ಹೆಮ್ಮಿಂಗ್ವೇ ಎಂಬ ಕಡಲ ಹಕ್ಕಿ

hemmingway

ಹರೀಶ್ ಕೇರ ಮೊನ್ನೆ ಇದ್ದಕ್ಕಿದ್ದ ಹಾಗೆ ಹೆಮ್ಮಿಂಗ್ವೇ ಅವರ ಬರಹದ ಗಾಳಕ್ಕೆ ಸಿಕ್ಕು ಹೋಗಿದ್ದರು.  ಹೆಮ್ಮಿಂಗ್ವೇ ಅವರ Old man and the sea ಎಂತಹವರನ್ನೂ ಒಂದೇ ಏಟಿಗೆ ಒಳಕ್ಕೆ ಎಳೆದುಕೊಳ್ಳುವ ಕೃತಿ. ಅದರಲ್ಲಿ ಬರುವ ಮುದುಕ ಮೀನುಗಾರ ಸ್ಯಾಂಟಿಯಾಗೋ . ಆತನ ಸಮುದ್ರದ ನಡುವಿನ ಸೆಣಸಾಟವನ್ನು ಹೆಮ್ಮಿಂಗ್ವೇ ಕಣ್ಣಿಗೆ ಕಟ್ಟುವಂತೆ ನಮ್ಮ ಮುಂದಿಡುತ್ತಾರೆ.  ಆ ಕಾರಣಕ್ಕೇ ಇರಬೇಕು ಹರೀಶ್ ಕೇರ ಆತನನ್ನು ನಮ್ಮದೇ ಸಿಟಿ ಮಾರ್ಕೆಟ್ ನಲ್ಲಿ ನಿಲೆ ಹಾಕಿಕೊಂಡಿದ್ದರು, ಕುಶಲ ವಿಚಾರಿಸಿದ್ದರು.

nannolagina haadu cuba

ಇದು ‘ಅವಧಿ’ಯಲ್ಲಿ ಪ್ರಕಟವಾದಾಗ ಜಿ ಎನ್ ಮೋಹನ್ ತಾವು ಕ್ಯೂಬಾಗೆ ಹೋಗಿ, ಅದೇ ಸ್ಯಾಂಟಿಯಾಗೋನ ಕೈ ಕುಲುಕಿ ಬಂದದ್ದನ್ನು ನೆನಪಿಸಿಕೊಂಡರು. ಅವರ ಕ್ಯೂಬಾ ಪ್ರವಾಸ ಕಥನ- ‘ನನ್ನೊಳಗಿನ ಹಾಡು ಕ್ಯೂಬಾ.’ ಅದರಲ್ಲಿ ಅವರು ಸ್ಯಾಂಟಿಯಾಗೋನನ್ನು, ಹೆಮ್ಮಿಂಗ್ವೇಯನ್ನು ನೆನಸಿಕೊಂಡಿದ್ದಾರೆ . ಆ ಲೇಖನ ಸಿಕ್ಕಾಗ ನಿಮಗಾಗಿ ಹೆಕ್ಕಿಕೊಡುತ್ತೇವೆ.

ಆದರೆ ಅವರೇ ತಮಗೆ ತೀರಾ ಇಷ್ಟ ಎಂದು ಆರಿಸಿಕೊಟ್ಟ ಆ Old man and the sea ಸಿನೆಮಾ ಇಲ್ಲಿದೆ.

Leave a Reply