Daily Archive: April 4, 2018

ನೀನು ಮುತ್ತು ಸುರಿಸಿದಷ್ಟು ಸಲೀಸಾಗಿ ನಾನು ಪದ ಹೆಣೆಯಲಾರೆ..

ಸತ್ಯಾ ಗಿರೀಶ್ ನೀನು ಮುತ್ತುಗಳ ಸುರಿಸಿದಷ್ಟು ಸಲೀಸಾಗಿ ನಾನು ಪದಗಳನ್ನು ಹೆಣೆಯಲಾರೆ ಕಣೊ ಚೆಲುವ!! ಆದರಿದು ನಿನ್ನ ಗಮನದಲ್ಲಿರಲಿ ನಿನಗಾಗಿ ಸುರಿದ ಪ್ರತಿಅಕ್ಷರವನ್ನೂ ತುಟಿಯಂಚಿಗೆ ತಾಕಿಸಿಯೇ ಮುಂದುವರಿಯುತ್ತೇನೆ!! ಕೊನೆಯ ಸಾಲನ್ನು ತಲುಪುವಷ್ಟರಲ್ಲಿ ನಿನ್ನ ತುಂಟತನದ ನೆನಪಾಗಿ ಆ ಹಳೆಯ ಸಾಲಿಗೆ ಹೊಸದೊಂದು...

‘ಶಿಕಾರಿ’ಯ ಮರು ಓದು ಮತ್ತು ಮರು ವಿಶ್ಲೇಷಣೆಗಾಗಿ ವಂದನೆಗಳು.

ಎನ್ ಸಂಧ್ಯಾರಾಣಿ ಮೊದಲ ಓದಿಗೆ ಬೆರಗು ಹುಟ್ಟಿಸಿದ್ದ ಶಿಕಾರಿಯನ್ನು ಮತ್ತೆ, ಮತ್ತೆ ಓದಿದಾಗ ನಾಗಪ್ಪ ಅಪಾರ ಆತ್ಮಮರುಕವುಳ್ಳವನಾಗಿಯೇ ಕಾಣುತ್ತಾನೆ. ನನಗೆ ಗೊತ್ತಿದ್ದ ಹಾಗೆ ’ಶಿಕಾರಿ’ ಕಾರ್ಪೊರೇಟ್ ಜಗತ್ತಿನ ತಲ್ಲಣಗಳನ್ನು ಒಡೆದು ಹೇಳಿದ ಕನ್ನಡದ ಮೊದಲ ಕಾದಂಬರಿ. ಈಗ ಕಾರ್ಪೊರೇಟ್ ಜಗತ್ತು ಇಷ್ಟು...

ಚಿತ್ತಾಲರಿಗೆ ತಪ್ಪಿತಸ್ಥ ನಾಗಪ್ಪನೇ ಹೊರತು ಶ್ರೀನಿವಾಸನಲ್ಲ ಎಂದು ಹೊಳೆಯುವುದೇ ಇಲ್ಲ..

3 ಈ ವಿವರ ಕಾದಂಬರಿಯಲ್ಲಿ ಉಪಕತೆಯೊಂದರ ರೂಪದಲ್ಲಿ ಬರುತ್ತದೆ. ಶ್ರೀನಿವಾಸ ಈ ಹಿಂದೆ ನೇತ್ರಾವತಿ ಎಂಬ ಹೆಣ್ಣುಮಗಳನ್ನು ನಂಬಿಸಿ ಮೋಸ ಮಾಡಿದ್ದರಿಂದಾಗಿ ಆ ಹೆಣ್ಣುಮಗಳು ನಾಗಪ್ಪನ ಕಣ್ಣ ಮುಂದೆಯೇ ಅವರದೇ ಚಾಳ್‍ನಲ್ಲಿ ಮಹಡಿ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ‘…ನೇತ್ರಾವತಿ ಕಿಡಕಿಯ...

ಹೋಗಿ ಬಾ ವಿನ್ನಿ..

ಬೆಂಕಿಯ ಮಗಳು ವಿನ್ನಿ ಕೆ ಪುಟ್ಟಸ್ವಾಮಿ  ವಿನ್ನಿ ಮಂಡೇಲಾ ನಿಧನರಾದ ಸುದ್ದಿ ಓದಿದ ನಂತರ ಎಪ್ಪತ್ತರ ದಶಕ ನೆನಪಾಯಿತು. ಅದು ಸಾಮಾಜಿಕ ಬದಲಾವಣೆಗಳ ಬಗ್ಗೆ ವಿದ್ಯಾರ್ಥಿಗಳ ನಡುವೆ ಚರ್ಚೆಯಾಗುತ್ತಿದ್ದ ಕಾಲ. (ಈಗಲೂ ಇರಬಹುದು). ಪತ್ರಿಕೆಗಳು ಬೇರಬೇರೆ ದೇಶಗಳಲ್ಲಿ ಮಾನವ ಹಕ್ಕುಗಳಿಗಾಗಿ ನಡೆಯುತ್ತಿದ್ದ...

ಬಟ್ಟಲಲ್ಲಿರುವ ಅಮೃತವನ್ನು ಕೊಟ್ಟುಬಿಡುತ್ತೇನೆ

ಲಹರಿ ತಂತ್ರಿ ಒಮ್ಮೆ ವಿಷವಿದ್ದ ಬಟ್ಟಲಲ್ಲೀಗ ಅಮೃತ ತುಂಬಿದ್ದಾರೆ ಕುಡಿಯುವುದು ಹೇಗೆಂಬ ಕಸಿವಿಸಿ ನಂಗೆ! ಅವಳೇನೋ ಎಲ್ಲರನ್ನೂ ದಾಟಿ ಹೋಗಿಬಿಟ್ಟಳು ಕತ್ತಲ ಕೋಣೆಯಲ್ಲಿ ನಾನೊಬ್ಬಳೇ ಉಳಿದವಳೀಗ.. ಕಣ್ಣಲ್ಲಿ ತುಂಬಿಕೊಂಡ ಆಕಾಶ, ಎದೆಯಲ್ಲಿದ್ದ ಬೆರಗು ಎಲ್ಲವೂ ಕೃತಕ ದೀಪದ ಉರಿಯಲ್ಲಿ ಬೇಯುತ್ತದೆ ಕಂಡ...

ಇಂದು ಕಲಾಕ್ಷೇತ್ರದಲ್ಲಿ ‘ಸತ್ತವರ ನೆರಳು’

ಸತ್ತವರ ನೆರಳು  ರವೀಂದ್ರ ಕಲಾಕ್ಷೇತ್ರದಲ್ಲಿ  ಸಂಜೆ ೭ ಕ್ಕೆ  ಉಚಿತ ಪ್ರವೇಶ