕಂಡಿದ್ದೆ, ಸರಿರಾತ್ರಿಲಿ ಎರಡ ಮಾಡಕ್ಕೆ, ಬೇಲಿ ಅಂಚಿಗೆ...

ಅಯ್ಯೋ! ಸಣ್ಣತಮ್ಮಣ್ಣನ ಜತೆ ಮಾತಾಡದು ಅಂದ್ರೆ ಹುಡುಗಾಟವಾ?

ಮೂಗಬಸವನ ದೆವ್ವ ಕಾಮಾಲೆ ಕಾಯಲೆಲಿ ಪಾರಾಗಿ ಉಳುದ ಸಣ್ಣತಮ್ಮಣ್ಣ ಅನ್ನೋ ಹೊನ್ನಳ್ಳಿಯ ಹತ್ತು ವರ್ಷದ ಮಗ ಮತ್ಯಾವತ್ತೂವೆ ಹೊನ್ನಳ್ಳಿ ಕಡಿಕೆ ತಲೆ ಹಾಕ್ಕಂದೂ ನೋಡನಿಲ್ಲ. ಹೊಸಳ್ಳಿಯೋರು ಸೈತ ಅತ್ಲಾಗೆ ಆ ಹುಡುಗನ್ನ ಬುಡ್ನಿಲ್ಲ. ಇದು ಅತ್ತೇರಿಗೇ ಮಾವದಿರ್ಗೆ ಹೊಂದ್ಕಂದು ಇಲ್ಲೇ ಉಳಕತು....

ನನ್ನ ಕಣ್ಣಲ್ಲಿ ಹೊನ್ನಳ್ಳಿನ್ನ ಮರಿದಿರಂಗೆ ಕೊರ್ದು ಕೂರಿಸಿದೆ..

ಹೊನ್ನಳ್ಳಿ ಅಮ್ಮ ಮೂವತ್ತು ವರ್ಶದ ಹಿಂದೆ ಒಂದಿಸ “ನಮ್ಮೂರು ಬಡ್ಡೇಲೆ ಬಂದು ವಾಟೆಹೊಳೆ ಡ್ಯಾಮ್ ಕಟ್ಟವ್ರಲ್ಲಾ… ಅಲ್ಲಿ, ಏನು ಸಮುದ್ರದಲ್ಲಿ ನೀರು ನಿಂತಂಗೆ ನೀರು ನಿಂತೀತಂತೆ. ಎಲ್ಲರೂ ನೋಡಕಬತ್ತಾವರೆ. ನಾವು ನೋಡಿ ಬರನ ನಡೀರ್ರೆ” ಅಂತ ಆಚೀಚೆ ಮನೆ ಅಕ್ಕದೀರು ಅತ್ಗೇರು...