ಒಮ್ಮೆ ಕದಡಿದ ಕೊಳವು..

Ninna nenapu album

ಒಮ್ಮೆ ಕದಡಿದ ಕೊಳವು

ಎಸ್. ಬಾಗೇಶ್ರೀ

ಒಮ್ಮೆ ಕದಡಿದ ಕೊಳವು,
ಮತ್ತೆ ತಿಳಿಯಾಗಿರಲು,
ತಳದೀ ಮಲಗಿಹ ಕಲ್ಲು ನಿನ್ನ ನೆನಪು:

ಅಡಿ ಅಡಿಯನು ಎಣಿಸಿ,
ಇಡು ಮನದ ಮೂಲೆಯಲಿ,
ಹುಚ್ಚು ಓಟದ ಬಯಕೆ ನಿನ್ನ ನೆನಪು:

ಬೇಸರವು ಕವಿದಿರಲು,
ಎಲ್ಲ ಕಹಿಯಾಗಿರಲು,
ಸಿಹಿಕನಸ ನೇವರಿಕೆ ನಿನ್ನ ನೆನಪು:

ಬಹಳ ಬಹಳ ಬಳಸಿ ಹಳಸಿದ,
ಪದಪುಂಜಗಳ ನಡುವೆ,
ಹೊಸತ ಹೊಳೆಸುವ ಪ್ರತಿಮೆ ನಿನ್ನ ನೆನಪು:

ಜಗವೆಲ್ಲ ಹೊಗಳಿರಲು,
ನಾನೇ ನಾನೆಸಿರಲು,
ಎದೆಯಾಳದ ಅಳುಕು ನಿನ್ನ ನೆನಪು:

ಎಲ್ಲ ವಾದದ ಕೊನೆಗೆ,
ಆವರಿಸೋ ಮೌನದ,
ತರ್ಕ ಮೀರಿದ ಭಾವ ನಿನ್ನ ನೆನಪು

1 comment

  1. ಈ ಹಾಡನ್ನು ತುಂಬಾ ಕೇಳಿದ್ದೆ ಆ ಆಲ್ಬಂನ ಅಷ್ಟು ಹಾಡುಗಳು ತೀರಾ ಕಾಡುವುವು.ಇವರ ವಿಳಾಸ ಫೋನ್ ನಂಬ್ರ ಸಿಕ್ರೆ ಒಸಿ ಹೇಳಿ

Leave a Reply