Category: ಸೈಡ್ ವಿಂಗ್

ಈ ಭಾನುವಾರ ‘ರಕ್ತವರ್ಣೆ’

  ರಘುನಂದನ್ ಸದಾ ನಮ್ಮ ನಡುವೆಯೇ ಇರುವ ಸರಳ ಸಜ್ಜನಿಕೆಯ ಹುಡುಗ. ಎಲ್ಲರೊಂದಿಗೆ ಸ್ನೇಹದಿಂದಿರುವ, ಸದಾ ಯಾವುದೋ ಅನ್ವೇಷಣೆಯಲ್ಲಿರುವ ಮುಖಭಾವದಲ್ಲಿ ಮುಗ್ಧತೆ ಹಾಗೂ ವಿವೇಕಗಳೆರಡೂ ಸಂದರ್ಭಾನುಸಾರವಾಗಿ ಅವರಲ್ಲಿ  ಹೊರ ಹೊಮ್ಮುತ್ತಿರುತ್ತವೆ. ಗಂಡಿನೊಳಗಣ ಹೆಣ್ಣು, ಹೆಣ್ಣಿನೊಳಗಣ ಗಂಡು ಗುಣಗಳು ಸಂದರ್ಭಾನುಸಾರಿಯಾಗಿ ಹೊರ ಹೊಮ್ಮುತ್ತವಷ್ಟೆ....

ನಾಟಕ ಓದು ಎಂದರೇನು?

      ನಾಟಕ ಓದು ಹಾಗೂ ರಂಗ ನಟರು: ಒಂದಿಷ್ಟು ಚರ್ಚೆಗಳು -ಮೇಟಿ ಮಲ್ಲಿಕಾರ್ಜುನ       ನಾಟಕ ಮತ್ತು ರಂಗಭೂಮಿಯ ಬಗೆಗಿನ ನನ್ನ ಗ್ರಹಿಕೆ ರೂಪುಗೊಂಡದ್ದು ಕೇವಲ ಆಧುನಿಕ ಹಾಗೂ ಶಾಸ್ತ್ರೀಯ ಓದಿನಿಂದಲ್ಲ. ಬದಲಾಗಿ ಸಮೂಹಗಳು ತಮ್ಮಷ್ಟಕ್ಕೆ...

ಇಸ್ತ್ರಿ ಗಣೇಶ.. ಮಿಕ್ಸರ್ ಗಣೇಶ..

‘ತಗೋಳ್ರಪ್ಪಾ ಇನ್ನೊಂದ್ ಗಣೇಶ..’ ಅಂತ ನಮಗೆ ಈ ಗಣೇಶನನ್ನ ಊರೂರು ಹುಡುಕಿ ತಂದುಕೊಟ್ಟವರು ‘ಅವಧಿ’ ಓದುಗರಾದ ಗೀತಾ ಹೆಗ್ಡೆ ಕಲ್ಮನೆ 

‘ಚಂದ್ರ’ನಿಗೆ ಸಿಕ್ಕ ಗಣೇಶ

ಚಂದ್ರಕೀರ್ತಿ ಎನ್ನುವ ಹುಡುಗನ ಪರಿಚಯವಿಲ್ಲದಿದ್ದರೆ ಖಂಡಿತಾ ಪರಿಚಯ ಮಾಡಿಕೊಳ್ಳಲೇಬೇಕು. ಚಂಪಾ ಭಾಷೆಯಲ್ಲಿ ಹೇಳಬೇಕೆಂದರೆ ಹೇಗೆ ಪ್ರೇಕ್ಷಣೀಯ ಸ್ಥಳಗಳಿವೆಯೋ ಹಾಗೆಯೇ ಪ್ರೇಕ್ಷಣೀಯ ವ್ಯಕ್ತಿತ್ವಗಳಿರುತ್ತಾರೆ. ಅಂತಹ ಒಂದು ವ್ಯಕ್ತಿತ್ವ ಚಂದ್ರಕೀರ್ತಿಯದ್ದು. ಕಲಿತದ್ದು ಪತ್ರಿಕೋದ್ಯಮವಾದರೂ ಹೃದಯದೊಳಗೆ ಎಂಟ್ರಿ ಕೊಟ್ಟದ್ದು ರಂಗಭೂಮಿಗೆ. ಮಕ್ಕಳ ರಂಗಭೂಮಿಯಿಂದ ಎಲ್ಲಾ ರಂಗಕ್ಕೂ...

ಇದು ಒಂದು ಕಟ್ಟಡದ ಮೇಲೆ ಮಾಡಿದ ದಬ್ಬಾಳಿಕೆಯಲ್ಲ..

        ಎನ್ ಎಸ್ ಡಿ ಮೇಲಿನ ದಬ್ಬಾಳಿಕೆ ಕಲೆ, ಸಾಹಿತ್ಯ, ಸಂಸ್ಕೃತಿಗೆ ಮಾಡಿದ ಅವಮಾನ  ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ       ಬೆಂಗಳೂರಿನ ವಸಂತ ನಗರದಲ್ಲಿರುವ `ಗುರುನಾನಕ್ ಭವನ್’ ರಂಗಮಂದಿರವನ್ನು ರಾಷ್ಟ್ರೀಯ ನಾಟಕ ಶಾಲೆ ಕಳೆದ...

‘ಡ್ರಾಮಾ ಜೂನಿಯರ್ಸ್’ ನೋಡುತ್ತಾ..

      ಶ್ರೀಪಾದ ಹೆಗಡೆ      ಈಗ ಒಂದೆರಡು ವಾರದಿಂದ ‘ಡ್ರಾಮಾ ಜೂನಿಯರ್ಸ್’ ಆಯ್ಕೆ ಕಾರ್ಯಕ್ರಮ ನೋಡುತ್ತಿದ್ದಾಗ ನನ್ನ ಗಮನಕ್ಕೆ ಬಂದ ಒಂದು ವಿಷಯ ಅಂದರೆ ದಕ್ಷಿಣೋತ್ತರ ಜಿಲ್ಲೆಗಳಿಂದ ಬಂದ ಸ್ಪರ್ಧಿಗಳಲ್ಲಿ ಅನೇಕರ ಆಯ್ಕೆ ‘ಯಕ್ಷಗಾನ’ ದ ಪಾತ್ರಾಭಿನಯ....

ಮತ್ತೆ ‘ತಾಯಿ’

ಮ್ಯಾಕ್ಸಿಮ್ ಗಾರ್ಕಿಯ ಮನ ಕಲಕುವ ಕಾದಂಬರಿ ‘ತಾಯಿ’. ಬರ್ಟೊಲ್ಟ್ ಬ್ರೆಕ್ಟ್ ಇದಕ್ಕೆ ರಂಗರೂಪ  ನೀಡಿದ. ‘ತಾಯಿ’  ಹೋರಾಟದ ಹುಮ್ಮಸ್ಸನ್ನು ಜೀವಂತವಾಗಿಡುವ, ಸರ್ವಾಧಿಕಾರದ ಮಗ್ಗುಲು ಮುರಿಯುವ  ನಾಟಕ. ಇದನ್ನು ಪ್ರಸನ್ನ ‘ಸಮುದಾಯ’ಕ್ಕಾಗಿ ಹಿಂದೆ ನಿರ್ದೇಶಿಸಿದ್ದರು. ಬಿ ಜಯಶ್ರೀ ‘ತಾಯಿ’ಯಾಗಿ ಎಲ್ಲರ ಮನಗೆದ್ದಿದ್ದು ಈಗ ಇತಿಹಾಸ. ಈಗ ಮೈಸೂರು...

ಇಲ್ಲಿದ್ದಾರೆ ‘ಪುಟ್ಟಮ್ಮತ್ತೆ’ ‘ಅಮ್ಮಚ್ಚಿ’ ಮತ್ತು ‘ಅಕ್ಕು’

    ಮನ ತಾಕಿದ ‘ಅಕ್ಕು’  ಶುಭಶ್ರೀ ಭಟ್ಟ / ಬೆಂಗಳೂರು       ನಾನು ವೈದೇಹಿಯವರ ಅಭಿಮಾನಿ ಓದುಗಳು, ಅವರ ಕಥೆಗಳಲ್ಲಿ ಬರುವ ಪ್ರತೀ ಪಾತ್ರ ಮನದಲ್ಲಿ ಅಚ್ಚೊತ್ತಿಬಿಡುತ್ತದೆ. ವೈದೇಹಿಯವರು ರಚಿಸಿದ ಕಥೆಗಳಲ್ಲಿ ಬರುವ ಮೂರು ಅದ್ಭುತವಾದ ಪಾತ್ರಗಳಾದ...

ಬಣ್ಣ ಅಳಿಸಿ, ವೇಷ ಕಳಚಲು ಹೊರಡುತ್ತೇನೆ ನಾನು!

      ಪಾತ್ರದ್ದೋ, ಪಾತ್ರಧಾರಿಯದ್ದೋ?? ಕನ್ನಡಿಯದ್ದು ಕುಹಕದ ನಗು.. ಲಹರಿ ತಂತ್ರಿ            ಬಣ್ಣ ಅಳಿಸಿ, ವೇಷ ಕಳಚಲು ಹೊರಡುತ್ತೇನೆ ನಾನು! ‘ಪರದೆ ಎಳೆಯುವ ಮುನ್ನ ಮುಖ ತೋರಿಸಬೇಕಲ್ಲ’ ಹೊರಗಿನಿಂದ ಧ್ವನಿಯೊಂದು ಕೇಳಿಬರುತ್ತದೆ.. ಪಾತ್ರಧಾರಿಯಾಗಿಯೇ...

ನಗೆಕೂಟದಲ್ಲಿ ‘ನೀರು’

‘ಸಲಿಲ’ದಂತಹ ಉತ್ತಮ ನಾಟಕವನ್ನು ಕೊಟ್ಟ ಎಂ ಶೈಲೇಶ್ ಕುಮಾರ್ ಈಗ ‘ನೀರು- ಹುಷಾರು’ ನಾಟಕದೊಂದಿಗೆ ನಮ್ಮ ಮುಂದೆ ನಿಂತಿದ್ದಾರೆ.   ಸಮಕಾಲೀನ ಆಗುಹೋಗುಗಳ ಬಗ್ಗೆ ಶೈಲೇಶ್ ಒಂದು ಚಿಕಿತ್ಸಕ ದೃಷ್ಟಿಕೋನ ಹೊಂದಿದ್ದಾರೆ. ನೆಲ ಜಲ, ಪ್ರಾಣಿ ಪಕ್ಷಿ, ವನ ಸಂಕುಲ ಎಲ್ಲಾ...

ಕರುಣೆಯಿಂದ ಕ್ರೌರ್ಯವನ್ನು ಕರಗಿಸಿದ ‘ಕೆಂಪು ಕಣಗಿಲೆ’

ಶಶಿಕಾಂತ ಯಡಹಳ್ಳಿ ಭಾರತ ದೇಶವೇ ಇಂದು ಬಂಡವಾಳಿಗರ ಅಧಿಪತ್ಯದಲ್ಲಿ ನಲಗುತ್ತಿದೆ. ವ್ಯಾಪಾರ ವಹಿವಾಟು ಸರಕು ಸಂಸ್ಕತಿಯೇ ವಿಜ್ರಂಭಿಸುತ್ತಿದೆ. ಸಂಪತ್ತಿನ ಕ್ರೂಢೀಕರಣ ಹಾಗೂ ಸ್ವಾರ್ಥ ಹಿತಾಸಕ್ತಿಗಾಗಿ ಬಹುಜನರ ಶ್ರಮ ಫಲವನ್ನು ಬಳಸಿಕೊಂಡು ಬೆಳೆಯುವ ಆಳುವ ವರ್ಗಗಳು ಮಾನವೀಯ ಮೌಲ್ಯಗಳನ್ನೇ ಮರೆತಿವೆ. ಭೂಮಿಯನ್ನು, ಅಗೆದು...

ಮತಾಂಧತೆಯ ಲೋಕ ಬಿಚ್ಚಿಡುವ ‘ಮಿಸ್ಟೇಕ್’

ಶಶಿಕಾಂತ ಯಡಹಳ್ಳಿ ಭಾರತದ ವಿಭಜನೆಯ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಹಿಂಸಾಚಾರಕ್ಕೆ ಲಕ್ಷಾಂತರ ಜನ ಬಲಿಯಾದರು. ಒಂದು ತಪ್ಪು ಇನ್ನೊಂದು ತಪ್ಪಿಗೆ ದಾರಿಯಾಗುತ್ತಾ, ಒಂದು ಕೋಮಿನ ಹಿಂಸೆ ಇನ್ನೊಂದು ಕೋಮಿನವರನ್ನು ಪ್ರಚೋದಿಸುತ್ತಾ ರಕ್ತಪಾತವೇ ನಡೆದುಹೋಯಿತು. ಕೋಮು ದಳ್ಳುರಿಗೆ ಅಗಣಿತ ಅಮಾಯಕರು ಬಲಿಯಾಗಿಹೋದರು. ಮನುಷ್ಯನೊಳಗಿನ...

ಮೂರೇ ದಿನಗಳೆ?

ಸಂಧ್ಯಾರಾಣಿ  ಮೂರು ದಿನಗಳ ರಂಗ ಉತ್ಸವ. ಮೂರೇ ದಿನಗಳೆ? ಅದಕ್ಕೂ ಮುನ್ನಿನ ಸಿದ್ಧತೆ, ಉತ್ಸವ ನಡೆಯುತ್ತಿದ್ದಾಗಿನ ಸಂಭ್ರಮ, ನಾಟಕದ ಮೊದಲು ಸ್ನೇಹಿತರೊಡನೆ ಹರಟೆ ಮಾತು, ನಾಟಕದ ನಂತರ ಮತ್ತೆಂದು ಸಿಗುವೆವೋ ಎನ್ನುವಂತೆ ಕೈ ಹಿಡಿದು ಮತ್ತಷ್ಟು ಮಾತು. ಅವುಗಳ ನಡುವೆ ರಂಗದ...

ರಂಗ ಉತ್ಸವದ ಬಗ್ಗೆ ವಸುಧೇಂದ್ರ ಹೇಳಿದ್ದು..

ಎರಡು ದಿನ ನಿರಂತರವಾಗಿ ಅವಧಿಯ ಸಹಭಾಗಿತ್ವದಲ್ಲಿ ಪ್ರದರ್ಶನಗೊಂಡ, ಶ್ರೀಪಾದ ಭಟ್ ಅವರ ನಿರ್ದೇಶನದ ನಾಟಕಗಳನ್ನು ನೋಡಿದೆ. ಮನಸ್ಸು, ಕಣ್ಣು, ಹೃದಯ, ಕಿವಿ – ಎಲ್ಲವೂ ಖುಷಿಯಿಂದ ಸಂತೃಪ್ತವಾಗಿ ಹೋಗಿವೆ. ನೂರು ವರ್ಷಗಳ ಹಿಂದೆಯೆ ಗುರುದೇವ ರವೀಂದ್ರನಾಥರು ಎಷ್ಟೊಂದು ಸೂಕ್ಷ್ಮವಾಗಿ ನಮ್ಮ ಕಾಲದ...