fbpx

Daily Archive: August 5, 2018

ಶಾಸನ ವಿಧಿಸಿದ ಎಚ್ಚರಿಕೆ: ಬಿಳಿಗಿರಿ ಕವಿತೆ ಓದುವುದು ಬಿಡುವುದು ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು..

ಲಿಮಿರಿಕ್ ಎನ್ನುವ ನಡು ಕಾಳಜಿಯ ಟಾನಿಕ್ ನಮ್ಮ ಸಾಹಿತ್ಯ ಅದೆಷ್ಟು ಮಡಿವಂತಿಕೆಯ, ಶೀಲವಂತಿಕೆಯ, ನೀತಿವಂತ ಸಾಹಿತ್ಯಜಗತ್ತು ಎಂದರೆ, ಬರವಣಿಗೆಯಲ್ಲಿ ಯಾವುದೇ ವಿಧವಾದ ಪೋಲಿತನ ಕಾಣಿಸಿಕೊಳ್ಳಬಾರದು ಹಾಗೇನಾದರೂ ಆದರೆ ಅದು ನಿಷೇಧಿಸಲ್ಪಡುತ್ತದೆ. ಆದರೆ ನಮ್ಮ ಗಂಡಾಳಿಕೆಯ ಸಮಾಜ ಹೇಗಿದೆ ಎಂದರೆ ದಿನಪ್ರತಿ ನಮ್ಮ...

ಪ್ರತಿಭಾ ಕಂಡ ಗಿಲಿ ಹೈಮೋವಿಚ್ 

ಗಿಲಿ ಹೈಮೋವಿಚ್ ಇಸ್ರೇಲಿನ ಕವಿ ಮತ್ತು ಅನುವಾದಕಿ. ಬೆಂಗಳೂರು ಕಾವ್ಯ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದಾರೆ. ಹಿಬ್ರು ಮತ್ತು ಇಂಗ್ಲಿಷ್ ಭಾಷೆಯಲ್ಲಿಆರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಸ್ರೇಲಿನಲ್ಲಿ ಜ್ಯು ಆಗಿರುವ ಬಗ್ಗೆ, ಅಲ್ಪಸಂಖ್ಯಾತ ಜನಾಂಗದವರನ್ನು ಜಗತ್ತು ನೋಡುವ ಬಗ್ಗೆ ಬಹಳ ಗಂಭೀರವಾಗಿ ಮಾತನಾಡಿದರು.  ಮರ ಬೇರು ಬಿಟ್ಟು ನೆಲೆಸುವ ಬಗ್ಗೆ ರೂಪಕವಾಗಿಸಿ ಅನೇಕ ಕವನಗನ್ನು ಬರೆದಿದ್ದಾರೆ.  ಸಂಕಲನದಿಂದಆಯ್ದ ಮೂರು ಕವನಗಳು ಕನ್ನಡದಲ್ಲಿ. ಅವರ ಪುಸ್ತಕವನ್ನು ನನಗೆ ಕೊಡುವಾಗ ಅದರಲ್ಲಿ “ನಮ್ಮ ಬೇರುಗಳು ಎಲ್ಲೇ ಇದ್ದರೂ ಕ್ಷಿತಿಜದಲ್ಲಿ ನಾವುಭೇಟಿಯಾಗುವ ಅವಕಾಶ ಎಷ್ಟು ಸಂತೋಷದಾಯಕ ” ಎಂದು ಬರೆದರು.   ಕನ್ನಡಕ್ಕೆ  : ಪ್ರತಿಭಾ ನಂದಕುಮಾರ್   ಬೇರುಗಳು -1- ಕಾಲುದಾರಿಯ ಬೇರುಗಳು ಕೆಳಗೆ ಅವಿತ ಮರದ ಬೇರುಗಳಿಂದಾಗಿ ಕಾಲುದಾರಿಗಳು ಬಿರುಕುಬಿಟ್ಟಿವೆ. ಮರದ ಮೇಲಿನ ಹಣ್ಣುಗಳು ಹಕ್ಕಿ ಪಿಕ್ಕೆಗಳಂತೆ ಕಾಣುತ್ತಿವೆ ಹಕ್ಕಿಗಳು ಮಾತ್ರ ಅವನ್ನು ತಿನ್ನಬಹುದು ಇಷ್ಟರಲ್ಲೇ...