Daily Archive: June 29, 2018

ಡಾ ಆಶಾದೇವಿ ಅವರ ಟೀಕೆಗೆ ಪ್ರತಿಭಾ ನಂದಕುಮಾರ್ ಪ್ರತಿಕ್ರಿಯೆ

ಹಳಗನ್ನಡ ಕಾವ್ಯ ಕೃತಿಗಳು ಹೆಣ್ಣಿನ ಭಾವಲೋಕ ಹಾಗೂ ವ್ಯಕ್ತಿತ್ವವನ್ನು ಚಿತ್ರಿಸುವುದಿಲ್ಲವೇ? ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ ಆಶಾದೇವಿ ಅವರು ಸ್ತ್ರೀ ಲೋಕ ದೃಷ್ಟಿಯಿಂದ ಹಳಗನ್ನಡ ಕಾವ್ಯಗಳನ್ನು ಪರಿಗಣಿಸಿ ಉಪನ್ಯಾಸ ನೀಡುವಾಗ- “ಹೆಣ್ಣಿನ ದೇಹದ ಬಗ್ಗೆ ಹಳಗನ್ನಡ ಕಾವ್ಯ ಕೃತಿಗಳು ತೋರುವ ಉತ್ಸಾಹವನ್ನು...

ಕಾವ್ಯ ಕನ್ನಿಕೆ ಮತ್ತು ಉಯ್ಯಾಲೆ

ರಾಜಹಂಸ ಮೌನ ಸಂಯೋಜನೆಯಲಿ ಜೇನಕಂಠ ಬೆರೆಸಿ ಮಾಧುರ್ಯ ಪರಿಮಳ ಬೀರುತ್ತಾ ಬಣ್ಣ ಬಣ್ಣದ ಹಕ್ಕಿಗಳೆಲ್ಲಾ ನಲ್ಮೆಯಿಂದ ತೂಗಿಸುತಿವೆ ಸೌರಮಂಡಲದ ಆ ಮೊಗಸಾಲೆಯೊಳಗೆ ಬೆಳದಿಂಗಳಿಂದ ಮಾಡಿದ ಕನ್ಯೆಯೊಂದಿಗೆ ನಾನು ಜೀಕುತಿರುವ ಉಯ್ಯಾಲೆಯ ಬುಗುರಿಯ ತಥಾ ಗಿರ್ರನೆ ತಿರುಗುವ ಗ್ರಹಗಳೆಲ್ಲಾ ಮೂಕವಿಸ್ಮಿತವಾಗಿವೆ ಶಶಿ ಮಹಾಶಯ...

ಯಾರೋ ಲೆಕ್ಕ ಗೀಚುತ್ತಿರುವ ಸದ್ದು!

ದಾಖಲಾಗುತ್ತಿವೆಯೇ ಉಸಿರುಗಳು ಈ ಚುಲ್ಟಾಣಿ ಕ್ರಿಮಿಯ ನೋಡು ಅದೆಂಥಹ ಗಾಢ ನಿದ್ರೆ! ಎಷ್ಟು ಕಾಲದ್ದೋ ಹೇಗೆ ಮಲಗಿದ್ದೋ ಯಾವ ಸದ್ದೂ ಯಾವ ಸ್ಪರ್ಶವೂ ದುಃಸ್ವಪ್ನವೂ ಅಲುಗಿಸದ ಸಂತೃಪ್ತ ನಿದ್ದೆ. ಎಚ್ಚರಾದ ಎಷ್ಟೋ ಹೊತ್ತಿನವರೆಗೆ ಕಣ್ಬಾರ, ಮಂಪರು ಗ್ರಹಣ ಬುದ್ಧಿಗೂ. ಕೊನೆಗೊಮ್ಮೆ ದೂರದಲ್ಲೆಲ್ಲೋ...