fbpx

Daily Archive: October 2, 2017

ಪುಸ್ತಕ ಹುಳುವಿನ ರಾಷ್ಟ್ರಭಕ್ತಿ..

ಗುರುಪ್ರಸಾದ್ ಡಿ ನಾರಾಯಣ್  ಹುಳ ಹಿಡಿದಿದೆ ಗಾಂಧಿ ಪುಸ್ತಕಕ್ಕೆ 1944ರ ಕರಾಚಿಯಲ್ಲಿ ಪ್ರಕಟವಾದ ‘ವಿದ್ಯಾರ್ಥಿಗಳಿಗಾಗಿ’ ಎಂಬ ಭಾಷಣಗಳ ಹೊತ್ತಿಗೆಗೆ ಹುಳ ಹಿಡಿದಿದೆ ಕರಾಚಿಯಲ್ಲಿ ಪ್ರಕಟವಾದ ಮೇಲೆ ಕೇಳಬೇಕೆ? ರಕ್ತ ಕುದ್ದಿರಬೇಕು, ರೋಷ ಉಕ್ಕಿರಬೇಕು. ರಾಷ್ಟ್ರಭಕ್ತರ ಮಾತುಗಳು ಪುಸ್ತಕಹುಳದ ಕಿವಿಗೂ, ಕಣ್ಣಿಗೂ ಬಿದ್ದಿರಬೇಕು....

ಗಿರಿಧರ ‘ಗಾಂಧಿ’

ಗಿರಿಧರ ಕಾರ್ಕಳ ರೇಖೆಗಳಲ್ಲಿ..

ಅದ್ಯಾರೋ ಕನ್ನಡಕದ ಗ್ಲಾಸನ್ನು ಸರಿಪಡಿಸುವುದನ್ನು ಕಂಡೆ!

        ಗಾಂಧಿಯನರಸಿ ರಮೇಶ್ ನೆಲ್ಲಿಸರ ರೇಖೆ: ಎಂ ಎಸ್ ಪ್ರಕಾಶ್ ಬಾಬು         ಮನೆಯ ಗೇಟನು ದಾಟಿ ಕಿಷ್ಕಿಂದೆಯಂತಿದ್ದ ಬೀದಿಯಲಿ ಹೆಜ್ಜೆ ಇಡುತ್ತಿದ್ದಂತೆ ಅದ್ಯಾರೋ ಕನ್ನಡಕದ ಗ್ಲಾಸನ್ನು ಸರಿಪಡಿಸುವುದನ್ನು ಕಂಡೆ! ಯಾರಿದು? ಗಾಂಧಿಯಂತೆ...

ಅವರದೀಗ ‘ಕಾಲುಬಾಯಿ’ ಯೋಗ!

‘ರೋಮ್ ರಾಜ್ಯ’ದ ಎದುರು ‘ರಾಮರಾಜ್ಯ’ ಎಂದಾಗ, ಸಿಗುವುದಿದ್ದರೆ ಏಕೆ ಬೇಡ ಬರಲಿ ‘ಅಚ್ಚೇದಿನ್’ ಎಂದಿದ್ದರೇ ಹೊರತು, ರಾಮರಾಜ್ಯವೇ ಬೇಕೆಂದು ಹಠ ಹಿಡಿದವರು ಯಾರೂ ಇರಲಿಲ್ಲ. ಭ್ರಷ್ಟಾಚಾರ ಅತಿಯಾಗಿದೆ, ಬಡವ-ಸಿರಿವಂತರ ನಡುವೆ ಅಂತರ ಹೆಚ್ಚಿದೆ, ನೈತಿಕತೆ ಇಲ್ಲದಾಗಿದೆ, ದುಡ್ಡೇ ದೊಡ್ಡಪ್ಪ ಎಂಬೆಲ್ಲ ಆತಂಕಗಳು ದೇಶದ ಉದ್ದಗಲಕ್ಕೂ ಹಾಸಿ ಹೊದ್ದುಕೊಂಡಿದ್ದವು. ಆದರೆ 2014ರ ಚುನಾವಣೆಯ ವೇಳೆ ಚಾಣಕ್ಯನಿಂದ ಆರಂಭಿಸಿ, ದೀನದಯಾಳು ಉಪಾಧ್ಯಾಯರ ತನಕ ಎಲ್ಲರೂ ಸದ್ದು ಮಾಡಿದರು. ತೆರಿಗೆ ಕಟ್ಟಬೇಕಾಗಿಯೇ ಇಲ್ಲದ, ಬದಲಾಗಿ ನಾಗರಿಕರ ಖಾತೆಯೊಂದರ 15 ಲಕ್ಷವನ್ನು ಸರಕಾರವೇ ತಲುಪಿಸುವ, ‘ಏಕ್ ಭಾರತ್ – ಶ್ರೇಷ್ಠ ಭಾರತ್’ ಕೊಡುವ ವಾಗ್ದಾನ ಬಂತು. ಇದು ಜನರ ಬೇಡಿಕೆ ಆಗಿರಲೇ ಇಲ್ಲ. ‘ಸಬ್ಕಾ ಸಾತ್ ಸಬ್ಕಾ ವಿಕಾಸ್’ ಅಂದಾಗಲೂ ಅದು ನಮಗೆ ಬೋನಸ್ಸೇ ಎಂದುಕೊಂಡವರು ಈ ದೇಶದ ಜನ.