ನಾನಿನ್ನು ಏನನ್ನೂ ಬರೆಯುವುದಿಲ್ಲ…

ಸ್ವಗತ

vanamala sampannakumar writer

ವನಮಾಲಾ ಸಂಪನ್ನಕುಮಾರ
~~~~~

ಬೆನ್ನಿಗಿರಿದವರು
ಎದುರು ಬಂದು
ಸುರಿವ ನೆತ್ತರಿಗೆ
ಕಾರಣ ಕೇಳುತ್ತಾರೆ

ಆಗ ಇನ್ನಷ್ಟು ನೋವು

* * * *

ದನಿ ಮೌನವಾಗಿ
ಯುಗ ಉರುಳಿದೆ
ಹಾಡು ನನಗೀಗ ಅಪರಿಚಿತ
* * * * *

blood clothe

ಯಾವ್ಯಾವುದೋ ಕಾರಣಕ್ಕೆ
ಎದೆಯೊಳಗೆ ಸಿಡಿಮದ್ದು
ಹುಟ್ಟುತ್ತದೆ ಅದು
ಸಿಡಿಯದಂತೆ ತಡೆಯುವುದೇ
ನನ್ನ ಬದುಕಾಗಿದೆ
* * * * *

ಸುಖವನ್ನೂ ದು:ಖವನ್ನೂ
ಒಟ್ಟಿಗೇ ತೂಗುತ್ತಿದ್ದೇನೆ
ತೂಕ ನೋಡಿದಮೇಲೆ
ಎದೆಭಾರ ಹೆಚ್ಚಾದಂತೆ
ನಿಟ್ಟುಸಿರು…
* * * * * *

ಪ್ರೀತಿಗೆ ಅಂಟಿಕೊಂಡಿದ್ದೇನೆ
ದ್ವೇಷ ನನ್ನ
ಮನೆ ಬಾಗಿಲು
ಬಡಿದು ವಾಪಾಸು ಹೋಗಿದೆ
* * * * * *

ಬೇಡೆಂದರೂ
ಮುಚ್ಚಿಟ್ಟ ಸಂಕಟಗಳು
ಸಾಲಾಗಿ ನಿಂತು
ಸಾಲುಗಳಾಗಿ ಬಿಡುತ್ತವೆ

ನಾನಿನ್ನು ಏನನ್ನೂ ಬರೆಯುವುದಿಲ್ಲ.

 

2 comments

  1. ಪ್ರೀತಿಗೆ ಅಂಟಿಕೊಂಡಿದ್ದೇನೆ
    ದ್ವೇಷ ನನ್ನ
    ಮನೆ ಬಾಗಿಲು
    ಬಡಿದು ವಾಪಾಸು ಹೋಗಿದೆ kavithe thumba chennagi moodi bandide

Leave a Reply