ಸೊಬಗಿಗೆ‬ ಮನಸೋತೆ!

r g halli nagaraj

ಆರ್ ಜಿ ಹಳ್ಳಿ ನಾಗರಾಜ್ 

p sainath reading ee pari* ಪತ್ರಕರ್ತ, ಕವಿ ಗೆಳೆಯ ಜಿ.ಎನ್. ಮೋಹನ್ ಸಂಪಾದಿಸಿರುವ ತನ್ನ “ಪೆಟ್” ಲೇಖಕ ಪಿ.ಸಾಯಿನಾಥ ಅವರ ಹೊಸತಾದ “ಈ ಪರಿಯ ಸೊಬಗು” ಎಂಬ ಪುಸ್ತಕವನ್ನು ಕೊರಿಯರ್ ಮೂಲಕ ಕಳುಹಿಸಿದ್ದಾನೆ. ಅವನಿಗೆ, ಅವನ Crazy Frog Mediaಗೆ ಧನ್ಯವಾದ.

* ಪುಸ್ತಕ ಕೈ ಸೇರಿದ ತಕ್ಷಣ ಅದರ ಅಂದ, ಸೊಬಗಿಗೆ ಮನಸೋತೆ. ಪುಸ್ತಕ ವಿನ್ಯಾಸವೂ ಚೆನ್ನಾಗಿದೆ. Space ಬಳಕೆ ಕಲಾವಿದರಿಗೆ ಸಿದ್ಧಿಸಿದೆ. ಲೇಖಕರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಆದರೆ ಈ ಮೋಹನ್ ಕಲಾತ್ಮಕವಾಗಿ ಇದನ್ನು ರೂಪಿಸಿದ್ದಾನೆ.

* ಪುಸ್ತಕದ ವಸ್ತು ನಮಗೆ ನಿಮಗೆ ಪರಿಚಿತವಾದದ್ದೇ ಆದರೂ, ಪಿ.ಸಾಯಿನಾಥ್ ಕಂಡ ಜನಸಾಮಾನ್ಯರ ಜಗತ್ತು ಬೇರೆ. ಅದನ್ನು ಕನ್ನಡಕ್ಕೆ ಹಲವರು ಅನುವಾದಿಸಿದ್ದಾರೆ. ಭಾಷೆ ಸುಲಲಿತವಾಗಿದೆ. ಆಪ್ತವಾದ ಈ ಕೃತಿ ನಿಮ್ಮ ಬಳಿ ಇರಲಿ. ಉಡುಗೊರೆಗೂ ಇದನ್ನು ನೀಡಿ.

* ಇದನ್ನು ಪಲ್ಲವ ಪ್ರಕಾ಼ಶನದ ವೆಂಕಟೇಶ್ ಪ್ರಕಟಿಸಿದ್ದಾರೆ. ಉತ್ತಮ ಪುಸ್ತಕಗಳನ್ನು ಬಳ್ಳಾರಿಯಂಥ ಜಿಲ್ಲೆಯಿಂದ ಪ್ರಕಟಿಸುತ್ತಿರುವ ಅವರ ಸಾಹಸಕ್ಕೆ ಶರಣು.

* ಪುಸ್ತಕದ ಪ್ರತಿಗೆ ಪಲ್ಲವ ವೆಂಕಟೇಶ್ ಸಂಪರ್ಕಿಸಿ: ಮೊಬೈಲ್ : 94803 53507.

Leave a Reply