ನಾನೂ ಜೆ ಎನ್ ಯು : ಕೇಳಿ ಪಿ ಸಾಯಿನಾಥ್ ಆಡಿದ ಮಾತು

ಸಾಯಿನಾಥ್ ಅವರ ತರಗತಿ ಈಗಷ್ಟೇ ಮುಗಿಯಿತು.

ಭಾರತದ ಬಡತನದ ಚಿತ್ರವನ್ನು ಅಂಕಿ ಅಂಶಗಳ ಮೂಲಕ ವಿವರವಾಗಿ ಬಿಡಿಸಿಟ್ಟ ಅವರು ಇದೀಗ ಧಾರ್ಮಿಕ ಮೂಲಭೂತದೊಂದಿಗೆ Religious fundamentalism) ಆರ್ಥಿಕ ಮೂಲಭೂತವೂ ( Economic Fundamentalism) ಸೇರಿಕೊಂಡು ಭಾರತ ಹೇಗೆ ದುರ್ಬಲವಾಗುತ್ತಿದೆ ಎಂಬುದನ್ನು ಮನಮುಟ್ಟುವಂತೆ ಪ್ರಸ್ತುತ ಪಡಿಸಿದರು.

ಯುದ್ಧಗಳಿಂದ ಜರ್ಜರಿತವಾಗಿದ್ದ ವಿಯಟ್ನಾಂ ಮತ್ತು ಶ್ರೀ ಲಂಕಾಗಳು ಅಭಿವೃದ್ಧಿಯಲ್ಲಿ ನಮ್ಮನ್ನು ಹಿಂದೆ ಹಾಕಿದ ಪರಿಯನ್ನೂ ಹೇಳಲು ಅವರು ಮರೆಯಲಿಲ್ಲ.
ನಮ್ಮೊಡನೆ ಎಷ್ಟೊಂದು ಒಳ್ಳೆಯ ಮನಸುಗಳು ಸೇರಿಕೊಂಡಿವೆ!

-ಪುರುಷೋತ್ತಮ ಬಿಳಿಮಲೆ 

2 comments

Leave a Reply