Day: November 3, 2019

New Posts
ಮ್ಯಾಜಿಕ್ ಕಾರ್ಪೆಟ್
ಹೊಸ ಓದು

ಚ ಹ ರಘುನಾಥ್ ಅವರ ಚಿತ್ರಭೂಮಿಯ ಬರಹ ಬೆಳೆಯುತ್ತಲೇ ಇರಲಿ..

ಮುನ್ನುಡಿ ಬರಗೂರು ರಾಮಚಂದ್ರಪ್ಪ ಪ್ರಿಯ ಮಿತ್ರರಾದ ಚ.ಹ. ರಘುನಾಥ್ ಅವರು ತಮ್ಮ ಈ ಪುಸ್ತಕಕ್ಕೆ ನಾನು ಮುನ್ನುಡಿ ಬರೆಯಬೇಕೆಂದು ಅಪೇಕ್ಷಿಸಿದಾಗ ಕೂಡಲೇ ಆಗಲಿ ಎಂದೆ. ಅವರ ಪುಸ್ತಕಕ್ಕೆ ನನ್ನ ಮುನ್ನುಡಿಯ ಅಗತ್ಯವಿದೆಯೆಂದು ಅರ್ಥ ಮಾಡಿಕೊಳ್ಳಬೇಕಿಲ್ಲ. ನಿಜವೆಂದರೆ ಈಗಾಗಲೇ ತಮ್ಮ ಬರಹಗಳಿಂದ ಚಿರಪರಿಚಿತರಾಗಿರುವ ರಘುನಾಥ್ ಅವರಿಗೆ ಮುನ್ನುಡಿಯೆನ್ನುವುದು ಅನಿವಾರ್ಯವಲ್ಲ; ಅದರ ಹಂಗಿನ ಅಗತ್ಯವೂ ಇಲ್ಲ. ನಾನು ಕೂಡಲೇ ಒಪ್ಪಿದ ಕಾರಣವೆಂದರೆ ಅವರ ಲೇಖನಗಳನ್ನು ಒಟ್ಟಿಗೆ ಓದುವ ಒಂದು ಅವಕಾಶ ಸಿಕ್ಕಿದೆ ಎಂದು. ಚ.ಹ. ರಘುನಾಥ್ ಅವರ ಬರಹಗಳಿಗಿರುವ ಲಲಿತ […]

Read More
New Posts
ಬಾ ಕವಿತಾ

ದಾರಿ ಮರೆತು ಬಿಕ್ಕಳಿಸುತ್ತಿರುವ ನೆನಪುಗಳು

ನೆನಪಿನಲ್ಲಿ ಮರುಗುತ್ತಿರಬೇಕು ಕೊಡೆಯ ಮೇಲೆ ಟಪ್ ಟಪೆಂದು ಬೀಳುತ್ತಿದ್ದ ಒಂದೊಂದು ಹನಿಗಳು ನನ್ನದೇ ಅಳುವಿನ ಸದ್ದಿನಾಗುತ್ತಿತ್ತು ಅವುಗಳನ್ನು ಆರಿಸಿ, ಎಣಿಸಿ ಜೇಬಿನೊಳಗೆ ತುಂಬಿಕೊಂಡು ತಂದಿದ್ದೆ ತಂದು ಹುಲ್ಲು ಹಾಸಿನ ಮೇಲೆ ಕೂತು ಮತ್ತೆ ಎಣಿಸಿದೆ ಲೆಕ್ಕ ಸರಿಯಾಗಿಯೇ ಇತ್ತು ಅವುಗಳದ್ದು ಎಂಥ ನಿಯತ್ತು ಒಂದೂ ತಪ್ಪಿಸಿಕೊಂಡಿರಲಿಲ್ಲ ಕಂಗಳಲ್ಲಿ ದಿಗಿಲಿತ್ತು ಪಾಪ, ಹೆದರಿಕೊಂಡಿದ್ದವೊ ಏನೊ! ಮೋಡ, ಮುಟ್ಟಬೇಕಾದ ನೆಲದ ನೆನಪಿನಲ್ಲಿ ಮರುಗುತ್ತಿರಬೇಕು, ಎರಡು ದಿನ ಸರಿ ಹೋದಾವು! ಎಂದು ನಿರ್ಧರಿಸಿ ಸಾಕಿಕೊಳ್ಳಲು ತೀರ್ಮಾನಿಸಿದೆ ನನಗೇನು ಬೇಕಿರಲಿಲ್ಲ ಬೇಸರಕ್ಕೆಂದು ಕೂತಾಗ […]

Read More
New Posts
ಬಾ ಕವಿತಾ

ಬುದ್ಧನೇ ಆಗಬೇಕೆಂದಿಲ್ಲ…

ಸಿಡಿವ ಚೂರಿನ ಮೊನಚು ಶ್ರೀಕಲಾ ಕಂಬ್ಳಿಸರ   ನನ್ನ ಆದ್ಯತೆಗಳನ್ನು ಹುಗಿದಿಡಬಯಸುತ್ತೇನೆ ಕಳೆದುಹೋದ ನಕ್ಷೆಗಳು ಬದಲಾದ ನೆಲದ ಕಕ್ಷೆಗಳು ಹರಿದುಹೋಗುವ ಹೊತ್ತಿನ ಸೂತ್ರದ ನಿರ್ದೇಶನಗಳಿಗಾಗಿ ಹುಡುಕಾಡುವುದಿಲ್ಲ.   ಕಶೇರುಕದ ಕೊಂಡಿ ಬಿಗಿದುಕೊಂಡ ನನ್ನ ನೇರ ನಿಲುವುಗಳು ಕೊಳ್ಳುವ ಕಡೆಯಲ್ಲೆಲ್ಲ ಮಾರುವವನ ತೇಪೆಹಾಕಿದ ಮುಖಪುಟಕ್ಕೆ ಹೆದರಿ ಗೂನಾಗುತ್ತವೆ.   ಮುರಿದ ಸೂಜಿಯ ಅನಾಥ ಭಾವನೆಗಳನ್ನು ಚುಚ್ಚಿಸಿಕೊಂಡ ಅಜ್ಞಾತನೊಬ್ಬ ರೋಗಿಯಾದ ಸಂದರ್ಭಗಳೆಷ್ಟೋ!   ಅಂಗಡಿಗೆ ಕಿಟಕಿಗಳೇ ಇಲ್ಲದೇ ನನ್ನಾಸೆಗಳ ನೆರಳುಗಳು ಗೋಚರಿಸುವುದಾದರೂ ಹೇಗೆ? ಹುಟ್ಟಿಸುವವನು ಹೊಲದ ಸುತ್ತಳತೆಯನ್ನಳೆದು ಬೀಜ ಬಿತ್ತುವುದಿಲ್ಲ; […]

Read More
New Posts
ಹೇಳತೇವ ಕೇಳ

‘ಕಾಕೂ ಇದಕ ಡ್ರೈ ಫ್ರೂಟ್ಸ್ ಖೀರ್ ಅನೂದ ಬ್ಯಾಡ. ಘೋಟಾಳಾ  ಖೀರ್ ಅಂತೇ ಅನೂಣು’

ಘೋಟಾಳಾ ಖೀರ್ ಸರೋಜಿನಿ ಪಡಸಲಗಿ ಇದೇನ್ರೆಪಾ  ಇದು “ಘೋಟಾಳಾ ಖೀರ್” ಅಂದ್ರ ಅಂತೀರೇನು? ಸ್ವಲ್ಪ ತಡೀರಿ ನಿಮಗs ಗೊತ್ತಾಗ್ತದ. ಉತ್ತರ ಕರ್ನಾಟಕದವರು  ನಾವು. ನಮ್ಮ ಕಡೇ ಹಬ್ಬ -ಹರಿದಿನ ಆಚರಣೆ ಒಂಚೂರ  ಬ್ಯಾರೆ  ಥರಾ. ಈಗ ನೋಡ್ರಿ ದಸರಾ ದಿನ ನಮ್ಮ ಕಡೆ ಬನ್ನಿ ಬಂಗಾರ ವಿನಿಮಯ ಇರತದ. ಶಮೀಪತ್ರ ತಗೊಂಡು ಬಂದು ,ಪೂಜಿ- ಪುನಸ್ಕಾರ ಆದಮ್ಯಾಲ , ದೇವರಿಗೂ ಕೊಟ್ಟು, ಒಬ್ಬರಿಗೊಬ್ಬರು ಕೊಟ್ಟು ಭಂಗಾರದ್ಹಾಂಗ ಇರೂಣು ಅಂತ ಹೇಳೂ ರೂಢಿ. ಹಿರಿಯರ ಆಶೀರ್ವಾದ ತಗೊಳೂದು, ಕಿರಿಯರಿಗೆ […]

Read More
New Posts
ಹೇಳತೇವ ಕೇಳ

ಕಾರ್ಪೊರೇಟ್ ಸಂನ್ಯಾಸಿಗಳು!

ರಾಘವೇಂದ್ರ ರಾವ್ .ಕೆ ಕಾವ್ಯ-ಕಲೆಗಳಲ್ಲಿ ಸಾಧನೆ ಮಾಡಿದವರನ್ನು ರಸಋಷಿಗಳೆಂದು ಕರೆಯಲಾಗುತ್ತದೆ. ರಾಜರುಗಳಾಗಿದ್ದುಕೊಂಡು ಋಷಿಗಳಂತೆ ಬಾಳುವೆ ನಡೆಸಿದವರನ್ನು ರಾಜರ್ಷಿಗಳೆನ್ನುತ್ತಾರೆ. ದೇವಗಣಗಳಲ್ಲಿ ಇದ್ದುಕೊಂಡು ಋಷಿಗಳಂತೆ ಜೀವಿಸುವವರನ್ನು ದೇವರ್ಷಿಗಳೆಂದು, ತಮ್ಮ ಸಾಧನೆ, ತಪದ ಮೂಲಕ ಪರಬ್ರಹ್ಮನನ್ನು ಅರಿತವರನ್ನು ಬ್ರಹ್ಮರ್ಷಿಗಳೆಂದು ಕರೆಯಲಾಗುತ್ತದೆ. ಈ ಗುಂಪಿಗೆ ಹೊಸದೊಂದು ಸೇರ್ಪಡೆ ಅನ್ನಬಹುದು, ಕಾರ್ಪೊರೇಟ್‍ನಲ್ಲಿ ಇದ್ದುಕೊಂಡು ಋಷಿಗಳಂತೆ ಬಾಳುವವರನ್ನು ಕಾರ್ಪರ್ಷಿಗಳೆನ್ನಬಹುದೇನೋ. ನಾನು ಇಲ್ಲಿ ಹೇಳೋಕೆ ಹೊರಟಿರೋ ವಿಷಯ ಏನೆಂದರೆ, ಈ ಕಾರ್ಪೊರೇಟ್ ಜಗತ್ತಿನ ಒಂದಿಷ್ಟು ಮಂದಿಯ ಬಗೆಗೆ. ಹೇಗೆ ನಾವು ನಮ್ಮ ಸಮಾಜದಲ್ಲಿ ಭಿನ್ನ ಭಿನ್ನವಾದ ವ್ಯಕ್ತಿಗಳನ್ನು, […]

Read More