ಎಸ್ ದಿವಾಕರ್ ಈಗ S Diwakar

Narendraa Pai

ನರೇಂದ್ರ ಪೈ 

ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ನವರು ಪ್ರಕಟಿಸಿರುವ ಎಸ್ ದಿವಾಕರ್ ಅವರ ಅನುವಾದಿತ ಇಂಗ್ಲೀಷ್ ಕತೆಗಳ ಸಂಕಲನ Hundreds of Streets to the Palace of Lights ನಲ್ಲಿ ಸೇರಿರುವ ಹದಿನೇಳು ಕತೆಗಳು ಯಾವುವು ಎಂಬ ಕುತೂಹಲ ಸಹಜವಾದದ್ದೇ. ಎಸ್ ದಿವಾಕರ್ ಅವರ “ರೂಪ ರೂಪಗಳನು ದಾಟಿ” ಸಂಕಲನದಲ್ಲಿ ಲಭ್ಯವಿರುವ ಒಂಭತ್ತು ಕತೆಗಳಲ್ಲಿ ಆರು ಕತೆಗಳು ಅನುವಾದಗೊಂಡಿರುವುದು ವೈಯಕ್ತಿಕವಾಗಿ ನನಗೆ ಹೆಮ್ಮೆ.

S divakar english cover

ಎಲ್ಲ ಹದಿನೇಳು ಕತೆಗಳ ಪಟ್ಟಿ ಇಲ್ಲಿದೆ.

ಕ್ರೌರ್ಯ

ಮೃತ್ಯುಂಜಯ
ಇತಿಹಾಸ
ಅಂತರಾಳದಲ್ಲಿ ನಿಂತ ನೀರು
ಮುರುಗಭೂಪತಿಯ ಮಗ: ಒಂದು ಕತೆ ಮತ್ತು ಪ್ರಶ್ನೆ ಪತ್ರಿಕೆ
ಬಿಳಿಯ ಹೂಗಳ ಕವಿತೆ
ಬೆದರಿಕೆ
ಟೊಮ್ಯಾಟೊ
ಫೋಟೋ
ಋಣ
ಹರಕೆ
ದ್ವಂದ್ವ
ಆತಂಕ
ಉಚ್ಛಾಟನೆ
ಕೋಮುವಾದಿ
ದಾರಿ ನೂರಾರುಂಟು ಬೆಳಕಿನರಮನೆಗೆ
ಪೆಟ್ಟಿಗೆ

S divakar

ಇದಲ್ಲದೆ, ಎಸ್ ದಿವಾಕರ್ ಅವರ ಮಾತುಗಳು, ಅನುವಾದಕಿ ಸುಶೀಲಾ ಪುನೀತಾ ಅವರ ಮಾತುಗಳ ಜೊತೆ ಸಿ ಎನ್ ರಾಮಚಂದ್ರನ್ ಅವರು ವಿವರವಾದ ಒಂದು ಪ್ರಸ್ತಾವನೆಯನ್ನೂ ಬರೆದಿದ್ದಾರೆ. ಇಲ್ಲಿ ಅವರು ಕನ್ನಡ ಸಣ್ಣಕತೆಗಳ ಸ್ವರೂಪ ಮಾಸ್ತಿಯವರಿಂದ ತೊಡಗಿ ವಸುಧೇಂದ್ರರ ವರೆಗೆ ಹೇಗೆಲ್ಲ ಬದಲಾಗುತ್ತ ಬಂದಿದೆ, ಯಾವೆಲ್ಲ ಬಗೆಯ ಸಂಘರ್ಷ-ಪ್ರತಿರೋಧಗಳನ್ನು ಹಾದು ಬಂದಿದೆ, ವಿಭಿನ್ನ ಕಾಲಘಟ್ಟಗಳಲ್ಲಿ ಅದು ಹೇಗೆ ಪ್ರತಿಸ್ಪಂದಿಸುತ್ತ ತನ್ನ ಜೀವಂತಿಕೆಯನ್ನು ಉದ್ದೀಪಿಸಿಕೊಂಡಿದೆ ಎಂಬ ಬಗ್ಗೆ ಬರೆದಿರುವ ಈ ಲೇಖನ ಅನನ್ಯವಾಗಿದೆ ಮತ್ತು ಕನ್ನಡ ಸಣ್ಣಕತೆಗಳ ಇತಿಹಾಸವನ್ನೇ ಸಂಕ್ಷಿಪ್ತವಾಗಿ ಕಣ್ಣಿಗೆ ಕಟ್ಟುವಂತೆ ಹಿಡಿದುಕೊಡುತ್ತದೆ.

Leave a Reply