Category: ಬಾ ಕವಿತಾ

ಒದ್ದೆ ರಾತ್ರಿ..

ಶ್ರೀ ತಲಗೇರಿ ಕಿರೀಟ ಮುರಿದ ಅಂಟೆನಾದ ಜೊಲ್ಲು,ಪೆಟ್ಟಿಗೆಯ ಗ್ರಂಥಿಗಳಲ್ಲಿ ಮಾಡುತ್ತವೆ ಅಸಹಾಯಕ ಜಾಗರಣೆ.. ತಂತುಗಳ ರಕ್ತನಾಳದಲಿ ಒದ್ದೆ ರಾತ್ರಿಗಳು ನಿಲ್ದಾಣಗಳಾಗಿ ಜುಟ್ಟು ಬಿಟ್ಟು ಕೂತಿವೆ.. ಜಪಮಾಲೆಗಿಂದು ನಾಗಾಲೋಟ ಸೊಳ್ಳೆಗಳ ಗಡೀಪಾರಿನಲ್ಲಿ ಉಳಿದದ್ದು ಊದುಬತ್ತಿಯ ಚಿತಾಭಸ್ಮ ಮತ್ತು ಚರ್ಮ ಹೊದೆಸದ ಎಲುಬು.. ಚೊಂಬು...

ಅವನ ಮಧುಭರಿತ ನೆನಪೇ..

ನಾಗರೇಖಾ ಗಾಂವಕರ   ಅವನ ಮಧುಭರಿತ ನೆನಪೇ ಕಂಪುಗೂಡಿ ಉನ್ಮತ್ತ ಚಿತ್ತೆ, ಮೂಕವೇದನೆ ಅನತಿಯಲೇ ಇರುವ ಅನೂಹ್ಯ ನೇಕಾರನ ಬಗೆಯ ಗೂಡನು ಅರಿಯಲಾಗದೇ ಉಸಿರುಕಟ್ಟಿ ಉಮ್ಮಳಿಕೆ ತಡೆಯಲಾಗದೇ ಬಿಚ್ಚಿ ತೂರಿದ ಹೆರಳು ಸಿಕ್ಕು ಸಿಕ್ಕುಗಳ ಗೋಜಲಿಗೆ ಬೆರಳಿಟ್ಟು ಒಂದೊಂದಾಗಿ ಬಿಡಿಸಿ ಒಪ್ಪಗೊಳಿಸಿದಂತೆ...

ಗುರ್ತಿಸಲಾಗಲಿಲ್ಲ ಪಕ್ಕದಲ್ಲಿದ್ದರೂ..

ಅಕ್ಷತಾ ಕೃಷ್ಣಮೂರ್ತಿ ಮಳೆ ನಗುವ ನಸುಕು ಬಹಳಷ್ಟು ಸಿಕ್ಕಿವೆ ನನಗೂ.. ನಿನಗೂ.. ಒಮ್ಮೆಯೂ ಮಾತಾಡಲಿಲ್ಲ ಸೃಷ್ಟಿಸಿಕೊಂಡಿಲ್ಲ ಬಿಡು ಅವಕಾಶ ಸಿಕ್ಕಾಗಲೇ ಬಳಸು ಜಾರಗೊಡಬೇಡ ಆಗಾಗ ಅಜ್ಜಿ ಹೇಳುತ್ತಿದ್ದದ್ದು ಕಿವಿ ಮೇಲಿದೆ ಈಗಲೂ ಜಾರಿಲ್ಲ ಬಿಡು. ಮಳೆಗೆ ನಲುಗಿ ಬಿದ್ದ ಸಂಪಿಗೆಗೆ ಅಪ್ಪಿ...

ಸಿಗದೆ ಕಾಡುವ ಸಿಕ್ಕು..

ಆಶಾ ಜಗದೀಶ್   ನಿನ್ನ ಹೆರಳ ಕೊನರಲ್ಲಿ ಕಮಲ ಅರಳಿದಂತೆ….. ಬೆರಳುಗಳ ಲಾಲಿತ್ಯ…. ಪತ್ರದ ಮೇಲೆ ತೊಳೆದ ಮುತ್ತಿನಂಥ ಜಮೆಗೊಂಡ ಸಂಭ್ರಮದ ಹನಿಗಳು ಸುಳ್ಳು ಸತ್ಯಗಳ ನಾಜೂಕಿನ ವ್ಯತ್ಯಾಸವನ್ನು ಈ ಹೊತ್ತಿನ ಬಿಸುಪಿನೊಳಗೆ ಕರಗದಂತೆ ಮುತ್ತು ಉದುರದಂತೆ ಜೋಪಾನ ಮಾಡುತ್ತಿವೆ…. ಜೋಪಾನ…....

ಎಲ್ಲ ಮುಗಿದ ಮೇಲೆ..

ಒಂದಾದರೂ ಮಸೆದ ಕೊಡಲಿ ನನಗಾಗಿ ಇರಿಸಿದವನೇ.. ರೇಣುಕಾ ರಮಾನಂದ/ ಅಂಕೋಲಾ ಎಲ್ಲ ಮುಗಿದ ಮೇಲೆ ಜೊತೆಗೂಡಿ ಪ್ರಲಾಪಿಸಲು ನಾನು ಬದುಕಿರುವುದಿಲ್ಲ ಆ ನಂತರ ನಿಧಾನಕ್ಕೆ ಒಬ್ಬೊಂಟಿಯಾಗಿ ಗೋಳಿಡುವೆಯಂತೆ ಕಡಿದ ಗೆಲ್ಲುಗಳಿಗೊರಗಿ ಬೆವರೊರೆಸಿಕೊಳ್ಳುತ್ತ ಬೇಕಿದ್ದರೆ ಊಳಿಡುತ್ತ ಸುಧಾರಿಸಿಕೊಳ್ಳುವಿಯಂತೆ.. ಈಗ ಇದೋ ಈ ಎರಡು ರಸಭರಿತ...

ಮತ್ತೆ ಮತ್ತೆ ಬುದ್ದನ ಹಾದಿ..

ಗೀತಾ ಹೆಗಡೆ ಕಲ್ಮನೆ  ಮನಸಿಗೆ ಕಾಲಲ್ಲಿ ಚಕ್ರವಿದೆಯೆ?ಅಲ್ಲಾ ನೀನ್ಯಾಕೆ ಹೀಗೆ ಸದಾ ಅಲೆಯುತ್ತೀಯೆ? ಕೇಳುತ್ತೇನೆ ಆಗಾಗ ಪ್ರೀತಿಯಿಂದ ಓಲೈಸುತ್ತ ನೀನೇ ಸರ್ವಸ್ವ ಬಾ ಒಮ್ಮೆ. ಊಹೂಂ ಮಣಿಯಲೊಲ್ಲದು ಎಷ್ಟು ಗೋಗರೆದರೂ ಬಹಳ ಹಠಮಾರಿ ಘಾಟಿ ಘಠಾಣಿ ಹಿಂದೆ ಹಿಂದೆ ನಾ ಓಡುತ್ತಲೇ...

ಶಿವಶಿವೆಗೆ ವರವಾಗಿ..

                ಎಸ್ ಪಿ ಜಯಲಕ್ಷ್ಮಿ  ನೇಸರನ ತೆಕ್ಕೆಯಲಿ ಎಳೆಗಿರಣ ಪ್ರೀತಿಯಲಿ, ನಕ್ಕೀತು ಪ್ರೀತಿ ಕಮಲ.. ಚಂದ್ರನಾ ಚಂದ್ರಿಕೆಯಲಿ, ಜೊನ್ನ  ಅಮಲಿನಲಿ ಅರಳೀತು ನೀಲ ಕಮಲ.. ನಿಶೆಯ ಹಾಸಿನಲಿ, ಚಂದ್ರಮನ ತೆಕ್ಕೆಯಲಿ ಹೊಳೆಹೊಳೆದೀತು ಚಿಕ್ಕೆ ತಾರೆ. ಸಂಜೆ ಸೂರ್ಯಾಸ್ತದಲಿ ಬೆಡಗು ಬಣ್ಣಗಳಲ್ಲಿ ಕೆಂಪಾದೀತು...

ಹುಡುಗಿ ನೀನು ಅದಾವ ಸಂತನ ಸೃಷ್ಠಿ 

ಸಂದೀಪ್ ಈಶಾನ್ಯ    ನಿನ್ನಾಳದ ಸಮುದ್ರಕ್ಕೆ ನಾನು ಆಗಾಗ ಪ್ರವಾಸಿಗನಾಗಿ ಬಂದಷ್ಟೇ ಅಭ್ಯಾಸ ನಾನು ಎಂದಿಗೂ ಅಲ್ಲೇನು ನೆಲಸಬಯಸುವನಲ್ಲ ದಡಕೆ ನಿನ್ನ ಒಡಲಿಂದ ಅಬ್ಬರಿಸಿ ಅಪ್ಪಳಿಸುವ ಅಲೆಗಳ ಭೋರ್ಗರೆತಕ್ಕೆ ಎಲ್ಲರೂ ಕೈ ತಟ್ಟಿ ಹುಬ್ಬೇರಿಸಿ ನಗೆಯಾಡಿ ಕುಣಿದಾಡಿದರೆ ನಾನು ಆಗಷ್ಟೇ ಉರುಳಿಬಿದ್ದ...

ಹೇಳಿಕೆಗಳು

      ಶಿವಕುಮಾರ್ ಮಾವಲಿ  ಹೇಳಿಕೆಗಳು ಬಂದಪ್ಪಳಿಸುತ್ತವೆ ದಶದಿಕ್ಕುಗಳಿಂದ ಪ್ರತಿನಿತ್ಯ. ಬಲ್ಲವನೇ ಬಲ್ಲ ಆ ಹೇಳಿಕೆಗಳ, ವಾರಸುದಾರರ ನಿತ್ಯ- ಸತ್ಯ. ಹುಟ್ಟು ಸಾವಿನ ಬಗ್ಗೆ, ಪ್ರೀತಿ, ಪ್ರೇಮ, ಪ್ರಣಯದ ಬಗ್ಗೆ, ವಿಜ್ಞಾನ -ತಂತ್ರಜ್ಙಾನದ ಬಗ್ಗೆ, ರಾಜ್ಯ ದೇಶಗಳ ರಾಜಕೀಯದ ಬಗ್ಗೆ...