fbpx

Category: ಶ್ರೀದೇವಿ ರೆಕಮೆಂಡ್ಸ್..

ಇಡೀ ಪುಸ್ತಕ ಥೇಟ್ ಕಚ್ಚಾ ಮಾಂಗೋ ಚಾಕಲೇಟ್ ತಿಂದಂತೆ..

“ತದಡಿಲಿ ಉಷ್ಣ ಸ್ಥಾವರ ಆಗ್ತದಂತೆ. ಹಂಗೇನಾದ್ರೂ ಆದ್ರೆ ಹಿರೇಗುತ್ತಿ, ತೊರ್ಕೆ, ಬೆಟ್ಕುಳಿ, ಗಜನಿ ಎಲ್ಲ ಹಾರೂಬೂದಿಯಿಂದ ತುಂಬ್ಕೊಳ್ತದಂತೆ.” ಒಬ್ಬರ ಆತಂಕದ ಧ್ವನಿಯ ನಡುವೆಯೇ ಮತ್ತೊಬ್ಬರು ಹೇಳುತ್ತಿದ್ದರು “ಬರೀ ಗಜನಿ ಅಷ್ಟೇ ಅಲ್ಲ ನಮ್ಮ ಮನೆ ಮೇಲೂ ಹಾರೂ ಬೂದಿ ಕವಚಿಕೊಳ್ತದೆ. ನಮ್ಮ...

‘ಅಸ್ತವ್ಯಸ್ತ ಬದುಕಿನ ಸ್ತ್ರೀಯರು’ ಎಂಬ ಕಾದಂಬರಿಯ ಇಳಾ ಅಲವತ್ತುಕೊಂಡಂತೆ..

“ಈ ಸಲ ರಜೆಯಲ್ಲಿ ಹಿರೇಗುತ್ತಿಯಲ್ಲಿ ಉಳಿಯಲಾ?”- ಇದು ಸುಮಾರು ಎರಡು ವರ್ಷಗಳಿಂದಲೂನಾನು ಪ್ರವೀರ್ ಹತ್ತಿರ ಕೇಳುವ ಮಾತು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗಿ ನಮ್ಮ ಮನೆ ಹೋಗುತ್ತದೆ ಎಂದು ತಿಳಿದಾಗಿನಿಂದಲೂ ನನಗೆ ಒಂದು ರೀತಿಯ ಒತ್ತಡ. ಹುಟ್ಟಿ ಆಡಿ ಬೆಳೆದ ಮನೆಯನ್ನು ಕೆಡವುವ,...

ಅವರ ಅನುಭವಗಳ ಆಲೆಮನೆಯಲ್ಲಿ ನಾವು ಸುತ್ತಬೇಕು..

“ಹಿರೇಗುತ್ತಿಗೆ ಗಾಣ ಬಂದದೆ ಬರ್ತೀಯೇನೆ?” ಅಮ್ಮ ಫೋನಾಯಿಸಿದ್ದರು. ಸರಿಯಾಗಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪರೀಕ್ಷಾ ಸಮಯ. ಬಿಟ್ಟು ಹೋಗೋದಾದರೂ ಹೇಗೆ ಎಂಬ ನಿರಾಸೆಯಲ್ಲೇ “ಎಷ್ಟು ದಿನ ಗಾಣ ಇರ್ತದೆ.?” ಎಂದು ವಿಚಾರಿಸಿದೆ. “ನಾಳೆ ಮಧ್ಯಾಹ್ನ ಮುಗಿಯುತ್ತದೆ” ಎಂದು ಅಪ್ಪ...

ನನಗೊಬ್ಬ ‘ಇಮ್ರೋಜ್’ ಬೇಕು..

ಇದು ತೀರಾ ಖಾಸ್ ಆದ ಬರೆಹ.  ನನ್ನನ್ನು ನಾನೇ ಮೈಮರೆತು ಅವನನ್ನು  ಬಯಸುವ ಬಗ್ಗೆ. ಹೀಗೆ ನಾಲ್ಕು ಹಾದಿಗಳು ಸಂಧಿಸುವ ‘ಅವಧಿ’ಯಲ್ಲಿ ನಿಂತು ನಿಮಗೆಲ್ಲ ಹೇಗೆ ಡಂಗುರ ಸಾರಲಿ? ಆದರೂ ನನ್ನನ್ನು ನಾನು ಕಳೆದುಕೊಳ್ಳದಂತೆ ಜೋಪಾನ ಮಾಡುವ ಆತನ ಬಗ್ಗೆ ಹೇಗೆ...

ನಾನು ಊಟ ಮಾಡಲು ನಿರಾಕರಿಸಿ ಮಠದ ಹಬ್ಬಾಗಿಲನ್ನು ದಾಟಿ ಬಂದು ಬಿಟ್ಟಿದ್ದೆ..

ನಾನು  ಹೈಸ್ಕೂಲಿಗೆ ಹೋಗುತ್ತಿರುವ ಸಮಯ ಅದು. ದೀಪಾವಳಿಯ ಸಂದರ್ಭ. ಹಬ್ಬದ ದಿನ ಸಂಜೆ ಸಿಹಿ ಅಡಿಗೆ ಉಂಡು ಮನುಷ್ಯರನ್ನು ಹುಡುಕುತ್ತ ನಾನು ಮತ್ತು ಚಿಕ್ಕಪ್ಪನ ಮಗಳು ಮಾತನಾಡುತ್ತ ಕುಳಿತಿದ್ದೆವು. ಯಾರೋ ಇಬ್ಬರು ‘ಒಡಿದೀರೆ..’ ಎನ್ನುತ್ತ ಮನೆ ಬಾಗಿಲಿಗೆ ಬಂದರು. ನೋಡಿದರೆ ನಮ್ಮ ಮನೆಯ ಗದ್ದೆ ಕೆಲಸಕ್ಕೆ ಖಾಯಂ...

ಅಯ್ಯೋ.. ಈ ಮುಗಿಯದ ಉಪ್ಪಿನಕಾಯಿ ಪುರಾಣ ನೆನಪಾಗಿದ್ದು ತಮ್ಮಣ್ಣ ಬೀಗಾರರ ‘ಪುಟ್ಟನ ಕೋಳಿ’ ಸಂಕಲನದ ಉಪ್ಪಿನಕಾಯಿ ಕಥೆಯನ್ನು ಓದಿದಾಗ..

“ನಿನಗೆ ಚಿಕ್ಕ ಭರಣಿಯಲ್ಲಿ ಉಪ್ಪಿನಕಾಯಿ ಇಟ್ಟಿದ್ದೀನಿ. ತಗೊಂಡು ಹೋಗು.” -ಹಿಂದಿನ ವರ್ಷ ಅಮ್ಮಹೇಳಿದಾಗಲೇ ಬಾಯಿ ನೀರೂರಲಾರಂಭಿಸಿತ್ತು. ಹಿಂದೆಲ್ಲ ದೊಡ್ಡ ದೊಡ್ಡ ಭರಣಿಗಳಲ್ಲಿ ಉಪ್ಪಿನಕಾಯಿ ಮಾಡುತ್ತಿದ್ದ ಅಮ್ಮ ಇತ್ತೀಚಿನ ವರ್ಷಗಳಲ್ಲಿ ಅನಾರೋಗ್ಯದಿಂದಾಗಿ ಉಪ್ಪಿನಕಾಯಿ ಮಾಡುವುದನ್ನೇ ನಿಲ್ಲಿಸಿದ್ದಳು. ಆದರೆ ಹಿಂದಿನ ವರ್ಷ ಒಂದಿಷ್ಟು ಉಪ್ಪಿನಕಾಯಿ...

ಎದೆಯೊಳಗೆ ಮತ್ತೆ ಮತ್ತೆ ಮೆಲುಕು ಹಾಕುವ ಸಾಲುಗಳಿಗಾಗಿ ‘ಕಳಚಿಟ್ಟಿದ್ದೇನೆ ಇದೋ ನಿರ್ವಾಣ’

ಯಾವ ಪುಸ್ತಕವನ್ನು ಓದಲು ಕೈಗೆತ್ತಿಕೊಂಡರೂ ಆಕೆ ಮತ್ತೆ ಮತ್ತೆ ನೆನಪಾಗುತ್ತಾಳೆ. ಪುಸ್ತಕದ ಪುಟ ಪುಟದ ನಡುವೆಯೂ ಆಕೆಯದ್ದೇ ಮುಖ. ಕಣ್ಣೆದುರು ಆಕೆಯ ಮುಖ ಬಂದಂತಾಗುತ್ತದೆ. ಪಾಪಿಗಳಾದವರಿಗೆ ಶಿಕ್ಷೆ ಆಗುತ್ತೆ ಎಂಬ ನಂಬಿಕೆ ಅದೆಷ್ಟೋ ತಲೆಮಾರಿನಿಂದ ಬಂದಿದೆ.ಆದರೆ ಇನ್ನೂ ಹಾಲುಗಲ್ಲವೂ ಮಾಸದ ಆ...

ಪಾವನಾ ಎಂಬ ‘ಅಲೆಮಾರಿ’ಯ ಹಿಂದೆ ಹೋಗಿ ನಾನು ಕಳೆದುಹೋದೆ..

ಪರೀಕ್ಷೆ ಮುಗಿದ್ದೇ ಅಜ್ಜಿ ಮನೆಗೆ ಹೊರಟು ಬಿಟ್ಟಿದ್ದ ಮಗ ಅಜ್ಜನ ಅಪ್ಪುಗೆಯಲ್ಲಿ ಹೊಸ ವಿಷಯಗಳನ್ನು ಕಲಿಯುವ ನಂಬಿಕೆಯಿತ್ತು ನನಗೆ. ಅದು ಸುಳ್ಳಾಗಲಿಲ್ಲ. ಮಗನನ್ನು ವಾಪಸ್ ಮನೆಗೆ ಕರೆತರುವಾಗ ಆತನ ಎಷ್ಟೋ ನಂಬಿಕೆಗಳು ಅರ್ಥಹೀನ ಎಂಬುದನ್ನು ತಿಳಿದುಕೊಂಡಿದ್ದ. ವೈಜ್ಞಾನಿಕ ಆಲೋಚನೆಯ ಸಣ್ಣ ಕಿಡಿಗಳನ್ನು...

ಈ ಸಂಕಲನ ಗಂಗಾವಳಿಯಲ್ಲಿ ಒಂದು ಈಜು ಹೊಡೆದಂತೆ..

ಚಿಕ್ಕವಳಿರುವಾಗ ಅಜ್ಜಿಯ ಮನೆಗೆ ಹೋಗುವುದೆಂದರೆ ನನಗೆ ತುಂಬಾ ಇಷ್ಟ. ಅದಕ್ಕೆ  ಕಾರಣ ಅಜ್ಜಿ ಮನೆಯಲ್ಲಿ ನನಗೆ ಬೇಕಾದಂತೆ ಹಾಯಾಗಿರಬಹುದು, ಎಲ್ಲಿ ಬೇಕೆಂದರಲ್ಲಿ ಓಡಾಡಬಹುದು, ಅಮ್ಮನಿಗಿಂತಲೂ ಹೆಚ್ಚು ಮುದ್ದು ಮಾಡುವ ಅತ್ತೆ ನಾನು ಹೇಳಿದಂತೆ ಕೇಳುತ್ತಾರೆ ಎಂಬುದಷ್ಟೇ ಆಗಿರಲಿಲ್ಲ. ಆ ಊರಿಗೆ ಹೋಗುವಾಗ...

ಒಂದು ಸಲ.. ಎರಡು ಸಲ.. ಮೂರು ಸಲ ನಿಧಾನವಾಗಿ ಓದಿ ‘ಫಕೀರ’ನನ್ನು ಎದೆಗಿಳಿಸಿಕೊಳ್ಳಿ.. 

“ತಂಗಿ, ಈ ಸಣ್ಣಹೊಸಬ ಹಾಗು ಬೊಮ್ಮಯ್ಯ ಅಂದರೆ ಹಕ್ಕ ಮತ್ತು ಬುಕ್ಕರ ಸಹೋದರರಾದ ಸೊಣ್ಣಪ್ಪ ಮತ್ತು ಬೊಮ್ಮಾ ದೇವ. ಈತ ಹಕ್ಕ ಬುಕ್ಕರ ಸಹೋದರ, ಬೊಮ್ಮಿದೇವಿಯ ಮಗ. ಆತ ನಮ್ಮ ಈ  ಪ್ರಾಂತ್ಯದ ಪಾಳೆಗಾರನಾಗಿದ್ದ. ಆತ ರಾತ್ರಿಯೆಲ್ಲ ಊರಲ್ಲಿ ಸಂಚರಿಸಿ ಊರಜನರನ್ನು ಕಾಪಾಡ್ತಿದ್ದ. ಹೀಗೆ ಹೇಳುವ...