fbpx

Daily Archive: March 10, 2018

ಎಂಜಾಯ್ ಮುಂಬೈ, ವಿತ್ ವಡಾಪಾವ್ ಆಂಡ್ ಕಟಿಂಗ್ ಚಾಯ್!

ಒಂದು ಸಂಜೆ ನೀವು ನರಿಮನ್ ಪಾಯಿಂಟ್ ತುದಿಯಲ್ಲಿ ಕೂತಿದ್ದೀರಿ ಅಂತಿಟ್ಟುಕೊಳ್ಳಿ. ಸೂರ್ಯಾಸ್ತದ ಕೆಂಪು ಸಮುದ್ರದ ತೆರೆಗಳಲ್ಲಿ ಕಲಸಿಕೊಂಡು ನಿಮ್ಮತ್ತ ಬರುತ್ತಿದೆ. ಸಿಮೆಂಟಿನ ಚತುಷ್ಪದಿಗಳಿಗೆ ಅಪ್ಪಳಿಸುವ ತೆರೆಗಳು ನಿಮ್ಮ ಮೇಲೆ ಆಗಾಗ ಸಿಂಚನಗೈಯುತ್ತಿವೆ. ಕಡಲಿನಿಂದ ಬೀಸುವ ತಂಗಾಳಿ ದಿನದ ಧಗೆಯನ್ನು ತಂಪಾಗಿಸುತ್ತಿದೆ. ಆವರಿಸುತ್ತಿರುವ...

ಪ್ರಿಯ ಶ್ರೀ ಗುಹಾ ಅವರಲ್ಲಿ..

‘ಸಮಾಜಮುಖಿ’ ಪತ್ರಿಕೆಯಲ್ಲಿ ಪ್ರಕಟವಾದ ಈ ಬರಹವನ್ನು ಇಲ್ಲಿ ಹೆಚ್ಚಿನ ಚರ್ಚೆಗಾಗಿ ನೀಡುತ್ತಿದ್ದೇವೆ. ರಾಮಚಂದ್ರ ಗುಹಾ ಅವರ ನೋಟದ ಬಗ್ಗೆ ಡಿ ಎಸ್ ನಾಗಭೂಷಣ ಅವರು ಈ ಮೊದಲಿನಿಂದಲೂ ಪ್ರಶ್ನೆಗಳನ್ನು ಎತ್ತುತ್ತಲೇ ಬಂದಿದ್ದಾರೆ  ಆ ಮೂಲಕ ಕನ್ನಡ ಕರ್ನಾಟಕ ಬಗೆಗಿನ ಎಲ್ಲರ ಗ್ರಹಿಕೆಗಳು ಮತ್ತೆ...

ಶೇಷಗಿರಿಯಲ್ಲಿ ‘ಯುದ್ಧ ಬಂತು ಮನೆಯವರೆಗೆ..’

ಯುದ್ಧ ಬಂತು ಮನೆವರೆಗೆ- ಡಾ. ಶ್ರೀಪಾದ ಭಟ್ಟರ ಮೂರು ಅಸಾಮಾನ್ಯ ನಾಟಕಗಳು ಈಚೆಗೆ ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಶ್ರೀಮತಿ ಗೀತಾ ಮೋಂಟಡ್ಕ ಅವರು ರಂಗಾಯಣಕ್ಕೆ ಕರಕೊಂಡು ಹೋಗಿ ‘ಯುದ್ಧ ಬಂತು ಮನೆವರೆಗೆ’ ( ನಿರ್ದೇಶನ: ಡಾ.ಶ್ರೀಪಾದ ಭಟ್, ಪ್ರಸ್ತುತ...

ಮೂಗಿಗೆ ಮೂಗನುಜ್ಜಿ.. ಕೆನ್ನೆ ಸವರಿ..

ವಿನಯಚಂದ್ರ ಗೆಳತೀ, ದುಂಡುಗಲ್ಲದ ತುಂಬು ಕೆನ್ನೆಯ ಬೋಡುತಲೆಯ ಬೊಚ್ಚುಬಾಯಿಯ ಅಕಾರಣವಾಗಿ ಹರ್ಷಿಸುವ ಮಾತನಾಡಿಸಿದರೆ ಕಿಕ್ಕಿರಿದು ನಗುವ ಎತ್ತಿಕೊಂಡರೆ ಮುಖ ಪರಚುವ ಮೂಗು ಕಚ್ಚುವ, ಕನ್ನಡಕ ಎಳೆಯುವ ಎದೆಯನೇ ಏಣಿಯಾಗಿಸಿ ಹೆಜ್ಜೆಯೊತ್ತುತ್ತಾ ಮೇಲಮೇಲಕ್ಕೇರಿ ಗುಂಗು ಹಿಡಿಸಿಬಿಡುವ ಮುದ್ದು ಮಗುವೆಂದರೆ, ಅದು ಯಾರದ್ದಾದರೂ ಆಗಿರಲಿ,...

ಆತ ಬೆಳಗೊಳದಲ್ಲಿ ಸಿಕ್ಕ..

ಶ್ರೀವಿಭಾವನ 1 ಬೆಳಗೊಳದ ದಾರಿಗಳಲ್ಲಿ ಅಲೆಯುತ್ತಿದ್ದೆ…ಅಲ್ಲೊಬ್ಬ ಸಿಕ್ಕಿದ ಮಹಾತ್ಮ. ಬೊಂಬೈ ಮಿಠಾಯಿ ಮಾರುತ್ತಿದ್ದವ, ಊರು, ಕೇರಿ ಯಾವುದೂ ಇಲ್ಲದೆ, ಜಾತ್ರೆಗಳ ದಿನಪಟ್ಟಿ ಪ್ರಕಾರ, ಜಗದ ಸಂಚಾರದಲ್ಲಿದ್ದ. 2 ಒಂದೇ ಬಂಡೆಯ ಮೇಲೆ ಒರಗಿದ್ದೆವು. ನನಗೋ ಊರ ತುಂಬೆಲ್ಲಾ ತಿರುಗಿದ ಸುಸ್ತು…ಆತನಿಗೋ ಇನ್ನೂ...

ನಾವೆಲ್ಲರೂ ಲೆನಿನ್..

ತ್ರಿಪುರಾದಲ್ಲಿ ಲೆನಿನ್ ಪ್ರತಿಮೆಗಳನ್ನು ಉರುಳಿಸಿದ್ದಕ್ಕೆ ಹಾಗೂ ಇತರ ರಾಜ್ಯಗಳಲ್ಲಿ ಅಂಬೇಡ್ಕರ್ ಮತ್ತು ಪೆರಿಯಾರ್ ಪ್ರತಿಮೆಗಳಿಗೆ ಅಪಮಾನ ಮಾಡಿದನ್ನು ಖಂಡಿಸಿ ಎಡಪಕ್ಷಗಳು ಬೆಂಗಳೂರಿನ ಟೌನ್ ಹಾಲ್ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಕಂಡ ಮುಖಗಳು..  ಫೋಟೋಗಳು: ಮುರಳಿ \ಕೃಷ್ಣ ಅವರ ಸಂಗ್ರಹದಿಂದ