Monthly Archive: June 2017

ಮೋದಿ-ಟ್ರಂಪ್ ಅಮೆರಿಕಾಲಿಂಗನ

ಪ್ರಸಾದ್ ನಾಯ್ಕ್ ಅಂಗೋಲಾದಿಂದ  `ಜೀವದ ಗೆಳೆಯ’ರ `ಹಗ್ಗು’-ಹಿಗ್ಗು – ಇತ್ತೀಚೆಗಿನ ಅಮೆರಿಕಾ ಪ್ರವಾಸದಲ್ಲಿ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಮತ್ತು ಅಮೆರಿಕಾ ರಾಷ್ಟ್ರಾಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ರ ಅಪ್ಪುಗೆಯನ್ನು ಕಂಗ್ಲಿಷ್ ಶೈಲಿಯಲ್ಲಿ ಹೀಗೆ ಕರೆಯಬಹುದೇ? ಬರಹಗಳಿಗೆ ಆಕರ್ಷಕ ಶೀರ್ಷಿಕೆಯನ್ನು ನೀಡುವುದೂ ಕೂಡ...

ನಮಸ್ತೇ ವಿಜಯಮ್ಮಾ.

ಸಿಂಧು ರಾವ್  ನಮಸ್ತೇ ವಿಜಯಮ್ಮಾ. ನಿಮ್ಮ “ಕುದಿ ಎಸರು” ಓದಿದ ಮೇಲೆ ನನ್ನ ಅನಿಸಿಕೆಗಳು ಇಲ್ಲಿವೆ. ಓದಿದ ಮೇಲೆ ಬಂದು ಭೆಟ್ಟಿಯಾಗಲೇಬೇಕೆಂದಿದ್ದೆ. ನನ್ನ ಕೆಲಸ/ಒತ್ತಡಗಳ ನಡುವೆ ಆಗಲಿಲ್ಲ. ಆದಷ್ಟು ಬೇಗ ಬಂದು ಭೇಟಿಯಾಗುತ್ತೇನೆ. ನಿಮ್ಮ ಜೀವನಪ್ರೀತಿಗೆ ನನ್ನ ನಮ್ರ ವಂದನೆಗಳು ಮತ್ತು...

‘ನಿಂಗರ್ತ ಆಯ್ಕಿಲ್ಲ, ಮುಚ್ಕೊಂಡಿರು’

ಪರಮೇಶ್ವರ ಗುರುಸ್ವಾಮಿ   “ಒಂಟೋಯ್ತಿರ್ಬೇಕು.” ಅಂದ. ಯಾರಿಗೆ ಹೇಳುತ್ತಿದ್ದಾನೆ ಎಂದು ಸುತ್ತ ನೋಡಿದೆ. ಯಾರೂ ಇರಲಿಲ್ಲ. “ಯಾರಿಗೆ ಹೇಳುತ್ತಿದ್ದೀಯೇ?” ಎಂದು ಕೇಳಿದೆ. “ಇಂಗೇ ಏಳ್ಕೊಂಡೆ.” ಅಂದ. “ಎಲ್ಲಿಗೆ ಹೊರಟು ಹೋಗಬೇಕು?”, ಪ್ರಶ್ನಿಸಿದೆ. ನಿಧಾನವಾಗಿ ಕತ್ತನ್ನು ಎತ್ತಿ ಆಕಾಶ ನೋಡುತ್ತ, ” ಅಲ್ಲಿಗೆ”,...

ಬೇಲಿಯ ದಿಕ್ಕು ಬದಲಾಗುತ್ತದೆ..

ನಿರಂತರ.. ದೀಪ್ತಿ ಭದ್ರಾವತಿ   ಪುಟ್ಟ ಮಗಳು ಹುಟ್ಟುತ್ತಾಳೆ ಜೊತೆಗೊಂದು ಭಯವೂ.. ಆಕೆ ಬೊಚ್ಚು ಬಾಯಿ ಅಗಲಿಸಿ ನಗುತ್ತಾಳೆ.. ಅದು ಅಲ್ಲೇ ಬಳಿ ಇದ್ದು ತೊಟ್ಟಿಲ ಜೀಕುತ್ತದೆ.. ಆಕೆ ಅಂಬೆಗಾಲಿಟ್ಟು ಆಚೀಚೆ ಗೆಜ್ಜೆ ಸದ್ದುಗಳ ಹನಿಗಿಸುತ್ತ ಮನೆಯ ತುಂಬೆಲ್ಲ ರಂಗೋಲಿ ಎಳೆಗಳಿಗೆ...

ಅದು 1975..

ರಾಘವನ್ ಚಕ್ರವರ್ತಿ  ೧೯೭೫ರ ಒಂದು ದಿನ. ಹೊಸೊರಿನ ಶಾಲೆಯಲ್ಲಿ ಓದುತ್ತಿದ್ದ ಸಮಯ. ಸಿನಿಮಾ ಆಗಲೀ, ರಾಜಕೀಯವಾಗಲೀ, ಇನ್ನು ಸರಿಯಾಗಿ ಅರ್ಥವಾಗದ ಕಾಲ. ಎಸ್.ಎಲ್.ಎನ್ ಟೆಂಟ್ ಗೆ ಬರುತ್ತಿದ್ದ ’ಎದುರುಲೇನಿ ಮನಿಷಿ’, ’ನಿಪ್ಪುಲಾಂಟಿ ಮನಿಷಿ’ ತರದ ಕಿತ್ತೋದ ಚಿತ್ರಗಳನ್ನೋ, ರಾಜಕಮಲ್ ಟೆಂಟ್ ನಲ್ಲಿ...

ಬಾ ಎಂದ ಬೆಂಕಿ ಕೆನ್ನಾಲಿಗೆ..

ಆಲದ ಬಿಳಲಿನ ಹಾಡು ವಿನತೆ ಶರ್ಮ   ಆಲದ ಬಿಳಲಿನ ಹಾಡು ಹಾಡು ಚಿಗುರು ಬೇರಾಗಿ ಸೀಳು ಕಂದಕದಲ್ಲಿ ಹಿಮಾಲಯವಾಗುವ ಲಕ್ಷಣ ತೋರಿ ಧೂಮಕೇತುವ ಮೀರಿ ನೆಲಕ್ಕೆ ಚಿಮ್ಮುವ ಕಾಜಾಣದಂತೆ. ಕಾದ ಮರುಭೂಮಿಯ, ಹಲ್ಲಿಯ ತಾಳ್ಮೆ ಇದೆ ಹಾಡುಗಳಿಗೆ, ಹದ ಮಾಡಿದ...

ಕೆ.ವಿ. ತಿರುಮಲೇಶ್ ‘ಠ’ಕಾರ..

ಠಕ್ಕ ಬಿಟ್ಟರೆ ಸಿಕ್ಕ! (ಠಕಾರದ ಕುರಿತು) ಕೆ.ವಿ. ತಿರುಮಲೇಶ್   ನಾಗರ ಹಾವೆ! ಹಾವೊಳು ಹೂವೆ! ಬಾಗಿಲ ಬಿಲದೊಳು ನಿನ್ನಯ ಠಾವೆ? –ಕವಿಶಿಷ್ಯ, “ಹಾವಿನ ಹಾಡು’ ಈ ಸಾಲುಗಳನ್ನು ಯಾವ ಕನ್ನಡ ವಿದ್ಯಾರ್ಥಿ ತಾನೇ ಕೇಳಿಲ್ಲ! ಪಂಜೆ ಮಂಗೇಶರಾಯರ (ಕವಿಶಿಷ್ಯ) ಮಕ್ಕಳ...

ಸಲೀಂ ಅಲಿ ಉಳಿದುಕೊಂಡಿದ್ದ ಮನೆ

ಶಿವಶಂಕರ ಬಣಗಾರ್  ಸಲೀಂ ಅಲಿ ಉಳಿದುಕೊಂಡಿದ್ದ ಮನೆ ಜಗದ್ವಿಖ್ಯಾತ ಪಕ್ಷಿ ತಜ್ಞ ಸಲೀಂ ಅಲಿ ಅವರು ಪಕ್ಷಿ ಅಧ್ಯಯನಕ್ಕೆಂದು ಕರ್ನಾಟಕದ ನಾಮದ ಚಿಲುಮೆ ಬೆಟ್ಟದ ತಪ್ಪಲಿಗೆ ಬಂದಾಗ ವಾಸ್ತವ್ಯ ಹೂಡಿದ್ದ ಮನೆ ಇದು. ಅವಸಾನದ ಅಂಚಿನಲ್ಲಿರುವ ಈ ಮನೆಯನ್ನು ಯಥಾವತ್ತು ಉಳಿಸಿಕೊಂಡು...

ಭೂತಗಳು ಬರುತ್ತಿವೆ, ದಾರಿಬಿಡಿ..

ಎಂ. ಆರ್. ಕಮಲ ಭೂತಗಳು ಬರುತ್ತಿವೆ, ದಾರಿಬಿಡಿ ಕೆಂಬಣ್ಣ ಮರೆಯ ಕೆಂಗಣ್ಣ ಭೂತ ಹಿರಿಭೂತ, ಕಿರಿಭೂತ, ಸಿರಿಭೂತ ಅಬ್ಬರದ ಸರಭರದ ಡಬ್ಬಡಾಳು ಭೂತ ನಡುನಡುವೆ ಒಂದೆರಡು ಕೆಂಬೂತ! ಎಂಥ ಪ್ರಭೆ, ಏನೆಂಥ ಪ್ರಭಾವಳಿ, ಹಾ! ಕತ್ತಿ ಕೋಲಿನ ದಿವಿನಾದ ಹಾವಳಿ ಡುರು...