ಪಿ ಸಾಯಿನಾಥ್ ಕೃತಿಗೆ ಅರುಣ್ ಸ್ಪರ್ಶ

arunಎರಡನೇ ಮಾತಿಲ್ಲ. ಇಷ್ಟು ಮುಖಪುಟ ಒಂದೇ ಪುಸ್ತಕದ್ದು ಎಂದಾಕ್ಷಣ ಎಲ್ಲರಿಗೂ ಗೊತ್ತಾಗಿ ಹೋಗುತ್ತದೆ- ಹಾಗಾದರೆ ಇದು ಅರುಣ್ ಕುಮಾರ್ ಅವರದ್ದೇ ಕೆಲಸ. ಅರುಣ್ ಕುಮಾರ್ ಅವರ ಮುಂದೆ ಒಂದಷ್ಟು ಫೋಟೋಗಳನ್ನು ಹರಡಿ, ಒಂದೆರಡು ಗಂಟೆ ಮಾತ್ರ ಕೊಟ್ಟು, ಏನು ಮಾಡೋಣ ಎನ್ನುವಂತೆ ಮುಖ ಮಾಡಿ ಕುಳಿತರೆ ಸಾಕು- ಅರ್ಧ ಗಂಟೆಯಲ್ಲಿ ಮೌಸ್ ಮೇಲೆ ಕೈ ಆಡಿಸುತ್ತಾ ಅದ್ಭುತಗಳನ್ನು ಸೃಷ್ಟಿಸುತ್ತಾರೆ

ಮೊನ್ನೆ ಆದದ್ದೂ ಹೀಗೆ . ಪಿ ಸಾಯಿನಾಥ್ ಬರುತ್ತಿದ್ದಾರೆ, ಕನ್ನಡ ಪತ್ರಿಕೋದ್ಯಮ ದಿನಾಚರಣೆ ಬೇರೆ, ಹಾಗಾಗಿ ಒಂದು ಒಳ್ಳೆಯ ಕೃತಿಯನ್ನು ಎಲ್ಲರ ಕೈಗಿಡೋಣ ಅನಿಸಿತು. ಹಾಗೆ ನನಗೆ ಅನಿಸುವುದು ಕೊನೆ ಗಳಿಗೆಯಲ್ಲಿ ಮಾತ್ರ. ಆದರೂ ಅಂದುಕೊಂಡದ್ದು ಮಾಡಿ ಮುಗಿಸಿಯೇ ಮುಗಿಸುತ್ತೇನೆ. ಅಂತಹ ವಿಶ್ವಾಸ ನನ್ನ ಜೊತೆಗಿರಲು ಕಾರಣವೇ – ಅರುಣ್ ಕುಮಾರ್

ಅರುಣ್ ದಶ ಕಂಠರಲ್ಲ, ಆದರೆ ದಶ ಮೆದುಳಿದೆಯೇನೋ ಎಂದು ಒಂದೇ ಏಟಿಗೆ ಅನಿಸಿಹೋಗುತ್ತೆ. ಕಲಾವಿದ, ಚಲನಚಿತ್ರ ಪತ್ರಕರ್ತ ಎಲ್ಲಕ್ಕಿಂತ ಮಿಗಿಲಾಗಿ ಒಳ್ಳೆಯ ಗೆಳೆಯ.

ಇಲ್ಲಿದೆ ನೋಡಿ ಪಿ ಸಾಯಿನಾಥ್ ಕೃತಿಗೆ ಅವರು ಕೊಟ್ಟಿರುವ ಆಯ್ಕೆಯ ಅವಕಾಶಗಳು. ಸಮಸ್ಯೆ ಎಂದರೆ ಒಂದು ಪುಸ್ತಕಕ್ಕೆ ಒಂದು ಮುಖಪುಟ ಮಾತ್ರ ಮುದ್ರಿಸಲು ಸಾಧ್ಯ ಇಲ್ಲದಿದ್ದರೆ ಈ ಅಷ್ಟೂ ಮುಖಪುಟ ಆಯ್ಕೆ ಮಾಡಿಕೊಂಡು ಬಿಡುತ್ತಿದ್ದೆ.   p sainath2 p sainath3 PAri-D PAri-E PAri-F PAri-G

Leave a Reply