Category: ಬುಕ್ ಬಝಾರ್

‘ಛಂದ ಪುಸ್ತಕ’ ಹಸ್ತಪ್ರತಿ ಆಹ್ವಾನ

ಕಳೆದ ಹದಿಮೂರು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ ಈ ಸಾಲಿನ ‘ಛಂದ ಪುಸ್ತಕ’ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾ ಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು ಪುಸ್ತಕಗಳು...

ನಿಮ್ಮೆಲ್ಲರ ಋಣದಲ್ಲಿದ್ದೇನೆ..

ಲಕ್ಷ್ಮಣ್ ವಿ.ಎ ಮನಸು ಅಕ್ಷರಶಃ ಮೂಕ.. ನೀವೆಲ್ಲಾ ಕಾರ್ಯಕ್ರಮಕ್ಕೆ ಬಂದಿದ್ದೀರೆಂದರೆ ನಿಮ್ಮ ಜೀವನದ ಅಪೂರ್ವ ಕ್ಷಣಗಳನ್ನು ಈ ಅಕ್ಷರ ಪ್ರೀತಿಗೆ ಈ ಒಂದು ದಿನ ಮೀಸಲಿಟ್ಟಿದ್ದರೆಂದೇ ಅರ್ಥ. ಬಿ .ಪಿ.ವಾಡಿಯಾ ಸಭಾಂಗಣವೆಂದರೆ ಕನ್ನಡ ಸಾಹಿತ್ಯ ದ ಅಮೂಲ್ಯ ಪುಸ್ತಕಗಳು ಕಣ್ತೆರೆಯುವ ಲೇಬರ್...

ಹೀಗೂ ಬಿಡುಗಡೆಯಾಯ್ತು ಆ ಎರಡು ಕೃತಿ..

ಎದೆಯಲ್ಲಿ ಮನುಷ್ಯತ್ವದ ಪಸೆ ಇದ್ದಾಗ ಮಾತ್ರ ಹೀಗಿರುವುದು ಸಾಧ್ಯ… – – – – – – – – – ಮೂರು ತಿಂಗಳ ಹಿಂದೆ ಹೈದರಾಬಾದಿನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಅದೇ ಫ್ಲೈಟಿನಲ್ಲಿ ಪ್ರಕಾಶ್ ರೈ ಕೂಡ ಇದ್ದರು. ಬೆಂಗಳೂರಿನಲ್ಲಿ ಫ್ಲೈಟ್...

ಫ್ಲಿಪ್ ಕಾರ್ಟ್, ಅಮೆಜಾನ್ ಗಳಂತಹ ದೈತ್ಯ ಹೆದ್ದೆರೆಗಳು ಬಂದು..

ಒಂದು ಪುಸ್ತಕದಂಗಡಿಯ ಸಾವು..!! ಗಿರಿಧರ ಕಾರ್ಕಳ ಈಚಿನ ದಿನಗಳಲ್ಲಿ ಪುಸ್ತಕದಂಗಡಿಗಳು ಮುಚ್ಚುವುದು ತೀರ  ಅನಿರೀಕ್ಷಿತವೇನಲ್ಲ. ಆದರೆ ಮುಂಬಯಿನ ಸ್ಟ್ರಾಂಡ್ ಬುಕ್ ಸ್ಟಾಲ್ ಮುಚ್ಚುತ್ತಿದೆ ಎಂದಾಗ ನಂಬುವುದು ಸ್ವಲ್ಪ ಕಷ್ಟವೇ. ಆದರೆ ಈಗ ಅದು ನಂಬಲೇ ಬೇಕಾದ ನೋವಿನ ಸಂಗತಿ. ದಕ್ಷಿಣ ಕನ್ನಡದ...

‘ತಲ್ಲೂರು’ ಸಂಭ್ರಮ

  ಕಲಾವಿದನೊಬ್ಬ ತೀವ್ರವಾದ ಶ್ರದ್ಧೆಯಿಂದ ಕೆಲ್ಸಮಾಡಿದಾಗ ಮಾತ್ರ ಬೆಳೆಯಲು ಸಾಧ್ಯ. ಕಲೆಯನ್ನೇ ಬದುಕಾಗಿಸಿಕೊಂಡದ್ದರಿಂದಾಗಿ ಕಲಾವಿದ ತಲ್ಲೂರು ಎಲ್ ಎನ್ ಇಷ್ಟೊಂದು ಬೆಳೆಯಲು ಸಾಧ್ಯವಾಯಿತು ಎಂದು  ಹಿರಿಯ ಕಲಾವಿದ ಹಾಗೂ ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದ ಆಧುನಿಕ ಕಲೆಗಳ ವಿಭಾಗದ ನಿವೃತ್ತ ನಿರ್ದೇಶಕ...

‘ಸಂಗಾತ’ ಬಳಗದ ಪರವಾಗಿ -ಟಿ.ಎಸ್.ಗೊರವರ

ಪ್ರಿಯರೆ, ನಾನು ಕಾರ್ಯನಿರ್ವಹಿಸುತ್ತಿದ್ದ ಪತ್ರಿಕೆಯ ಕೆಲಸ ಬಿಟ್ಟ ದಿನಗಳಿಂದಲೇ ಅಂದರೆ ಐದಾರು ತಿಂಗಳುಗಳಿಂದಲೇ ಈ ‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯ ತಯಾರಿ ನಡೆದಿತ್ತು. ಅಂದುಕೊಂಡಂತೆ ರೂಪಿಸಲು ಇಷ್ಟು ದಿನಗಳು ಬೇಕಾಯಿತು. ಈಗ ಪತ್ರಿಕೆ ವಾರದೊಳಗೆ ನಿಮ್ಮ ಕೈ ಸೇರಲಿದೆ. ಸಂಪಾದಕೀಯ ಬಳಗದಲ್ಲಿ...

‘ಅವರಿಗೆ ಇರುವ ಹುಚ್ಚು ನಮಗೂ ಇರಬಾರದಿತ್ತೇ..’

ಹುಚ್ಚು ಮನಸ್ಸಿಗೆ ಹತ್ತು ಮುಖಗಳು ಎನ್ನುತ್ತಾರೆ. ಆ ಹತ್ತು ಮುಖಗಳೂ ಸರಿಯಾಗಿ ಒಪ್ಪುವುದು ಉಡುಪಿಯ ಮಂಜುನಾಥ ಕಾಮತರಿಗೆ. ಆದರೆ ಅದು ‘ಅವರಿಗೆ ಇರುವ ಹುಚ್ಚು ನಮಗೂ ಇರಬಾರದಿತ್ತೇ..’ ಎಂದು ಹಳಹಳಿಸುವ ಹುಚ್ಚು. ಫೋಟೋಗ್ರಫಿ, ಸುತ್ತಾಟ, ಓದು, ಸಾಕ್ಷ್ಯಚಿತ್ರ, ಸಿನೆಮಾ ಹೀಗೆ ಯಾವುದನ್ನೆಲ್ಲಾ...

‘ಅಂಚೆಪೇದೆಯ ಆತ್ಮಕಥನ’ ಬಿಡುಗಡೆಯಾಯಿತು

ವಿಡಂಬಾರಿ ಯವರ  ಅಂಚೆಪೇದೆಯ ಆತ್ಮಕಥನ’ ಪುಸ್ತಕ ಇತ್ತೀಚೆಗೆ ಮರುಮುದ್ರಣಗೊಂಡು ಬಿಡುಗಡೆಯಾಯಿತು. ಕವಿ  ಮಾಧವಿ ಭಂಡಾರಿ ಪುಸ್ತಕ ಬಿಡುಗಡೆಗೊಳಿಸಿದರು. ಕನ್ನಡದ ಮಟ್ಟಿಗೆ ಇದೊಂದು  ವಿಶಿಷ್ಟ ಆತ್ಮಕಥನವೆಂದೇ ಹೇಳಬಹುದು.. ಬಿಡುಗಡೆ ಕಾರ್ಯಕ್ರಮದ ಕೆಲವು ಫೋಟೋಗಳು ಇಲ್ಲಿವೆ.. ಸಧ್ಯದಲ್ಲೇ ಆತ್ಮಕಥೆಯ ಭಾಗಗಳು ‘ಅವಧಿ’ಯಲ್ಲಿ ಪ್ರಕಟವಾಗಲಿದೆ   

ರೇಣುಕಾ ರಮಾನಂದ್ ಗೆ ಗೊಂದಲ..

‘ಅವಧಿ’ಯ ಬರಹಗಾರರಾದ, Poet of the Week ಮನ್ನಣೆಗೆ ಪಾತ್ರರಾದ ರೇಣುಕಾ ರಮಾನಂದ್ ಚೊಚ್ಚಲ ಕವಿತಾ ಸಂಕಲನದ ಸಂಭ್ರಮದಲ್ಲಿದ್ದಾರೆ. ‘ಪಲ್ಲವ ಪ್ರಕಾಶನ’ದ ಮೂಲಕ ಹೊಸ ಪ್ರತಿಭೆಗಳ ಏಕೈಕ ಕೊಂಡಿಯಾದ ವೆಂಕಟೇಶ್ ಅವರು ಈ ಕೃತಿ ಪ್ರಕಟಿಸುತ್ತಿದ್ದಾರೆ ಯಥಾ ಪ್ರಕಾರ ಖ್ಯಾತ ಕಲಾವಿದ ಜಿ...