Category: ಹಾಯ್! ಅಂಗೋಲಾ.. / ಪ್ರಸಾದ್ ನಾಯ್ಕ್

ನಾವು ಅಂದು ಓಡುತ್ತಲೇ ಇದ್ದೆವು.

‘31 ‘ಪಾರ್ಕಿಂಗ್ ಪ್ರಹಸನಗಳೆಂಬ ಮುಗಿಯದ ಸಾಹಸಗಳು” ನಾವು ಅಂದು ಓಡುತ್ತಲೇ ಇದ್ದೆವು. ಅದು ಮ್ಯಾರಥಾನ್ ಆಗಿರಲಿಲ್ಲ. ಮುಂಜಾನೆಯ ಜಾಗಿಂಗ್ ಕೂಡ ಆಗಿರಲಿಲ್ಲ. ನಡುಮಧ್ಯಾಹ್ನದ ಸೂರ್ಯ ನೆತ್ತಿಯ ಮೇಲೆ ಸುಡುತ್ತಿದ್ದ. ನೂರಾರು ವಾಹನಗಳು ಎಡೆಬಿಡದೆ ಜನನಿಬಿಡ ಶಹರದ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದವು. ಇನ್ನು ಇವೆಲ್ಲವುಗಳನ್ನು...

ಯಾರೋ ಎರಡು ಹನಿ ಹೆಚ್ಚೇ ‘ಉಜಾಲಾ’ ಹಾಕಿದ್ದಾರೆ..

”ಬೆವರ ಹನಿಯೊಳಗಣ ಸಾಗರವನ್ನು ಕಾಣುತ್ತಾ…”   ಮೇಲೆ ತಲೆಯೆತ್ತಿ ಒಮ್ಮೆ ನೋಡಬೇಕು. ಕಡುನೀಲಿ ಆಕಾಶ. ಯಾರೋ ಎರಡು ಹನಿ ಹೆಚ್ಚೇ ‘ಉಜಾಲಾ’ ಹಾಕಿದ್ದಾರೆ ಎನ್ನುವಂತೆ. ಆ ನೀಲಿ ಹಿನ್ನೆಲೆಯಲ್ಲಿ ಮತ್ತಷ್ಟು ಬಿಳಿಯಾಗಿ ಎದ್ದು ಕಾಣುವ ಮೋಡಗಳು. ಥೇಟು ಹತ್ತಿಯ ಮುದ್ದೆಗಳಂತೆ. ನಾನು...

ಅಂಗೋಲಾದಲ್ಲಿ ನೀರು ಹುಡುಕುತ್ತಾ..

”ನಲ್ಲಿನೀರೆಂಬ ಮಹಾವೈಭೋಗ” ”ಅಲ್ಲಾ… ನೀವು ಇವರಿಗ್ಯಾಕೆ ನೀರನ್ನು ಕೊಡುತ್ತಿಲ್ಲ? ಇಲ್ಲಿ ವಿದ್ಯುಚ್ಛಕ್ತಿ ಬೇರೆ ಇಲ್ಲ. ಅದ್ಯಾಕೆ ನೀವು ಇವರೊಂದಿಗೆ ಮಲತಾಯಿ ಧೋರಣೆಯನ್ನು ಮಾಡುತ್ತಿದ್ದೀರಿ ಎಂದು ನನಗಂತೂ ಅರ್ಥವಾಗುತ್ತಿಲ್ಲ!” ಹೀಗೆ ಡಾ. ಗೌರ್ ಅಂದು ನನ್ನ ಸಮ್ಮುಖದಲ್ಲೇ ಇಲ್ಲಿಯ ಸ್ಥಳೀಯ ಅಧಿಕಾರಿಯೊಬ್ಬರನ್ನು ತರಾಟೆಗೆ...

ಅಂದು ನಾನು ಹುಡುಕುತ್ತಾ ಹೋಗಿದ್ದು ಕತೆಗಳನ್ನು!

”ಕಾಡಗರ್ಭದಲ್ಲಿ ಕತೆ ಕತೆ ಕಾರಣ” ಅಂದು ನಾನು ಹುಡುಕುತ್ತಾ ಹೋಗಿದ್ದು ಕತೆಗಳನ್ನು! ಆದರೆ ನಮ್ಮ ಪಯಣದಲ್ಲಿ ನಾನೊಬ್ಬನೇ ಇರಲಿಲ್ಲ. ನನ್ನ ಜೊತೆ ಇನ್ನೂ ಮೂವರಿದ್ದರು. ಈ ಮೂವರಿಗೂ ಕೂಡ ಅವರದ್ದೇ ಆದ ತಲಾಶೆಗಳಿದ್ದವು. ನನ್ನನ್ನು ಹೊರತುಪಡಿಸಿ ನಮ್ಮ ತಂಡದ ಮತ್ತೊಬ್ಬ ಮುಖ್ಯ...

‘ಶಿನೇಶ್.. ಶಿನೇಶ್..’ ‘ಚೈನೀಸ್..’ ‘ಚೈನೀಸ್..’

ಚಿಣ್ಣರ ಲೋಕದ ಚಿನ್ನಚಿನ್ನ ಆಸೈ ”ಶಿನೇಶ್… ಶಿನೇಶ್…”, ಎಂದು ನನ್ನನ್ನು ನೋಡುತ್ತಾ ಖುಷಿಯಿಂದ ಕೂಗುತ್ತಲೇ ಇದ್ದರು ಆ ಮಕ್ಕಳು. ‘ಶಿನೇಶ್’ ಎಂದರೆ ಪೋರ್ಚುಗೀಸ್ ಭಾಷೆಯಲ್ಲಿ ‘ಚೈನೀಸ್’ ಎಂದರ್ಥ. ನಾನು ಅದ್ಯಾವ ಕೋನದಲ್ಲಿ ಚೀನೀಯನಂತೆ ಇವರಿಗೆ ಕಾಣುತ್ತೀನಪ್ಪಾ ಎಂದು ಯಾವತ್ತೂ ನಗೆಯಾಡುವವನು ನಾನು....

ಅಂಗೋಲಾದಲ್ಲಿ ಶಾರೂಖನೂ, ಬಾಹುಬಲಿಯೂ..

  ಲುವಾಂಡಾದ ಖ್ಯಾತ ಮಾರ್ಜಿನಲ್ ಬೀದಿಯಲ್ಲಿದ್ದ ಭಾರತೀಯ ರೆಸ್ಟೊರೆಂಟ್ ಒಂದರ ಒಳಕ್ಕೆ ನಾವು ಅಂದು ನುಗ್ಗಿದ್ದೆವು. ನಾವು ಅಂದು ಹೋಗಿದ್ದು ‘ಓ ಕಾರಿಲ್’ ರೆಸ್ಟೊರೆಂಟಿಗೆ. ಒಳನಡೆಯುತ್ತಿರುವಂತೆಯೇ ”ವಾವ್” ಅಂದುಬಿಟ್ಟ ನನ್ನ ದುಭಾಷಿ ಮಿಗೆಲ್. ರೆಸ್ಟೊರೆಂಟ್ ಹೆಚ್ಚೇನೂ ದೊಡ್ಡದಾಗಿಲ್ಲದಿದ್ದರೂ ಒಳಾಂಗಣವು ಸುಂದರವಾಗಿತ್ತು. ಅಲಂಕರಿಸಿದ...

ಝುಂಬಾ ತಾಳಕ್ಕೆ ಮೈಮರೆಯುತ್ತಾ…

”ಝುಂಬಾ ತಾಳಕ್ಕೆ ಮೈಮರೆಯುತ್ತಾ…” ನೀವು ಚಿತ್ರಪ್ರೇಮಿಗಳಾಗಿದ್ದಲ್ಲಿ ‘Notting Hill’ ಎಂಬ ಚಿತ್ರದ ಬಗ್ಗೆ ಕೇಳಿರಬಹುದು. ಹಾಲಿವುಡ್ ಖ್ಯಾತನಾಮರಾದ ಜೂಲಿಯಾ ರಾಬಟ್ರ್ಸ್ ಮತ್ತು ಹ್ಯೂ ಗ್ರಾಂಟ್ ಮುಖ್ಯಭೂಮಿಕೆಯಲ್ಲಿರುವ ಮುದ್ದಾದ ರೊಮ್ಯಾಂಟಿಕ್ ಕಾಮಿಡಿ ಚಿತ್ರವಿದು. ಬಾಫ್ತಾ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಈ...

ರಾತ್ರಿ ಮಲಗೋದು ಇಷ್ಟದ ಅಡುಗೆ ಮಾಡಿದವಳ ಜೊತೆ..!

”ನಾಳೆ ನಾನು ಬರೋದಿಲ್ಲ ಚೀಫ್”, ನನ್ನೆದುರು ಕೈಕಟ್ಟಿಕೊಂಡು ನಿಂತಿದ್ದ ದುಭಾಷಿ ಮಹಾಶಯ ಮಿಗೆಲ್ ಎಂಬೋಸೋ ಹೇಳಿದ್ದ. ಇಪ್ಪತ್ತೈದರ ಆಸುಪಾಸಿನವನಾದ ನನ್ನ ದುಭಾಷಿ ಇನ್ನೂ ಹುಡುಗುಬುದ್ಧಿಯನ್ನಿಟ್ಟುಕೊಂಡೇ ಕೆಲಸ ಮಾಡುವವನು. ತೀರಾ ಕಾಲೇಜು ವಿದ್ಯಾರ್ಥಿಯಂತೆ ಇಡೀ ದಿನ ತನ್ನ ಸ್ಮಾರ್ಟ್‍ಫೋನಿನಲ್ಲೇ ಮುಳುಗಿ ಸೋಷಿಯಲ್ ಮೀಡಿಯಾ,...

ಅಂಗೋಲಾದ ಆ ಸಿಂಪಲ್ ‘ಡಾಕ್’..!!

ನಾವಿಬ್ಬರೂ ಅಂದು ಮಾತಾಡುತ್ತಲೇ ಇದ್ದೆವು. ಎಲ್ಲೋ ಕಳೆದು ಹೋಗಿ ದಶಕಗಳ ನಂತರ ಭೇಟಿಯಾದ ಬಾಲ್ಯದ ಗೆಳೆಯರಂತೆ. ನಾನು ಅಂದು ಮಾತಾಡುತ್ತಿದ್ದಿದ್ದು ಡಾ. ಜೆರಾಂಡುಬ ಯೊಟೊಬುಂಬೆಟಿ ಅವರೊಂದಿಗೆ. ಇಷ್ಟುದ್ದ ಇರುವ ಅವರ ಹೆಸರಿನ ಸರಿಯಾದ ಉಚ್ಚಾರಣೆಯು ಹೀಗೇನೇ ಎಂದು ನಾನು ಹೇಳುವ ಹಾಗಿಲ್ಲ....

ಅಂಗೋಲಾದ ‘ಟಾರ್ಚರ್ ಚೇಂಬರ್’ ಗಳು..!!

”ಅಂಗೋಲಾದಲ್ಲಿ ನಾವು ಮರೆತೂ ಖಾಯಿಲೆ ಬೀಳುವಂತಿಲ್ಲ”, ಎಂದು ನಾನು ನನ್ನ ಸಹೋದ್ಯೋಗಿಯಾದ ಸಿಂಗ್ ಸಾಹೇಬರಿಗೆ ಹೇಳಿದ್ದೇನೋ ಸರಿ. ಆದರೆ ಖಾಯಿಲೆಗಳೇನು ನಕಾಶೆ ಹಿಡಿದುಕೊಂಡು, ಮುಹೂರ್ತ ನೋಡಿಕೊಂಡು ಬರುತ್ತವೆಯೇ? ಬಹುಷಃ ಅಂಗೋಲಾದ ವೈದ್ಯಕೀಯ ಜಗತ್ತಿನ ಒಳಹೊರಗನ್ನು ಮತ್ತಷ್ಟು ಹತ್ತಿರದಿಂದ ನೋಡುವ ಅವಕಾಶಗಳು ಇನ್ನೂ...