ಅಪ್ಪ ಮಕ್ಕಳ ಕ್ರಿಕೆಟ್ ಆಟ

ಭಾರತೀಯ ಕ್ರಿಕೆಟ್ನಲ್ಲಿ ತಂದೆ ಮಕ್ಕಳು

uttam 32 (4 6)..1ಹನುಮಂತ ಅನಂತ ಪಾಟೀಲ್

ಮೂಲತಃ ಭಾರತ ಒಂದು  ಭಾವನಾತ್ಮಕ ದೇಶ. ಈ ಹಿಂದೆ ಈ ದೇಶವನ್ನಾಳಿದ ರಾಜ ಮಹಾರಾಜರು ನವಾಬರು ಆದಿಲ್ಶಾಹಿಗಳು ವಂಶಪಾರ್ಯಂರ್ಯವನ್ನು ಒಪ್ಪಿಕೊಂಡು ಬಂದಂತಹವರು. ಸುಮ್ಮ,ನೆ ಒಮ್ಮೆ ಈ ವಂಶವಳಿಗಳ ಬಗೆಗೆ ಅವಲೋಕಿಸುವ, ಮೊಘಲ್ ಸಾಮ್ರಾಜ್ಯವೆಂದರೆ ನಮಗೆ ತಕ್ಷಣಕ್ಕೆ ನೆನಪಿಗೆ ಬರುವ ಹೆಸರು ಅಕಬರ ಆತನಷ್ಟು ಪ್ರಭಾವಶಾಲಿ ದೊರೆ ಮುಂದೆ ಆ ವಂಶದಲ್ಲಿ ಬರಲಿಲ್ಲ. ವಿಜಾಪುರದ ಆದಿಲ್ಶಾಹಿಗಳಲ್ಲಿ ಅಲಿ ಆದಿಲ್ ಶಾಹಿಯಷ್ಟು ಪ್ರಖ್ಯಾತ ದೊರೆ ಮುಂದೆ ಆ ವಂಶದಲ್ಲಿ ಸಹ ಬರಲಿಲ್ಲ. ಅದೇ ರೀತಿ ಹಕ್ಕ ಬುಕ್ಕ ಸಂಸ್ಥಾಪಿತ ವಿಜಯನಗರದ ಸಾಮ್ರಾಜ್ಯದ ವಂಶಾವಳಿಯನ್ನು ಗಮನಿಸಿದರೆ ಶ್ರೀ ಕೃಷ್ಣದೇವರಾಯನಷ್ಟು ಪ್ರಸಿದ್ಧ ದೊರೆ ಆ ಹಿಂದೆ ಇರಲಿಲ್ಲ ಮುಂದೆ ಬರಲಿಲ್ಲ. ಇದೇ ರೀತಿ ಹರ್ಷವರ್ಧನ, ಹೊಯ್ಸಳ ದೊರೆ ವಿಷ್ಣುವರ್ಧನ, ಚಾಲುಕ್ಯ ದೊರೆ ಇಮ್ಮಡಿಪುಲಕೇಶಿ ಕದಂಬ ದೊರೆ ಮಯೂರವರ್ಮ ಮುಂತಾದ ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು. ಒಟ್ಟಿನಲ್ಲಿ ಈ ವಿವರಣೆಯ ಮತಿತಾರ್ಥ ಇಷ್ಟೆ ಸಮರ್ಥರಷ್ಟ್ಟೆ ಹೆಸರುವಾಸಿಗಳಾಗಿದ್ದಾರೆ.

ಇನ್ನು ಸ್ವಾತಂತ್ರೋತ್ತರ ದೇಶದ ರಾಜಕೀಯ ವ್ಯವಸ್ಥೆಯನ್ನು ಗಮನಿಸಿದರೆ ನೆಹರೂನಷ್ಟು ಹೆಸರನ್ನು ಅವರ ವಂಶದ ಕುಡಿಗಳಾದ ಶ್ರೀಮತಿ ಇಂದಿರಾ ಗಾಂದಿ ಮತ್ತು ರಾಜೀವ ಗಾಂಧಿಯವರು ಪಡೆಯಲಿಲ್ಲ. ನಮ್ಮ ದೇಶದ ಕ್ರೀಡಾ ಕ್ಷೇತ್ರದಲ್ಲಿ ವಿಶೇಷತಃ ಕ್ರಿಕೆಟ್ನಲ್ಲಿ ಕೆಲವು ವಂಶಾವಳಿಗಳು ಹೆಸರು ಮಾಡಿವೆ. ಅವುಗಳನ್ನು ಈಗ ಪರಿಶೀಲಿಸುವ. ಸ್ವಾತಂತ್ರೋತ್ತರ ಭಾರತದ ಕ್ರಿಕೆಟ್ನಲ್ಲಿ ದೆಹಲಿಯ ಲಾಲಾ ಅಮರನಾಥ ಮುಂಬೈನ ವಿನೋದ್ ಮಂಕದ ಮತ್ತು ಸುನಿಲ ಗವಾಸ್ಕರ ಬಂಗಾಲದ ರಾಯ್ ಹೆಸರು ಮಾಡಿದವರು ಮತ್ತು ರಾಯ್ ಹೊರತು ಪಡಿಸಿ ಉಳಿದವರು ಭಾರತದ ತಂಡಗಳನ್ನು ಮುನ್ನಡೆಸಿದವರು. ಮುಂದೆ ಲಾಲಾ ಅಮರನಾಥನ ಮಕ್ಕಳಾದ ಮೊಹಿಂದರ್ ಅಮರನಾಥ, ಸುರಿಂದರ್ ಅಮರನಾಥ ಮತ್ತು ರಾಜಿಂದರ್ ಅಮರನಾಥ ಸೋದರರು ಸಹ ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇವರಲ್ಲಿ ಭಾರತೀಯ ತಂಡಕ್ಕೆ ಹೆಚ್ಚಿಗೆ ಆಡಿದವನು ಮೊಹಿಂದರ್ ಅಮರನಾಥ. ಆತನ ಹೆಸರನ್ನು ಹೊರತು ಪಡಿಸಿದರೆ ಉಳಿದವರ ಹೆಸರು ಅಷ್ಟಾಗಿ ಜನ ಮಾನಸದಲ್ಲಿ ಇಲ್ಲ.

1

ಮೋಹಿಂದರ್ ಅಮರನಾಥ ಈಗಿನ ಪೀಳಿಗೆಗೆ ನೆನಪಿರುವುದು ಕ್ರಿಕೆಟ್ ಕಮೆಂಟೇಟರ್ ಆಗಿ ಮತ್ತು 1983 ರ ವಿಶ್ವ ಕಪ್ ವಿಜೇತ ತಂಡದ ಸದಸ್ಯನಾಗಿದ್ದನೆಂಬುದು ಹಲವರಿಗೆ ಮಾತ್ರ ಗೊತ್ತಿರುವಂತಹುದು. ಆತ ದೆಹಲಿ ತಂಡದ ಪರವಾಗಿ ದೇಶೀಯ ಕ್ರಿಕೆಟ್ನಲ್ಲಿ ಆಡಿದ್ದ ಮತ್ತು ಆ ತಂಡದ ನಾಯಕತ್ವವನ್ನು ವಹಿಸಿದ್ದನೆಂಬುದು ಅನೇಕರಿಗೆ ಗೊತ್ತಿಲ್ಲ. ಮುಂಬೈನ ಅಶೋಕ ಮಂಕದ ಕೆಲ ವರ್ಷಗಳ ಕಾಲ ಭಾರತ ತಂಡದ ಕಾಯಂ ಸದಸ್ಯನಾಗಿದ್ದನೆಂಬುದು ಮತ್ತು ಸುನಿಲ ಗವಾಸ್ಕರನ ಪ್ರಭಾವಳಿಯ ಮುಂದೆ ಈತ ಮಸುಕಾಗಿ ಹೋದ ಎಂಬುದು ಇಂದಿನ ಯುವ ಪೀಳಿಗೆಗೆ ಗೊತ್ತಿಲ್ಲದ ಸಂಗತಿ. ಇನ್ನು ಬಂಗಾಲದ ಅಂಬರ್ ರಾಯ್ 1969 ರಲ್ಲಿ ಭಾರತ ತಂಡದ ಸದಸ್ಯನಾಗಿ ನ್ಯೂಜಿಲಂಡ್ ಮತ್ತು ಆಷ್ಟ್ರೇಲಿಯಾ ತಂಡಗಳ ವಿರುದ್ಧ ಕೆಲ ಪಂದ್ಯಗಳನ್ನಾಡಿದನಾದರೂ ಅಷ್ಟಾಗಿ ಮಿಂಚಲಿಲ್ಲ.

ಇನ್ನು ಭಾರತ ತಂಡದ ಪ್ರಮುಖ ಯಶಸ್ವಿ ನಾಯಕ ಮನ್ಸೂರ್ ಅಲಿಖಾನ್ ಪಟೌಡಿ ಪ್ರಖ್ಯಾತ ಕ್ರಿಕೆಟ್ ಪಟು ಸೀನಿಯರ್ ಪಟೌಡಿಯ ಮಗನಾದರೂ ಈತ ಆತನನ್ನು ಮೀರಿ ಹೆಸರು ಮಾಡಿದ. ಸೀನಿಯರ್ ಪಟೌಡಿ ಸ್ವಾತಂತ್ರ ಪೂರ್ವದಲ್ಲಿ ಇಂಗ್ಲಂಡ್ ತಂಡ ಎಂಸಿಸಿಯ ಪರವಾಗಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದ. ಇನ್ನು ಸುನಿಲ್ ಗವಾಸ್ಕರ ಹಲವು ದಾಖಲೆಗಳ ಸರದಾರ ಹೆಸರಾಂತ ಭಾರತದ ಆರಂಭಿಕ ಬ್ಯಾಟ್ಸಮನ್ ಆಗಿದ್ದು ಈಗ ಹೆಸರಾಂತ ಅಂತರಾಷ್ಟ್ರೀಯ ಕಿಕೆಟ್ ಕಮೆಂಟೇಟರ್. ಈತನ ಮಗ ರೋಹನ್ ಗವಾಸ್ಕರ ಮುಂಬೈನವನಾದರೂ ಆತ ತನ್ನ ಕ್ರಿಕೆಟ್ ಕರಿಯರ್ ಪ್ರಾರಂಭಿಸಿದ್ದು ಬಂಗಾಲ ತಂಡದ ಆಟಗಾರನಾಗಿ. ಸೈಯದ್ ಕೀರ್ಮಾನಿ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷನಾಗಿದ್ದಾಗ ರೋಹನ್ ಗವಾಸ್ಕರ್ ಆಷ್ಟ್ರೇಲಿಯಾ ವಿರುದ್ಧದ ಒಂದು ದಿನದ ಕ್ರಿಕೆಟ್ ಸರಣಿಯೊಂದಕ್ಕೆ ಆಯ್ಕೆಯಾಗಿದ್ದ, ಆತ ಸಾಧಾರಣ ಪ್ರದರ್ಶನ ನೀಡಿದ್ದು ಮುಂದೆಂದೂ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲಿಲ್ಲ. ಹೈದರಾಬಾದಿನ ಖ್ಯಾತ ಕ್ರ್ರಿಕೆಟಿಗ ಎಂ.ಎಲ್.ಜಯಸಿಂಹನ ಮಗ ವಿವೇಕ ಜಯಸಿಂಹ ಹೈದರಾಬಾದನ ರಣಿಜಿ ಕ್ರಿಕೆಟ್ ತಂಡಕ್ಕೆ ಅನೇಕ ವರ್ಷಗಳ ಕಾಲ ಆಡಿದ, ಖ್ಯಾತ ಬ್ಯಾಟ್ಸಮನ್ ಆಗಿದ್ದರೂ ಈತನಿಗೆ ರಾಷ್ಟ್ರೀಯ ತಂಡಕ್ಕೆ ಆಡುವ ಅವಕಾಶ ದೊರೆಯಲೆ ಇಲ್ಲ. ಮುಂಬೈನ ಖ್ಯಾತ ಬ್ಯಾಟ್ಸಮನ್ ವಿಜಯ ಮಾಂಜ್ರೇಕರನ ಮಗ ಸಂಜಯ ಮಾಂಜ್ರೇಕರ ಅನೇಕ ವರ್ಷಗಳ ಕಾಲ ಭಾರತೀಯ ಟೆಸ್ಟ್ ಮತ್ತು ಏಕ ದಿನ ಕ್ರಿಕೆಟ್ ತಂಡಗಳ ಕಾಯಂ ಸದಸ್ಯನಾಗಿದ್ದುದರ ಜೊತೆಗೆ ಉತ್ತಮ ಸಾಧನೆಯನ್ನೂ ಸಹ ಮಾಡಿದ ಅಲ್ಲದೆ ತಂದೆಯಂತೆ ಹೆಸರು ಮಾಡಿದ.

2

ಇನ್ನು ಕರ್ನಾಟಕದ ವಿಷಯಕ್ಕೆ ಬರುವುದಾದರೆ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ಗಳಲ್ಲಿ ಭಾರತದ ಪರವಾಗಿ ಆಲ್ ರೌಂಡರ್ ಆಗಿ ಹಲವು ವರ್ಷಗಳ ಕಾಲ ಆಡಿದ ರೋಜರ್ ಬಿನ್ನಿ 1983 ರ ವಿಶ್ವ ಏಕದಿನ ಕ್ರಿಕೆಟ್ ತಂಡದ ಸದಸ್ಯ ಆ ಸರಣಿಯಲ್ಲಿ ಒಟ್ಟು 21 ವಿಕೆಟ್ಗಳನ್ನು ಪಡೆದು ಎರಡು ಸಲ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದಿದ್ದ. ಕರ್ನಾಟಕ ರಣಜಿ ತಂಡದಲ್ಲಿ ಕಾಯಂ ಆಗಿ ಓಪನಿಂಗ್ ಬ್ಯಾಟ್ಸಮನ್ ಮತ್ತು ಬೌಲರ್ ಆಗಿ ಆಡುತ್ತಿದ್ದರೂ ಈತನನ್ನು ಅಂತರಾಷ್ಟ್ರೀಯ ಕ್ರಿಕೆಟ್ ಆಡುವಾಗ ಕೆಳ ಕ್ರಮಾಂಕಗಳಲ್ಲಿ ಆಡಿಸಲಾಯಿತು. ಆದರೂ ತನ್ನ ಇತಿಮಿತಿಯಲ್ಲಿಯೆ ಚೆನ್ನಾಗಿ ಆಡಿ ತೆರೆ ಮರೆಗೆ ಸರಿದು ಹೋದ. ಈತನ ಮಗ ಸ್ಟುವರ್ಟ ಬಿನ್ನಿ ಸಹ ಆಲ್ ರೌಂಡ್ ಆಟಗಾರ. ಗೋವಾ ಮತ್ತು ಕನರ್ಾಟಕ ರಣಿಜಿ ತಂಡಗಳ ಪರವಾಗಿ ಆಡಿ ಕೆಲ ಗಮನೀಯ ಸಾಧನೆಗಳನ್ನು ಮಾಡಿದ್ದಾನೆ. ಈತ ಕೆಲ ಕಾಲ ಸಿಸಿಎಲ್ ಕ್ರಿಕೆಟ್ನಲ್ಲಿ ಆಡಿದ್ದು ಈತ ಭಾರತ ತಂಡಕ್ಕೆ ಬರುವಲ್ಲಿ ವಿಳಂಬವಾಯಿತು. ಈಗ ಈತ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಪರವಾಗಿ ಮೂರು ವರ್ಷಗಳಿಂದ ಆಡುತ್ತಿದ್ದು ಗಮನಾರ್ಹ ಸಾಧನೆ ಮಾಡುತ್ತಿದ್ದಾನೆ.

ಈಗೊಂದರಡು ವರ್ಷಗಳಿಂದ ಭಾರತೀಯ ಟೆಸ್ಟ ಮತ್ತು ಏಕದಿನ ತಂಡಗಳ ಸದಸ್ಯನಾಗಿದ್ದು ಆಷ್ಟ್ರೇಲಿಯಾ, ನ್ಯೂಜಿಲಂಡ್, ಬಾಂಗ್ಲಾ ಮತ್ತು ಶ್ರೀಲಂಕಾ ವಿರುದ್ಧ ಕೆಲ ಪಂದ್ಯಗಳನ್ನಾಡಿದ್ದಾನೆ. ಕಳೆದ ವಿಶ್ವಕಪ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರೂ ಒಂದೇ ಒಂದು ಪಂದ್ಯದಲ್ಲಿ ಈತ ಆಡಲಾಗಲಿಲ್ಲ. ಉತ್ತಮ ಮೀಡಿಯಂ ಫಾಸ್ಟ್ ಬೌಲರ್ ಮತ್ತು ಬ್ಯಾಟ್ಸಮನ್ ಆಗಿರುವ ಈತ ಕಳೆದ ಜಿಂಬಾಬ್ವೆ ಏಕ ದಿನ ಮತ್ತು ಟಿ 20 ಸರಣಿಯಲ್ಲಿ ಗಮನ ಸೆಳೆಯಬಹುದಾದ ಪ್ರದರ್ಶನ ನೀಡಿದ್ದಾನೆ. ಇನ್ನು ಟೆಸ್ಟ್ ಕ್ರಿಕೆಟಿಗ ಬ್ರಿಜೇಶ ಪಟೇಲ್ ಮಗ ಉದಿತ ಪಟೇಲ ಉತ್ತಮ ಸ್ಪಿನ್ನರ್ ಹಾಗೂ ಬ್ಯಾಟ್ಸಮನ್ ಆಗಿರುವನಾದರೂ ಈತ ಭಾರತೀಯ ತಂಡಕ್ಕೆ ಆಡಲಾಗಿಲ್ಲ. ಇನ್ನೂ ಕನರ್ಾಟಕ ತಂಡದ ಪರ ರಣಿಜಿಯಲ್ಲಿ ಮತ್ತು ಕೆಪಿಎಲ್ ತಂಡಗಳಲ್ಲಿ ಆಡುತ್ತಿದ್ದಾನೆ.

ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸಮನ್ ಸೈಯದ್ ಕೀಮರ್ಾನಿಯ ಮಗ ಸಾದಿಕ್ ಕೀರ್ಮಾನಿ ಈ ವರ್ಷದ ಕೆಪಿಎಲ್ನಲ್ಲಿ ಆಡುತ್ತಿದ್ದು ಆತನ ಆಟವನ್ನು ಗಮನಿಸ ಬೇಕಿದೆ. ಕರ್ನಾಟಕ ತಂಡಕ್ಕೆ ಮುಂದೆ ಆಯ್ಕೆಯಾಗಬಹುದಾದರೂ ರಾಷ್ಟ್ರೀಯ ತಂಡಕ್ಕೆ ಆಡುವನೆ ಎಂಬುದು ಬರುವ ಕಾಲ ಮತ್ತು ಆತನ ಆಟದ ಗೈರತ್ತು ಅದನ್ನು ಸಾಬೀತು ಪಡಿಸಬೇಕಿದೆ. ಇನ್ನು ತಮಿಳ್ನಾಡಿನ ಖ್ಯಾತ ಪ್ರಾರಂಭಿಕ ಬ್ಯಾಟ್ಸಮನ್ ಮತ್ತು ಭಾರತೀಯ ತಂಡದ ಪರವಾಗಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಆಡಿ ಹೆಸರು ಮಾಡಿದ ಕೃೃಷ್ಣಮಾಚಾರಿ ಶ್ರೀಕಾಂತನ ಮಗ ಅನಿರುದ್ಧ ಶ್ರೀಕಾಂತ ಆಲ್ ರೌಂಡರ್ ಆಟಗಾರನಾಗಿ ತಮಿಳ್ನಾಡು ಮತ್ತು ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ ಈತ ಈಗ ಹೈದರಾಬಾದ ಪರವಾಗಿ ಐಪಿಎಲ್ನಲ್ಲಿ ಈ ವರ್ಷದಿಂದ ಆಡುತ್ತಿದ್ದಾನೆ. ಈತನು ಸಹ ಭಾರತೀಯ ತಂಡಕ್ಕೆ ಆಡುವನೆ ಎಂಬುದು ಕಾಲ ಉತ್ತರಿಸಬೇಕಾದ ಪ್ರಶ್ನೆ ..!

3

ಇದನ್ನೆಲ್ಲ ಅವಲೋಕಿಸಿದರೆ ಅಶೋಕ ಮಂಕದ, ಮೋಹಿಂದರ್ ಅಮರನಾಥ ಮತ್ತು ಸಂಜಯ ಮಾಂಜ್ರೇಕರರನ್ನು ಹೊರತು ಪಡಿಸಿದರೆ ಉಳಿದ ಖ್ಯಾತನಾಮ ಕ್ರೀಡಾ ಪಟುಗಳ ಮಕ್ಕಳು ಅವರ ತಂದೆಯರು ಮಾಡಿದ ಸಾಧನೆಗಳನ್ನು ಮಾಡಲಾಗಲಿಲ್ಲ. ಪ್ರಖ್ಯಾತ ತಂದೆಯರ ಪ್ರಭಾವಳಿಗಳ ಮುಂದೆ ಅವರ ವಂಶದ ಕುಡಿಗಳು ಮಸುಕಾದವೆ ಎನ್ನುವುದು ಬಗೆ ಹರಿಯದ ಪ್ರಶ್ನೆ. ಈ ಸಮೀಕರಣವನ್ನು ರಾಜಕಾರಣ ಮತ್ತು ಕಲಾ ಕ್ಷೇತ್ರಗಳಿಗೂ ಅನ್ವಯಿಸ ಬಹುದು ಅಲ್ಲವೆ ?

Leave a Reply