Daily Archive: November 19, 2017

ರಾಜಾರಾಂ ಅಂಕಣಕ್ಕೆ ವೈದ್ಯರ ಉತ್ತರ..

ರಾಜಾರಾಮ್ ತಲ್ಲೂರು ಅವರ ನುಣ್ಣನ್ನ ಬೆಟ್ಟ ಅಂಕಣ ಈ ಬಾರಿ  ಕೆಪಿಎಂಇ ಕಾಯ್ದೆ ಬಗ್ಗೆ ಅದು ಇಲ್ಲಿದೆ.  ಇದಕ್ಕೆ ಡಾ ಶಶಿಕಿರಣ್ ಉಮಾಕಾಂತ ವಿವರವಾಗಿ ಪ್ರತಿಕ್ರಿಯಿಸಿದ್ದಾರೆ- ಡಾ ಶಶಿಕಿರಣ್ ಉಮಾಕಾಂತ ಮೊದಲನೆಯದಾಗಿ, ಸಮತೋಲನವಾದ ನಿಮ್ಮ ಈ ಲೇಖನಕ್ಕೆ ಅಭಿನಂದನೆಗಳು. ವೈದ್ಯರನ್ನು ನಿರರ್ಗಳವಾಗಿ ದೂಷಿಸುವುದೇ ಒಂದು ಸ್ಟೈಲ್...

ಥ್ಯಾಂಕ್ಸ್ ಕಿರಣ್,  ಫೇಸ್ ಬುಕ್ ಬಗ್ಗೆ ಭರವಸೆ ಮೂಡಿಸಿದ್ದಕ್ಕೆ.. 

ಕಿರಣ್ ಗಾಜನೂರು ಪುಟ್ಟ ಆದರೆ ದೊಡ್ಡ ಪರಿಣಾಮದ ಕೆಲಸ ಮಾಡಿದರೆ. ಸಾಮಾಜಿಕ ಜಾಲತಾಣಗಳು ಕೇವಲ ಟ್ರಾಲ್ ಗಳ ತಾಣವಲ್ಲ, ಸೂರಿನ, ನೆಮ್ಮದಿ ಒದಗಿಸುವ ತಾಣವೂ ಹೌದು ಎನ್ನುವುದನ್ನು ಎಲ್ಲರಿಗೂ ತೋರಿಸಿದ್ದಾರೆ. ಆ ಮೂಲಕ ಒಂದು ಭರವಸೆಯ ಬೆಳಕು ನೀಡಿದ್ದಾರೆ. ವೆಳ್ಳಿಯಮ್ಮ ಎಂಬುವರ...

ಒಂದೂವರೆ ದಿನದ ನಂತರ ನಾವು ಮನುಷ್ಯರ ಮುಖವನ್ನು ನೋಡಲಿದ್ದೆವು..

ಆಕಾಶದಿಂದ ಸುರಿಯುವ ಬೆಳದಿಂಗಳು, ದಡಗಳಿಗೆ ನೀರ ಅಲೆಗಳು ಬಡಿವ ಕ್ಷೀಣ ಸದ್ದು, ನಡುಗುಡ್ಡೆಯ ದಟ್ಟಮರಗಳ ನಡುವೆ ಹೆಪ್ಪಾದ ಕತ್ತಲು, ಎದುರಲ್ಲಿ ಧಗಧಗಿಸುವ ಬೆಂಕಿ. . . . ಕಣ್ಣುಮುಚ್ಚಿ ಮನಸ್ಸಿನಲ್ಲೂ ಶೂನ್ಯವನ್ನು ತುಂಬಿಕೊಂಡು ಮೌನವಾಗಿ ನಿಂತೆವು. ಆ ಕ್ಷಣ ಎಂಥ ಅವರ್ಚನೀಯ...

ಉತ್ತಮ ಪ್ರಯತ್ನ ಸಂಜ್ಯೋತಿ..

ಸಂಜ್ಯೋತಿ ನಿರ್ದೇಶನದ ‘ಅನಲ’ ದಿಲಾವರ್ ರಾಮದುರ್ಗ  ಪ್ರತಿ ಜೀವಿಯ ಅಂತರಂಗದ ಒಳಗೊಂದು ಜೀವಜಲದ ಕೊಳವಿದೆ. ಸುತ್ತ ಕಷ್ಟದ ಕಲ್ಲುಬಂಡೆಗಳೂ ಇರಬಹುದು. ಮುಳುಗೇಳುತ್ತಲೇ ಇರಬಹುದಲ್ಲೂ ಭರವಸೆಯ ಸೂರ್ಯ. ಜೀವಸಂಕುಲಕ್ಕೊಂದೇ ಇದೆಯಲ್ಲ ಅದಲ್ಲ. ತನಗೆಂದೇ ತನ್ನೊಳಗಿರುವಂಥ ನಕ್ಷತ್ರವದು. ಎಲ್ಲರೊಳೊಂದಾಗಿಯೂ ತನ್ನದೇ Space ಹೊಂದಲು ಮನುಷ್ಯಜೀವ...

ಇದು ನನ್ನ ಸವಾಲ್..

ನಾಗೇಂದ್ರ ಶಾ  ಹೀಗೊಂದು ಹೋಟ್ಲು ರಾಜರಾಜೇಶ್ವರಿ ನಗರದಲ್ಲಿ. ಹೆಸರಿಗೂ ಒಳಗಿನ ಊಟ, ತಿಂಡಿಗೂ ಸಂಬಂಧವಿಲ್ಲ. ಒಳ ಹೊಕ್ಕರೆ ಅಪ್ಪಟ ದೇಸಿ ಊಟ. ಮುದ್ದೆ ಪ್ರಿಯರಿಗಂತೂ ಒಳ್ಳೆ ತಾಣ. ರೇಟೂ ಕೂಡ ದುಬಾರಿಯಲ್ಲ. ಒಮ್ಮೆ ಒಳಹೊಕ್ಕು ಉಂಡು ಬನ್ನಿ. ಮತ್ತೆ ಮತ್ತೆ ಹೋಗಬಯಸುವಿರಿ....