Day: July 27, 2019

ಅಂಕಣ
ಫಿಲಂ ಸ್ಟಾರ್ । ಆಕರ್ಷ ರಮೇಶ್ ಕಮಲ

‘ಡಿಯರ್  ಕಾಮ್ರೆಡ್’  ಡಿಯರ್ ಆಗುವಲ್ಲಿ ಸೋತಿದೆ.. 

ಬಿಡುಗಡೆಗೂ ಮುನ್ನವೇ ಟ್ರೈಲರ್, ಟೈಟಲ್ ಮತ್ತು  ಹಾಡುಗಳಿಂದ ಕುತೂಹಲ ಮೂಡಿಸಿದ್ದ, ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ  ಚಿತ್ರ `ಡಿಯರ್  ಕಾಮ್ರೆಡ್’.  ಈ ಚಿತ್ರದ ಮೊದಲ ದೃಶ್ಯವನ್ನು ನೋಡಿದಾಗ `ಅರ್ಜುನ್ ರೆಡ್ಡಿ’ ಪಾತ್ರದ ಹ್ಯಾಂಗೋವರ್ ನಲ್ಲಿಯೇ  ಬಾಬ್ಬಿಯ ಪಾತ್ರ ಕೂಡ ಇದ್ದಂತೆ  ಅನ್ನಿಸುತ್ತದೆ. ಆದರೆ  ಸಿನೆಮಾ ಮುಂದುವರಿದಂತೆ  ಬೇರೆಯದೇ  ಆಯಾಮವನ್ನು ಪಾತ್ರಕ್ಕೆ ನೀಡುವ ಪ್ರಜ್ಞಾಪೂರ್ವಕ  ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಕಥಾನಾಯಕ ಬಾಬ್ಬಿ ಸಮಾಜವಾದಿ ವಿಚಾರಗಳನ್ನು ಹೊತ್ತ ಕಾಕಿನಾಡ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ. ಈ ಚಿತ್ರದ ನಾಯಕಿ […]

Read More
Featured
ಜುಗಾರಿ ಕ್ರಾಸ್

ಅರವಿಂದ ಮಾಲಗತ್ತಿ ರಾಜೀನಾಮೆ ನೀಡಬಾರದು..

‘ಅವಧಿ’ ನಿನ್ನೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅರವಿಂದ ಮಾಲಗತ್ತಿ ಅವರೊಂದಿಗೆ ಫೇಸ್ ಬುಕ್ ನೇರ ಪ್ರಸಾರ ಹಮ್ಮಿಕೊಂಡಿತ್ತು. ಸಂವಾದದಲ್ಲಿ ಮಾತನಾಡುತ್ತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅರವಿಂದ ಮಾಲಗತ್ತಿ ಅವರು ಹೊಸ ಸರ್ಕಾರ ಬಹುಮತ ಸಾಬೀತು ಪಡಿಸಿದ ತಕ್ಷಣ ರಾಜೀನಾಮೆ ನೀಡುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಖ್ಯಾತ ರಂಗಕರ್ಮಿ ಪ್ರಸಾದ್ ರಕ್ಷಿದಿ ಅವರ ಅಭಿಪ್ರಾಯ ಇಲ್ಲಿದೆ- ನೀವೂ ಚರ್ಚೆಯಲ್ಲಿ ಭಾಗವಹಿಸಬಹುದು. avadhimag@gmail.comಗೆ ಕಳಿಸಿ   ಪ್ರಸಾದ್ ರಕ್ಷಿದಿ  ಅರವಿಂದ ಮಾಲಗತ್ತಿಯವರು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ […]

Read More
ಸೈಡ್ ವಿಂಗ್

‘ನೂಪುರ ಭ್ರಮರಿ’ ನೃತ್ಯ ಸಂಶೋಧನ ಸಂಕಿರಣ

ನಾಯಿಕಾಂತರಂಗ ಪುಸ್ತಕ ಬಿಡುಗಡೆ ದಕ್ಷಿಣ ಭಾರತ ವಲಯ ಮಟ್ಟದ ನೃತ್ಯ ಸಂಶೋಧನ ವಿಚಾರbಸಂಕಿರಣ -ರಂಜಿತಾ ರಂಜನ್ ‘ನೂಪುರಭ್ರಮರಿ’ ಹಾಗೂ ‘ನಿರ್ಮಿತಿ’ ಸಂಸ್ಥೆಗಳು ಇತ್ತೀಚಿಗೆ ಆಯೋಜಿಸಿದ್ದ ದಕ್ಷಿಣ ಭಾರತ ವಲಯ ಮಟ್ಟದ ನೃತ್ಯ ಸಂಶೋಧನ ವಿಚಾರ ಸಂಕಿರಣ ಹಮ್ಮಿಕೊಂಡಿತ್ತು. ಅತ್ಯಂತ ಉತ್ಸಾಹದಿಂದ ಈ ಸಂಕಿರಣದಲ್ಲಿ ಭಾಗವಹಿಸಿದ ಸಹೃದಯರು, ಕಲಾವಿದರು ಹಾಗೂ ಕಲಾಪೋಷಕರ ದಂಡನ್ನು ಕಂಡು ಆಶ್ಯರ್ಯವಾಯಿತು.  “ನೃತ್ಯದಲ್ಲಿ ಓದುವುದು ಏನಿರುತ್ತದೆ ಬಿಡಿ” ಅನ್ನುವ ಧೋರಣೆ ಇದ್ದ ಕಾಲ ಹಿಂದಕ್ಕೆ ಹೋಗಿ, ನೃತ್ಯ ಸಂಶೋಧನೆಯ ಕಡೆ ಯುವಸಂದಣಿಯ ಆಸಕ್ತಿ ಹರಿಯುತ್ತಿರುವುದು […]

Read More
Featured
ಬಾ ಕವಿತಾ

ಉಳಿದುಹೋದ ಮಾತುಗಳು..

ಸಂದೀಪ್ ಈಶಾನ್ಯ ಅದೆಷ್ಟು ಮಾತುಗಳು ಉಳಿದುಹೋಗಿವೆ ಹೀಗೆ ಬರಿಯದಾಗಿ ಕನಸುಗಳೂ ನಿಶಬ್ಧತೆಗೆ ಹೊಂದಿಕೊಂಡಿರುವಂತೆ ನಟಿಸುತ್ತಿರುವಾಗ ಕಳೆದ ರಾತ್ರಿಯ ಬಿಕ್ಕಳಿಗೆಗಳೂ ಕೂಡ ಮಹಾಸ್ಪೋಟದಂತೆ ಕೇಳಿಸಿದೆ ನಾವಿಬ್ಬರೂ ಬಿಗಿದ ಹಾವುಗಳಂತೆ ಒಬ್ಬರನೊಬ್ಬರು ಸುತ್ತಿಕೊಂಡು ಹೊರಳಾಡುತ್ತಿರುವಾಗ ಆಕಾಶದ ಮೂಲೆಯಲ್ಲಿ ಒಂಟಿಯಾಗಿದ್ದ ನಕ್ಷತ್ರ ದೇವರಿಗೆ ಶಾಪವಿಕ್ಕಿತ್ತಂತೆ ನಿನ್ನ ಮೊಲೆಗಳ ಸೀಳಿನ ನಡುವೆ ಮುಖವನ್ನಿಟ್ಟು ಅಜ್ಞಾತಲೋಕದ ಗುಟ್ಟುಗಳನ್ನು ಕೇಳಿಸಿಕೊಂಡ ನನಗೆ ಆ ಎಲ್ಲವನ್ನೂ ನಿನ್ನ ಕಿವಿಯಲ್ಲಿ ಪಿಸುನುಡಿಯುವ ಮೊದಲು ನಿನ್ನದೇ ಎದೆಯೊಳಗಿನ ಮಾತುಗಳನ್ನು ಕೇಳಲು ಅನುವಾಗಬೇಕು ಎನಿಸುತ್ತದೆ ಹಗಲು ಮೂಡುವ ಮೊದಲು ನನ್ನ ನೀಳ […]

Read More
ಬಾ ಕವಿತಾ

ಕತ್ತಲ ರಾಜ್ಯದಲ್ಲಿ ಬೆಳಕಿಗೇನು ಬದುಕು..

ಡಾ. ಗೋವಿಂದ ಹೆಗಡೆ ಗಜಲ್-೧ ಬೇರುಗಳ ಕತ್ತರಿಸಿದ್ದಾರೆ ಇನ್ನು ಭಯವಿಲ್ಲ ನೆಟ್ಟು ನೀರೂ ಎರೆದಿದ್ದಾರೆ ಇನ್ನು ಭಯವಿಲ್ಲ ಸ್ವಂತಿಕೆಯ ಮಾತು ನಡೆಯೆಷ್ಟು ಅಪಾಯಕಾರಿ ಗಿಣಿಮಾತುಗಳ ಕಲಿಸಿಕೊಟ್ಟಿದ್ದಾರೆ ಇನ್ನು ಭಯವಿಲ್ಲ ಕತ್ತಲ ರಾಜ್ಯದಲ್ಲಿ ಬೆಳಕಿಗೇನು ಬದುಕು ಕಣ್ಣು ಮುಚ್ಚಿರಲು ಕಲಿಸಿದ್ದಾರೆ ಇನ್ನು ಭಯವಿಲ್ಲ ಇರಿವ ನಿಜಗಳ ಗೋಜು ಯಾರಿಗೆ ಬೇಕಿದೆ ಹೇಳು ಕಳ್ಳು ಕುಡಿಸಿ ಅಮಲೇರಿಸಿದ್ದಾರೆ ಇನ್ನು ಭಯವಿಲ್ಲ ಉತ್ತರಭೂಪರೇ ತುಂಬಿದ್ದಾರೆ ಎಲ್ಲೆಲ್ಲೂ ಪ್ರಶ್ನೆಗಳ ಕತ್ತು ಹಿಚುಕಿದ್ದಾರೆ ಇನ್ನು ಭಯವಿಲ್ಲ ಗಜಲ್-೨ ಎದೆಯ ಹಾದಿಯಲಿ ಖುಷಿಯ ನೆಟ್ಟವಳೆ ಎಲ್ಲಿದ್ದಿ […]

Read More