Category: ಬಾ ಕವಿತಾ

ಆ ನಕ್ಷತ್ರಗಳು ಮಿಂಚದೇ ಮಾಯವಾದವು..

ಮಂಗಳಾ ಬಿ   ಇಷ್ಟವಿರುವೆ ಈಗಲೂ- ಮೊದಲಿನಂತೆ ಕವಿತೆಗಳನು ಬರೆಯದಿದ್ದರೂ, ಆಗಿನಂತೆ ಮಾತುಗಳ ಆಡದಿದ್ದರೂ, ಅಂದಿನಷ್ಟು ಹುಚ್ಚುಕನಸ ಹೇಳದಿದ್ದರೂ.. ಇಷ್ಟವಿರುವೆ ಈಗಲೂ- ಮೊದಲಿನಂತೆ ಕಣ್ಣನೋಟ ಚೆಲ್ಲದಿದ್ದರೂ, ಆಗಿನಂತೆ ತುಂಟನಗುವ ಬೀರದಿದ್ದರೂ, ಅಂದಿನಷ್ಟು ಕೇಳುವ ಕಿವಿಗಳಿಲ್ಲದಿದ್ದರೂ, ಇಷ್ಟವಿರುವೆ ಈಗಲೂ- ಜೊತೆಗಿರಬೇಕು ಎಂಬ ತುಡಿತ...

ನಾನು ಪಾದ ಊರಿದಲ್ಲಿ ಹಸಿರು ಹುಟ್ಟಲೇ ಬೇಕು..

ಸುನಂದಾ ಕಡಮೆ ಹೊಗೆ ಹೆಂಚಿನ ಹೊದಿಕೆಯಲ್ಲಿ ನನ್ನ ಬಾಲ್ಯದ ಮೆಲುಕು ಕಾಲುದಾರಿ ಕನಸಿನೊಳಗೆ ತಡೆಯಿಲ್ಲದ ಸಾಗು ಚಿಲಕವಿಲ್ಲದ ದ್ವಾರದಲ್ಲಿ ಅವ್ವ ಮಡಿಲ ಜೀಕು ಏರು ಪಯಣದ ಆಸರೆಯೊಳಗೆ ಹಿಡಿದು ಕಟ್ಟಿದ ಮಿನುಗು ನೊಂದ ಕಣ್ಣ ಬಿಂಬದಲ್ಲಿ ಬೇಡ ಈ ತ್ರಿಶಂಕು ಇಳಿವ...

ಅವ್ವ ಹೇಳಿದ್ದೇ ನವುಲಿನ ಕಥೆಯ ನವಿರಾಗಿ

ರಾಜೇಂದ್ರ ಪ್ರಸಾದ್ ಅವ್ವ ಹೇಳುತ್ತಲೇ ಇದ್ದಳು ಹೇಳಿದ್ದೇ ನವುಲಿನ ಕಥೆಯ ನವಿರಾಗಿ ವರುಷ ವರುಷವೂ ಹೊಸದಾಗಿ ಯುಗಾದಿ ಹಿಂದಿನ ಹುಣ್ಣಿಮೆಯ ದಿನ ಬಣ್ಣದ ಬೆರಗು ಹಿಡಿದವಳಂತೆ! ಅಂದೂ ಹಾಗೇ ಯುಗಾದಿ ಹಿಂದಿನ ಹುಣ್ಣಿಮೆಯ ದಿನ ನವುಲೊಂದು ಬಂದು ಬಿನ್ನಾಣ ತೋರುತ್ತಾ ಮನೆಯ...

ಮತ್ತೆ ಮತ್ತೆ ಹಗುರಾಗುತ್ತೇನೆ..

ಸಂದೀಪ್ ಈಶಾನ್ಯ ಮತ್ತೊಂದು ರಹದಾರಿ ಕಳಚುತ್ತ ಹೋದೆ ನಿಧಾನವಾಗಿ ಒಂದೊಂದು ಕಳಚಿಬಿದ್ದಾಗಲೂ ರೆಕ್ಕೆಮೂಡಿದ ಹಕ್ಕಿಯೊಂದರಂತೆ ಹಾರುತ್ತಾ ಹಗುರಾಗುತ್ತಾ ಹೋದೆ ಸಂಜೆ ಧೋ ಎಂದು ಸುರಿದ ಮಳೆಗೆ ಒದ್ದೆಯಾದ ಪಾರ್ಕಿನ ಬೆಂಚು ಬಿಸಿಲ ಬಯಸದೆ ಇರುಳ ಗಾಳಿಗೇ ಒಣಗಿಹೋಗುವಂತೆ ಒಳಗೇ ಒಣಗಿಹೋದೆ ಹದವಾದೆ...

ಹೊನ್ನಾರು ಎಲ್ಲೆಲ್ಲೂ..

ಶಿವಾನಂದ ತಗಡೂರು ಆಗಿನ್ನೂ ಕುಡಿಮೀಸೆ… ಹೆಸರುಬಲ ನಿನ್ನದೇ ಕಟ್ಟಬೇಕಂತ ಹೊನ್ನಾರು… ಅಜ್ಜನ ಮಾತಿಗೆ ಅಪ್ಪನದು ಒಗ್ಗರಣೆ, ಅವ್ವನದು ಸಾಥ್ ಬೆಳಿಗ್ಗೆಯೇ ಶುರುವಾಗಿತ್ತು ಅವ್ವನ ಹಬ್ಬದ ಸಡಗರ ಮಲಗಲು ಬಿಡಲಿಲ್ಲ ವರ್ಷದ ಹಬ್ಬದಲ್ಲಿ ನಿನ್ನದೇನು ಭಂಡ ನಿದ್ರೆ? ಹೋಗಬಾರದೇನು ಕೆರೆಗೆ… ಎತ್ತು ಹಿಡಿದು,...

ಅವಳೆಂದರೆ ಉಗಾದಿ

 ಎನ್ ರವಿಕುಮಾರ್ / ಶಿವಮೊಗ್ಗ ಕಂಕುಳಲ್ಲಿ ಕುಕ್ಕೆ ಇರಿಕಿಕೊಂಡು ತುಂಡು ಕಬ್ಬಿಣ. ಪ್ಲಾಸ್ಟಿಕ್ಕು, ಸೀಸದ ಚೂರುಗಳ ಅಯುತ್ತಾ ಅಲೆದಲೆದು ದಣಿಯದೆ ದುಡಿದ ನನ್ನವ್ವ ಬೇವ ನುಂಗಿ ಬೆಲ್ಲವ ಬಾಯ್ಗಿಟ್ಟು ಬದುಕಿಸಿದವಳು. ತನ್ನೊಳಗೆ ತಾನೆ ಉರಿಯುತ್ತಿದ್ದಳು ಒಲೆ ಮುಂದೆ ಒಲೆಯಂತೆ ಹಸಿ ಪುಳ್ಳೆಗಳ...

ಜೋಪಡಿಗೆ ಬೆಸುಗೆಗೊಂಡ ಚಂದಿರ..

ಗಿರಿಯಪ್ಪ ಆಸಂಗಿ  ತೂತುಗೊಂಡ ಜೋಪಡಿಯಲಿ ಚುಕ್ಕಿಗಳ ಹಿಂಡು ಕಂಡಾವು ನನ್ನೊಡತಿಯೊಳಗ ಬೆಳದಿಂಗಳ ಹಬ್ಬ ಆಗ್ಯಾವು ಎದೆ ಕಲರವದಾಗ ನನ್ನೂರ ಚಿತ್ರ ಕೆತ್ಯಾವು ಒಳ ಧಗೆ ಕರಗಿಸಿ ಜನರ ಕಣ್ಣಾಗ ಬೆಳದಿಂಗಳ ಹಬ್ಬ ಆಗ್ಯಾವು ಒಳ್ಳು ಬೀಸುಕಲ್ಲುಗಳ ಬಾಯೊಳಗೆ ಕರುಳು ತಣಿಸೋ ಬೀಜಗಳು...

ಸುಕ್ಕು ಮೂಡದ ಹಾಸಿಗೆ ನಕ್ಕಿತು..

ಶಿಲ್ಪಶ್ರೀ ಅದೆಲ್ಲಿಂದಲೋ ಗಾಳಿ ಹೊತ್ತುತಂದ ಸುಗಂಧ ಅವಳನ್ನೊಯ್ದು ಬಿಟ್ಟದ್ದು ಅವನ ನೆನಪಿನಂಗಳಕ್ಕೆ ನಾಮುಂದು ತಾಮುಂದು ಎಂದು ಜಿದ್ದಿಗೆ ಬಿದ್ದಂತೆ ಆಡಿದ ಆಟಗಳೆಲ್ಲ ಸುರುಳಿಯಾಗಿ ಸುಳಿದು ನೀ ಬೇಕು ಎಂದವನು ಪಿಸುಗುಟ್ಟಿದಂತಾಗಿ ಸಣ್ಣಗೆ ಕಂಪಿಸಿದಳು.. ಸುಕ್ಕು ಮೂಡದ ಹಾಸಿಗೆ ನಕ್ಕಿತು ಬಿಳಿ ಮೋಡಗಳಲ್ಲೇ...

ಹೆಜ್ಜೆ ಮೂಡದ ಹಾದಿಯ ಭಾವವೊಂದಿದೆ

ಎನ್ ಪಾರ್ವತಿ ನಿನ್ನನ್ನಾರಾಧಿಸುವ ಮನಸ್ಥಿತಿಯೊಂದು ರೂಪತಳೆಯುವುದರ ಹಿಂದೆ ಹಿಂದಕ್ಕೂ-ಮುಂದಕ್ಕೂ ತುಯ್ದಾಡುವ ಮನಸ್ಸಿದೆ, ದೇಹವಿದೆ ನೀನೇ ಬೇಕೆಂಬ ನಿರ್ಧಾರವ ಮಾಡಿಯೇ ಹೊರಡುವ ಕೈಗಳ ಸ್ಥಿರತೆಯ ಹಿಂದೆ ಭೂತದ ಛಾಯೆಯಿದೆ ನೀನೇ ಅಂತಿಮವೆಂಬ ಕಲ್ಪನೆಯೊಂದು ಪ್ರತಿಕ್ಷಣವನ್ನೂ ಹೊಚ್ಚಹೊಸದಾಗಿಸಲು ಸೋತು ಹೋದಾಗ, ಅದರ ಹಿಂದೆ ಹೇರಿಕೆಗೆ...

ಕಪ್ಪೆಯನ್ನು ಮಾತಾಡಿಸಿದ ಶೂರರಿದ್ದಿರಾ?

ಸುರೇಶ ಕಂಜರ್ಪಣೆ ಇಂದು ಕಂಡದ್ದು ಕಪ್ಪೆಯನ್ನು ಮಾತಾಡಿಸಿದ ಶೂರರಿದ್ದಿರಾ? ಮುತ್ತಿಕ್ಕಿದ ಹೆಣ್ಣು ಮಕ್ಕಳಿದ್ದೀರಾ? ಮದುವೆ ಮಾಡಿಸುವುದಿದೆ, ಕಪ್ಪೆಗೆ ಆದರೂ ಅದಕ್ಕೇನು ಬೇಕು ಕೇಳಿದ್ದೇವಾ? ನೀರು, ಜೌಗು,ಕಾನು, ಗದ್ದೆ.. ಎಂಥ ರಮಣೀಯ..! ಸೆಲ್ಫಿಗೊಂದು ಹಿನ್ನೆಲೆ ಕಪ್ಪೆಗೋ ಅದುವೇ ಜೀವತಾಣ ಇದೆಲ್ಲಾ ಕಪ್ಪೆಯೇ ಹೇಳಿದ್ದು...