Category: ಹಾಯ್! ಅಂಗೋಲಾ.. / ಪ್ರಸಾದ್ ನಾಯ್ಕ್

ಅಂದು ನಾನು ಚೆಗೆವಾರನ ಮೋಟಾರ್ ಸೈಕಲ್ ಡೈರಿಯನ್ನು ಓದುತ್ತಿದ್ದೆ..

ಅಂದು ನಾನು ಚೇಗೆವಾರನ ಮೋಟಾರ್ ಸೈಕಲ್ ಡೈರಿಯನ್ನು ಓದುತ್ತಿದ್ದೆ.. ಚೇಗೆವಾರ ಮತ್ತು ಆತನ ಮಿತ್ರ ಆಲ್ಬರ್ಟೋರ ಸಾಹಸಮಯ ಪಯಣದಲ್ಲಿ ವಿಚಿತ್ರ ರಾತ್ರಿಯೊಂದು ಎದುರಾಗುತ್ತದೆ. ಅಂದು ಮೈಕೊರೆಯುವ ಚಳಿಯಲ್ಲಿ ಚಿಲಿಯನ್ ಕಮ್ಯೂನಿಸ್ಟ್ ದಂಪತಿಗಳೊಬ್ಬರು ಈ ತರುಣರಿಗೆ ಮಾತಿಗೆ ಸಿಗುತ್ತಾರೆ. ಜೀವನದುದ್ದಕ್ಕೂ ಕಷ್ಟವನ್ನೇ ಉಸಿರಾಡಿದ...

ಈ ಊರಲ್ಲಿ ಲಂಚದ ಚೌಕಾಶಿ ಸ್ಟೈಲೇ ಬೇರೆ..!!

2016 ಫೆಬ್ರವರಿಗೆ ಸಿಕ್ಕ ಲೆಕ್ಕದಂತೆ 100 ಕ್ಕೆ 76 ಚಿಲ್ಲರೆ ಅಂಕ. ಆಫ್ರಿಕಾದಲ್ಲಿ ಒಂಭತ್ತನೇ ಅತೀ ಅಪಾಯಕಾರಿ ಮಹಾನಗರಿ. ಇದು ನುಂಬಿಯೋ ಜಾಲತಾಣವು ಲುವಾಂಡಾಕ್ಕೆ ಕೊಟ್ಟ ಕ್ರೈಂ ಇಂಡೆಕ್ಸ್ ಅಂಕ. ಅಪರಾಧವೆಂಬುದು ಅಂಗೋಲಾ ರಾಜಧಾನಿಯಾದ ಲುವಾಂಡಾದಲ್ಲಷ್ಟೇ ಅಲ್ಲ. ಕಾಲಾಂತರದಲ್ಲಿ ಅದು ಕ್ರಮೇಣ...

ಒಬ್ಬಂಟಿತನಕ್ಕೂ ಒಂದು ಸರಕಾರಿಇಲಾಖೆ..ಇದಕ್ಕೂಓರ್ವಮಂತ್ರಿ..!!

ಒಬ್ಬಂಟಿತನಕ್ಕೂಒಂದು ಸರಕಾರಿಇಲಾಖೆ. ‘Ministry of Loneliness’..!! ಒಬ್ಬಂಟಿತನಕ್ಕೂ ಒಂದು ಸರಕಾರಿಇಲಾಖೆ. ಇದಕ್ಕೂಓರ್ವಮಂತ್ರಿ. ಇತ್ತೀಚೆಗೆಇಂಥದ್ದೊಂದು ವಿಶಿಷ್ಟನಡೆಯನ್ನಿಟ್ಟು ಸುದ್ದಿಯಾದವರು ಬ್ರಿಟಿಷ್ಪ್ರಧಾನಿ ಥೆರೇಸಾಮೇ. ಒಬ್ಬಂಟಿತನವೆಂಬ ಸಮಸ್ಯೆಗೂ ಒಂದು ಮಂತ್ರಾಲಯವನ್ನು ರೂಪಿಸಿಟ್ರೇಸಿಕ್ರೌಚ್ಎಂಬ ಸಮರ್ಥಮಹಿಳೆಯೊಬ್ಬರನ್ನು ಸಚಿವಸ್ಥಾನದಲ್ಲಿ ಕೂರಿಸಿಬಿಟ್ಟಿದ್ದರು ಪ್ರಧಾನಮಂತ್ರಿಗಳು. ಮಾನಸಿಕ ಆರೋಗ್ಯದವಿಚಾರದಲ್ಲಿ ಭಾರತದಲ್ಲಿರುವ ಭಾವನೆಗಳು ಎಂಥದ್ದು ಎಂಬುದು ನಮಗೆಲ್ಲರಿಗೂ...

”ಅಂಗೋಲಾವೆಂಬ ಬೂದಿ ಮುಚ್ಚಿದ ಕೆಂಡ”

ಅಂಗೋಲಾಕ್ಕೆ ಆಗಮಿಸುವ ಮುನ್ನ ಕೇವಲ ಓದಿಯಷ್ಟೇ ಒಂದಿಷ್ಟು ತಿಳಿದಿದ್ದ ಮುಂಜಾಗರೂಕತಾ ಕ್ರಮಗಳನ್ನು ನಾನೀಗ ಚಾಚೂತಪ್ಪದೆ ಪಾಲಿಸುತ್ತಿದ್ದೆ. ಏಕೆಂದರೆ ಪರಿಸ್ಥಿತಿಗಳು ಬದಲಾಗಿದ್ದವು. ನನ್ನ ಮಟ್ಟಿಗೆ ಅಂಗೋಲಾ ಎನ್ನುವುದೊಂದು ಪ್ರವಾಸ ತಾಣವಾಗಿರದೆ ಕರ್ಮಭೂಮಿಯಾಗಿತ್ತು. ಒಂದು ಕಾಲದಲ್ಲಿ ಉತ್ಪ್ರೇಕ್ಷಿತ ಅನ್ನಿಸುವಂತಿದ್ದ ಸುರಕ್ಷಾ ಸಂಬಂಧಿ ಮಾಹಿತಿಗಳು, ಸಲಹೆ-ಸೂಚನೆಗಳು...

ಹೀಗೆ ಖರ್ಚು ಮಾಡಿದ್ರೆ ಎಣ್ಣೆ ಬಾವಿ ಕೊರೀಬೇಕಾಗುತ್ತೆ..!!

”ಇಲ್ಲಿಯವರೆಗೆ ಬಂದ ನಂತರ  ಜಾಗೃತ ಸ್ಥಿತಿಯಲ್ಲಂತೂ ಖಂಡಿತ ಇರಿ” ”ಇಲ್ಲಿಯವರೆಗೆ ಬಂದ ನಂತರ ಭಯದ ನೆರಳಿನಲ್ಲಿ ಬದುಕುವುದೆಂದರೆ ಮೂರ್ಖತನವೇ ಸರಿ. ತೀರಾ ಪುಕ್ಕಲರಾಗಬೇಡಿ. ಆದರೆ ಜಾಗೃತ ಸ್ಥಿತಿಯಲ್ಲಂತೂ ಖಂಡಿತ ಇರಿ”, ಎಂದು ನಾನು ನನ್ನ ಕಿರಿಯ ಸಹೋದ್ಯೋಗಿಯೊಬ್ಬನಿಗೆ ಹೇಳುತ್ತಿದ್ದೆ. ಮೊದಮೊದಲು ಅಂಗೋಲಾಕ್ಕೆ...

ಇಲ್ಲಿರೋದು ಚ್ಯೂಯಿಂಗಮ್ ಕಾನೂನು…

”ಎಲ್ಲಿ ಹೋಗಿದ್ರಿ ನೀವು? ನಿಮ್ಮನ್ನು ಹುಡುಕಿ ಹುಡುಕಿ ಸಾಕಾಗಿಹೋಯಿತು. ಇಂದಿನಿಂದ ನೀವು ಎಲ್ಲೂ ಒಬ್ಬೊಬ್ಬರೇ ಹೋಗುವಂತಿಲ್ಲ”, ಎಂದು ಅಂದು ದೃಢವಾಗಿ ಹೇಳಿದ ನನ್ನ ದುಭಾಷಿ ಮಹಾಶಯ ಮಿಗೆಲ್ ಎಂಬೋಸೋ. ಎಲ್ಲೂ ಒಬ್ಬೊಬ್ಬನೇ ಹೋಗುವುದಕ್ಕಿಲ್ಲ ಎಂದರೆ? ನಾನು ಗಂಭೀರವಾಗಿ ಯೋಚಿಸಿದೆ! ಕಳೆದ ಏಳು...

ನಮೀಬಿಯನ್ ನೀರೆಯರ ಜೊತೆ..

ಅಂದು ನನ್ನ ಪಾಡಿಗೆ ನಾನು ತಿನ್ನುವುದರಲ್ಲೇ ಮಗ್ನನಾಗಿದ್ದರೂ ಮೂರು ಜೋಡಿ ಕಣ್ಣುಗಳು ನನ್ನನ್ನೇ ಅಳೆಯುತ್ತಿರುವಂತೆ ಭಾಸವಾಗಿ ಎಂಥದ್ದೋ ಹಿಂಜರಿಕೆಯಾದಂತಾಗಿ ನಾನು ಕೂತಲ್ಲೇ ಕೊಸರಾಡುತ್ತಿದ್ದೆ. ಅಷ್ಟಕ್ಕೂ ಆಗಿದ್ದೇನೆಂದರೆ ರೆಸ್ಟೊರೆಂಟಿನ ಒಂದು ಬದಿಯಲ್ಲಿ ಏಕಾಂಗಿಯಾಗಿ ಊಟ ಮಾಡುತ್ತಿದ್ದ ನನ್ನನ್ನು ಮೂವರು ಆಫ್ರಿಕನ್ ತರುಣಿಯರು ಸುಮ್ಮನೆ...

ಬೋಂದಿಯಾ.. ಬೋಂದಿಯಾಸಿ

ಅಂಗೋಲಾಕ್ಕೆ ಬಂದಿಳಿದ ಹೊಸತು.. ಅಂಗೋಲನ್ ಸರಕಾರಿ ಮಂತ್ರಾಲಯದ ಕಾರ್ಯಾಲಯವೊಂದಕ್ಕೆ ಕೆಲಸದ ನಿಮಿತ್ತ ಹೋಗಿದ್ದೆ. ಸಂಬಂಧಿ ಅಧಿಕಾರಿಗಳು ಬರುವುದು ತಡವಾಗುತ್ತದೆ, ನೀವಿಲ್ಲೇ ಕಾದಿರಿ ಎಂದು ಹೇಳಿ ಅಲ್ಲಿಯ ಸಿಬ್ಬಂದಿಯೊಬ್ಬರು ನಮ್ಮನ್ನು ಲಾಬಿಯಲ್ಲಿ ಕುಳ್ಳಿರಿಸಿದರು. ಆಯ್ತಪ್ಪಾ ಎಂದು ದುಭಾಷಿಯೊಂದಿಗೆ ಕುಳಿತುಕೊಂಡೆ. ಎಲ್ಲಿ ಹೋದರೂ ಕಾಯುವುದೊಂದು...

ಇಲ್ಲಿ ಊಟಕ್ಕೆ ಹುಳುಗಳೂ ಉಂಟು..!!

ಇತ್ತೀಚೆಗಷ್ಟೇ ಪರಿಚಿತರೊಬ್ಬರೊಂದಿಗೆ ಮಾತಾಡುತ್ತಿದ್ದೆ. ಇಂತಿಂಥಾ ದಿನದಂದು ಪಾರ್ಟಿ ಮಾಡೋಣ ಅಂದರು. ಆಯ್ತು, ಆ ದಿನ ನಾನು ಖಾಲಿ ಹೊಟ್ಟೇಲಿ ಬರುತ್ತೇನಂತೆ ಅಂದೆ ತಮಾಷೆಗೆ. ಅಯ್ಯೋ ಇದೊಳ್ಳೆ ಕಥೆಯಾಯ್ತು. ಪಾರ್ಟಿ ಅಂದ್ರೆ ತಿನ್ನೋದೊಂದನ್ನು ಬಿಟ್ಟು ಬೇರೇನೂ ಇಲ್ಲವಾ? ಎಂದು ಕೇಳಿದರು ಅವರು. ಅರೇ...

ಅಂಗೋಲಾದಲ್ಲೊಬ್ಬ ಮುಸಾಫಿರ್..

ನಾನೊಬ್ಬ ಮುಸಾಫಿರ್… ಪಯಣವೇ ನನ್ನ ಬದುಕು   ಯೂ ಹೀ ಚಲಾ, ಚಲ್ ರಾಹೀ ಯೂ ಹೀ ಚಲಾ, ಚಲ್ ರಾಹೀ ಕಿತ್ನೀ ಹಸೀನ್ ಹೈ ಯೇ ದುನಿಯಾ… ಭೂಲ್ ಸಾರೇ ಝಮೇಲೇ ದೇಖ್ ಫೂಲೋಂಕೆ ಮೇಲೇ ಬಡೀ ರಂಗೀನ್ ಹೈ...