New Posts

New Posts
ಬಾ ಕವಿತಾ

ನೆಪ ಮಾತ್ರಕ್ಕೆ ಅವನ ನೆನಪು..

ಅರ್ಚನಾ.ಎಚ್ ಈ ರಾತ್ರಿಗಳೇಕೆ ಹೀಗೆ? ಎದೆಯ ದುಮ್ಮಾನಗಳನ್ನೆಲ್ಲಾ ಧುತ್ತನೆ ಬಡಿದೆಬ್ಬಿಸಿ ತಾನೂ ನಿದ್ರಿಸದೆ ನನ್ನನೂ ಬಿಡದೆ ವಿಕ್ರಮನ ಬೇತಾಳದಂತೆ ಬೆಂಬಿಡದೆ ಕಾಡುವುದು..!? ನೆಪ ಮಾತ್ರಕ್ಕೆ ಅವನ ನೆನಪುಗಳು ಬಂದು ಹೋಗುವುದಿದ್ದರೆ ಎಷ್ಟು ಚೆಂದಿತ್ತು!? ನಿದಿರೆಗೆಡಿಸಿ ಕರುಳ ಹಿಂಡಿ; ಎದೆ ಬಗೆವಷ್ಟು, ಪಕ್ಕೆಲುಬುಗಳ ಮುರಿದಷ್ಟು ನೋವಿಡುವುದ್ಯಾವ ನ್ಯಾಯ? ಇರುಳಗರ್ಭದಲಿ ಸುರಿದ ಕಣ್ಣೀರು ಮರುಭೂಮಿಯ ಮರೀಚಿಕೆಯಷ್ಟೇ..! ಆಂತರ್ಯದ ಆರ್ತನಾದ ಬೀಗಜಡಿದ ದ್ವಾರಗಳಂತೆ ಆತನಿಗೆಂದು ನಿರ್ಬಂಧ..! ಅತಿಕ್ರಮಿಸುವ ಹುನ್ನಾರ ನಿರಂತರ.. ಹರಡಿದ ಹೆರಳು ಒದ್ದೆಯಾದದ್ದು ತಾಪಮಾನದಿಂದಲ್ಲ…! ತೇವದ ತಲೆದಿಂಬು ಮಗ್ಗಲು ಬದಲಿಸುವಾಗ […]

Read More
New Posts
ಬಾ ಕವಿತಾ

ಬ್ಲಾಕ್ ಕಾಫಿ ಕುಡಿದು..

ದಾದಾಪೀರ್ ಜೈಮನ್  ಪೇಟೆಯ ಚಾಯಿ ಪಾಯಿಂಟುಗಳಲ್ಲಿ ಬ್ಲಾಕ್ ಟೀ ಎಂದು  ಜನರು ಗತ್ತಿನಲ್ಲಿ ಕುಡಿಯುವ ಈ ಹೊತ್ತಿನಲ್ಲಿ ಅಜ್ಜನಿದ್ದಿದ್ದರೆ.. ಹಾಲಿಲ್ಲದ ಡಿಕಾಕ್ಷನ್ ಕುಡಿಯುತ್ತಿದ್ದ ಅವನು ತನ್ನ ಬಡತನಕ್ಕೆ ಬಾಗುತ್ತಿರಲಿಲ್ಲ… ದುಡ್ಡಿದ್ದವರು ದುಬಾರಿ ಬೆಲೆ ತೆತ್ತು ಅಲ್ಲಲ್ಲಿ ಹರಿದ ರಿಪ್ಪ್ಡ್  ಜೀನ್ಸ್ ತೊಟ್ಟು ತಿರುಗುವ ಈ ಕಾಲದಲ್ಲಿ ನಾನು ಹುಟ್ಟಿದ್ದರೆ.. ಪ್ರಮಾಣ ಮಾಡಿ ಹೇಳುತ್ತೇನೆ ನನಗವರ ಮೇಲೆ ಅಸೂಯೆ ಹುಟ್ಟುತ್ತಿರಲಿಲ್ಲ ಬಡತನದ ಮೇಲೆ ಸಿಟ್ಟಾಗುತ್ತಿರಲಿಲ್ಲ ಬಡತನ ಭಸ್ಮವಾಗಬೇಕಾದರೆ ಓದು ಕೈ ಹಿಡಿಯಬೇಕು ಬೆವರಂಟಿದ ನೋಟು ಜೇಬು ಸೇರಬೇಕು ಹುರಿದುಂಬಿಸುತ್ತಿದ್ದ […]

Read More
New Posts
ಫ್ರೆಂಡ್ಸ್ ಕಾಲೊನಿ

ಎಂ.ಜಿ.ಕೃಷ್ಣಮೂರ್ತಿ ಹೇಳ್ತಾರೆ: ದೀವಟಿಗೆಯಲ್ಲಿ ನಮ್ಮಿಂದಲೇ ಬದಲಾವಣೆ ಅನ್ನೋ ಹುಚ್ಚು ನಿರೀಕ್ಷೆಯಿಲ್ಲ

-ಎಂ.ಜಿ.ಕೃಷ್ಣಮೂರ್ತಿ   ಯುವಜನರೆಂದರೆ ತಟ್ಟನೆ ಕಣ್ಣ ಮುಂದೆ ಬರುವುದು ಮೊಬೈಲ್, ಸಿನಿಮಾ, ಪಾರ್ಕ್, ಕಾಲೇಜು, ಕ್ಯಾಂಟೀನ್, ಸಿಲಬಸ್, ದೊಡ್ಡ-ದೊಡ್ಡ ಪುಸ್ತಕ ಇತ್ಯಾದಿ. ಇವುಗಳ ಮಧ್ಯೆ ಓದು ಮುಗಿಸಿ ತಮ್ಮ ನವ ಬದುಕನ್ನು ಭದ್ರಗೊಳಿಸಿಕೊಳ್ಳುವ ಬಯಕೆ. ವೃತ್ತಿಗೆ ಬೇಕಾದ ಓದಿನ ಜಾಡು ಹಿಡಿದು ಪ್ರವೃತ್ತಿಗಳನ್ನು ಮರೆತವರೇ ಹೆಚ್ಚು. ಇದರೊಂದಿಗೆ ವೈಯಕ್ತಿಕ ಕನಸುಗಳನ್ನು ಸಮಾಜದೊಟ್ಟಿಗೆ ಸಮ್ಮಿಲನಗೊಳಿಸಿ, ಅದರೆಡೆಗೆ ತುಡಿಯುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಅಂಥವರ ಗುಂಪುಗಳಲ್ಲಿ ದೀವಟಿಗೆಯೂ ಒಂದು. ದೀವಟಿಗೆ ಒಂದು ಚಿಕ್ಕ ಯುವಜನರ ಗುಂಪು. ನಮ್ಮ ಕಾಲದ ಸಾಮಾಜಿಕ […]

Read More
New Posts
ಜುಗಾರಿ ಕ್ರಾಸ್

ರಂಗಾಯಣದಲ್ಲಿ ರಾಜಕೀಯವೇ?

ವಸಂತ ಬನ್ನಾಡಿ ಕರ್ನಾಟಕ ಸರಕಾರ ಪ್ರಾಧಿಕಾರ, ಅಕಾಡೆಮಿ ಹಾಗೂ ರಂಗಾಯಣದ ನಿರ್ದೇಶಕರನ್ನು ವಜಾ ಮಾಡಿರುವ ಹಿನ್ನೆಲೆಯಲ್ಲಿ ಅಧಿಕಾರ ಹಿಡಿಯುತ್ತಲೇ ಬಿಜೆಪಿ ಸರಕಾರ ಎಲ್ಲ ಪ್ರಾಧಿಕಾರ, ಅಕಾಡೆಮಿಯ ನಿರ್ದೇಶಕರನ್ನು ವಜಾ ಮಾಡಿದೆ. ಜೊತೆಗೆ ರಂಗಾಯಣದ ನಿರ್ದೇಶಕರನ್ನೂ ಎಲ್ಲ ಬರಹಗಾರರು ಹಾಗೂ ರಂಗಕಲಾವಿದರು ತೀವ್ರವಾಗಿ ಪ್ರತಿಭಟಿಸಬೇಕಾದ ವಿಚಾರ ಇದು. ಈ ಬೆಳವಣಿಗೆ ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳವಲ್ಲ. ಕಾಂಗ್ರೆಸ್ ಸರಕಾರ ಬಂದಾಗ ಹಿಂದಿನ ಪ್ರಾಧಿಕಾರ ಮತ್ತು ಅಕಾಡೆಮಿಗಳ ನಿರ್ದೇಶಕರನ್ನು ಬದಲಾಯಿಸಿದ ಕ್ರಮಕ್ಕೆ ಇದನ್ನು ಹೋಲಿಸುವಂತಿಲ್ಲ. ಒಂದು ಉದಾಹರಣೆ ಮೂಲಕ ಇದನ್ನು ಸ್ಪಷ್ಟಪಡಿಸಬಹುದು. […]

Read More
New Posts
ಜುಗಾರಿ ಕ್ರಾಸ್

ಅನುಪಮಾ ಪ್ರಸಾದ್ ಹೇಳುತ್ತಾರೆ: ಶಿಕ್ಷಕ ವೃತ್ತಿಗೆ ರಾಧಾಕೃಷ್ಣನ್ ಆದರ್ಶರಲ್ಲ

‘ಎಸ್. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ..’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ಪ್ರಕಟವಾಗಿತ್ತು. ಡಾ ವಡ್ಡಗೆರೆ ನಾಗರಾಜಯ್ಯ ಅವರು ರಾಧಾಕೃಷ್ಣನ್ ಅವರ ಬದುಕಿನ ಬಗ್ಗೆ ಅವರ ಮಗ ಎಸ್ ಗೋಪಾಲ್ ಬರೆದ ಪುಸ್ತಕವನ್ನು ಉಲ್ಲೇಖಿಸುತ್ತಾ ಈ ಪ್ರಶ್ನೆ ಎತ್ತಿದ್ದರು. ಅದು ಇಲ್ಲಿದೆ  ಇದಕ್ಕೆ ‘ಅವಧಿ’ ಪ್ರತಿಕ್ರಿಯೆಯನ್ನು ಆಹ್ವಾನಿಸಿತ್ತು. ಖ್ಯಾತ ಸಾಹಿತಿ ಪ್ರತಿಭಾ ನಂದಕುಮಾರ್ ಅವರ ನೋಟ ಇಲ್ಲಿದೆ ಚಿಂತಕ ಕು ಸ ಮಧುಸೂಧನ್ ಅವರು ಪ್ರತಿಕ್ರಿಯಿಸಿದ್ದಾರೆ- ಅದು ಇಲ್ಲಿದೆ  ಸಂವರ್ಥ ಸಾಹಿಲ್ ಕಟ್ಟಿಕೊಟ್ಟ ನೋಟ ಇಲ್ಲಿದೆ    ಇದೀಗ ಕಂಠೀರವ […]

Read More
New Posts
ಫ್ರೆಂಡ್ಸ್ ಕಾಲೊನಿ

ಕೆ. ಟಿ. ಗಟ್ಟಿ ವಾರೆ ನೋಟ: ಅಚ್ಛೇ ದಿನ್ ಆಯೆಗಾ

ಜಿಮ್ ಕಾರ್ಬೆಟು ಕಾಡು ಹೊಕ್ಕ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ ಆಧುನಿಕ ಜಿಮ್ ಕಾರ್ಬೆಟ್ ಎನಿಸಿಕೊಳ್ಳಲು ಹೋಗಿ ಮಾಡಿದ್ದೇನು? ಅನ್ನೋದನ್ನು ಕನ್ನಡದ ಖ್ಯಾತ ಬರಹಗಾರ ಕೆ.ಟಿ. ಗಟ್ಟಿ ಕಂಡ ಒಂದು ವಾರೆ ನೋಟ ಇಲ್ಲಿದೆ.. ಕೆ. ಟಿ. ಗಟ್ಟಿ   ಗದ್ಯ-ಪದ್ಯ ಲೇಖನ ರೂಪಕ ಉತ್ತರ ಭಾರತದ ಘೋರಾರಣ್ಯದೊಳಗಿನ ಗುಹೆಯೊಂದರಲ್ಲಿ ವಾಸವಾಗಿತ್ತು ಬಹಳ ಕಾಲದಿಂದ ಒಂದು ಘೋರ ವ್ಯಾಘ್ರ ಮನುಷ್ಯರನ್ನು ಕೊಂದು ತಿನ್ನುವುದೊಂದೇ ಆಗಿತ್ತು ಅದರ ಕರ್ಮ ಮತ್ತು ಧರ್ಮ. ವರ್ಷಗಳೆಷ್ಟು ಕಳೆದರೂ ಯಾರಿಂದಲೂ ಕೊಲ್ಲಲು ಆಗಲಿಲ್ಲ […]

Read More
New Posts
ಹೊಸ ಓದು

ಹಳ್ಳಿಯ ಸೊಗಡಿನ ‘ಹಾಣಾದಿ’

ಕಾವ್ಯಮನೆ ಪ್ರಕಾಶನ ಹೊರತಂದಿರುವ ‘ಹಾಣಾದಿ’ಯು ಕಪಿಲ ಪಿ ಹುಮನಾಬಾದೆ ಅವರ ಚೊಚ್ಚಲ ಕಾದಂಬರಿ. ಈ ಕಾದಂಬರಿಯಲ್ಲಿ ಹಳ್ಳಿಯ ಮಣ್ಣಿನ ಸೊಗಡಿನ ಬಗ್ಗೆ ಬಹಳ ವೈಶಿಷ್ಟ್ಯಪೂರ್ಣವಾಗಿ ಅಕ್ಷರಗಳಲ್ಲಿ ಹೆಣೆಯಲಾಗಿದೆ. ಸುಕ್ಕುಗಟ್ಟಿದ ಚರ್ಮ, ನಡುಗುವ ಕೈಯೊಳಗೊಂದು ಕೋಲು ಹಿಡಿದಿರುವ ಗುಬ್ಬಿ ಆಯಿ ಎಂಬ ಮುದುಕಿ ಹಾಣಾದಿಯುದ್ದಕ್ಕೂ ಕಥೆ ಹೇಳುತ್ತಾ ಸಾಗುತ್ತಾಳೆ. ಬೇತಾಳವನ್ನು ಬೆನ್ನಿಗೆ ಹಾಕಿಕೊಂಡಿರುವ ರಾಜಾ ತ್ರಿವಿಕ್ರಮನಂತೆ ನೆನಪುಗಳನ್ನು ಹೊತ್ತ ಕಥಾನಿರೂಪಕನಿದ್ದಾನೆ. ಈ ಕೃತಿಯು ಕಥಾವಸ್ತು, ನಿರೂಪಣಾ ವಿಧಾನ ಮುಂತಾದ ಹಲವು ಕಾರಣಗಳಿಂದ ಗಮನ ಸೆಳೆಯುತ್ತದೆ. ಮೌನೇಶ ಕನಸುಗಾರ ಅವರು […]

Read More
New Posts
ಬಾ ಕವಿತಾ

ಅಂತರಾತ್ಮವನು ಸಮಾಧಿ ಮಾಡಿ..

ಅನುವಾದ: ಡಾ. ಅಮರೇಂದ್ರ ಶೆಟ್ಟಿ.ಆರ್. (ಅಮರೇಂದ್ರ ಹೊಲ್ಲಂಬಳ್ಳಿ) ಮೂಲ: ರಾಮ್ ಜೇಠ್ಮಲಾನಿ ಕೆಲವು ಸಲ ರಾತ್ರಿಯ ಕತ್ತಲಿನಲ್ಲಿ ನಾನು ನನ್ನ ಅಂತರಾತ್ಮವನ್ನು ಭೇಟಿಯಾಗುತ್ತೇನೆ. ಪ್ರತಿದಿನವೂ ನಿಧನಿಧಾನವಾಗಿ ಸಾಯುತ್ತಿರುವ ಅದು ಇನ್ನೂ ಬದುಕಿದೆಯೇ ಎಂದು ನೋಡುವುದಕ್ಕಾಗಿ. ನಾನು ಒಂದು ವಿಲಾಸಿ ಸ್ಥಳದಲ್ಲಿ ಊಟದ ಬಿಲ್ಲು ಪಾವತಿಸುವಾಗ ಬಹುಶಃ ಆ ಮೊತ್ತ ಅಲ್ಲಿ ಬಾಗಿಲು ತೆರೆಯುವ ಕಾವಲುಗಾರನ ತಿಂಗಳ ಸಂಬಳ ಅನಿಸುತ್ತದೆ. ನಾನು ತಕ್ಷಣ ಆ ಯೋಚನೆಯನ್ನು ದೂರ ತಳ್ಳುತ್ತೇನೆ. ನನ್ನ ಅಂತರಾತ್ಮ ಸ್ವಲ್ಪ ಸತ್ತಿತು. ನಾನು ವ್ಯಾಪಾರಿಯಿಂದ ತರಕಾರಿ […]

Read More