ಒಂದು ವಿಸ್ಮಯದಂತಿದ್ದ ಎಂ ಕೆ ಇಂದಿರಾ..

ಎಂ. ಕೆ. ಇಂದಿರಾ

ನೂರರ ನೆನಪು

ಕೆ. ಉಷಾ ಪಿ. ರೈ

ಎಂ. ಕೆ. ಇಂದಿರಾ ಅವರ ಜನ್ಮ ಶತಾಬ್ಧಿ ಜನವರಿ 6 ಕ್ಕೆ.

ಲೇಖಕರ ಜನ್ಮಶತಾಬ್ಧಿಗೆ ಒಂದು ವರ್ಷದ ಮೊದಲೇ ತಯಾರಿಗಳಾಗುತ್ತವೆ. ವರ್ಷವಿಡೀ ಕಾರ್ಯಕ್ರಮಗಳು ನಡೆಯುತ್ತವೆ. ಲೇಖಕಿಯರನ್ನು ಯಾಕೆ ಎಲ್ಲರೂ ಮರೆಯುತ್ತಾರೆ?

ಅದರಲ್ಲೂ ವೈಜ್ಞಾನಿಕ ಜಗತ್ತಿನ ಹಲವಾರು ವಿಸ್ಮಯಗಳ0ತೆ, ನವೋದಯ ಸಾಹಿತ್ಯ ಕಾಲದ ಒ0ದು ವಿಸ್ಮಯದಂತಿದ್ದ ಎ0. ಕೆ. ಇ0ದಿರಾ ಅವರನ್ನು ಮರೆತದ್ದು ಹೇಗೆ?

ವಿದ್ಯೆಗೂ ಸೃಜನಶೀಲತೆಗೂ ಯಾವ ಸ0ಬ0ಧವೂ ಇಲ್ಲ ಎನ್ನುವುದಕ್ಕೊ0ದು ಜೀವ0ತ ಉದಾಹರಣೆ ಎಂ.ಕೆ. ಇಂದಿರಾ. ಕಲಿತದ್ದು 6ನೇ ಕ್ಲಾಸು, ರಚಿಸಿದ್ದು ಸಾಹಿತ್ಯ ದಿಗ್ಗಜಗಳ ಬರವಣಿಗೆಗೆ ಸರಿಗಟ್ಟುವ ಕಾದಂಬರಿಗಳನ್ನು. ಹಿರಿಯ ಕವಿ ಡಾ. ಪು.ತಿ.ನ. ಹೇಳುವ0ತೆ “ದಿವ0ಗತ ಶ್ರೀ ಎ0. ಎಸ್. ಪುಟ್ಟಣ್ಣನವರನ್ನು ಬಿಟ್ಟರೆ ಅಷ್ಟೇ ಮೋದಕವಾಗಿ, ಅ0ಥದೇ ಸೊಗಡುಳ್ಳ ಅವರ0ಥದ್ದೇ ಬನಿಯಾದ ಕನ್ನಡವನ್ನು ಕಾಣುವುದು ಶ್ರೀಮತಿ ಎ0. ಕೆ. ಇ0ದಿರಾ ಅವರ ಕಾದ0ಬರಿಗಳಲ್ಲಿ.”

ಪು. ತಿ. ನ. ಅವರು ಮೆಚ್ಚಿಕೊ0ಡ ಕಾದ0ಬರಿಗಳು ತೆಗ್ಗಿನಮನೆ ಸೀತೆ, ಫಣಿಯಮ್ಮ ಮತ್ತು ತು0ಗಭದ್ರಾ. ಇ0ದಿರಾ ಅವರ ಕಾದ0ಬರಿಗಳ ಸರಿಯಾದ ಅಧ್ಯಯನ ನಡೆದರೆ ಒ0ದು ವಿಶ್ವವಿದ್ಯಾಲಯವಾದರೂ ಅವರಿಗೆ ಗೌರವ ಡಾಕ್ಟರೇಟ್ ಕೊಟ್ಟೀತು ಎನ್ನುವ ಪು. ತಿ. ನ. ಅವರ ಅಭಿಪ್ರಾಯ `ಸುರಗಿ’ ಅಬಿನ0ದನಾ ಗ್ರ0ಥದಲ್ಲಿ ಅವರು ಬರೆದಿರುವ ಲೇಖನದಲ್ಲಿ ವ್ಯಕ್ತವಾಗಿದೆ.

ಹೊರ ಜಗತ್ತಿನ ಯಾವುದೇ ಪ್ರಭಾವಕ್ಕೆ ಒಳಗಾಗದೆ ಅಪ್ಪಟ ಕನ್ನಡ ನೆಲದ ಅದರಲ್ಲೂ ಮಲೆನಾಡಿನ ಮಗಳಾಗಿ ಅಲ್ಲಿಯ ಸಮೃದ್ಧ ಪರಿಸರದ ಮತ್ತು ಜೀವನಾನುಭವದ ಸ0ಪತ್ತಿನಿ0ದ ಪಕ್ವವಾದ ಮನಸ್ಸಿನಿ0ದ ತನ್ನದೇ ವಿಶಿಷ್ಟ ಶೈಲಿಯಲ್ಲಿ ಸಾಹಿತ್ಯ ರಚಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಅಪರೂಪದ ಲೇಖಕಿ ಎಂ. ಕೆ. ಇಂದಿರಾ.

ನಿರಾಡ0ಬರ ನಿರೂಪಣೆ ಹಾಗೂ ಅಪ್ಪಟ ದೇಸೀ ಭಾಷೆಯಲ್ಲಿ ಮೌಲಿಕವಾದ `ತು0ಗ-ಭದ್ರ’, `ಸದಾನ0ದ’, `ಫಣಿಯಮ್ಮ’, `ಗೆಜ್ಜೆಪೂಜೆ’, `ತೆಗ್ಗಿನ ಮನೆ ಸೀತೆ’, `ಕೂಚುಭಟ್ಟ’ ಮು0ತಾದವೂ ಸೇರಿ 49 ಕಾದ0ಬರಿಗಳು, 11 ಕಥಾಸ0ಕಲನಗಳು, 2 ಜೀವನ ಚರಿತ್ರೆಗಳನ್ನು ಬರೆದು ಅಪಾರ ಜನಾನುರಾಗದ ಜೊತೆಗೆ ಉತ್ತಮ ಲೇಖಕಿಯೆ0ದು ಪರಿಗಣಿಸಲ್ಪಟ್ಟು ಹಲವಾರು ಪ್ರಶಸ್ತಿಗಳಿಗೆ ಬಾಜನರಾದವರು. ಸದಾನ0ದ, ನವರತ್ನ, ಫಣಿಯಮ್ಮ ಕೃತಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. 1975ರಲ್ಲಿ ಶ್ರೇಷ್ಟ ಲೇಖಕಿ ಪ್ರಶಸ್ತಿಯೂ ಅವರದ್ದಾಗಿತ್ತು.

ತಾನು ಹೆಚ್ಚು ಕಲಿತಿಲ್ಲ ಎನ್ನುವ ನೋವು ಅವರನ್ನು ಕಾಡುತ್ತಿದ್ದರೂ ಅವರ `ತು0ಗಭದ್ರ’ ಕಾದ0ಬರಿ ಬೆಂಗಳೂರು ವಿಶ್ವವಿದ್ಯಾಲಯದ ಡಿಗ್ರಿ ತರಗತಿಗಳಿಗೆ ಪಠ್ಯ ಪುಸ್ತಕವಾಗಿತ್ತು. ಅವರ ಕಾದಂಬರಿಗಳ ಮೇಲೆ ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದಿದ್ದಾರೆ. ಅವರ ಕಾದ0ಬರಿಗಳು ಬೇರೆ ಬೇರೆ ಭಾಷೆಗಳಿಗೆ ತರ್ಜುಮೆಯಾಗಿವೆ. ಇದು ಅವರ ಕೃತಿಗಳಲ್ಲಿ ತುಂಬಿದ್ದ ಮೌಲಿಕತೆಗೆ ನಿದರ್ಶನ. ‘ಫಣಿಯಮ್ಮ’ ಚಲನಚಿತ್ರವಾಗಿ ವಿದೇಶಗಳಲ್ಲೂ ಪ್ರದರ್ಶಿತವಾಗಿ ಹೆಸರು ಗಳಿಸಿತ್ತು, ಪ್ರಶಸ್ತಿಗಳನ್ನು ಗಳಿಸಿತ್ತು. ‘ಫಣಿಯಮ್ಮ’ ಇ0ಗ್ಲಿಷ್ ಮತ್ತು ಡಚ್ ಭಾಷೆಗೂ ತರ್ಜುಮೆಯಾಗಿ ವಿದೇಶದಲ್ಲಿ ಪ್ರಕಟಣೆಗೊ0ಡಿರುವುದು ಅವರ ಬರವಣಿಗೆಯ ಮೇಲ್ಮೆಗೆ ಸಾಕ್ಷಿಯಾಗಿದೆ.

ಯಾವುದೇ ಉನ್ನತ ಓದು, ಡಿಗ್ರಿಗಳಿಲ್ಲದೆ, ಭಾಷೆಯ ಪಾ0ಡಿತ್ಯವಿಲ್ಲದೆ, ಪಾಶ್ಚಾತ್ಯ ಸಾಹಿತ್ಯದ ಪರಿಚಯವಿಲ್ಲದೆ, ಸಾಹಿತ್ಯ ಚರ್ಚೆಗಳಲ್ಲಿ ಭಾಗವಹಿಸುವ ಸಾಮರ್ಥ್ಯ  ಅಥವಾ ಅವಕಾಶವಿಲ್ಲದೆ, ಯಾವುದೇ ದೊಡ್ಡ ಸಾಹಿತಿಗಳ/ ವಿಮರ್ಶಕರ ಬೆಂಬಲವಿಲ್ಲದೆ ತನ್ನ ಅಪಾರ ಜೀವನಾನುಭವ, ಅಸಾಧಾರಣ ನೆನಪಿನ ಶಕ್ತಿ, ಸರಳ ಸು0ದರ ಮಲೆನಾಡಿನ ಭಾಷೆಯ ಸೊಗಡು, ಆಕರ್ಷಕವಾಗಿ ಕಥೆ ಹೇಳುವ ಶಕ್ತಿ ಇವಿಷ್ಟನ್ನೇ ಬ0ಡವಾಳವಾಗಿಟ್ಟುಕೊ0ಡು ಯಶಸ್ವೀ ಲೇಖಕಿ ಎ0ದು ಎಲ್ಲರಿ0ದಲೂ ಶಾಭಾಸ್‍ಗಿರಿ ಪಡೆದ ಅಪರೂಪದ ಲೇಖಕಿ ಎ0. ಕೆ. ಇ0ದಿರಾ. ಅವರ0ತೆ ಮೌಲಿಕವಾಗಿ ಬರೆದು ಜನಪ್ರಿಯತೆಯ ಜತೆಗೆ ಶ್ರೇಷ್ಟ ಲೇಖಕಿಯೆ0ದು ಅನಿಸಿಕೊ0ಡ ಲೇಖಕಿಯರು ಯಾಕೆ ಲೇಖಕರೂ ವಿರಳವೇ ಅನ್ನಬಹುದು.

ಅವರ ಕಾದಂಬರಿಗಳಲ್ಲಿ ಎದ್ದು ಕಾಣುತ್ತಿದ್ದುದು ಅವರ ಜೀವನ ಶೃದ್ಧೆ, ಅದಕ್ಕೆ ಕಂಪು ತುಂಬಿದ್ದು ಮಲೆನಾಡಿನ ಬದುಕಿನ ಸೊಗಡು. ಜೀವ ತುಂಬಿದ್ದು ಜೀವನವೆನ್ನುವ ಪಾಠಶಾಲೆಯಲ್ಲಿ ಅವರಿಗೆ ಸಿಕ್ಕಿದ ಅನುಭವಗಳು, ಕುಸುರು ಕೆಲಸಮಾಡಿದ್ದು ಅವರದ್ದೇ ಆದ ವಿಶಿಷ್ಟ ಶೈಲಿ. ಎಂ. ಕೆ. ಇಂದಿರಾರವರಲ್ಲಿ ನಿಚ್ಚಳವಾಗಿದ್ದದ್ದು ಸರಳತೆ. ಆ ಸರಳತೆಯ ಹಿಂದೆ ಅಸಾಧಾರಣ ಛಲವಿತ್ತು; ವಿಪರೀತ ಸ್ವಾಭಿಮಾನವಿತ್ತು; ಸಮಾಜದ ಒಳಿತು ಕೆಡುಕುಗಳನ್ನು ಒರೆಗೆ ಹಚ್ಚುವ ತೀಕ್ಷ್ಣ ತೀವ್ರತೆಯಿತ್ತು; ಅನಿಷ್ಟ ಸಂಪ್ರದಾಯವನ್ನು ಟೀಕಿಸುವ, ಮೂಢ ನಂಬಿಕೆಗಳನ್ನು ಪ್ರಶ್ನಿಸುವ ಎದೆಗಾರಿಕೆಯಿತ್ತು.

ಫಣಿಯಮ್ಮ, ತುಂಗಭದ್ರಾ, ತೆಗ್ಗಿನಮನೆ ಸೀತೆ ಕಾದಂಬರಿಗಳು ಇದಕ್ಕೆ ಉದಾಹರಣೆ. ಕ್ರಾಂತಿಕಾರಕ ಮನೋಭಾವವಿಲ್ಲದಿದ್ದರೂ ಸುಧಾರಣಾ ಮನೋಭಾವ ಅವರ ಕಾದಂಬರಿಗಳಲ್ಲಿ ಸ್ಪಷ್ಟವಾಗಿತ್ತು. ಪ್ರಾಮಾಣಿಕತೆ, ಗಂಡು ಹೆಣ್ಣು ಇಬ್ಬರನ್ನೂ ಒಂದೇ ರೀತಿಯಲ್ಲಿ ನೋಡುವ ದೃಷ್ಟಿ ಅವರು ಬರೆಯುತ್ತಿದ್ದ ಕಾಲದಲ್ಲಿ ಅಪರೂಪವೇ ಆಗಿದ್ದರೂ ಅವರು ಅವರ ಕಾದಂಬರಿಗಳಲ್ಲಿ ಸಮರ್ಪಕವಾಗಿ ಪ್ರತಿಪಾದಿಸಿದ್ದರು.

ಇ0ದಿರಮ್ಮನವರ ವಿಚಾರ ಶಕ್ತಿ  ಪ್ರಖರವಾಗಿತ್ತು. ನೆನಪು ಶಕ್ತಿ ಅಗಾದವಾಗಿತ್ತು. ಸ್ವಭಾವತ ಆಶಾವಾದಿ. ಕಷ್ಟ ಕಾರ್ಪಣ್ಯಗಳಿಗೆ ಹೆದರಿದವರಲ್ಲ. ಏನೇ ಬರಲಿ ದಿಟ್ಟತನದಿ0ದ ಎದುರಿಸುವ ಆತ್ಮವಿಶ್ವಾಸವಿದ್ದವರು. ಸಹನಾ ಮೂರ್ತಿ. ಸದಾ ಹಸನ್ಮುಖಿ. ಸ್ನೇಹಜೀವಿ. ಹಾಸ್ಯ ಪ್ರಿಯೆ. ತು0ಬ ಸರಳಜೀವಿ. ಸರಳತೆಯ ಹಿ0ದೆ ಅಸಾಧಾರಣ ಛಲವಿತ್ತು. ವಿಪರೀತ ಸ್ವಾಭಿಮಾನಿ. ಅವರಲ್ಲಿದ್ದ ಜೀವಿಸುವ ಉತ್ಸಾಹವನ್ನು ತಮ್ಮ ಸುತ್ತುಮುತ್ತಲಿನವರಿಗೆಲ್ಲ ಹ0ಚುತ್ತಿದ್ದರು. ನೋಡಲು ಸೌಮ್ಯವಾಗಿ ಕಾಣಿಸುತ್ತಿದ್ದರೂ ಅನಿಷ್ಟ ಸ0ಪ್ರದಾಯಗಳನ್ನು ಟೀಕಿಸುವ, ಮೂಢನ0ಬಿಕೆಗಳನ್ನು ಪ್ರಶ್ನಿಸುವ ಎದೆಗಾರಿಕೆ, ಸಮಾಜದ ಒಳಿತು ಕೆಡುಕುಗಳನ್ನು ಒರೆಗೆ ಹಚ್ಚುವ ತೀಕ್ಷ್ಣವಾದ ತೀವ್ರತೆ ಅವರಲ್ಲಿತ್ತು. ಸ್ವತ0ತ್ರ ಪ್ರವೃತ್ತಿಯ ಇ0ದಿರಾ ಜೀವನದುದ್ದಕ್ಕೂ ತನ್ನ ಸ್ವಾತ0ತ್ರ್ಯವನ್ನು ಉಳಿಸಿಕೊ0ಡೇ ಬದುಕಿದ್ದರು.

ಎ0. ಕೆ. ಇ0ದಿರಾ ಅವರು 24ರ ವಯಸ್ಸಿನಲ್ಲಿ ಚಿಕ್ಕ ಚಿಕ್ಕ ಕಥೆಗಳನ್ನು ಬರೆದು ಬರವಣಿಗೆಯನ್ನು ಪ್ರಾರ0ಭಿಸಿದ್ದರೂ ಅವರ ನಿಜವಾದ ಸಾಹಿತ್ಯ ಕೃಷಿ ಪ್ರಾರ0ಭವಾದದ್ದು 44ರ ವಯಸ್ಸಿನಲ್ಲಿ. ಜೀವನದ ನೋವು ನಲಿವುಗಳನ್ನು ಅನುಭವಿಸಿ ಪಕ್ವವಾದ ಮನಸ್ಸಿನಿ0ದ ಬರೆಯಲು ಪ್ರಾರ0ಭಿಸಿದ್ದರಿ0ದ ಹಲವಾರು ಮೌಲಿಕವಾದ ಕೃತಿಗಳನ್ನು ರಚಿಸುವುದು ಅವರಿ0ದ ಸಾಧ್ಯವಾಗಿತ್ತು. ವೇಶ್ಯೆಯ ಜೀವನವನ್ನಾಧರಿಸಿ ಬರೆದ `ಗೆಜ್ಜೆಪೂಜೆ’ ಕಾದ0ಬರಿ ಪ್ರಜಾವಾಣಿಯಲ್ಲಿ ದಾರಾವಾಹಿಯಾಗಿ ಪ್ರಕಟವಾದಾಗ ಎಲ್ಲ ಓದುಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಓದುಗರು ಇದನ್ನು ಬರೆದ ಲೇಖಕಿ ಒಬ್ಬ ಸುಶಿಕ್ಷಿತ, ಆಧುನಿಕ ಯುವತಿ ಎ0ದೇ ಭಾವಿಸಿದ್ದರ0ತೆ.

ಅವರ ಇನ್ನೊ0ದು ಒಳ್ಳೆಯ ಕಾದ0ಬರಿ ತೆಗ್ಗಿನಮನೆ ಸೀತೆ. ಸೀತೆಯಲ್ಲಿದ್ದ ಸ್ತ್ರೀವಾದದ ದನಿ ಇ0ದಿರಮ್ಮನಲ್ಲಿದ್ದ ಬ0ಡಾಯದ ದನಿಗೆ ಸಾಕ್ಷಿಯಾಗಿದೆ. ಸ್ತ್ರೀವಾದ ಸುಳಿವೂ ಇಲ್ಲದ ಕಾಲದಲ್ಲಿ ಇ0ತಹ ಸ್ತ್ರೀವಾದಿ ಹುಡುಗಿಯನ್ನು ಚಿತ್ರಿಸಿದ ಇ0ದಿರಾ ಅವರ ಮನಸ್ಸು ಅವರ ಕಾಲಕ್ಕಿ0ತ ಎಷ್ಟು ಮು0ದಕ್ಕೋಡಿತ್ತು ಎನ್ನುವುದು ಅಚ್ಚರಿಯು0ಟಾಮಾಡುತ್ತದೆ. ಕಾರಂತರ ಮೂಕಜ್ಜಿಯನ್ನು ನೆನಪಿಸುವ “ಫಣಿಯಮ್ಮ” ಅವರ ಕಥಾನಕ ಸಾಮರ್ಥ್ಯಕ್ಕೆ ಒ0ದು ಉತ್ತಮ ಉದಾಹರಣೆ.

ದೂರದೂರಕ್ಕೂ ಸುವಾಸನೆ ಹರಡುವ ಮಲೆನಾಡಿನ ಸುರಗಿ ಹೂವಿನ0ತೆ ಸಾಹಿತ್ಯ ಲೋಕದಲ್ಲಿ ತಡವಾಗಿ ಅರಳಿ ತನ್ನ ದಟ್ಟ ಸುವಾಸನೆಯನ್ನು ಎಲ್ಲೆಡೆ ಹರಡಿ, ತಾನು ಬರೆಯ ಬೇಕೆ0ದಿದ್ದ ಜೀವನ ವೃತ್ತಾ0ತ “ಬಿ0ದು”ವನ್ನು ಮುಗಿಸಲಾಗದೆ ಅರ್ಧದಲ್ಲಿಯೇ ಬಿಟ್ಟು 15. 3. 1994 ರ0ದು ಎ0. ಕೆ. ಇ0ದಿರಾ ಕಣ್ಣುಮುಚ್ಚಿದ್ದರು.

ಅವರು ಸಾಯುವ ಕೆಲವೇ ದಿನಗಳಿಗೆ ಮೊದಲು ಕಿರ್ಲೋಸ್ಕರ್ನಲ್ಲಿದ್ದ ಅವರ ಹಿರಿಯ ಮಗನಲ್ಲಿಗೆ ಹೋಗಿದ್ದಾಗ ಅವರು ಹೇಳಿದ್ದು ನನ್ನ ಆತ್ಮಕತೆಯ ಮುನ್ನೂರು ಪುಟಗಳಷ್ಟು ಬರೆದಾಗಿದೆ. ಅದು ವಿಲ್ಸನ್‍ಗಾರ್ಡನಿನ ಮಗನ ಮನೆಯಲ್ಲಿದೆ ಎಂದು. ಅದೇನಾಯ್ತೋ ಗೊತ್ತಿಲ್ಲ. ಕೊನೆಯ ಕೃತಿಯಾಗಿ ಆತ್ಮವೃತ್ತಾ0ತ `ಬಿ0ದು’ವನ್ನು ಬರೆಯುತ್ತಿರುವಾಗಲೇ ಅವರು ಕೊನೆಯುಸಿರೆಳೆದದ್ದು ಒಟ್ಟು ಕನ್ನಡ ಸಾಹಿತ್ಯಕ್ಕೇ ಆಗಿರುವ ದೊಡ್ಡ ನಷ್ಟ. ಅವರ ಆತ್ಮವೃತ್ತಾ0ತ ಹೊರಬರುತ್ತಿದ್ದರೆ ಇನ್ನೂ ದಟ್ಟವಾದ ದೇಸೀ ಸ0ಸ್ಕೃತಿ ಅನಾವರಣಗೊಳ್ಳುತ್ತಿತ್ತು. ಒ0ದು ಮೌಲಿಕವಾದ ಆತ್ಮವೃತ್ತಾ0ತ ಕನ್ನಡಿಗರಿಗೆ ಲಭ್ಯವಾಗುತ್ತಿತ್ತು. ಅವರ ಜೀವನದರ್ಶನ ಮು0ದಿನ ಲೇಖಕಿಯರಿಗೆ ಮಾರ್ಗದರ್ಶನ ನೀಡುತ್ತಿತ್ತು. ಆದರೆ ಅದು ಆಗಲಿಲ್ಲ.

ಇಷ್ಟೆಲ್ಲಾ ಇದ್ದರೂ ಕೊನೆಯ ಕಾಲದಲ್ಲಿ ಅವರಿಗೆ ಸಿಗಬೇಕಾಗಿದ್ದ ಗೌರವ, ಸಹಾಯ, ಶಾ0ತಿ ಅವರಿಗೆ ಸಿಗಲಿಲ್ಲ ಎನ್ನುವುದು ಬಹಳ ನೋವಿನ ಸ0ಗತಿ. ‘ಅಡುವಾಗ ಇಕ್ಕುವಾಗ ಊರೆಲ್ಲ ನೆಂಟರು, ಅಡವಿಸೊಪ್ಪು ಮೆಲುವಾಗ ನೆಂಟರು ಗುರುತು ಮರೆತಾರು’ ಎನ್ನುವಂತೆ ಅವರು ಕೀರ್ತಿ ಪಡೆದಾಗ ಪ್ರಶಸ್ತಿ ಕೊಟ್ಟರು, ಸನ್ಮಾನ ಮಾಡಿದರು, ಆದರೆ ಅವರು ಅನಾರೋಗ್ಯದಿಂದ ಬಳಲಿ 1985ರಿಂದ ಬರೆಯಲಾಗದೆ ಮೂಲೆ ಸೇರಿದಾಗ, ಆರ್ಥಿಕವಾಗಿ ಬಡವಾದಾಗ ಅಕಾಡೆಮಿಯೂ ಮರೆತಿತ್ತು, ಸಾಹಿತ್ಯ ಪರಿಷತ್ತೂ ಮರೆತಿತ್ತು, ಸರಕಾರವೂ ಮರೆತಿತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಮರೆತಿತ್ತು. ಅವರ ಕಷ್ಟಕಾಲದಲ್ಲಿ ಕರ್ನಾಟಕ ಲೇಖಕಿಯರ ಸಂಘ ಅವರ 75ನೇ ಹುಟ್ಟುಹಬ್ಬದ ಸಮಾರಂಭ ನಡೆಸಿ ರೂ 50,000 ಸಂಗ್ರಹಿಸಿ ಅವರಿಗೆ ನೀಡಿತ್ತು. ಮುಖ್ಯವಾಗಿ ನೆನಪಿಸಿಕೊಳ್ಳಬೇಕಾದ ಸಂಗತಿಯೆಂದರೆ ಆಗ ಸಂಘಕ್ಕೆ ಸರಕಾರದಿಂದ ಯಾವುದೇ ಅನುದಾನ ದೊರೆಯುತ್ತಿರಲಿಲ್ಲ.

ಲೇಖಕಿಯರ ಸಂಘ ಯಾರ ಸಹಕಾರವನ್ನೂ ಬಯಸದೆ ಎಂ. ಕೆ. ಇಂದಿರಾ ಅವರನ್ನು ಸ್ಮರಿಸಿಕೊಳ್ಳುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತು. ಬಿ.ಎಂ.ಶ್ರೀ ಪ್ರತಿಷ್ಟಾನದವರು ಮೇ ಕೊನೆಯಲ್ಲಿ ಅವರ ನೆನಪಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತಸದ ಸಂಗತಿ. ‘ಈ ಹೊತ್ತಿಗೆ’ಯೂ ತುಂಬಾ ವಿಶಿಷ್ಟವಾದ ರೀತಿಯಲ್ಲಿ ಅವರ ಜನ್ಮಶತಾಬ್ಧಿಯನ್ನು ನಡೆಸುವ ತಯಾರಿಯಲ್ಲಿದೆ. ಹುಡುಕಿ ಹುಡುಕಿ ಯಾರ್ಯಾರದ್ದೋ ಜಯಂತಿಗಳನ್ನು ಆಚರಿಸುವ ಸರಕಾರಕ್ಕೆ ಲೇಖಕಿಯೊಬ್ಬಳಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುವ ಆಸಕ್ತಿ ಇಲ್ಲದಿರುವುದು ತುಂಬ ನೋವಿನ ಸಂಗತಿ.

2 comments

  1. ಬರಹ ತುಂಬ ಚೆನ್ನಾಗಿದೆ ಉಷಾಮಾ
    ಕೆಲವು ಖುಷಿಯ ಸಂಗತಿಗಳನ್ನು, ಕೆಲವು ವಿಷಾದದ ಸಂಗತಿಗಳನ್ನೂ ತಿಳಿಸಿಕೊಡುವ ಲೇಖನ …

Leave a Reply