ತೇಜಸ್ವಿ ಕಾಫಿ ಮಾಡ್ತಿದ್ದು ಹೀಗೇ..

“ನಿರುತ್ತರ”ದಲ್ಲಿ ರಾಜೇಶ್ವರಿ ತೇಜಸ್ವಿ 

ಬಿ ಸಿ ಭಾನುಮತಿ 

“ಹೇ ಕಾಫಿ ಮಾಡೋದು ಒಂದು ಕಲೆ . ಗಿರಿಯ ಕಡೆ ಕಾಫಿ ರುಚಿನೇ ಬೇರೆ. ಕಾಫಿ ಘಂ ಅಂತ ರುಚಿ ರುಚಿಯಾಗಿ ಇರ್ಬೇಕಾದ್ರೆ ಪುಡಿ ಎಷ್ಟು ಮುಖ್ಯಾನೋ ಹೇಗೆ ಮಾಡ್ತೀವಿ ಅನ್ನೋದು ಅಷ್ಟೇ ಮುಖ್ಯ.”

tejasvi bhanumati3”ಈ ಫಿಲ್ಟರ್ ನೋಡು, ೧೯೬೩ನಲ್ಲಿ ತೇಜಸ್ವಿ ತಂದಿದ್ದು. ಗಟ್ಟಿ ಡಿಕಾಕ್ಷನ್ ಆದ್ರೆ ೫-೬ ಜನಕ್ಕೆ ಆಗೋವಷ್ಟು ಇಳಿಸ್ಕೊಬಹುದು. ಅವ್ರಿಗೆ ಸ್ಟ್ರಾಂಗ್ ಕಾಫಿ ತುಂಬಾನೇ ಇಷ್ಟ. ಅಯ್ಯೋ..ಡಿಕಾಕ್ಷನ್, ಹಾಲಿನ ಜೊತೆ ಕೆನೆ ಹಾಕಿ ಸ್ವಲ್ಪ ಕುದಿಸಿದ್ರೆ ಕಾಫಿ ಎಷ್ಟು ಚನ್ನಾಗಿರುತ್ತೆ ಗೊತ್ತಾ ? ತಗೋ ಕುಡಿದು ನೋಡು ನಿಂಗೆ ಟೇಸ್ಟ್ ಗೊತ್ತಾಗತ್ತೆ . ತೇಜಸ್ವಿ ಕಾಫಿ ಮಾಡ್ತಿದ್ದು ಹೀಗೇ. ನೀನ್ ಕೂತಿದೀಯಲ್ಲ ಇದೇ ಕಟ್ಟೆ ಮೇಲೆ ಕೂತು ಅವ್ರು ಕಾಫಿ ಕುಡೀತಿದ್ದಿದ್ದು. ಸೆಲ್ಫಿ ಈ ಲೈಟಿಂಗ್ನಲ್ಲಿ ಹೆಂಗ್ ಬರುತ್ತೋ ತೆಗಿರೀ ಅತ್ಲಾಗೆ”.

ಹೋದಾಗಲೆಲ್ಲ ತನ್ನ ಜೀವಂತಿಕೆಯಿಂದ ಬೆರಗು ಹುಟ್ಟಿಸುವ ಗಟ್ಟಿಗಿತ್ತಿ ಇವರು. ಯಾಕೋ ಅವತ್ತು ಅಂದ್ರೆ ಫೆಬ್ ೧೪ ತೇಜಸ್ವಿಯವರನ್ನ ತುಂಬ ಮಿಸ್ ಮಾಡ್ಕೊಳ್ತಿದ್ರು . ಥೊತ್ ಅವ್ರಿರ್ಬೇಕಿತ್ತು ಅಂತಿದ್ರು. ಸಾಮಾನ್ಯವಾಗಿ ಹಾಗೆಲ್ಲ ಗೋಳು ಕರೆಯುವವರಲ್ಲ . ಆದ್ರೆ ಅವ್ತ್ಯಾಕೋ ಕೊಂಚ ಡಿಸ್ಟರ್ಬ್ ಆಗಿದ್ರು.

ಅಂಥಾ ಪ್ರೀತಿಯ ಜೀವವನ್ನ ಬಿಟ್ಟು ಇವ್ರು ಸಹಜವಾಗಿ ಬದುಕ್ತಿರೋದು ನಂಗಂತೂ ದೊಡ್ಡ ವಿಷಯವೇ ಬಿಡಿ.

ಇದೆಲ್ಲದರ ಮಧ್ಯೆ “ಕುವೆಂಪು ಮೂಢ ನಂಬಿಕೆ , ಮೌಡ್ಯಾಚರಣೆ ಬಗ್ಗೆ ಎಷ್ಟು ಚೆನ್ನಾಗಿ ಬರೆದಿದ್ದಾರೆ ಈ ನಿಮ್ಮ tv ಯವರು ಏನು ಸರಿಯಾಗಿ ಓದಿಕೊಳ್ದೆ ಏನೇನೊ ಮಾತಾಡ್ತಾರೆ ಥೊತ್, ಅದ್ಯಾಕ್ ಹಂಗ್ ಮಾಡ್ತಾರೋ ? ಮೊನ್ನೆ ndtv ಯವರು ಸರಿಯಾಗಿ ಮಾಡ್ಲಿಲ್ಲ . actually ಕುವೆಂಪುಗೆ Nobel ಬರಬೇಕಿತ್ತು. ಹೋಗ್ಲಿ ಬಿಡಿ ಅದೆಲ್ಲಾ ಯಾಕೀಗ” ಅಂದ್ರು.

tejasvi bhanumati1

tejasvi bhanumati2

2 Responses

  1. sangeetha raviraj says:

    ಚೆನ್ನಾಗಿದೆ ತೇಜಸ್ವಿಯೂ ಮಡದಿಯೂ …..ಬಾನುಮತಿಯವರೇ.

  2. savitri.V.Hatti says:

    ಇಷ್ಟವಾಯ್ತು…:-)

Leave a Reply

%d bloggers like this: