ಮಕ್ಕಳ ಕೃತಿಗೆ ಒಂದು ಲಕ್ಷ ರೂಪಾಯಿ ಬಹುಮಾನ

ಕನ್ನಡದಲ್ಲಿ ರಚಿತವಾಗಿರುವ ಅತ್ಯುತ್ತಮ ಮಕ್ಕಳ ಕೃತಿಗೆ ವಾತ್ಸಲ್ಯ ಪುರಸ್ಕಾರ

download
ಮುಂಬೈನ ಪದ್ಮ ಬಿನಾನಿ ಫೌಂಡೇಷನ್ ಮಕ್ಕಳ ಸಾಹಿತ್ಯವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಪ್ರತಿವರ್ಷ ಭಾರತೀಯ ಭಾಷೆಗಳ ಮಕ್ಕಳ ಸಾಹಿತ್ಯಕ್ಕೆ ವಾತ್ಸಲ್ಯ ಪುರಸ್ಕಾರವನ್ನು ನೀಡುತ್ತಿದೆ. ಪ್ರತಿವರ್ಷವೂ ಒಂದೊಂದು ಭಾರತೀಯ ಭಾಷೆಯನ್ನು ಆಯ್ಕೆಮಾಡಿಕೊಂಡು ಆ ಭಾಷೆಯಲ್ಲಿ ರಚಿತವಾಗಿರುವ ಅತ್ಯುತ್ತಮ ಮಕ್ಕಳ ಕೃತಿಯೊಂದಕ್ಕೆ ಒಂದು ಲಕ್ಷ ರೂಪಾಯಿ ಮೊತ್ತದ ನಗದು ಹಣ ಮತ್ತು ಫಲಕವನ್ನು ನೀಡುತ್ತಿದೆ. ಈ ವರ್ಷ ಕನ್ನಡ ಭಾಷೆಯನ್ನು ಪದ್ಮ ಬಿನಾನಿ ಫೌಂಡೇಷನ್ ಆಯ್ಕೆ ಮಾಡಿಕೊಂಡಿದೆ. ಕನ್ನಡದಲ್ಲಿ ಪ್ರಕಟಗೊಂಡಿರುವ ಅತ್ಯುತ್ತಮ ಕೃತಿಗಳನ್ನು ಲೇಖಕರು ಈ ಪುರಸ್ಕಾರಕ್ಕೆ ಕಳುಹಿಸಬಹುದಾಗಿದೆ.

ಮಕ್ಕಳ ಸಾಹಿತ್ಯ ಸೃಷ್ಟಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಲೇಖಕರು ತಾವು ಅತ್ಯುತ್ತಮವೆಂದು ಭಾವಿಸುವ ತಮ್ಮ ಎರಡು ಕೃತಿಗಳನ್ನು 2015ರ ಡಿಸೆಂಬರ್ 30ರ ಒಳಗಾಗಿ PADMA BINANI FOUNDATION, MERCANTILE CHAMBERS, 2ND FLOOR, 12 J.N.HEREDIA MARG, BALLARD  ESTATE, MUMBAI-400 001. PHONE: 022-22690506-(10)- ಇಲ್ಲಿಗೆ ಕಳುಹಿಸಬಹುದಾಗಿದೆ.

ಜೊತೆಗೆ ಲೇಖಕರು ತಮ್ಮ ಪೂರ್ಣ ಹೆಸರು, ವಿಳಾಸ, ವ್ಯಕ್ತಿ ವಿವರ, ಪಾಸ್ಪೋರ್ಟ್ ಸೈಜಿನ ಎರಡು ಫೋಟೋಗಳನ್ನು ಕಳುಹಿಸಬೇಕು.
ಈ ಕ್ಷೇತ್ರದ ಪರಿಣತರ ಸಮಿತಿ ಆಯ್ಕೆ ಮಾಡುವ ಕೃತಿಗೆ ವಾತ್ಸಲ್ಯ ಪುರಸ್ಕಾರವನ್ನು ನೀಡಲಾಗುವುದು ಎಂದು ಫೌಂಡೇಷನ್ ತಿಳಿಸಿದೆ.

Leave a Reply