ಅಂಗಳದಲ್ಲೊಂದು ಸಂಜೆಮೊಲ್ಲೆ ಸಸಿಯನ್ನಾದರೂ..

ಗುರುತಿಗೆ ಗುರುತಿಲ್ಲ

kavyashree

ಕಾವ್ಯಶ್ರೀ ಎಚ್

ಅದೇ ಆ ತಿರುವಿನಂಚಲಿ
ನೆಡಬೇಕಿತ್ತು ಕಲ್ಲೊಂದನು
ನೀ ಎದುರಾದ ಘಳಿಗೆಗೆ ,

ನೀ ಕಾಲಿಟ್ಟ ನೆಪಕ್ಕೆ
ನೆಡಬೇಕಿತ್ತು
ಅಂಗಳದಲ್ಲೊಂದು ಸಂಜೆಮೊಲ್ಲೆ ಸಸಿಯನ್ನಾದರೂ

women and the boat

ವಿನಿಮಯವಾಗಲಿಲ್ಲ ಯಾವುದೇ ಕಾಗದ ಪತ್ರ
ಕಡೆಗೊಂದು ಗುಲಾಬಿ ಪಕಳೆಯೂ
ಖಾಲಿ ಹಾಳೆಗಳ ನಡುವೆ ಇಣುಕುವುದಿಲ್ಲ
ನವಿಲು ಗರಿ

ಯಾವ ಮಳೆಯೂ ತೋಯಿಸಲಿಲ್ಲ
ಅದಕೇ ಈ ಹನಿಗಳಿಗೂ ನೆನಪಿಲ್ಲ
ಮರೆಯಾಯಿತು ಮೂಡಿದಾಗಲೇ
ಕಡಲ ದಡದ ಹೆಜ್ಜೆ ಗುರುತು

lines

 

 

ಏಕೋ ಎಂತೋ
ಇಂದು ಸುರಿದ ಮಳೆಗೆ ಮಣ್ಣವಾಸನೆಯಿಲ್ಲ
ಮನದ ಯಾವ ಮೂಲೆಯೂ ತೋಯಲಿಲ್ಲ
ಸುಳಿಗಾಳಿ ಬಲು ಹಗುರ ನೆನಪಭಾರವಿಲ್ಲ
ಕಳೆದ ನಿನ್ನೆಗಳ ಕೊರೆತವಿಲ್ಲ
ನಿರ್ಭಾವುಕ ಖಾಲಿ ಸಂಜೆ
ಕಳೆದೇಹೋಯಿತು ನಿರ್ದಯಿ ಬದುಕು

lines

 

 

ರುದ್ರವೀಣೆಗಷ್ಟೇ ಮೀಟುವುದಿಲ್ಲ
ಆಳ ನಾಟಿದ ಮುಳ್ಳಿಗೂ ಮುಲುಗುತ್ತದೆ
ಈ ಪುಟ್ಟ ಹೃದಯ
ಗುರಾಣಿ ಹಿಡಿದು ನಿಂತರೆ
ಯಾವ ರಾಗಕೂ ತಾವಿಲ್ಲ

9 comments

  1. ಮನದ ಯಾವ ಮೂಲೆಯೂ ತೋಯಲಿಲ್ಲ……
    ಒಳ್ಳೆ ಕವನ….. ನಿಮ್ಮ ಒಳ್ಳೆ ಫೋಟೋ ಜತೆ…….

    • ಥ್ಯಾಂಕ್ಯೂ ರವೀಂದ್ರ ಸರ್, ನೀವು ಬರೆಯುವ ಚಿತ್ರಗಳು ಇನ್ನೂ ಚಂದ

Leave a Reply