Day: September 12, 2019

New Posts
ಬಾ ಕವಿತಾ

ವಸಂತ ಬಂಧ

ದೀಪ್ತಿ ಭದ್ರಾವತಿ ಒಲುಮೆಯ ಕವಿ ಬಳಿ ಬಂದ ಕುತ್ತಿಗೆ ಬಳಸಿ ಕೇಳಿದಳು ಚೈತ್ರೆ “ತಂದಿಯೇನು ನಾ ಕೇಳಿದ ಕವಿತೆ!?” ಆತ ನಸುನಕ್ಕು ಬೆರಳ ಸೋಕಿ ಸುಮ್ಮನೆ ನಿಂತ ಅವನ ಜೇಬು ತಡಕಿದಳು ಸಿಕ್ಕ ಕಾಗದದ ಚೂರು, ಹಳೆಯ ಪೆನ್ನು ಎದೆಗೊತ್ತಿ ಮತ್ತೆ ಕೇಳಿದಳು “ಎಲ್ಲಿ ನನ್ನ ಕವಿತೆ”? ಅವ ಮಂದಹಾಸದ ಚಾಮರದೊಳಗೆ ಅಧರ ಅದ್ದುತ್ತ ಹೇಳಿದ “ಹುಡುಕಿ ನೋಡು ಒಮ್ಮೆ ನನ್ನೊಳಗೆ” ಚೈತ್ರೆ ಅಲೆಯಲೆಯಾಗಿ ಅಲೆಯತೊಡಗಿ: ಕಣ್ಣು, ಕಿವಿ ನರನಾಡಿ ಊರೂರುಗಳ ಗಲ್ಲಿ ಗಲ್ಲಿ ಅಲ್ಲೋಲ ಕಲ್ಲೋಲ […]

Read More
Avadhi
New Posts

ಗುರು ಪ್ರೀತಿಗೆ ಮಾದರಿ ಸಾಹಿತಿ ಚಂಪಾ

 ಸತೀಶ್ ಕುಲಕರ್ಣಿ ಚಂಪಾ ಹೆಸರು ಕೇಳದವರಾರು ? ನೇರ, ಖಡಕ್ ಚಾಟಿ ಮಾತಿಗೆ ಹೆಸರಾದ ಚಂಪಾ ಯಾರೇ ತಪ್ಪು ಮಾಡಿದರೂ ಟೀಕಿಸದೇ ಬಿಟ್ಟವರಲ್ಲ. ಆದರೆ ಇದೇ ಚಂಪಾ ಹಾವೇರಿಗೆ ಬಂದರೆ ತಮ್ಮ ಹೃದಯ ಬಿಚ್ಚಿ ನೆನಪಿಸಿಕೊಳ್ಳುವುದು ಹೈಸ್ಕೂಲ್ ದಿನಗಳಲ್ಲಿ ಇಂಗ್ಲೀಷ್ ಕಲಿಸಿದ ಶತಾಯುಷಿ ಗುರು ಎಂ. ಬಿ. ಹಿರೇಮಠ ಮತ್ತು ಕಾಲೇಜು ದಿನಗಳಲ್ಲಿ ಗುರುಗಳಾಗಿದ್ದ ಡಾ. ವಿ.ಕೃ ಗೋಕಾಕ್ ಅವರುಗಳನ್ನು. ಗುರು ಪ್ರೀತಿಗೆ ಹೆಸರಾದ ಚಂಪಾ ಅವರಿಗೆ ಈಗ ೮೦ ವಯಸ್ಸು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ೪ […]

Read More
New Posts
ಅವಧಿ

ಗೌರೀಶ ಕಾಯ್ಕಿಣಿಯವರ ‘ಬಿಳಿ ಕೊಕ್ಕರೆ’

ಗೋಕರ್ಣದಲ್ಲಿ ಕೂತೇ ವಿಶ್ವಜ್ಞಾನವನ್ನು ಗ್ರಹಿಸಿ ಸಹಜೀವಿಗಳೊಂದಿಗೆ ಹಂಚಿಕೊಂಡ ಮೇಧಾವಿ ಬಹುಮುಖಿ ಸಾಹಿತಿ ಗೌರೀಶ ಕಾಯ್ಕಿಣಿಯವರ ಬಿಳಿ ಕೊಕ್ಕರೆ ಎಂಬ ವಿಶ್ವದ ಆಯ್ದ ಕಿರುಗತೆ ಮತ್ತು ಅಖ್ಯಾಯಿಕೆಗಳ ಪುಸ್ತಕದ ಹೊಸ ಆವೃತ್ತಿ 70 ವರ್ಷಗಳ ನಂತರ ಈಗ ಪ್ರಕಟವಾಗಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಇದನ್ನು ಪ್ರಕಟಿಸಿದೆ. ಜಾಕ್ ಲಂಡನ್, ವಿಲಿಯಂ ಫಾಕ್ನರ್ ಇಂಥ ಶ್ರೇಷ್ಠ ಕತೆಗಾರರ ಕತೆಗಳ ಜೊತೆ, ಈಗಾಗಲೇ ಐತಿಹ್ಯಗಳಾಗಿ ಹೋಗಿರುವ ಈಡಿಪಸ್, ರಿಪ್ ವ್ಯಾನ್ ವಿಂಕಲ್, ಜಾನ್ ಆಫ್ ಆರ್ಕ್, ಪೆಂಡೋರಾ ಪೆಟ್ಟಿಗೆ, ಟ್ರಾಜನ್ […]

Read More
New Posts
ಸೈಡ್ ವಿಂಗ್

ಭಾವೈಕ್ಯತೆ ಸಾರಿದ ‘ರಾವಿ ನದಿಯ ದಂಡೆಯಲ್ಲಿ’

ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಶಿಕ್ಷಕರ ಕಲಾಸಂಘ (ರಿ) ಕೊಪ್ಪಳ, ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರ ಸಹಯೋಗದಲ್ಲಿ ಪ್ರದರ್ಶಿಸಿದ ನಾಟಕ ಭಾವೈಕ್ಯತೆ ಸಾರಿತು. ಜನಮನಗಳಿಸಿ ಯಶಸ್ವಿ ಪ್ರದರ್ಶನವಾಯಿತು. ಅಸಗರ್ ವಜಾಹತ್ ಅವರು ಬರೆದ ರಾವಿ ನದಿಯ ದಂಡೆಯಲ್ಲಿ ನಾಟಕವನ್ನು ಕನ್ನಡಕ್ಕೆ ಡಾ. ತಿಪ್ಪೇಸ್ವಾಮಿ ಅವರು ಅನುವಾದಿಸಿದ್ದಾರೆ. ಈ ನಾಟಕದ ಪ್ರದರ್ಶನವನ್ನು ಇತ್ತೀಚೆಗೆ ಸಾಹಿತ್ಯ ಭವನದಲ್ಲಿ ಪ್ರದರ್ಶನವಾಯಿತು. ಪೈಲ್ವಾನ್ ಸಮಾಜ ಸೇವೆಯಲ್ಲಿ ಬದುಕಲು ಹಾತೊರೆದರೆ, ಸಿಖಂದರ್ ಮಿರ್ಜಾ ನೂ ಹಿಂದೂ ಮುದುಕಿಯನ್ನು ಮನೆಯಿಂದ ಓಡಿಸಿ ಬದುಕಲು […]

Read More