ಪ್ರಹ್ಲಾದ ಅಗಸನಕಟ್ಟೆ ಇನ್ನಿಲ್ಲ

prahlada agasanakatte#ಕತೆಗಾರ, ವಿಮರ್ಶಕ ಪ್ರಹ್ಲಾದ ಅಗಸನಕಟ್ಟೆ ಇನ್ನಿಲ್ಲ.

*ಹುಬ್ಬಳ್ಳಿಯಲ್ಲಿ ನೆಲೆಸಿದ್ದ ಕವಿ, ಕತೆಗಾರ, ವಿಮರ್ಶಕ ಪ್ರಹ್ಲಾದ ಅಗಸನಕಟ್ಟೆ ಇಂದು ಹುಬ್ಬಳ್ಳಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇನೆ.

*ಗೆಳೆಯ ಸತೀಶ ಕುಲಕರ್ಣಿ ಹಾವೇರಿಯಿಂದ ಫೋನ್ ಮಾಡಿ ಈ ವಿಚಾರ ತಿಳಿಸಿದಾಗ ಸಿಡಿಲೆರಗಿದಂತಾಯಿತು.

* ಸೌಮ್ಯ ಸ್ವಭಾವದ ೬೦ ವರ್ಷದ ಪ್ರಹ್ಲಾದ ಕೆಎಂಸಿ ಆಸ್ಪತ್ರೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಸಾಹಿತ್ಯದ ಗಂಭೀರ ವಿದ್ಯಾರ್ಥಿ ಆಗಿದ್ದ ಅವರು ನನ್ನ ಜಿಲ್ಲೆ ದಾವಣಗೆರೆ ಬಳಿಯ ಅಗಸನಕಟ್ಟೆಯವರು. ಅವರ ಸಹೋದರ ಡಾ. ಲೋಕೇಶ್ ಅಗಸನಕಟ್ಟೆ ಚಿತ್ರದುರ್ಗದಲ್ಲಿ ಪ್ರಾಧ್ಯಾಪಕರು. ಅವರು ಕನ್ನಡದ ಉತ್ತಮ ಕವಿ, ಕತೆಗಾರ, ವಿಮರ್ಶಕರಾಗಿ ಹೆಸರಾಗಿದ್ದಾರೆ

-ಆರ್ ಜಿ ಹಳ್ಳಿ ನಾಗರಾಜ್ 

14192032_1110727832316186_3604661246192563671_n (1)

4 comments

  1. ಅವರು ಬಿಟ್ಟು ಹೋದ ಕತೆಗಳ ಮೂಲಕ ಮಾತ್ರ ಪ್ರಹ್ಲಾದ್ ಅಗಸನಕಟ್ಟೆ ನಮ್ಮನ್ನು ಎದುರುಗೊಳ್ಳಲಿದ್ದಾರೆ. ಕನ್ನಡ ಕಥಾ ಸಾಹಿತ್ಯದಲ್ಲಿ ಅವರದು ಮರೆಯಲಾರದ ಹೆಜ್ಜೆ.

  2. uttama kategaara/lekhananobbana sulivillada aaghatkara marana vaarte ! ! ! hege nambuvudu ! !

    hege nambade iruvudu ! ! vidhiyappanege yedurunte ! ! – Narayan Raichur

  3. ಪ್ರಹ್ಲಾದ ಅಗಸನಕಟ್ಟೆಯವರು ಲಿಂಗೈಕ್ಯರಾದ ಸುದ್ಧಿ ತಿಳಿದು ಸಂಕಟವಾಯಿತು‌. ಮೊನ್ನೆ ತಾನೆ ಕುವೆಂಪು ಕನ್ನಡ ಭವನದಲ್ಲಿ ಶಿವಸಂಚಾರ ನಾಟಕ ನೋಡಲು ಬಂದಿದ್ದರು. ಇನ್ನೇನು ಮಾತನಾಡಿಸೋಣ ಎಂದು ಎದ್ದೆ. ಅಷ್ಟರಲ್ಲಿ ಪಕ್ಕದವರ ಕರೆಗೆ ತಿರುಗಿದೆ. ಚುಟುಕಲ್ಲೇ ಮಾತು ಮುಗಿಸಿ ಮರಳಿ ಅಗಸನಕಟ್ಟೆಯವರ ಕಡೆ ತಿರುಗಿದೆ. ಅವರು ಒಂದಷ್ಟು ದೂರದಲ್ಲಿ ನನ್ನತ್ತ ಬೆನ್ನು ಮಾಡಿ ಸಾಗಿ ಕಾಣದಾದರು. ಯಾಕೋ ಅವರನ್ನು ಹಿಂಬಾಲಿಸಿ ಮಾತನಾಡಿಸುವ ಬಯಕೆಗೆ ಕಾಲು ಸ್ಪಂದಿಸಲಿಲ್ಲ.! ನಿವೃತ್ತಿನಂತರ ಸಾಹಿತ್ಯಕ ಕಮ್ಮಟಗಳನ್ನು ಮಾಡುವ ಬಗ್ಗೆ ಅವರೊಂದಿಗೆ ಬಹಳ ಸಲ ಚರ್ಚಿಸಿದ್ದೆ. ಹೀಗೆ ಇದ್ದಕ್ಕಿದ್ದಂತೆ ಎದ್ದು ಹೋದದ್ದು ದುಖಃದ ಸಂಗತಿ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ…ಶಿವು ಕುರ್ಕಿ

Leave a Reply